Fact Check: ಅಯೋಧ್ಯೆಯಲ್ಲಿ ಬಾಲರಾಮನ ನೋಡಲು ಜನಸಾಗರ ಎಂದ ಫೋಟೋ ಪುರಿ ಜಗನ್ನಾಥ ರಥಯಾತ್ರೆಯದ್ದು!

ಅಯೋಧ್ಯೆ, ಜನಸಾಗರ, ಬಾಲರಾಮ, ಪುರಿ ಜಗನ್ನಾಥ ರಥಯಾತ್ರೆ

Authors

Since 2011, JP has been a media professional working as a reporter, editor, researcher and mass presenter. His mission to save society from the ill effects of disinformation led him to become a fact-checker. He has an MA in Political Science and Mass Communication.

Claim
ಅಯೋಧ್ಯೆಯಲ್ಲಿ ಬಾಲರಾಮನ ನೋಡಲು ಜನಸಾಗರ

Fact
ವೈರಲ್ ಫೋಟೋ ಪುರಿ ಜಗನ್ನಾಥ ರಥಯಾತ್ರೆಯದ್ದು, ಅಯೋಧ್ಯೆಯದ್ದಲ್ಲ

ಅಯೋಧ್ಯೆಯಲ್ಲಿ ಬಾಲರಾಮನ ನೋಡಲು ಜನಸಾಗರ ಎಂದು ಫೋಟೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, “ಶ್ರೀಬಾಲರಾಮನ ನೋಡಲು ಜನಸಾಗರ, ದಲಿತ, ಬಲಿತ, ಸ್ಪೃಶ್ಯ, ಅಸ್ಪೃಶ್ಯ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಈ ಎಲ್ಲಾ ಹುಟ್ಟು ಭ್ರಮೆಗಳನ್ನು ಕಳಚಿ ಹಾಕಿ ಸಾಗರೋಪಾದಿಯಲ್ಲಿ ರಾಮನಲ್ಲಿ ಕರಗಿ ರಾಮಭಕ್ತರಾಗಿ ಕಳೆದುಹೋದರು! ಸಂವಿಧಾನದಿಂದ ಸಾಧ್ಯವಾಗದ್ದು ರಾಮನಾಮದಿಂದ ಸಾಧ್ಯವಾಯಿತು! ಇದುವೆ ಸನಾತನ ಧರ್ಮ!” ಎಂದಿದೆ.

Also Read: ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದ ವೀಡಿಯೋ ಹಿಂದಿನ ಸತ್ಯಾಂಶ ಏನು?

Fact Check: ಅಯೋಧ್ಯೆಯಲ್ಲಿ ಬಾಲರಾಮನ ನೋಡಲು ಜನಸಾಗರ ಎಂದ ಫೋಟೋ ಪುರಿ ಜಗನ್ನಾಥ ರಥಯಾತ್ರೆಯದ್ದು!
ಫೇಸ್‌ಬುಕ್‌ ಕ್ಲೇಮ್

ಫೇಸ್‌ಬುಕ್‌ ನಲ್ಲಿ ಇದೇ ರೀತಿಯ ಕ್ಲೇಮ್‌ ಗಳು ಕಂಡುಬಂದಿದ್ದು, ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ವೈರಲ್‌ ಫೊಟೋ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಅಯೋಧ್ಯೆಯ ಜನಸಂದಣಿಯಲ್ಲ ಬದಲಾಗಿ ಒಡಿಶಾ ಜಗನ್ನಾಥ ರಥಯಾತ್ರೆಯದ್ದು ಎಂದು ಕಂಡುಕೊಂಡಿದ್ದೇವೆ.

Fact Check/ Verification

ಸತ್ಯಶೋಧನೆಗಾಗಿ ನಾವು ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.

