Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಚಾಕು ಹಿಡಿದು ಅಂಗಡಿಯವರನ್ನು ಬೆದರಿಸುತ್ತಿದ್ದು, ಆತನಿಗೆ ಯೋಗಿ ಪೊಲೀಸರು ಸರಿಯಾದ ರೀತಿ ಮಾಡಿದ್ದಾರೆ
Fact
ಸಾರ್ವಜನಿಕ ಸ್ಥಳದಲ್ಲಿ ಚಾಕು ತೋರಿಸಿ ಬೆದರಿಸುತ್ತಿದ್ದ ವ್ಯಕ್ತಿಗೆ ಗುಂಡೇಟು ಹೊಡೆದ ಘಟನೆ 2023ರಲ್ಲಿ ನಡೆದಿದ್ದು, ಉತ್ತರ ಪ್ರದೇಶದ್ದಲ್ಲ
ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಚಾಕು ಹಿಡಿದು ಅಂಗಡಿಯವರನ್ನು ಬೆದರಿಸುತ್ತಿದ್ದು, ಆತನಿಗೆ ಯೋಗಿ ಪೊಲೀಸರು ಸರಿಯಾದ ರೀತಿ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿದೆ.
ಎಕ್ಸ್ ಪೋಸ್ಟ್ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ “ಈತ ಉತ್ತರ ಪ್ರದೇಶದ ಸಹರಾನ್‌ಪುರದ ಅಬ್ದುಲ್ ಮಸೂದ್ ಎಂಬ ಗೂಂಡಾ. ಕಳೆದ ಭಾನುವಾರ ಮಾರುಕಟ್ಟೆಯಲ್ಲಿ ತನ್ನ ಎರಡೂ ಕೈಗಳಲ್ಲಿ ಕತ್ತಿ ಬೀಸುವ ಮೂಲಕ ಅಂಗಡಿಯವರನ್ನು ಮತ್ತು ಸಾರ್ವಜನಿಕರನ್ನು ಬಹಿರಂಗವಾಗಿ ಬೆದರಿಸುತ್ತಿದ್ದ., ಆಗ ಯೋಗಿಜಿಯವರ ಪೋಲೀಸರು ಬಂದರು… ಮುಂದೆ ಏನಾಯಿತು ಎನ್ನುವುದು ನಿಮ್ಮ ಮುಂದಿದೆ. ಇದು ರಾಷ್ಟ್ರೀಯವಾದಿ ಪಕ್ಷಕ್ಕೆ ಸರಿಯಾದ ಸ್ಥಳವಾಗಿದೆ” ಎಂದಿದೆ.
Also Read: ವಿಠಲನ ವಿಗ್ರಹವನ್ನು ಸ್ವೀಕರಿಸಲು ರಾಹುಲ್ ಗಾಂಧಿ ನಿರಾಕರಿಸಿದರು ಎಂಬ ಹೇಳಿಕೆ ಸುಳ್ಳು
ಇದರ ಆರ್ಕೈವ್ ಮಾಡಲಾದ ಟ್ವೀಟ್ ಇಲ್ಲಿದೆ. ಇದೇ ರೀತಿಯ ಹೇಳಿಕೆ ಇಲ್ಲಿಯೂ ಕಂಡುಬಂದಿದೆ.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ. ವೈರಲ್ ವೀಡಿಯೋ 2023ರದ್ದಗಾಗಿದ್ದು ಕರ್ನಾಟಕದ ಕಲಬುರಗಿಯದ್ದು ಎಂದು ತಿಳಿದುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಫೆಬ್ರವರಿ 6, 2023ರ ಇಂಡಿಯಾ ಟುಡೇ ವರದಿಯಲ್ಲಿರುವಂತೆ, ಕಲಬುರಗಿಯ ಮಾರುಕಟ್ಟೆ ಪ್ರದೇಶದಲ್ಲಿ ಚಾಕು ತಿರುಗಿಸುತ್ತ, ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬಳಿಕ ಆತನನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಎಂದಿದೆ.
ಫೆಬ್ರವರಿ 6, 2023ರ ಇಟಿವಿ ಭಾರತ್ ವರದಿಯಲ್ಲಿ ಕಲಬುರಗಿ ಮಾರುಕಟ್ಟೆಯ ಜನನಿಬಿಡ ಪ್ರದೇಶದಲ್ಲಿ ಭಾನುವಾರ ಜನರಿಗೆ ಚಾಕು ತೋರಿಸಿ ಬೆದರಿಸುತ್ತ ಓಡಾಡುತ್ತಿದ್ದ ಅಬ್ದುಲ್ ಜಾಫರ್ ಎಂಬ ವ್ಯಕ್ತಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ. ಆ ಕೂಡಲೇ ಚಿಕಿತ್ಸೆಗಾಗಿ ಆತನನ್ನು ಸ್ಥಳೀಯ ಜೇಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದಿದೆ. ಇದೇ ವರದಿಯಲ್ಲಿ, ಅಬ್ದುಲ್ ಜಾಫರ್ ಗೆ ಶರಣಾಗುವಂತೆ ಕೇಳಿದ್ದರೂ ಆತ ಪೊಲೀಸರಿಗೆ ದಾಳಿ ಮಾಡಲು ಮುಂದಾಗಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ವಹೀದ್ ಕೊತ್ವಾಲ್ ಅವರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾಗಿ ಹೇಳಲಾಗಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
Also Read: ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದ ವೀಡಿಯೋ ಗದಗಿನದ್ದು!
ಇನ್ನು ಕ್ಲೇಮ್ ಕುರಿತಾಗಿ ಉತ್ತರಪ್ರದೇಶ ಪೊಲೀಸ್ ಫ್ಯಾಕ್ಟ್ ಚೆಕ್ ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ಉತ್ತರಪ್ರದೇಶದ್ದಲ್ಲ. ಫೆಬ್ರವರಿ 5, 2023ರಂದು ಕರ್ನಾಟಕದ ಕಲಬುರಗಿಯಲ್ಲಿ ನಡೆದ ಘಟನೆ ಇದಾಗಿದೆ ಎಂದು ಹೇಳಿದ್ದಾರೆ.
ಲಭ್ಯವಿರುವ ಪುರಾವೆಗಳ ಪ್ರಕಾರ, ಘಟನೆ ಕಲಬುರಗಿಯಲ್ಲಿ 2023ರಲ್ಲಿ ನಡೆದಿದ್ದು, ಉತ್ತರಪ್ರದೇಶದಲ್ಲಿ ನಡೆದ ಘಟನೆಯಲ್ಲ, ಆರೋಪಿ ಕಾಲಿಗೆ ಗುಂಡೇಟು ಹೊಡೆದವರು ಉತ್ತರ ಪ್ರದೇಶ ಪೊಲೀಸರಲ್ಲ ಎಂದು ಗೊತ್ತಾಗಿದೆ.
Our Sources:
Report By India Today, Dated: February 6, 2023
Report By Etv Bharat, Dated: February 6, 2023
Tweet By UP Police Fact Check, Dated: March 16, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Kushel Madhusoodan
May 31, 2025
Runjay Kumar
April 10, 2025
Ishwarachandra B G
April 4, 2025