Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಉಗ್ರರ ದಾಳಿ ಬಳಿಕ ಎಲ್ಒಸಿಯಲ್ಲಿ ಭಾರತ-ಪಾಕ್ ಗುಂಡಿನ ದಾಳಿ
ಉಗ್ರರ ದಾಳಿ ಬಳಿಕ ಎಲ್ಒಸಿಯಲ್ಲಿ ಭಾರತ-ಪಾಕ್ ಗುಂಡಿನ ದಾಳಿ ಎಂದ ವೀಡಿಯೋ ಹಳೆಯದಾಗಿದೆ. 2020ರಲ್ಲಿ ನಡೆದ ಘಟನೆಯಾಗಿದೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿ ಕನಿಷ್ಟ 26 ಮಂದಿಯನ್ನು ಹತ್ಯೆಗೈದಿದ್ದಾರೆ. ಈ ರಕ್ತದೋಕುಳಿ ಘಟನೆ ನಡೆಯುತ್ತಿದ್ದಂತೆ ಎಲ್ ಒಸಿ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಗುಂಡಿನ ದಾಳಿ ನಡೆದಿದೆ ಎಂದು ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಇಂದು, ಏಪ್ರಿಲ್ 23, 2025ರಂದು ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಪೂಂಛ್ ಪ್ರದೇಶದಲ್ಲಿ ಪಾಕಿಸ್ತಾನ ಪಡೆಗಳು ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಆದಾಗ್ಯೂ ಈ ಕುರಿತು ಯಾವುದೇ ದೃಶ್ಯಗಳು, ಭಾರತೀಯ ಪಡೆಗಳ ಪ್ರತ್ಯುತ್ತರದ ದೃಶ್ಯಗಳ ವೀಡಿಯೋಗಳು ಪ್ರಕಟಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ವೈರಲ್ಡಿ ಆಗುತ್ತಿರುವ ವೀಡಿಯೋ ನಿಜವಾದ್ದೇ ಎಂಬುದನ್ನು ಪರಿಶೀಲಿಸಲು ಉದ್ದೇಶಿಸಿದ್ದೇವೆ.
ಫೇಸ್ ಬುಕ್ ನಲ್ಲಿ ವೈರಲ್ ವೀಡಿಯೋ ಜೊತೆಗೆ ಕಂಡುಬಂದ ಹೇಳಿಕೆಯಲ್ಲಿ “ಎಲ್ಒಸಿ ನಿಯಂತ್ರಣ ರೇಖೆಯ ತಟ್ಟಪಾನಿ ಸೆಕ್ಟರ್ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭಾರೀ ಗುಂಡಿನ ದಾಳಿ.” ಎಂದಿದೆ.
ಈ ಹೇಳಿಕೆಯ ಅರ್ಕೈವ್ ಆವೃತ್ತಿ ಇಲ್ಲಿದೆ
Also Read: ಹಿಂದೂ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಅಮಾಯಕ ಬಾಲಕನನ್ನು ಕೊಂದಿದ್ದಾರೆ ಎಂಬ ಈ ಹೇಳಿಕೆ ನಿಜವೇ?
ಇದೇ ರೀತಿಯ ಹೇಳಿಕೆಯನ್ನು ಇಲ್ಲಿ ಇಲ್ಲಿ ನೋಡಬಹುದು.
ವೈರಲ್ ವೀಡಿಯೋದ ತನಿಖೆಗಾಗಿ ನಾವು ವೀಡಿಯೋದ ಕೀಫ್ರೇಮ್ ಗಳನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದ್ದೇವೆ. ಈವೇಳೆ Indian Army – भारतीय रक्षक ಎಂಬ ಫೇಸ್ಬುಕ್ ಪೇಜ್ ಮೇ 1, 2020ರಂದು ಹಂಚಿಕೊಂಡಿರುವ ವೀಡಿಯೋ ಕಂಡುಬಂದಿದೆ. ಈ ವೀಡಿಯೋ ವೈರಲ್ ವೀಡಿಯೋಗೆ ಸಾಮ್ಯತೆಯನ್ನು ಹೊಂದಿದೆ. “ಮತ್ತು ಮರುದಾಳಿ ಮುಂದುವರಿದಿದೆ” ಎಂಬ ಶೀರ್ಷಿಕೆ ಇದೆ.
