Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ವಾಟ್ಸಾಪ್ ಮತ್ತು ಫೋನ್ ಕರೆಗಳಿಗೆ ಹೊಸ ಸಂವಹನ ನಿಯಮಗಳು ಜಾರಿಗೆ
ವಾಟ್ಸಾಪ್ ಮತ್ತು ಫೋನ್ ಕರೆಗಳಿಗೆ ಹೊಸ ಸಂವಹನ ನಿಯಮಗಳು ಜಾರಿಗೆ ಎನ್ನುವುದು ಸುಳ್ಳು. ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿಲ್ಲ
ವಾಟ್ಸಾಪ್ ಮತ್ತು ಫೋನ್ ಕರೆಗಳಿಗೆ ಹೊಸ ಸಂವಹನ ನಿಯಮಗಳು ಜಾರಿಗೆ ಬರಲಿವೆ ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವೈರಲ್ ಮೆಸೇಜ್ ನಲ್ಲಿ, “ವಾಟ್ಸಾಪ್ ಮತ್ತು ಫೋನ್ ಕರೆಗಳಿಗೆ ಹೊಸ ಸಂವಹನ ನಿಯಮಗಳು ನಾಳೆಯಿಂದ ಜಾರಿಗೆ ಬರಲಿವೆ: 1. ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ. 2. ಎಲ್ಲಾ ಕರೆ ರೆಕಾರ್ಡಿಂಗ್ಗಳನ್ನು ಉಳಿಸಲಾಗುತ್ತದೆ. 3. ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ” ಎಂದು ಬರೆಯಲಾಗಿದೆ.
ಸರ್ಕಾರವು ಈಗ ಬಳಕೆದಾರರ ವಾಟ್ಸಾಪ್ ಚಾಟ್ಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಯಾವುದೇ ಸರ್ಕಾರ ವಿರೋಧಿ ಸಂದೇಶಗಳು ಕಾನೂನು ಕ್ರಮಕ್ಕೆ ಕಾರಣವಾಗಬಹುದು ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. ಇದರೊಂದಿಗೆ ವಾಟ್ಸಾಪ್ ನಲ್ಲಿ ಸರ್ಕಾರದ ಕಣ್ಗಾವಲುಗಳನ್ನು ಎತ್ತಿ ತೋರಿಸಲು ಹೊಸ ‘ಟಿಕ್’ ವ್ಯವಸ್ಥೆಯನ್ನು ಪರಿಚಯಿಸಿದೆ ಎಂದು ಹೇಳಲಾಗಿದೆ.

ಇದರ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್ ಚೆಕರ್ ಬೋಟ್ ಲೈಟ್ ಗೆ (+91-9999499044) ಬಳಕೆದಾರರು ಮನವಿ ಮಾಡಿದ್ದು, ಅದನ್ನು ನಾವು ಅಂಗೀಕರಿಸಿದ್ದೇವೆ.
ಫೇಸ್ ಬುಕ್ ನಲ್ಲೂ ನಾವು ಇದೇ ರೀತಿಯ ಹೇಳಿಕೆಯನ್ನು ಕಂಡಿದ್ದೇವೆ.

ಸತ್ಯಶೋಧನೆ ವೇಳೆ ಇದು ಸುಳ್ಳು ಮಾಹಿತಿ ಎಂದು ಕಂಡುಬಂದಿದೆ.
Also Read: ಕರ್ನಲ್ ಸೋಫಿಯಾ ಖುರೇಷಿ ನಾನು ಮುಸ್ಲಿಂ, ಆದರೆ ಉಗ್ರ ಅಲ್ಲ ಎಂದಿದ್ದಾರೆ ಎನ್ನುವುದು ಡೀಪ್ ಫೇಕ್ ವೀಡಿಯೋ
ವೈಯಕ್ತಿಕ ಸಂದೇಶಗಳನ್ನು ನೋಡಲು ಅಥವಾ ಕರೆಗಳನ್ನು ಕೇಳಲು ಸಾಧ್ಯವಿಲ್ಲ ಎಂದು ವಾಟ್ಸಾಪ್ ತನ್ನ ಬ್ಲಾಗ್ನಲ್ಲಿ ಸ್ಪಷ್ಟಪಡಿಸಿದೆ. “ಏಕೆಂದರೆ ವೈಯಕ್ತಿಕ ಸಂದೇಶಗಳನ್ನು ಅಂತ್ಯದಿಂದ ಅಂತ್ಯದ ವರೆಗಿನ ಎನ್ಕ್ರಿಪ್ಶನ್ನಿಂದ ರಕ್ಷಿಸಲಾಗಿದೆ.” ಎಂದಿದೆ.

