Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕರ್ನಲ್ ಸೋಫಿಯಾ ಖುರೇಶಿ ಮನೆಗೆ ಬೆಳಗಾವಿಯಲ್ಲಿ ಆರೆಸ್ಸೆಸ್ ದಾಳಿ
ಕರ್ನಲ್ ಸೋಫಿಯಾ ಖುರೇಶಿ ಮನೆಗೆ ಬೆಳಗಾವಿಯಲ್ಲಿ ಆರೆಸ್ಸೆಸ್ ದಾಳಿ ಎನ್ನುವುದು ಸುಳ್ಳು ಸುದ್ದಿ, ಅಂತಹ ಘಟನೆ ನಡೆದಿಲ್ಲ
ಆಪರೇಷನ್ ಸಿಂದೂರ ಸೇನಾ ಕಾರ್ಯಚರಣೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಅವರ ಮನೆಗೆ ಆರೆಸ್ಸೆಸ್ ದಾಳಿ ನಡೆಸಿದೆ ಎಂಬಂತೆ ಹೇಳಿಕೆಯೊಂದು ವೈರಲ್ ಆಗಿದೆ.
ಎಕ್ಸ್ ನಲ್ಲಿ ಕಂಡುಬಂದಿರುವ ಪೋಸ್ಟ್ ನಲ್ಲಿ, “ಬ್ರೇಕಿಂಗ್: ಕರ್ನಲ್ ಸೋಫಿಯಾ ಖುರೇಷಿ ಮೇಲೆ ಆರ್ಎಸ್ಎಸ್ ದ್ವೇಷ ಅಭಿಯಾನದ ಗುರಿ, ಕುಟುಂಬದ ಮೇಲೆ ದಾಳಿ, ಇತ್ತೀಚೆಗೆ ಭಾರತೀಯ ಸೇನೆಯ ವಕ್ತಾರೆಯಾಗಿರುವ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಆರ್ಎಸ್ಎಸ್ ಉಗ್ರರು ಗುರಿಯಾಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಬೆಳಗಾವಿ (ಕರ್ನಾಟಕ) ದಲ್ಲಿ ಈ ಘಟನೆ ನಡೆದಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಇದರ ಆರ್ಕೈವ್ ಆವೃತ್ತಿ ಇಲ್ಲಿ ಮತ್ತು ಇಲ್ಲಿವೆ
ಸತ್ಯಶೋಧನೆಗಾಗಿ ನಾವು ಎಕ್ಸ್ ನಲ್ಲಿ ಪೋಸ್ಟ್ ಮಾಡಲಾದ ಫೋಟೋವನ್ನು ಕೂಲಂಕಷವಾಗಿ ನೋಡಿದ್ದೇವೆ. ಈ ವೇಳೆ ಇವಿಎಂ ಬಾಕ್ಸ್ ಇದರಲ್ಲಿ ಕಂಡುಬಂದಿದೆ. (ಮತಯಂತ್ರ ಕೆಳಗೆ ಬಿದ್ದಿರುವುದು ಫೋಟೋದಲ್ಲಿ ಕಾಣಿಸುತ್ತದೆ)
ಹೆಚ್ಚಿನ ಮಾಹಿತಿಗಾಗಿ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಇದು ಚಾಮರಾಜನಗರದ ಹನೂರು ತಾಲೂಕಿನ ಇಂಡಿಘಟ್ಟದಲ್ಲಿ ದಲ್ಲಿ 2024ರಲ್ಲಿ ಲೋಕಸಭೆ ಚುನಾವಣೆ ಸಂದರ್ಭ ಮತಗಟ್ಟೆಗೆ ಹಾನಿ ಮಾಡಿದ ಘಟನೆ ಎಂದು ಗೊತ್ತಾಗಿದೆ.
ಗ್ರಾಮದಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದು ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದರು. ಆದಾಗ್ಯೂ ಬುಡಕಟ್ಟು ಜನರು ಮತಹಾಕುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿರುವುದಾಗಿ ಆರೋಪಿಸಿ, ಬಿಗುವಿನ ವಾತಾವರಣ ಉಂಟಾಗಿತ್ತು. ಪರಿಸ್ಥಿತಿ ನಿಯಂತ್ರಣ ತಪ್ಪಿದಾಗ, ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಇದರಿಂದ ಕೋಪಗೊಂಡ ಗ್ರಾಮಸ್ಥರು ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು, ಒಳಗೆ ನುಗ್ಗಿ ಇವಿಎಂಗಳು ಮತ್ತು ಇತರ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ಹಾನಿಗೊಳಿಸಿದರು ಎಂದು ಏಪ್ರಿಲ್ 26, 2024ರ ಡೆಕ್ಕನ್ ಹೆರಾಲ್ಡ್ ವರದಿಯಲ್ಲಿದೆ
ಇದೇ ರೀತಿಯ ಮಾಧ್ಯಮ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಆ ಬಳಿಕ ನಾವು ಕರ್ನಲ್ ಖುರೇಷಿ ಅವರ ಮನೆಗೆ ದಾಳಿ ನಡೆಸಿದ ಹೇಳಿಕೆ ಕುರಿತಂತೆ ಶೋಧನೆ ನಡೆಸಿದ್ದೇವೆ. ಈ ವೇಳೆ ಇದೊಂದು ಸುಳ್ಳು ಸುದ್ದಿ ಎಂದು ಕಂಡುಬಂದಿದೆ.