ಈ ವೇಳೆ ಶಿಲ್ಲಾಂಗ್‌ ಟೈಮ್ಸ್  ಭಗವಾನ್‌ ಜಗನ್ನಾಥನ ವಾರ್ಷಿಕ ರಥಯಾತ್ರೆ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಫೊಟೋ ಲಭ್ಯವಾಗಿದೆ. ಈ ಫೋಟೋ ವೈರಲ್ ಆಗಿರುವ ಫೋಟೋವನ್ನು ಹೋಲುತ್ತಿರುವುದನ್ನು ನಾವು ಗಮನಿಸಿದ್ದೇವೆ.

ಇದರೊಂದಿಗೆ ಎನ್‌ಡಿಟಿವಿ ಪ್ರಕಟಿಸಿದ ವೆಬ್‌ ಸ್ಟೋರಿಯನ್ನು ಗಮನಿಸಿದ್ದೇವೆ. ಅಲ್ಲೂ ಇದೇ ಫೊಟೋವನ್ನು ಭಗವಾನ್‌ ಜಗನ್ನಾಥ ರಥಯಾತ್ರೆ ಎಂದು ಹಂಚಿಕೊಳ್ಳಲಾಗಿದೆ.

Also Read: ಅಯೋಧ್ಯೆ ರಾಮ ಮಂದಿರದಲ್ಲಿ ಕಾಣಿಕೆ ಹುಂಡಿ ಭರ್ತಿಯಾಗಿದೆ ಎನ್ನುವ ಈ ವೀಡಿಯೋದ ಅಸಲಿಯತ್ತೇನು?

Fact Check: ಅಯೋಧ್ಯೆಯಲ್ಲಿ ಬಾಲರಾಮನ ನೋಡಲು ಜನಸಾಗರ ಎಂದ ಫೋಟೋ ಪುರಿ ಜಗನ್ನಾಥ ರಥಯಾತ್ರೆಯದ್ದು!
ಎನ್ ಡಿಟಿವಿ ಪ್ರಕಟಿಸಿದ ಫೋಟೋ

ಜೂನ್‌ 4 2023ರಂದು ಜಾಗರಣ್‌ ಪ್ರಕಟಿಸಿದ ವರದಿಯಲ್ಲಿ ಜಗನ್ನಾಥನ ಭವ್ಯ ರಥಯಾತ್ರೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೋಡಬಹುದು.

ಶೋಧದ ವೇಳೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಅವರು ಫೇಸ್‌ಬುಕ್‌ ನಲ್ಲಿ ಹಂಚಿಕೊಂಡಿರುವ ಜಗನ್ನಾಥ ರಥಯಾತ್ರೆಯ ಕುರಿತ ಪೋಸ್ಟ್ ಕೂಡ ಗಮನಿಸಿದ್ದೇವೆ. ಇದರಲ್ಲಿ ವೈರಲ್‌ ಫೊಟೋ ಹೋಲುವ ಫೋಟೋ ಗಮನಿಸಿದ್ದೇವೆ. ಇದನ್ನು ಇಲ್ಲಿ ನೋಡಬಹುದು.

Conclusion

ಈ ಸತ್ಯಶೋಧನೆಯ ಪ್ರಕಾರ, ಭಾರೀ ಸಂಖ್ಯೆಯಲ್ಲಿ ಜನ ಸೇರಿದ ವಿದ್ಯಮಾನ ನಡೆದಿರುವುದು ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಯದ್ದಾಗಿದೆ. ಇದು ಅಯೋಧ್ಯೆಯ ಫೊಟೋ ಅಲ್ಲ ಎಂಬುದು ಸಾಬೀತಾಗಿದೆ.

Also Read: ಬುರ್ಜ್ ಖಲೀಫಾ ಮೇಲೆ ರಾಮನ ಚಿತ್ರ ಪ್ರದರ್ಶಿಸಲಾಗಿದೆಯೇ?

Result: False

Our Sources:
Photo Published By The Shillong Times

Photo Published By NDTV Web Story

Report By Jagaran, Dated: June 4, 2023

Facebook Post By Naveen Patnaik, Dated: June 20, 2023

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Since 2011, JP has been a media professional working as a reporter, editor, researcher and mass presenter. His mission to save society from the ill effects of disinformation led him to become a fact-checker. He has an MA in Political Science and Mass Communication.