Fact Check: ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆಯೇ, ಸತ್ಯ ಏನು?

ಹುಕ್ಕಾ ಬಾರ್, ಹಿಂದೂ ಹುಡುಗಿಯರು, ಮುಸ್ಲಿಂ ಹುಡುಗರು, ಪೊಲೀಸ್ ದಾಳಿ, ಮಧ್ಯಪ್ರದೇಶ,

Claim

ಮಧ್ಯಪ್ರದೇಶದ ಹುಕ್ಕಾ ಬಾರ್ ಮೇಲೆ ನಡೆದ ದಾಳಿಯಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಶೇರ್ ಮಾಡಲಾಗುತ್ತಿದೆ.

ಫೇಸ್ಬುಕ್‌ ನಲ್ಲಿ ಕಂಡುಬಂದ ಕ್ಲೇಮಿನಲ್ಲಿನಿನ್ನೆ ಮಧ್ಯಪ್ರದೇಶದ ಹುಕ್ಕಾ ಬಾರ್ ಮೇಲೆ ನಡೆದ ದಾಳಿಯಲ್ಲಿ 15 ಹುಡುಗರು ಮತ್ತು 15 ಹುಡುಗಿಯರು ಒಟ್ಟು 30 ಜನರು ಸಿಕ್ಕಿಬಿದ್ದರು… “ ಹೀಗೆ ಹೇಳಲಾಗಿದೆ.

Also Read: ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿ ಶಾಲುಗಳನ್ನು ಮಾತ್ರವೇ ಹಾಕಿ ಸ್ವಾಗತಿಸಲಾಯಿತು, ಎನ್ನುವುದು ನಿಜವೇ?

Fact Check: ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆಯೇ, ಸತ್ಯ ಏನು?
ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮ್‌

ಈ ವೀಡಿಯೋದಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದ ಇಬ್ಬರು ಪುರುಷರು ದಾಳಿ ನಡೆಸುತ್ತಿರುವುದು ಕಾಣಿಸುತ್ತದೆ. ಅಲ್ಲಿ ಮೂವರು ಜೋಡಿಗಳು ಪ್ರತ್ಯೇಕ ಕ್ಯಾಬಿನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋ ಹಂಚಿಕೊಂಡವರು ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಪೊಲೀಸರು ನಡೆಸಿದ ದಾಳಿಯ ದೃಶ್ಯಗಳನ್ನು ಇದು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಸತ್ಯಶೋಧನೆ ವೇಳೆ ನ್ಯೂಸ್ ಚೆಕರ್ ಈ ಹೇಳಿಕೆ ಸುಳ್ಳು. ಈ ವೀಡಿಯೋ ಮಧ್ಯಪ್ರದೇಶದ್ದಲ್ಲ, ಅಥವಾ ಘಟನೆಗೆ ಯಾವುದೇ ಕೋಮು ಬಣ್ಣವಿಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ.

Fact Check

ನ್ಯೂಸ್ಚೆಕರ್ ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್‌ ರಿವರ್ಸ್ ಇಮೇಜ್‌ ಸರ್ಚ್ ಮೂಲಕ ಹುಡುಕಾಟ ನಡೆಸಿದೆ. ಜೊತೆಗೆ ಹಿಂದಿ ಕೀವರ್ಡ್ಗಳ ಮೂಲಕ ಸರ್ಚ್ ನಡೆಸಿದೆ.

ಈ ವೇಳೆ ದೈನಿಕ್ ಭಾಸ್ಕರ್ ವರದಿ ಲಭ್ಯವಾಗಿದೆ. ಇದರಲ್ಲಿ ದಾಳಿ ನಡೆದ ಸ್ಥಳ ಉತ್ತರಪ್ರದೇಶದ ಆಗ್ರಾ ಎಂದಿದೆ. ಸಂಜಯ್ ಪ್ಲೇಸ್ ರೆಸ್ಟೋರೆಂಟ್ ಗೆ ದಾಳಿ ನಡೆದಿದ್ದು, 3 ದಿನಗಳ ನಂತರ ವಿಡಿಯೋ ವೈರಲ್ ಆಗಿದೆ. ಈ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ ಗಳನ್ನು ವರದಿ ಒಳಗೊಂಡಿದೆ. ಅಲ್ಲದೇ ದಾಳಿಯ ವೀಡಿಯೋ ವೈರಲ್‌ ಆದ ಬಳಿಕ  ಹರಿಪರ್ವತ್ ಪೊಲೀಸ್ ಠಾಣೆಯ ಮೂವರು ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಲ್ಲಿದೆ.

