Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
Fact
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ವೀಡಿಯೋ ಕತ್ತರಿಸಿ, ಬೇರೆ ಅರ್ಥ ಬರುವಂತೆ ಹಂಚಿಕೊಳ್ಳಲಾಗಿದೆ
ಮಹಾರಾಷ್ಟ್ರ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಬಳಿಕ ಮತಯಂತ್ರದ ಬಗ್ಗೆ ಹೆಚ್ಚಿನ ಚರ್ಚೆಗಳು ಆರಂಭವಾಗಿವೆ. ವಿರೋಧ ಪಕ್ಷಗಳು ಮತಯಂತ್ರದ ಬದಲಾಗಿ ಹಳೆಯ ಪದ್ಧತಿಯಾದ ಬ್ಯಾಲೆಟ್ ಪೇಪರ್ ಗಳನ್ನೇ ತರಬೇಕು ಎಂಬಂತೆ ಆಗ್ರಹಿಸುತ್ತಿವೆ.
ಏತನ್ಮಧ್ಯೆ ಮತಪತ್ರದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ ಎಂಬಂತೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. 30 ಸೆಕೆಂಡಿನ ಈ ವೀಡಿಯೋದಲ್ಲಿ ಮುಂದುವರಿದ ದೇಶಗಳಲ್ಲೂ ಬ್ಯಾಲೆಟ್ ಪೇಪರ್ ಗಳನ್ನೇ ಬಳಸುತ್ತಿದ್ದಾರೆ ಎಂಬಂತೆ ಮೋದಿ ಅವರು ಹೇಳುವುದು ಕೇಳಿಸುತ್ತದೆ.
ಇಂತಹ ಹೇಳಿಕೆಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಪ್ಪಾದ ಸಂದರ್ಭ ಎಂದು ಕಂಡುಕೊಂಡಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ನಡೆಸಿದ್ದು ಈ ವೇಳೆ ಹಲವರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ. ಮುಂದುವರಿದ ಭಾಗವಾಗಿ ನಾವು ಎಕ್ಸ್ ನಲ್ಲಿ ಶೋಧ ನಡೆಸಿದ್ದು,
ರಾಜ್ಯಸಭೆ ಸಂಸದ ಸಂಜಯ್ ರಾವತ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸುವ ಫೆಬ್ರವರಿ 15, 2024ರ ಬಿಜೆಪಿ ಮಹಾರಾಷ್ಟ್ರದ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ.
ಇದರಲ್ಲಿ ಹೀಗೆ ಹೇಳಲಾಗಿದೆ. “ಅರೆಬೆಂದ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಜನರನ್ನು ‘ಮೂರ್ಖ ಮಂತ್ರಿ’ ಎಂದು ಭಾವಿಸಬೇಡಿ. ಸಂಪೂರ್ಣ ವೀಡಿಯೋವನ್ನು ವೀಕ್ಷಿಸಿ” ಎಂದು ನಾವು ಅದರಲ್ಲಿ ಬರೆಯಲಾಗಿರುವುದನ್ನು ಓದಿದ್ದೇವೆ.
ಏತನ್ಮಧ್ಯೆ, ವೈರಲ್ ಹೇಳಿಕೆಯಲ್ಲಿ ಬಳಸಲಾದ ವೀಡಿಯೋದ ದೀರ್ಘ ಆವೃತ್ತಿಯನ್ನು ನಾವು ನೋಡಿದ್ದೇವೆ. “ನಮ್ಮ ದೇಶ ಬಡವಾಗಿದೆ ಎಂದು ಕೆಲವರು ಹೇಳುತ್ತಾರೆ. ಜನರು ಅನಕ್ಷರಸ್ಥರು. ಜನರಿಗೆ ಗೊತ್ತಿಲ್ಲ. ವಿಶ್ವದ ವಿದ್ಯಾವಂತ ದೇಶಗಳು ಸಹ ಚುನಾವಣೆಗಳು ನಡೆದಾಗ ಮತಪತ್ರಗಳಲ್ಲಿ ತಮ್ಮ ಹೆಸರುಗಳನ್ನು ಮುದ್ರೆ ಹಾಕುತ್ತವೆ, ಯುನೈಟೆಡ್ ಸ್ಟೇಸ್ಟ್ಸ್ ನಲ್ಲಿಯೂ ಸಹ ಇದು ನಡೆದಿದೆ.. ಇದು ಹಿಂದೂಸ್ತಾನ, ಇದನ್ನು ನೀವು ಅನಕ್ಷರಸ್ಥರು, ಬಡವರು ಎಂದು ಕರೆಯುತ್ತೀರಿ, ಆದರೆ ಗುಂಡಿ ಒತ್ತುವ ಮೂಲಕ ಹೇಗೆ ಮತ ಚಲಾಯಿಸಬೇಕೆಂದು ತಿಳಿದಿದೆ. ಭಾರತದ ಜನರ ಶಕ್ತಿಯನ್ನು ಕಡೆಗಣಿಸಬೇಡಿ. ಪ್ರಾಮಾಣಿಕತೆಯ ಮಾರ್ಗವಿದೆ ಎಂದು ನಾನು ಅರಿತುಕೊಂಡ ನಂತರ, ನನ್ನ ದೇಶದ ಕಡು ಬಡವರು ಸಹ ನಡೆಯುತ್ತಿದ್ದಾರೆ.