ಎರಡನೆಯದಾಗಿ, ಬಳಕೆದಾರರು ಸರ್ಕಾರದ ವಿರುದ್ಧ ಏನನ್ನೂ ಹಂಚಿಕೊಳ್ಳಲು ಸಾಧ್ಯವಿಲ್ಲ ಮತ್ತು ಹಾಗೆ ಮಾಡುವುದರಿಂದ ಪೊಲೀಸರಿಂದ ಬಂಧನ ಅಥವಾ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎನ್ನುವುದೂ ಸುಳ್ಳಾಗಿದೆ. ಮಾಧ್ಯಮ ಮಾಹಿತಿ ಬ್ಯೂರೋ (PIB)ಈ ಕುರಿತು ಮಾರ್ಚ್ 24, 2020ರಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಸಂದೇಶವು ಸುಳ್ಳು, “ಪ್ರಸಾರವಾಗುತ್ತಿರುವ ಅಂತಹ #Whatsapp ಸಂದೇಶಗಳಿಗೆ ಬಲಿಯಾಗಬೇಡಿ. ಸರ್ಕಾರವು ಅಂತಹ ಯಾವುದೇ ಕೆಲಸವನ್ನು ಮಾಡುತ್ತಿಲ್ಲ” ಎಂದು ಹೇಳಿದೆ.
ಮುಂದೆ, ವಾಟ್ಸಾಪ್ ಹೊಸ ಟಿಕ್ಗಳನ್ನು ಪರಿಚಯಿಸುತ್ತಿದೆ, ಇದು ಸರ್ಕಾರಿ ಕಣ್ಗಾವಲು ಸೂಚಿಸುತ್ತದೆ ಎಂಬ ಹೇಳಿಕೆಯ ದ್ವಿತೀಯಾರ್ಧವೂ ಸುಳ್ಳಾಗಿದೆ. ಏಪ್ರಿಲ್ 7, 2020ರ ಎಕ್ಸ್ ಪೋಸ್ಟ್ ನಲ್ಲಿ ಮಾಧ್ಯಮ ಮಾಹಿತಿ ಬ್ಯೂರೋ (PIB) ಇದನ್ನು ನಿರಾಕರಿಸಿದೆ. “ಸಾಮಾಜಿಕ ಮಾಧ್ಯಮಗಳಲ್ಲಿ ‘√ ಟಿಕ್ ಗುರುತುಗಳಿಗೆ ಸಂಬಂಧಿಸಿದ ವಾಟ್ಸಾಪ್ ಮಾಹಿತಿ’ ಎನ್ನುವ ಸಂದೇಶಗಳು ನಕಲಿ. ಸರ್ಕಾರ ಅಂತಹ ಯಾವುದೇ ಕೆಲಸವನ್ನು ಮಾಡುತ್ತಿಲ್ಲ” ಎಂದು ಫೋಸ್ಟ್ ನಲ್ಲಿದೆ.
ಹೆಚ್ಚುವರಿಯಾಗಿ, ವಾಟ್ಸಾಪ್ ಬಳಕೆದಾರರ ಕರೆಗಳನ್ನು ರೆಕಾರ್ಡ್ ಮಾಡುವ ಕುರಿತು ಯಾವುದೇ ಮಾಧ್ಯಮ ವರದಿಗಳು, ಸಾಕ್ಷ್ಯಗಳು ನಮಗೆ ಕಂಡುಬಂದಿಲ್ಲ.
ಆದಾಗ್ಯೂ, Whatsapp ಗಣನೀಯ ಪ್ರಮಾಣದ ಬಳಕೆದಾರರ ಡೇಟಾವನ್ನು (ಮೆಟಾಡೇಟಾ) ಸಂಗ್ರಹಿಸುತ್ತದೆ ಎಂಬುದನ್ನು ಇಲ್ಲಿ ಗಮನಿಸಿಸಬಹುದು.
“ವಾಟ್ಸಾಪ್ ಮತ್ತು ಫೋನ್ ಕರೆಗಳಿಗೆ ಹೊಸ ಸಂವಹನ ನಿಯಮಗಳು” ಎನ್ನುವ ಹೇಳಿಕೆ ಸುಳ್ಳಾಗಿದೆ.
ವಾಟ್ಸಾಪ್ ಬಳಕೆದಾರರ ಕರೆಗಳನ್ನು ರೆಕಾರ್ಡ್ ಮಾಡುವುದಿಲ್ಲ ಅಥವಾ ಸರ್ಕಾರದ ಕಣ್ಗಾವಲು ಸೂಚಿಸುವ ಹೊಸ ಟಿಕ್ ವ್ಯವಸ್ಥೆಯನ್ನು ಪರಿಚಯಿಸಿಲ್ಲ ಎಂದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ.
Also Read: ಕರ್ನಲ್ ಸೋಫಿಯಾ ಖುರೇಶಿ ಮನೆಗೆ ಆರೆಸ್ಸೆಸ್ ದಾಳಿ; ಇದೊಂದು ಸುಳ್ಳು ಸುದ್ದಿ
Our Sources
X post By WhatsApp, Dated: January 12, 2021
X post By PIB Fact Check, Dated: March 24, 2020
X post By PIB Fact Check, Dated: April 7, 2020
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)