ಮೇ 14, 2025ರ ಟಿವಿ9 ಕನ್ನಡ ವರದಿಯಲ್ಲಿ, ಅನಿಸ್ ಉದ್ದಿನ್ ಎಂಬಾತ ಸೋಫಿಯಾ ಅವರ ಗಂಡನ ಮನೆ ಮೇಲೆ ಆರೆಸ್ಸೆಸ್ ದಾಳಿ ಮಾಡಿದೆ ಎಂಬಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಗೋಕಾಕ್ ನ ಕೊಣ್ಣೂರಿನಲ್ಲಿರುವ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಭದ್ರತೆ ನೀಡಿದ್ದಾರೆ ಜೊತೆಗೆ ಬೆಳಗಾವಿ ಎಸ್ ಪಿ ಅವರು ಈ ಕುರಿತಾಗಿ ಪ್ರತಿಕ್ರಿಯಿಸಿ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದ್ದಾಗಿ ಹೇಳಲಾಗಿದೆ.
ಇದೇ ವಿಚಾರದಲ್ಲಿ ಮೇ 14, 2024ರಂದು ಝೀ ಕನ್ನಡ ನ್ಯೂಸ್ ಮಾಡಿದ ಟ್ವೀಟ್ ಅನ್ನು ಗಮನಿಸಿದ್ದೇವೆ. ಇದರಲ್ಲಿ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ ಅವರು ನೀಡಿರುವ ಸ್ಪಷ್ಟನೆಯನ್ನುಕೊಡಲಾಗಿದೆ. “ಕರ್ನಲ್ ಸೋಫಿಯಾ ಖುರೇಶಿ ಅವರ ಮನೆಗೆ ಆರೆಸ್ಸೆಸ್ ದಾಳಿ ಮಾಡಿದೆ ಎಂಬುದು ಸುಳ್ಳಾಗಿದೆ. ಈ ಕುರಿತಾಗಿ ಹಂಚಿಕೊಂಡ ವ್ಯಕ್ತಿ ವಿದೇಶೀಯನಾಗಿದ್ದು, ಕೆನಡಾ ದೇಶದವನಾಗಿದ್ದಾನೆ. ಈ ಬಗ್ಗೆ ಮಾಹಿತಿ ನೀಡುವಂತೆ ಎಕ್ಸ್ ಗೆ ಮನವಿ ಮಾಡಲಾಗಿದೆ. ಆತ ಭಾರತದವನು ಎಂದು ಕಂಡುಬಂದಲ್ಲಿ ಎಫ್ಆರ್ ದಾಖಲಿಸಲಾಗುವುದು. ಇನ್ನು ಈ ವಿಚಾರದಲ್ಲಿ ಗೋಕಾಕ್ ನ ಕೊಣ್ಣೂರಿನ ಮನೆಗೆ ಸಿಪಿಐ ಸುರೇಶ್ ಆರ್ ಬಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಬಿಗಿ ಭದ್ರತೆ ಒದಗಿಸಲಾಗಿದ್ದು, ಅನಗತ್ಯವಾಗಿ ಸಾರ್ವಜನಿಕರು ಕುಟುಂಬದವರನ್ನು ಭೇಟಿಯಾಗದಂತೆ ಸೂಚಿಸಲಾಗಿದೆ ಎಂದಿದ್ದಾರೆ” ಎಂದಿದೆ.
ಎಸ್ಪಿ ಭೀಮಾಶಂಕರ್ ಅವರೂ ಸುಳ್ಳು ಮಾಹಿತಿ ಹಬ್ಬಿಸಿದ ಎಕ್ಸ್ ಪೋಸ್ಟ್ ಗೆ ಮೇ 14, 2025ರಂದು ಪ್ರತಿಕ್ರಿಯೆ ನೀಡಿದ್ದು, ಕೂಡಲೇ ಇದನ್ನು ಡಿಲೀಟ್ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ.
ಈ ಸಾಕ್ಷ್ಯಾಧಾರಗಳ ಪ್ರಕಾರ, ಕರ್ನಲ್ ಸೋಫಿಯಾ ಖುರೇಶಿ ಅವರ ಮನೆಗೆ ಆರೆಸ್ಸೆಸ್ ದಾಳಿ ಮಾಡಿದೆ ಎನ್ನುವುದು ಸುಳ್ಳಾಗಿದೆ.
Our Sources
Report By Deccan Herald, Dated: April 26, 2024
YouTube Video By Tv9 Kannada, Dated: May 14, 2025
X post By Zee Kannada News, Dated: May 14, 2024
X post By Dr.Bheemashankar S Guled IPS, SP Belagavi, Dated: May 14, 2025
Ishwarachandra B G
June 26, 2025
Runjay Kumar
June 19, 2025
Ishwarachandra B G
May 26, 2025