ಇದರಿಂದ, ವೈರಲ್ ಹೇಳಿಕೆಯಲ್ಲಿ ಮೋದಿಯವರ ಭಾಷಣವನ್ನು ಇಷ್ಟು ಮಾತ್ರ ಹಾಕಲಾಗಿದೆ ಎಂದು ಗೊತ್ತಾಗಿದೆ. ಇದರಲ್ಲಿ “ವಿಶ್ವದ ವಿದ್ಯಾವಂತ ದೇಶಗಳು ಸಹ ಚುನಾವಣೆಗಳು ನಡೆದಾಗ, ಇಂದಿಗೂ ಅಮೆರಿಕದಲ್ಲಿಯೂ ಸಹ ಮತಪತ್ರದಲ್ಲಿ ಹೆಸರನ್ನು ಓದುತ್ತವೆ ಮತ್ತು ಮುದ್ರೆ ಹಾಕುತ್ತವೆ” ಎಂದಿದೆ.
ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದ ವೇದಿಕೆಯ ಮೇಲೆ ‘ಪರಿವರ್ತನ ಮಹಾ ರ್ಯಾಲಿ’ ಎಂಬ ಪದಗಳಿವೆ ಮತ್ತು ಅದರ ಕೆಳಗೆ ಡಿಸೆಂಬರ್ 3, 2016 ಎಂದು ಬರೆಯಲಾಗಿದೆ. ಡಿಸೆಂಬರ್ 3, 2016 ರಂದು ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾದ ‘ಉತ್ತರ ಪ್ರದೇಶದ ನ್ಯೂ ಮೊರಾದಾಬಾದ್ ನಲ್ಲಿ ಪರಿವರ್ತನ ರಾಲಿಯಲ್ಲಿ ಪ್ರಧಾನಿ ಮೋದಿಯವರ ಭಾಷಣ’ ಎಂಬ ಶೀರ್ಷಿಕೆಯಲ್ಲಿ 44 ನಿಮಿಷ, 39 ಸೆಕೆಂಡುಗಳ ವೀಡಿಯೋ ಪತ್ತೆಯಾಗಿದೆ. ಮೋದಿ ಭಾಷಣದ ವೈರಲ್ ಭಾಗವನ್ನು ನೀವು 37ನೇ ನಿಮಿಷದಲ್ಲಿ ವೀಕ್ಷಿಸಬಹುದು.
ಡಿಸೆಂಬರ್ 3, 2016 ರಂದು ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದ ಪರಿವರ್ತನ ರಾಲಿಯ ವೀಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್ ನಲ್ಲೂ ವೀಕ್ಷಿಸಬಹುದು. ವೈರಲ್ ವೀಡಿಯೋದ ಭಾಷಣದ ಭಾಗವನ್ನು 55 ನಿಮಿಷಗಳ ನಂತರ ವೀಕ್ಷಿಸಬಹುದು.
ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ಸುಶಿಕ್ಷಿತ ದೇಶದಲ್ಲಿ ಮತಪತ್ರಗಳಲ್ಲೇ ಇನ್ನೂ ಮತದಾನ ನಡೆಯುತ್ತಿರುವಾಗ ನಮ್ಮ ದೇಶವು ಮತಯಂತ್ರದ ಗುಂಡಿಯನ್ನು ಒತ್ತುವ ಮೂಲಕ ಮತ ಚಲಾಯಿಸುತ್ತಿದೆ ಎಂಬ ಅರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ಹೇಳಿಕೆಯನ್ನು ನೀಡಿರುವುದನ್ನು ನಾವು ಗಮನಿಸಿದ್ದೇವೆ.
ನಮ್ಮ ತನಿಖೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಬೇಕೆಂದು ಹೇಳಿದ್ದಲ್ಲ, ಸುಶಿಕ್ಷಿತ ದೇಶದಲ್ಲಿ ಮತಪತ್ರಗಳಲ್ಲೇ ಇನ್ನೂ ಮತದಾನ ನಡೆಯುತ್ತಿರುವಾಗ ನಮ್ಮ ದೇಶವು ಮತಯಂತ್ರದ ಗುಂಡಿಯನ್ನು ಒತ್ತುವ ಮೂಲಕ ಮತ ಚಲಾಯಿಸುತ್ತಿದೆ ಎಂಬ ಅರ್ಥದಲ್ಲಿ ಹೇಳಿದ ಭಾಷಣದ ವೀಡಿಯೋವನ್ನು ಕತ್ತರಿಸಿ ಈಗಿನ ಇವಿಎಂ ಚರ್ಚೆಯ ಸಂದರ್ಭದಲ್ಲಿ ಹಂಚಿಕೊಳ್ಳಲಾಗುತ್ತಿದೆ.
Also Read: ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಿದೆಯೇ? ವೈರಲ್ ಪೋಸ್ಟ್ ಗಳು ಸುಳ್ಳು
Our Sources
X post By BJP Maharashtra Dated: February 15, 2024
YouTube Video By Bharatiya Janata Party Dated: December 3, 2016
YouTube Video published by Narendra Modi Dated: December 3, 2016
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಮರಾಠಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
December 18, 2024
Ishwarachandra B G
November 30, 2024
Prasad S Prabhu
November 27, 2024