Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಹಲ್ಗಾಮ್ ದಾಳಿ ಬಳಿಕ ಓರ್ವ ಉಗ್ರವಾದಿಯನ್ನು ಭಾರತೀಯ ಸೇನೆ ಜೀವಂತವಾಗಿ ಸೆರೆಹಿಡಿದಿದೆ
ಪಹಲ್ಗಾಮ್ ದಾಳಿ ಬಳಿಕ ಓರ್ವ ಉಗ್ರವಾದಿಯನ್ನು ಭಾರತೀಯ ಸೇನೆ ಜೀವಂತವಾಗಿ ಸೆರೆಹಿಡಿದಿದೆ ಎಂದು ಹೇಳಲಾದ ವೀಡಿಯೋ 2022ರದ್ದಾಗಿದೆ. ಅದು ಈಗಿನದ್ದಲ್ಲ
ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದ ಬೆನ್ನಲ್ಲೇ ಓರ್ವ ಉಗ್ರವಾದಿಯನ್ನು ಭಾರತೀಯ ಸೇನೆ ಜೀವಂತವಾಗಿ ಸೆರೆಹಿಡಿದಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಒಬ್ಬ ಉಗ್ರವಾದಿಯನ್ನ ಜೀವಂತ ವಾಗಿ ಹಿಡಿದ ಭಾರತೀಯ ಸೇನೆ ಪಾಕಿಸ್ತಾನ ISI ದಾಳಿ ಮಾಡಲು ಕಳಿಸಿತ್ತಂತೆ” ಎಂದಿದೆ.
ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ, ಇಲ್ಲಿ ಇಲ್ಲಿ ನೋಡಬಹುದು.
ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಈಗಿನ ಸಂದರ್ಭದ್ದಲ್ಲ, 2022ರ ಸಂದರ್ಭದ್ದು ಎಂದು ಕಂಡುಕೊಂಡಿದ್ದೇವೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಮೂಲಕ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವಿವಿಧ ಫಲಿತಾಂಶಗಳು ಲಭ್ಯವಾಗಿವೆ.
ಆಗಸ್ಟ್ 24, 2022ರ ದಿ ಪ್ರಿಂಟ್ ವರದಿಯ ಪ್ರಕಾರ, ಜಮ್ಮು ಪ್ರದೇಶದ ಬಳಿಯ ನಿಯಂತ್ರಣ ರೇಖೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಸೆರೆಹಿಡಿದ ಭಯೋತ್ಪಾದಕನೊಬ್ಬ ಭಾರತದ ಭೂಪ್ರದೇಶದೊಳಗೆ ಭಯೋತ್ಪಾದಕ ದಾಳಿಗಳನ್ನು ಪ್ರಾಯೋಜಿಸುವಲ್ಲಿ ಸೇವೆ ಸಲ್ಲಿಸುತ್ತಿರುವ ಪಾಕಿಸ್ತಾನಿ ಸೇನಾ ಕರ್ನಲ್ ಪಾತ್ರದ ಬಗ್ಗೆ ಬೆಳಕು ಚೆಲ್ಲಿದೆ. ಬಂಧಿತ ಭಯೋತ್ಪಾದಕ, ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್ಜ್ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ ಪ್ರಸ್ತುತ ಸೇನಾ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೇನಾ ವೈದ್ಯರು ಆತನ ಜೀವ ಉಳಿಸುವ ಮೊದಲು ಹುಸೇನ್ ಸ್ಥಿತಿ ಅತ್ಯಂತ ಗಂಭೀರವಾಗಿತ್ತು.
ಹುಸೇನ್ ಬುಧವಾರ ಚೇತರಿಸಿಕೊಳ್ಳುತ್ತಿದ್ದಂತೆ, ಎಲ್ಒಸಿ ದಾಟಿದ ನಂತರ ಭಾರತೀಯ ಸೈನಿಕರ ಮೇಲೆ ‘ಫಿದಾಯೀನ್’ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ಯೂನಸ್ ಚೌಧರಿ ಹಣ ಪಾವತಿಸಿದ್ದಾರೆ. ಇತರ ಮೂರರಿಂದ ನಾಲ್ಕು ಭಯೋತ್ಪಾದಕರೊಂದಿಗೆ ತನ್ನನ್ನು ಕಳುಹಿಸಲಾಗಿದೆ ಎಂದು ಎಎನ್ಐಗೆ ತಿಳಿಸಿದ್ದಾನೆ. ಹುಸೇನ್ ಗುಂಡೇಟಿನಿಂದ ಗಾಯಗೊಂಡಿದ್ದರೆ, ಆತನ ಸಹಚರರು ತಪ್ಪಿಸಿಕೊಂಡಿದ್ದರು” ಎಂದು ವರದಿಯಲ್ಲಿದೆ.
ಆಗಸ್ಟ್ 25, 2022ರ ದಿ ಫೈನಾನ್ಷಿಯಲ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, “ಆಗಸ್ಟ್ 21 ರಂದು ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಭಾರತೀಯ ಸೇನಾ ಠಾಣೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾಗ ಸೆರೆಹಿಡಿಯಲಾದ ಪಾಕಿಸ್ತಾನಿ ಭಯೋತ್ಪಾದಕನೊಬ್ಬ, ಆ ಕಾರ್ಯವನ್ನು ಪೂರ್ಣಗೊಳಿಸಲು ಪಾಕಿಸ್ತಾನಿ ಕರ್ನಲ್ ಯೂನಸ್ ಚೌಧರಿ ತನಗೆ 30,000 ರೂ.ಗಳನ್ನು ನೀಡಿದ್ದಾಗಿ ಬುಧವಾರ ಬಹಿರಂಗಪಡಿಸಿದ್ದಾನೆ.” ಎಂದಿದೆ.
