Authors
Claim
ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಅವರ ಮದುವೆಗೆ ಹೋಗದ ಬಗ್ಗೆ ನಟ ಸುದೀಪ್ ಅವರು ಸ್ಪಷ್ಟನೆ ನೀಡುತ್ತಿರುವ ವೀಡಿಯೋ ವೈರಲ್ ಆಗಿದೆ.
ಇನ್‌ಸ್ಟಾ ಗ್ರಾಂ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ ಸುದೀಪ್ ಅವರಿಗೆ ಮಾಧ್ಯಮದ ವ್ಯಕ್ತಿಯೊಬ್ಬರು ಪ್ರಶ್ನಿಸುತ್ತಿರುವುದು ಮತ್ತು ಅದಕ್ಕೆ ಅವರು ಪ್ರತಿಕ್ರಿಯಿಸುವ ವೀಡಿಯೋವನ್ನು ಹಾಕಲಾಗಿದೆ.
ಈ ವೀಡಿಯೋದಲ್ಲಿ, ಸುದೀಪ್ ಅವರು “ನನಗೂ ಆಹ್ವಾನ ಇತ್ತು ಆದರೆ ಸ್ವಲ್ಪ ಹುಷಾರಿಲ್ಲದೇ ಇದ್ದುದರಿಂದ ಭಾಗಿಯಾಗಿಲ್ಲ” ಎಂದು ಹೇಳುವುದು ಕೇಳಿಸುತ್ತದೆ. ಈ ವೀಡಿಯೋ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.
Also Read: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್
Fact
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ಟಿವಿ9 ಕನ್ನಡ ಮಾಧ್ಯಮದ ವರದಿಗಾರರೊಬ್ಬರು ಸುದೀಪ್ ಅವರನ್ನು ಪ್ರಶ್ನಿಸುತ್ತಿರುವುದನ್ನು ಗಮನಿಸಿದ್ದೇವೆ. ಅದರಂತೆ ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಅಂಬಾನಿ ಮದುವೆಯಲ್ಲಿ ಭಾಗಿಯಾದೇ ಇದ್ದ ಬಗ್ಗೆ ಸುದೀಪ್ ಅವರು ಮಾಧ್ಯಮದೊಂದಿಗೆ ಮಾತನಾಡಿದ ಯಾವುದೇ ದೃಶ್ಯಗಳು ನಮಗೆ ಕಂಡುಬಂದಿಲ್ಲ, ಟಿವಿ9 ಕನ್ನಡದ ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಖಾತೆಗಳಲ್ಲೂ ಈ ಕುರಿತ ಸುದ್ದಿಗಳು ಕಂಡುಬಂದಿಲ್ಲ.
ಆ ಬಳಿಕ ನಾವು ಇನ್ನಷ್ಟು ಶೋಧ ನಡೆಸಿದ್ದು, ಟಿವಿ9 ಕನ್ನಡ ವರದಿಯೊಂದು ಕಂಡುಬಂದಿದೆ. ಜುಲೈ 16, 2024ರ ವರದಿಯಲ್ಲಿ, “ಅಂಬಾನಿ ಮನೆ ಮದುವೆಗೆ ಏಕೆ ಹೋಗಿಲ್ಲ ಎಂಬ ಬಗ್ಗೆ ಸುದೀಪ್ ಕೊಟ್ಟ ಸ್ಪಷ್ಟನೆಯ ಹಿಂದಿನ ಅಸಲಿಯತ್ತೇನು?” ಶೀರ್ಷಿಕೆಯಿದ್ದು, ಇದರಲ್ಲಿ, “2023 ಫೆಬ್ರವರಿಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಯಶ್ ಹಾಗೂ ಅಯ್ಯೋ ಶ್ರದ್ಧಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಈ ವೇಳೆ ಸುದೀಪ್ಗೆ ಆಹ್ವಾನ ನೀಡಲಾಗಿತ್ತು. ಆದರೆ, ಅವರಿಗೆ ಅನಾರೋಗ್ಯ ಕಾರಣದಿಂದ ಹೋಗೋಕೆ ಸಾಧ್ಯ ಆಗಿರಲಿಲ್ಲ. ಆ ಸಂದರ್ಭದಲ್ಲಿ ಅವರು ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನ ಇದಾಗಿದೆ. ಇದನ್ನು ಫ್ಯಾನ್ ಪೇಜ್ಗಳು ಬೇರೆ ರೀತಿಯಲ್ಲಿ ಹಾಕಿವೆ.” ಎಂದಿದೆ.
ಈ ಬಗ್ಗೆ ನಾವು ಇನ್ನಷ್ಟು ಶೋಧ ನಡೆಸಿದಾಗ ಟಿವಿ 9ಕನ್ನಡ ಯೂಟ್ಯೂಬ್ ನಲ್ಲಿ “ಮೋದಿ ಭೇಟಿಗೆ ಸುದೀಪ್ ಯಾಕ್ ಬರ್ಲಿಲ್ಲ ಅನ್ನೋ ಪ್ರಶ್ನೆ ಕಿಚ್ಚ ಕೊಟ್ಟ ಉತ್ತರ!” ಶೀರ್ಷಿಕೆಯಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಸುದೀಪ್ ಅವರು ಮಾತನಾಡುವುದು ಕಾಣುತ್ತದೆ. ವೀಡಿಯೋವನ್ನು ಗಮನಿಸಿದ ವೇಳೆ ಇದು ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದು ಕಂಡುಬಂದಿದೆ ಮತ್ತು ಈ ವೀಡಿಯೋವನ್ನು ಎಡಿಟ್ ಮಾಡಿ ಹಾಕಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.
ಈ ಸಾಕ್ಷ್ಯಗಳ ಪ್ರಕಾರ, ಅನಂತ್ ಅಂಬಾನಿ ಮದುವೆಗೆ ಹೋಗದ ಬಗ್ಗೆ ನಟ ಸುದೀಪ್ ಸ್ಪಷ್ಟನೆಯ ವೀಡಿಯೋ ಹಳೆಯದಾಗಿದ್ದು ಅದು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಂಬಂಧಿಸಿದ್ದಾಗಿದೆ.
Also Read: ‘ಶಾಸ್ತ್ರಿ’ ಸಿನೆಮಾ ಟಿಕೆಟ್ ಪಡೆಯಲು ನೂಕುನುಗ್ಗಲು ಎಂದ ವೀಡಿಯೋ ನಿಜವೇ?
Result: Missing Context
Our Sources
Report By TV9 Kannada, Dated: July 16, 2024
YouTube Video By TV9 Kannada, Dated: February 15, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.