Fact Check: ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆಯೇ, ಸತ್ಯ ಏನು?
ದೈನಿಕ್ ಭಾಸ್ಕರ್ ವರದಿ

ಹರಿಪರ್ವತ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಂಜೀತ್ ಮತ್ತು ಇತರ ಇಬ್ಬರು ಕಾನ್ಸ್ಟೇಬಲ್‌ಗಳು ಆಗಸ್ಟ್ 27, 2022 ರಂದು ಸಂಜಯ್ ಪ್ಲೇಸ್‌ ನ ಕೆಫೆಯೊಂದರ ಮೇಲೆ ದಾಳಿ ನಡೆಸಿದ್ದರು. ಅವರಲ್ಲಿ ಇಬ್ಬರು ಕೆಫೆಯ ನೆಲಮಾಳಿಗೆಗೆ ನುಗ್ಗಿದರು, ಅಲ್ಲಿ ಅವರು ಕೆಲವು ಯುವ ಜೊಡಿಗಳು ಒಟ್ಟಾಗಿರುವುದನ್ನು ಕಂಡಿದ್ದಾರೆ. ಈ ವೇಳೆ ಮೂರನೆಯವರು ಇಡೀ ದಾಳಿಯನ್ನು ಚಿತ್ರೀಕರಿಸಿದರು. ವೀಡಿಯೋ ಸಾಮಾಜಿಕ ಜಾಲತಾಣಗಳಿಗೆ ತಲುಪುತ್ತಿದ್ದಂತೆ ಪೊಲೀಸರತ್ತ ದೂರು ಕೇಳಿಬಂದಿದ್ದು, ತನಿಖೆಯ ಪ್ರಶ್ನೆಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ ಆಗ್ರಾ ಎಸ್ಎಸ್ಪಿ ಪ್ರಭಾಕರ್ ಚೌಧರಿ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ನಂತರ ನಾವು ಗೂಗಲ್ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಘಟನೆಯ ಬಗ್ಗೆ ಹಲವಾರು ವರದಿಗಳನ್ನು ತೋರಿಸಿದೆ. ಹರಿಪರ್ವತ ಎಎಸ್ಪಿ ಸತ್ಯ ನಾರಾಯಣ್ ಅವರ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಎಸ್ಎಸ್ಪಿ ಪ್ರಭಾಕರ್ ಚೌಧರಿ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ ಎಂದು ಜಾಗರಣ್‌ ವರದಿಯು ದೈನಿಕ್ ಭಾಸ್ಕರ್ ವರದಿಯನ್ನು ದೃಢಪಡಿಸಿದೆ. ಘಟನೆಯ ಬಗ್ಗೆ ಇಲಾಖೆ ವಿಚಾರಣೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

Fact Check: ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆಯೇ, ಸತ್ಯ ಏನು?
ಜಾಗರಣ್ ವರದಿ

ಈ ಕುರಿತ ವರದಿಗಳನ್ನು ನೀವು ಇಲ್ಲಿಇಲ್ಲಿ, ಮತ್ತು ಇಲ್ಲಿ ಓದಬಹುದು.

ವೈರಲ್ ವೀಡಿಯೊ ವಾಸ್ತವವಾಗಿ ಆಗ್ರಾದ ಕೆಫೆಯಿಂದ ಬಂದಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದಂತೆ ಮಧ್ಯಪ್ರದೇಶದ್ದಲ್ಲ ಎಂದು ನಾವು ತೀರ್ಮಾನಿಸಬಹುದು.

ಇನ್ನು ಮುಸ್ಲಿಂ ಹುಡುಗರೊಂದಿಗೆ, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆ ಎಂಬ ಬಗ್ಗೆ ನಾವು ಹರಿಪರ್ವತ್ ಪೊಲೀಸ್‌ ಇನ್ಸ್ ಪೆಕ್ಟರ್ ಅರವಿಂದ್ ಕುಮಾರ್ ಅವರನ್ನು ಸಂಪರ್ಕಿಸಿದ್ದೇವೆ, ಅವರು ಈ ಘಟನೆಗೆ ಅಂತಹ ಯಾವುದೇ ಕೋಮು ಬಣ್ಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಪತ್ತೆಯಾದ ಜೋಡಿಗಳು ಒಂದೇ ಧರ್ಮಕ್ಕೆ ಸೇರಿದವರು ಮತ್ತು ವಯಸ್ಕರಾಗಿದ್ದರು” ಎಂದು ಹೇಳಿದ್ದಾರೆ.

Also Read: ಕಾವೇರಿ ವಿವಾದ ಹಿನ್ನೆಲೆ ತಮಿಳುನಾಡು ಲಾರಿ ಚಾಲಕನ ಮೇಲೆ ಹಲ್ಲೆಯ ವೀಡಿಯೋ ಈಗಿನದ್ದಲ್ಲ!

ಈ ಸಾಕ್ಷ್ಯಗಳ ಪ್ರಕಾರ, ಮಧ್ಯಪ್ರದೇಶದ ಹುಕ್ಕಾ ಬಾರ್ ಮೇಲೆ ನಡೆದ ದಾಳಿಯಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆ ಎನ್ನುವುದು ಸುಳ್ಳಾಗಿದೆ.

Result: False

Our Sources

Report By Dainik Bhaskar, Dated: August 10, 2022

Report By Jagran, Dated: August 11, 2022

Telephonic Conversation With Hariparwat SHO On August 31, 2022

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.