ಮುಸ್ಲಿಮರು ಮಾರಕ ರೋಗಕ್ಕಾಗಿ ಮತ್ತು ಮಕ್ಕಳಾಗದಂತೆ ಖರ್ಜೂರದಲ್ಲಿ ಮಾತ್ರೆ ಇಟ್ಟು ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬಂತೆ ವೀಡಿಯೋ ಜೊತೆಗೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಪ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “…ಮಾರಕರೋಗ ಬರಲು ಮತ್ತು ಮಕ್ಕಳಾಗದಂತೆ ಖರ್ಜುರದಲ್ಲಿ ಮಾತ್ರೆ ಗಳನ್ನು ಇಟ್ಟು ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದವರನ್ನು ಪೊಲೀಸ್ ರವರು ಬಂಧಿಸಿದ್ದಾರೆ. ಇನ್ನಾದರೂ ಎಚೆತ್ತುಕೊಳ್ಳಿ ಈ ರಕ್ಕಸ ಸಮಾಜ ಇಡೀ ಹಿಂದೂ ಮನುಕುಲಕ್ಕೆ ಮಾರಕವೆಂಬುದನ್ನು ತಿಳಿಯಿರಿ. ಇನ್ನು ಮುಂದೆ ಅವರ ಹತ್ತಿರ ಎಲ್ಲ ವ್ಯಾಪಾರ ನಿಲ್ಲಿಸಿ.” ಎಂದಿದೆ.
ಇದೇ ರೀತಿಯ ಹೇಳಿಕೆ ಫೇಸ್‌ಬುಕ್ ನಲ್ಲೂ ಕಂಡುಬಂದಿದೆ.


ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ರೈಲಿನಲ್ಲಿ ದರೋಡೆಕೋರರ ಗುಂಪೊಂದನ್ನು ಪೊಲೀಸರು ಇತ್ತೀಚಿಗೆ ಸೆರೆ ಹಿಡಿದಿದ್ದು, ಅವರು ಖರ್ಜೂರದಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ಜನರಿಗೆ ನೀಡಿ ದರೋಡೆ ಮಾಡುತ್ತಿದ್ದರು, ಆ ಕುರಿತು ಆರೋಪಿಗಳು ನೀಡಿದ ಪ್ರಾತ್ಯಕ್ಷಿಕೆಯ ವೀಡಿಯೋ ಅದಾಗಿದೆ ಎಂದು ತಿಳಿದುಬಂದಿದೆ.
Also Read: ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ: ಅಶ್ವಿನಿ ವೈಷ್ಣವ್ ಭಾವುಕರಾದ ಹಳೆಯ ವೀಡಿಯೋ ವೈರಲ್
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀ ಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಫೆಬ್ರವರಿ 17, 2025ರಂದು india.news.24×7 ಹೆಸರಿನ ಇನ್‌ಸ್ಟಾ ಗ್ರಾಂ ಪೇಜ್ ನಲ್ಲಿ ವೈರಲ್ ವೀಡಿಯೋ ಹೋಲುವ ವೀಡಿಯೋ ನೋಡಿದ್ದೇವೆ. ಇದರಲ್ಲಿ ರೈಲಿನಲ್ಲಿ ನಿದ್ದೆ ಮಾತ್ರೆ ಬೆರೆಸಿದ ಆಹಾರ ನೀಡಿ ದರೋಡೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದಿದೆ.
ಹೆಚ್ಚಿನ ಶೋಧನೆ ವೇಳೆ taazatvchannel ಹೆಸರಿನ ಇನ್ನೊಂದು ಇನ್‌ಸ್ಟಾಗ್ರಾಂ ಬಳಕೆದಾರರು ಅದೇ ವೀಡಿಯೋವನ್ನು ಪೋಸ್ಟ್ ಮಾಡಿದ್ದನ್ನು ಪತ್ತೆ ಮಾಡಿದ್ದೇವೆ. ಜನವರಿ 13, 2025ರ ಈ ಪೋಸ್ಟ್ ನಲ್ಲಿ ಖರ್ಜೂರದಲ್ಲಿ ಮತ್ತು ಬರಿಸುವ ಮಾತ್ರೆ ನೀಡಿ ರೈಲಿನಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾಗಿ ಹೇಳಲಾಗಿದೆ.

ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಹೌರಾ ಜಿಆರ್ ಪಿಎಎಸ್ ನ ಪಿಎಸ್‌ಐ ಸೋಮನಾಥ್ ಮೈಟಿ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್ ಚೆಕರ್ ನೊಂದಿಗೆ ಮಾತನಾಡಿ, “ಈ ಘಟನೆ ಇದು ಜನವರಿ 10 ರಂದು ಸಂಭವಿದ್ದು, ಬಿಹಾರಕ್ಕೆ ಹೋಗುವ ರೈಲಿನಲ್ಲಿ ಪ್ರಯಾಣಿಕರೊಂದಿಗೆ ಮಾತನಾಡುವ ವೇಳೆ ದರೋಡೆಕೋರರ ಗ್ಯಾಂಗ್ ಅವರಿಗೆ ನೀರು ಮತ್ತು ಬರುವ ಮಾತ್ರೆಯಿದ್ದ ಖರ್ಜೂರವನ್ನು ನೀಡಿ, ಬಳಿಕ ದರೋಡೆ ಮಾಡುತ್ತಿದ್ದರು. ಯಾವುದೇ ನಿರ್ದಿಷ್ಟ ಧರ್ಮದ ಜನರನ್ನು ಗುರಿಯಾಗಿರಿಸದೆ, ಎಲ್ಲರನ್ನೂ ಅವರು ದರೋಡೆ ಮಾಡುತ್ತಿದ್ದರು. ಪ್ರಕರಣದಲ್ಲಿ ಭಾಗಿಯಾದ ಮೂವರನ್ನು ಆರ್ ಪಿಎಫ್ ಬಂಧಿಸಿದ್ದು, ಅವರ ಕೃತ್ಯದ ಬಗ್ಗೆ ತಿಳಿದುಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಕೋಮು ಆಯಾಮವಿಲ್ಲ” ಎಂದು ತಿಳಿಸಿದ್ದಾರು.
ಪೊಲೀಸ್ ಮಾಹಿತಿ ಪ್ರಕಾರ, ನಾವು ಎಫ್‌ಐಆರ್ ಪ್ರತಿಯನ್ನೂ ಪರಿಶೀಲಿಸಿದ್ದೇವೆ. ಇದರ ಪ್ರಕಾರ ಆರೋಪಿಗಳಲ್ಲಿ ಇಬ್ಬರು ಹಿಂದೂಗಳಾಗಿದ್ದು, ಮತ್ತೊಬ್ಬ ಮುಸ್ಲಿಂ ಆಗಿದ್ದಾನೆ. ಇವರು “ATIVIAN- 2MG” ಮಾತ್ರೆಯನ್ನು ಖರ್ಜೂರದೊಂದಿಗೆ ಬೆರೆಸಿ ಜನರಿಗೆ ನೀಡುತ್ತಿದ್ದರು ಎಂದು ಗೊತ್ತಾಗಿದೆ.

Conclusion
ಈ ಸತ್ಯಶೋಧನೆಯ ಪ್ರಕಾರ, ಮುಸ್ಲಿಮರು ಮಾರಕ ರೋಗಕ್ಕಾಗಿ ಮತ್ತು ಮಕ್ಕಳಾಗದಂತೆ ಖರ್ಜೂರದಲ್ಲಿ ಮಾತ್ರೆ ಇಟ್ಟು ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ಹೇಳಿಕೆ ತಪ್ಪಾಗಿದೆ. ಬಿಹಾರ ರೈಲಿನಲ್ಲಿ ಮತ್ತು ಬರುವ ಮಾತ್ರೆ ಖರ್ಜೂರಕ್ಕೆ ಬೆರೆಸಿ ಜನರಿಗೆ ನೀಡಿ ದರೋಡೆ ಮಾಡುತ್ತಿದ್ದ ತಂಡದ ಕೃತ್ಯವನ್ನು ಪೊಲೀಸರು ಬಯಲಿಗೆಳೆದಿದ್ದರು. ಇದು ಆ ಕುರಿತ ವೀಡಿಯೋ ಆಗಿದೆ ಎಂದು ತಿಳಿದುಬಂದಿದೆ.
Also Read: ಮುಸ್ಲಿಮರು ದಿಲ್ಲಿ ಮೆಟ್ರೋದಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ್ದಾರೆಯೇ?
Our Sources
Instagram Post By taazatvchannel, Dated: January 13, 2025
FIR Copy of howrahgrp, Dated: Janury 11, 2025
Conversation with PSI Somnath Maiti, Table Officer, Howrah GRPS
(Inputs from Tnujit Das, Newschechecker Bangla)