Authors
Claim
ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸುವಾಗ ಕಾಂಗ್ರೆಸ್ಸಿಗರ ಲುಂಗಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ವೀಡಿಯೋದೊಂದಿಗೆ ಹೇಳಿಕೆಯೊಂದು ವೈರಲ್ ಆಗಿದೆ.
Also Read: ಮೈಸೂರಿನಲ್ಲಿ ಶತಮಾನಗಳ ಹಳೆಯ ನಂದಿ ವಿಗ್ರಹ ಪತ್ತೆ ಎಂದು ಹಳೆಯ ಫೊಟೋ ಹಂಚಿಕೆ
ಈ ವೀಡಿಯೋದಲ್ಲಿ ಕೆಲವು ಜನರು ಪ್ರತಿಕೃತಿ ದಹಿಸುತ್ತಿರುವ ದೃಶ್ಯ ಮತ್ತು, ಈ ವೀಡಿಯೋಕ್ಕೆ ‘ಲುಂಗಿ ಡ್ಯಾನ್ಸ್’ ಹಾಡಿನ ಆಡಿಯೋವನ್ನು ಸಹ ಸೇರಿಸಲಾಗಿದೆ. 0.23 ಸೆಕೆಂಡ್ ಗಳ ಈ ವೀಡಿಯೋದಲ್ಲಿ ದಹನದ ವೇಳೆ ಲುಂಗಿಗೆ ಬೆಂಕಿ ಹತ್ತಿಕೊಳ್ಳುವುದು ಮತ್ತು ಅವರು ಗಾಬರಿಯಿಂದ ಹೋಗುವುದೂ ಕಾಣಿಸುತ್ತದೆ.
Fact
ಈ ಹೇಳಿಕೆಯನ್ನು ಪರಿಶೀಲಿಸಲು ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫೇಸ್ಬುಕ್ ನಲ್ಲಿ ನವೆಂಬರ್ 1, 2012ರಂದು ಐ ಲವ್ ಸನ್ ಗ್ಲಾಸಸ್ ಹೆಸರಿನ ಫೇಸ್‌ಬುಕ್ ಖಾತೆಯಿಂದ ಹಂಚಿಕೊಂಡ ವೀಡಿಯೋವನ್ನು ಗಮನಿಸಿದ್ದೇವೆ. ಇದರ ಶೀರ್ಷಿಕೆಯಲ್ಲಿ “ಕೇರಳದಲ್ಲಿ ಪ್ರತಿಭಟನೆ ವೇಳೆ ತಮಾಷೆಯ ಘಟನೆ. ಲುಂಗಿಗೆ ಬೆಂಕಿ…” ಎಂದಿದೆ.
ಇದರ ಆಧಾರದ ಮೇಲೆ ನಾವು ಇನ್ನಷ್ಟು ಶೋಧ ನಡೆಸಿದ್ದು, ಜುಲೈ 5, 2012 ರಂದು ಏಷ್ಯಾನೆಟ್ ನ್ಯೂಸ್ ಯೂಟ್ಯೂಬ್ ಚಾನೆಲ್ನಲ್ಲಿ ಮಲಯಾಳ ಭಾಷೆಯಲ್ಲಿ ಅಪ್ಲೋಡ್ ಮಾಡಿದ ವೀಡಿಯೋ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೋವನ್ನು ಈ ವರದಿಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಕೇರಳದ ಪತನಂತಿಟ್ಟದಲ್ಲಿ ಈ ಘಟನೆ ನಡೆದಿದ್ದು, ಎಂಜಿ ವಿಶ್ವವಿದ್ಯಾಲಯದ ಉಪಕುಲಪತಿ ವಿರುದ್ಧ ಕೆಎಸ್ ಯು (ಕೇರಳ ಸ್ಟೂಡೆಂಟ್ಸ್ ಯೂನಿಯನ್) ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು ಎಂದು ವೀಡಿಯೋದಲ್ಲಿ ಹೇಳಲಾಗಿದೆ. ಉಪಕುಲಪತಿ ಅವರ ಪ್ರತಿಕೃತಿಯನ್ನು ಸುಡುವಾಗ, ಇನ್ನೊಬ್ಬ ಕಾರ್ಯಕರ್ತನು ಪ್ರತಿಕೃತಿ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಲಾಗಿದೆ. ಆ ಕೂಡಲೇ ಕೆಲವರ ಬಟ್ಟೆಗೆ ಬೆಂಕಿ ಹತ್ತಿಕೊಂಡಿದೆ. ವರದಿಗಳ ಪ್ರಕಾರ, ಘಟನೆಯಲ್ಲಿ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಕೆಎಸ್ ಯು ಬಗ್ಗೆ ತಿಳಿಯಲು, ನಾವು ಕೆಲವು ಕೀವರ್ಡ್ಗಳನ್ನು ಗೂಗಲ್ನಲ್ಲಿ ಹುಡುಕಿದ್ದೇವೆ. ಈ ಸಮಯದಲ್ಲಿ, ಕೆಎಸ್ ಯು ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯಿಂದ ಇದು ರಾಜ್ಯದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಿದ್ಯಾರ್ಥಿ ಸಂಘ ಎಂದು ನಮಗೆ ತಿಳಿದುಬಂದಿದೆ.
ಈ ತನಿಖೆಯಲ್ಲಿ ಕಂಡುಬಂದಂತೆ ಇದು 2012ರ ವೀಡಿಯೋ ಆಗಿದ್ದು ಕೇರಳದಲ್ಲಿ ಎಂಜಿ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧ ಕೆಎಸ್ ಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ ನಡೆದ ಘಟನೆಯಾಗಿದೆ. ಆದರೆ ಇದನ್ನು ಕಾಂಗ್ರೆಸ್ಸಿಗರು ಮೋದಿ ವಿರುದ್ಧ ನಡೆಸಿದ ಪ್ರತಿಭಟನೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
Also Read: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆಯೇ?
Result: Missing Context
Our Sources:
YouTube Video By Asianet news, Dated: 5 July, 2012
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.