Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಪಾನ್-ಆಧಾರ್ ಲಿಂಕ್ ಅಂತಿಮ ದಿನಾಂಕ ಗಡುವು ವಿಸ್ತರಣೆ
Fact
ಪಾನ್ ಆಧಾರ್ ಲಿಂಕ್ ಅಂತಿಮ ದಿನಾಂಕ ಗಡುವು ವಿಸ್ತರಣೆಯಾಗಿಲ್ಲ, ವೈರಲ್ ಅಧಿಸೂಚನೆ ಆಧಾರ್-ವೋಟರ್ ಐಡಿಗೆ ಸಂಬಂಧಪಟ್ಟದ್ದು
ಆಧಾರ್ ಪಾನ್ ಲಿಂಕ್ ಅಂತಿಮ ದಿನಾಂಕ ಮಾರ್ಚ್ 31, 2024ರವರೆಗೆ ವಿಸ್ತರಣೆಯಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ನ್ಯೂಸ್‌ಚೆಕರ್ ಟಿಪ್‌ಲೈನ್‌ಗೆ (+91-9999499044) ಸತ್ಯಶೋಧನೆಗಾಗಿ ಹಲವು ದೂರುಗಳು ಬಂದಿದ್ದು, ಅದನ್ನು ಸತ್ಯಶೋಧನೆಗಾಗಿ ಅಂಗೀಕರಿಸಲಾಗಿದೆ.
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ಕೀವರ್ಡ್ ಸರ್ಚ್ ನಡೆಸಿದ್ದು, ಆಧಾರ್-ಪಾನ್ ಲಿಂಕ್ ಕುರಿತಂತೆ ಗಡುವನ್ನು ವಿಸ್ತರಿಸಿದ ಬಗ್ಗೆ ಯಾವುದೇ ಅಧಿಸೂಚನೆಗಳನ್ನು ಕೇಂದ್ರ ತೆರಿಗೆ ಇಲಾಖೆ ಹೊರಡಿಸಿದ ಬಗ್ಗೆ ಮಾಹಿತಿಗಳು ಕಂಡು ಬಂದಿಲ್ಲ.
ವೈರಲ್ ಆಗಿರುವ ಮಾಹಿತಿಯನ್ನು ನಾವು ಕೂಲಂಕಷವಾಗಿ ಪರೀಕ್ಷಿಸಿ ವಿಶ್ಲೇಷಿಸಿದ್ದು, ಗಡುವನ್ನು ವಿಸ್ತರಿಸಿದ ಅಧಿಸೂಚನೆಯನ್ನು ಯಾವಾಗಿನವರೆಗೆ ಎಂದು ಸ್ಪಷ್ಟ ಪದಗಳಲ್ಲಿ ಉಲ್ಲೇಖಿಸದೇ ಇರುವುದು ಗಮನಕ್ಕೆ ಬಂದಿದೆ.
Also Read: ಪಾನ್-ಆಧಾರ್ ಲಿಂಕ್‌ಗೆ ಮಾರ್ಚ್ 31 ಕೊನೆ ದಿನ ಇಲ್ಲದಿದ್ದರೆ 10 ಸಾವಿರ ರೂ. ದಂಡ, ಇದು ಸತ್ಯವೇ?
ಇದರೊಂದಿಗೆ ಅಧಿಸೂಚನೆಯನ್ನು “Gazette of India: Extraordinary”ನಲ್ಲಿ ಪ್ರಕಟಗೊಂಡಿದ್ದನ್ನು ಗಮನಿಸಿದ್ದೇವೆ. ಇದು ಭಾರತ ಸರ್ಕಾರ ಗೆಜೆಟ್ ಆಗಿದ್ದು, ವಿಷಯಗಳ ತುರ್ತು ಸ್ಥಿತಿ ಅವಲಂಬಿಸಿ ನಿತ್ಯವೂ ಪ್ರಕಟಿಸಲಾಗುತ್ತದೆ. ಈ ಗೆಜೆಟ್ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ ಮತ್ತು ಸಂಬಂಧಿತ ಸಚಿವಾಲಯದ ಅಡಿಯಲ್ಲಿ ಪ್ರಕಟಗೊಂಡ ಅಧಿಸೂಚನೆಗಳ ಪಟ್ಟಿಯನ್ನು ಪರಿಶೀಲಿಸಿದಾಗ ವೈರಲ್ ಆದ ಅಧಿಸೂಚನೆಯನ್ನು ಗಮನಿಸಿದಾಗ, ಆ ದಿನಾಂಕದಂದು (ಮಾರ್ಚ್ 21 2023)ರ ಅಧಿಸೂಚನೆಯಲ್ಲಿ “Notification regarding extension of last date for the electors to intimate the Aadhaar Number” ಎಂದಿದೆ. ಅಂದರೆ ಮತದಾರರು ಆಧಾರ್ ಸಂಖ್ಯೆಯನ್ನು ತಿಳಿಸಲು ದಿನಾಂಕವನ್ನು ವಿಸ್ತರಿಸುವ ಕುರಿತ ಅಧಿಸೂಚನೆ ಎಂದಿದೆ.
