Fact Check
ಕರ್ನಲ್ ಸೋಫಿಯಾ ಖುರೇಷಿ ನಾನು ಮುಸ್ಲಿಂ, ಆದರೆ ಉಗ್ರ ಅಲ್ಲ ಎಂದಿದ್ದಾರೆ ಎನ್ನುವುದು ಡೀಪ್ ಫೇಕ್ ವೀಡಿಯೋ

Claim
ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಇನ್ನೊಂದು ಪೋಸ್ಟ್ ವೈರಲ್ ಆಗಿದೆ. ಕರ್ನಲ್ ಸೋಫಿಯಾ ಖುರೇಷಿ ಅವರು ಮಾಧ್ಯಮ ಗೋಷ್ಠಿಯಲ್ಲಿ ನಾನು ಮುಸ್ಲಿಂ ಆದರೆ ಪಾಕಿಸ್ತಾನಿ ಅಲ್ಲ ಮತ್ತು ಉಗ್ರಳಲ್ಲ, ಭಯೋತ್ಫಾದನೆಗೆ ಯಾವುದೇ ಧರ್ಮವಿಲ್ಲ ಎಂದು ಹೇಳುತ್ತಿರುವ ವೀಡಿಯೋ ಹರಿದಾಡುತ್ತಿದೆ.

ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು, ಡೀಪ್ ಫೇಕ್ ವೀಡಿಯೋ ಆಗಿದೆ ಎಂದು ತಿಳಿದುಬಂದಿದೆ.
Fact
ಸತ್ಯಶೋಧನೆಗಾಗಿ ವೀಡಿಯೋದ ಕೀಫ್ರೇಂ ತೆಗೆದು ನಾವು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದ್ದೇವೆ. ಈ ವೇಳೆ ಕರ್ನಲ್ ಸೋಫಿಯಾ ಖುರೇಶಿ ಅವರು ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಳಿಕ ನಡೆಸಿದ ಮೊದಲ ಪತ್ರಿಕಾಗೋಷ್ಠಿಯ ದೃಶ್ಯವಾಗಿದೆ ಎಂದು ಗೊತ್ತಾಗಿದೆ.
ಆ ನಂತರ ಮೇ 7, 2025 ರಂದು ನಡೆದ ಮಾಧ್ಯಮಗೋಷ್ಠಿಯನ್ನು ನಾವು ಎಚ್ಚರಿಕೆಯಿಂದ ಕೇಳಿದ್ದೇವೆ. ಇದರಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರು ಧರ್ಮದ ಬಗ್ಗೆ ಎಲ್ಲೂ ಮಾತಾಡಿಲ್ಲ ಎಂದು ಖಚಿತಪಡಿಸಿಕೊಂಡಿದ್ದೇವೆ. ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್ ನಲ್ಲಿ ಭಯೋತ್ಪಾದನೆ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಅವರು ಮಾತನಾಡುವುದನ್ನು ಕೇಳಬಹುದು.
ವೈರಲ್ ಆಗುತ್ತಿರುವ ವೀಡಿಯೋವನ್ನು ನಾವು ಕೂಲಂಕಷವಾಗಿ ನೋಡಿದ್ದು ಇದು ಸಹಜವಾಗಿಲ್ಲ ಎಂದು ಗುರುತಿಸಿದ್ದೇವೆ.
ನಾವು Resemble.ai ಉಪಕರಣವನ್ನು ಬಳಸಿಕೊಂಡು ವೈರಲ್ ವೀಡಿಯೋಗಳು ಮತ್ತು ಆಡಿಯೊವನ್ನು ಪರಿಶೀಲಿಸಿದ್ದೇವೆ. ಆ ತನಿಖೆಯ ಪ್ರಕಾರ, ಈ ವೀಡಿಯೋದ ಆಡಿಯೋ ನಕಲಿಯಾಗಿದೆ ಎಂದು ಕಂಡುಬಂದಿದೆ.

ಯುಬಿ ಮೀಡಿಯಾ ಫೋರೆನ್ಸಿಕ್ಸ್ ಲ್ಯಾಬ್ ಅಭಿವೃದ್ಧಿಪಡಿಸಿದ ಡೀಪ್ಫೇಕ್-ಒ-ಮೀಟರ್ ಉಪಕರಣವನ್ನು ಬಳಸಿಕೊಂಡು ನಾವು ವೀಡಿಯೋವನ್ನು ಪರಿಶೀಲಿಸಿದಾಗ, ಈ ವೀಡಿಯೋದ ಹೆಚ್ಚಿನ ಭಾಗಗಳು ಕೃತಕ ಬುದ್ಧಿಮತ್ತೆಯಿಂದ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಎಐ) ಮೂಲಕ ತಯಾರಿಸಲಾಗಿದೆ ಎಂದು ತೋರಿಸುತ್ತದೆ.

ಹೀಗಾಗಿ, ಕರ್ನಲ್ ಸೋಫಿಯಾ ಖುರೇಷಿ ಅವರ ಈ ವೈರಲ್ ವೀಡಿಯೋ ಒಂದು ಡೀಪ್ ಫೇಕ್ ಎಂದು ತನಿಖೆಯಿಂದ ಸ್ಪಷ್ಟವಾಗಿದೆ.
Our Sources
Video by DD News, Dated: May 7, 2025
resemble.ai
Deepfake-O-Meter
(ಈ ಲೇಖನವನ್ನುಮೊದಲು ನ್ಯೂಸ್ಚೆಕರ್ ಪಂಜಾಬಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)