ಆಗಸ್ಟ್ 24, 2022ರಂದು ಎಎನ್ಐ ಡಿಜಿಟಲ್ ಮಾಡಿರುವ ಟ್ವೀಟ್ ನಲ್ಲಿ, “ರಾಜೌರಿ, ಜೆ&ಕೆ: ಪಾಕಿಸ್ತಾನ ಸೇನೆಯ ಕರ್ನಲ್ ಯೂನಸ್ ಕಳುಹಿಸಿದ ಆತ್ಮಹತ್ಯಾ ಕಾರ್ಯಾಚರಣೆಗೆ ನಾನು ಮತ್ತು ಇತರ 4-5 ಜನರು ಇಲ್ಲಿಗೆ ಬಂದಿದ್ದೆವು. ಭಾರತೀಯ ಸೇನೆಯನ್ನು ಗುರಿಯಾಗಿಸಲು ಅವರು ನನಗೆ 30,000 ರೂ. ನೀಡಿದರು. ಭಾರತೀಯ ಸೇನೆಯ 1-2 ಪೋಸ್ಟ್ಗಳನ್ನು ಸ್ವೀಕರಿಸಿದ್ದರು: ಸೆರೆಹಿಡಿಯಲಾದ ಭಯೋತ್ಪಾದಕ ತಬಾರಕ್ ಹುಸೇನ್ ANI ಗೆ” ಎಂದಿದೆ.
ಆ ಬಳಿಕ ನಾವು ಎಎನ್ಐ ಸುದ್ದಿಯ ಸಂಸ್ಥೆ ಸೆಪ್ಟೆಂಬರ್ 4, 2022ರ ಇನ್ನೊಂದು ವರದಿಯನ್ನು ನೋಡಿದ್ದೇವೆ. ಇದರಲ್ಲಿ “ಆಗಸ್ಟ್ 21ರಂದು ನೌಶೆರಾದ ಎಲ್ ಒಸಿಯಲ್ಲಿ ಭಾರತೀಯ ಸೇನೆ ಸೆರೆಹಿಡಿದ ಪಾಕಿಸ್ತಾನದ ಆತ್ಮಹತ್ಯಾ ದಾಳಿಕೋರ ತಬಾರಕ್ ಹುಸೇನ್ ಶನಿವಾರ ಹೃದಯಾಘಾತದಿಂದ ನಿಧನನಾಗಿದ್ದಾನೆ. ಸೇನಾಧಿಕಾರಿಗಳ ಪ್ರಕಾರ, ರಜೌರಿ ನೌಶೇರಾದಲ್ಲಿ ಭಾರತೀಯ ಪ್ರದೇಶಕ್ಕೆ ನುಸುಳಲು ಯತ್ನಿಸುತ್ತಿದ್ದಾಗ ಹಸೇನ್ ಸೇನೆಯಿಂದ ಸೆರೆಹಿಡಿಯಲ್ಪಟ್ಟಿದ್ದ. ಆತ ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್ಜ್ಕೋಟ್ ಗ್ರಾಮದ ನಿವಾಸಿಯಾಗಿದ್ದು, ಸೇನಾ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.” ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ಇಲ್ಲಿ ನೋಡಬಹುದು.
ಈ ಸಾಕ್ಷ್ಯಾಧಾರಗಳ ಪ್ರಕಾರ, ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದ ಬೆನ್ನಲ್ಲೇ ಓರ್ವ ಉಗ್ರವಾದಿಯನ್ನು ಭಾರತೀಯ ಸೇನೆ ಜೀವಂತವಾಗಿ ಸೆರೆಹಿಡಿದಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋ 2022ರದ್ದಾಗಿದೆ. ತಬಾಕರ್ ಹುಸೇನ್ ಎಂಬ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರವಾದಿ ಬಂಧನಕ್ಕೊಳಗಾಗಿದ್ದ ವೇಳೆ ಮಾಧ್ಯಮಗಳು ಆಸ್ಪತ್ರೆಯಲ್ಲಿ ಆತನನ್ನು ಮಾತನಾಡಿಸಿವೆ ಎಂದು ಗೊತ್ತಾಗಿದೆ.
Also Read: ಉಗ್ರರ ದಾಳಿ ಬಳಿಕ ಎಲ್ಒಸಿಯಲ್ಲಿ ಭಾರತ-ಪಾಕ್ ಗುಂಡಿನ ದಾಳಿ ಎಂದ ವೀಡಿಯೋ ಹಳೆಯದು!
Our Sources
Report By The print, Dated: August 24, 2022
Report By The Financial Express, Dated: August 25, 2022
Report By ANI News, Dated: September 4, 2022
Tweet By ANI Digital, Dated: August 24, 2022
Ishwarachandra B G
June 26, 2025
Ishwarachandra B G
May 26, 2025
Runjay Kumar
May 22, 2025