IAF Garud ಎಂಬ ಇನ್ನೊಂದು ಫೇಸ್ಬುಕ್ ಪೇಜ್ ನಲ್ಲಿ ಏಪ್ರಿಲ್ 15, 2020ರಂದು ಇದೇ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಈ ಎರಡು ಫೇಸ್ಬುಕ್ ವೀಡಿಯೋಗಳನ್ನು ನೋಡಿದ ಬಳಿಕ ನಾವು ವೈರಲ್ ವೀಡಿಯೋವನ್ನು ಅದರೊಂದಿಗೆ ತುಲನೆ ಮಾಡಿದ್ದೇವೆ. ಈ ವೇಳೆ ದೃಶ್ಯಗಳ ಕೀಫ್ರೇಮ್ ಗಳು ಒಂದೇ ರೀತಿ ಇರುವುದು ಕಂಡುಬಂದಿದೆ.
ದೃಶ್ಯ 1: ಗನ್ ಚಾಲನೆ ಸಂದರ್ಭದಲ್ಲಿ ಇರುವ ಸೈನಿಕರು ಮತ್ತು ಫಿರಂಗಿಗಳು
ದೃಶ್ಯ 2: ಫಿರಂಗಿ ದಾಳಿ ವೇಳೆ ಹತ್ತಿರದ ಶೀಟ್ ಹಾರಿ ಹೋಗುತ್ತಿರುವುದು
ದೃಶ್ಯ 3: ಫಿರಂಗಿ ದಾಳಿ ನಡೆಸುತ್ತಿರುವ ಸೈನಿಕರು
ಆ ಬಳಿಕ ನಾವು ಇನ್ನಷ್ಟು ಶೋಧ ನಡೆಸಿದ್ದು, ಜೂನ್ 14, 2020ರಂದು ರಿಪಬ್ಲಿಕ್ ಭಾರತ್ ಯುಟ್ಯೂಬ್ ನಲ್ಲಿ ಪ್ರಕಟಿಸಿದ ವೀಡಿಯೋ ನೋಡಿದ್ದೇವೆ. ಈ ವೀಡಿಯೋದ ಶೀರ್ಷಿಕೆಯಲ್ಲಿ, ಪೂಂಚ್ನಲ್ಲಿ ಕದನ ವಿರಾಮ ಉಲ್ಲಂಘನೆ, ಸೇನೆಯಿಂದ ತಕ್ಕ ಪ್ರತ್ಯುತ್ತರ ಎಂದಿದೆ.
ಈ ಸಾಕ್ಷ್ಯಗಳ ಪ್ರಕಾರ ಭಾರತ ಮತ್ತು ಪಾಕಿಸ್ತಾನದ ನಡುವೆ ಗುಂಡಿನ ದಾಳಿ ಎನ್ನುವ ವೀಡಿಯೋ ಹಳೆಯದಾಗಿದ್ದು 2020ರದ್ದಾಗಿದೆ ಮತ್ತು ಇದು ಇತ್ತೀಚಿನ ಪೆಹಲ್ಗಾಮ್ ಉಗ್ರ ದಾಳಿ ಬಳಿಕ ನಡೆದ ಬೆಳವಣಿಗೆಯಲ್ಲ ಎಂದು ತಿಳಿದುಬಂದಿದೆ.
Also Read: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಸಿದವರನ್ನು ಭಾರತೀಯ ಯೋಧರು ಬಂಧಿಸಿದ್ದಾರೆ ಎಂದ ವೀಡಿಯೋ ಬಾಂಗ್ಲಾದ್ದು!
Our Sources
Facebook Post By Indian Army – Bharatiya Rakshak, Dated: May 1, 2020
Facebook Post By IAF Garud, Dated: April 15, 2020
YouTube Video By Republic Bharat June 14, 2020,
(Inputs from Mohammed Zakaria, Newschecker Urdu)