ಈ ವಿಷಯದ ಅಡಿಯಲ್ಲಿ ಪಟ್ಟಿ ಮಾಡಲಾದ ಅಧಿಸೂಚನೆ ಈಗ ವೈರಲ್ ಆಗಿರುವ ಅಧಿಸೂಚನೆಯ ಪದಗಳು ಒಂದೇ ರೀತಿ ಇವೆ.
ಇದರೊಂದಿಗೆ ನಾವು ಆಧಾರ್-ವೋಟರ್ ಐಡಿ ಲಿಂಕ್ ಮಾಡುವ ಕುರಿತಂತೆ ಅಂತಿಮ ದಿನಾಂಕದ ಗಡುವು ವಿಸ್ತರಣೆಯಾದ ಬಗ್ಗೆ ಹಲವು ಮಾಧ್ಯಮ ವರದಿಗಳನ್ನೂ ಗುರುತಿಸಿದ್ದೇವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇನ್ನು, ಪಾನ್-ಆಧಾರ್ ಲಿಂಕ್ ಕುರಿತ ಅಂತಿಮ ದಿನಾಂಕವನ್ನು ಕೇಂದ್ರ ತೆರಿಗೆ ಇಲಾಖೆ ವಿಸ್ತರಣೆ ಮಾಡಿದೆ. ಜೂ.30, 2023ರವರೆಗೆ ಲಿಂಕ್ ಮಾಡಲಿರುವ ದಿನಾಂಕವನ್ನು ವಿಸ್ತರಣೆ ಮಾಡಿ ಘೋಷಣೆ ಮಾಡಿದೆ. 1 ಸಾವಿರ ಶುಲ್ಕದೊಂದಿಗೆ ಲಿಂಕ್ ಮಾಡಬಹುದು ಎಂದು ಅದು ಹೇಳಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಹೊರಡಿಸಿದ ಪ್ರಕಟನೆ ಟ್ವೀಟ್ ಮಾಡಲಾಗಿದ್ದು ಅದು ಇಲ್ಲಿದೆ.
ಈ ಸತ್ಯಶೋಧನೆಯ ಪ್ರಕಾರ, ಪಾನ್ ಆಧಾರ್ ಲಿಂಕ್ ಅಂತಿಮ ದಿನಾಂಕ ಗಡುವು ವಿಸ್ತರಣೆಯಾಗಿಲ್ಲ, ವೈರಲ್ ಅಧಿಸೂಚನೆ ಆಧಾರ್-ವೋಟರ್ ಐಡಿಗೆ ಸಂಬಂಧಪಟ್ಟದ್ದು ಎಂದು ತಿಳಿದು ಬಂದಿದೆ. ಆದ್ದರಿಂದ ವೈರಲ್ ಅಧಿಸೂಚನೆ ತಪ್ಪು ಕ್ಲೇಮ್ ಆಗಿದೆ.
Our Sources :
Website of the Gazette of India: Extraordinary
Report published in The Indian Express, dated March 22, 2023
Report published in Hindustan Times, dated March 22, 2023
Report published in CNBC TV18, dated March 22, 2023
(ಪಾನ್-ಆಧಾರ್ ಲಿಂಕ್ ಕುರಿತ ಅಂತಿಮ ದಿನಾಂಕ ಮಾರ್ಚ್ 31, 2023ರಿಂದ ಜೂನ್ 30, 2023ರವರೆಗೆ ವಿಸ್ತರಣೆಯಾಗಿದ್ದು, ಈ ಕುರಿತ ಮಾಹಿತಿಯೊಂದಿಗೆ ಈ ಲೇಖನವನ್ನು 28-03-2023ರಂದು ಪರಿಷ್ಕರಣೆ ಮಾಡಲಾಗಿದೆ.)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Vasudha Beri
March 10, 2025
Ishwarachandra B G
March 8, 2025
Ishwarachandra B G
March 7, 2025