Monday, December 15, 2025

Fact Check

Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?

Written By Sabloo Thomas, Translated By Ishwarachandra B G, Edited By Pankaj Menon
Nov 17, 2023
banner_image

Claim
ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್‌ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು

Fact
ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿರಲಿಲ್ಲ, ಪ್ರತಿಭಟನೆಯೊಂದರ ನಿಮಿತ್ತ ಸಂಸತ್ ಹೊರಗೆ ಕಪ್ಪು ಬಟ್ಟೆ ಧರಿಸಿದ್ದರು

ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆದ ದಿನದಂದು ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಬಂದರು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹರಿದಾಡುತ್ತಿದೆ.

ಈ ಕುರಿತ ಕ್ಲೇಮಿನಲ್ಲಿ, “ರಾಮ ಮಂದಿರದ ಭೂಮಿ ಪೂಜೆಯ ದಿನ 05 ಆಗಸ್ಟ್ 2020ರಂದು ಎಲ್ಲಾ ಕಾಂಗ್ರೇಸ್ MP ಗಳು ಕಪ್ಪು ಬಟ್ಟೆ ದರಿಸಿ ಸಂಸತ್ತಿಗೆ ಬಂದಿದ್ದರು, ಇವರಿಗೆ ಹಿಂದೂಗಳು ಬೇಡ ಹಿಂದೂಗಳ ವೋಟ್ ಮಾತ್ರ ಬೇಕು..” ಎಂದು ಹೇಳಲಾಗಿದೆ. ಪಂಚರಾಜ್ಯ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಈ ಚಿತ್ರದೊಂದಿಗೆ ಹೇಳಿಕೆಯನ್ನು ಪ್ರಸಾರ ಮಾಡಲಾಗುತ್ತಿದೆ.

Also Read: ಕಾಂಗ್ರೆಸ್ ಚಿಹ್ನೆ ಇಸ್ಲಾಮಿನ ಮೂಲದ್ದೇ, ಇಲ್ಲ ವೈರಲ್‌ ಕ್ಲೇಮ್‌ ಸುಳ್ಳು

Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?
ಫೇಸ್‌ಬುಕ್‌ ಕ್ಲೇಮ್

ಈ ಕುರಿತು ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್‌ ವಾಟ್ಸಾಪ್‌ ಟಿಪ್‌ ಲೈನ್ಗೆ ಬಳಕೆದಾರರೊಬ್ಬರು ಮನವಿ ಮಾಡಿದ್ದು, ಅದನ್ನು ಅಂಗೀಕರಿಸಲಾಗಿದೆ.

Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?

ಇದೇ ರೀತಿಯ ಕ್ಲೇಮ್ ಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಂಡುಬಂದಿದೆ.

Fact Check/Verification

ಸತ್ಯಶೋಧನೆಯ ಭಾಗವಾಗಿ, ನಾವು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಕಾಂಗ್ರೆಸ್ಸಿಗರು ಕಪ್ಪು ಬಟ್ಟೆ ಧರಿಸಿರುವ ಈ ಚಿತ್ರವನ್ನು ಆಗಸ್ಟ್ 5, 2022 ರಂದು ವಾರ್ತಾ ಭಾರತಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಈ ಚಿತ್ರಕ್ಕೆ ಪಿಟಿಐ ಸುದ್ದಿ ಸಂಸ್ಥೆಗೆ ಫೋಟೋ ಕ್ರೆಡಿಟ್ ನೀಡಲಾಗಿದೆ. ಜೊತೆಗೆ ಚಿತ್ರಕ್ಕೆ ಹೀಗೆ ಅಡಿ ಬರಹವನ್ನು ನೀಡಲಾಗಿದೆ. “ಬೆಲೆ ಏರಿಕೆ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನದ ಭಾಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಶುಕ್ರವಾರ ಸಂಸತ್ ಭವನದ ಸಂಕೀರ್ಣದಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಸೋನಿಯಾ ಗಾಂಧಿ ಸಂಸತ್ತಿನ ಗೇಟ್ ಸಂಖ್ಯೆ 1 ರ ಹೊರಗೆ ಬ್ಯಾನರ್ ಹಿಡಿದು ಪಕ್ಷದ ಮಹಿಳಾ ಸಂಸದರೊಂದಿಗೆ ನಿಂತರು.” ಎಂದಿದೆ.

Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?
ವಾರ್ತಾ ಭಾರತಿ ವರದಿ

ಆಗಸ್ಟ್ 5, 2022 ರಂದು ಟೆಲಿಗ್ರಾಫ್ ಕೂಡ ಪ್ರಕಟಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳದ ವಿರುದ್ಧ ಪಕ್ಷದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಭಾಗವಾಗಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಪ್ಪು ಬಟ್ಟೆ ಧರಿಸಿ ಪಕ್ಷದ ಸಂಸದರೊಂದಿಗೆ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಿದರು.

“ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಕಾಂಗ್ರೆಸ್ ನಾಯಕರು ಶುಕ್ರವಾರ ಕಪ್ಪು ಬಟ್ಟೆ ಧರಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸಂಸತ್ತು ಮತ್ತು ಎಐಸಿಸಿ ಪ್ರಧಾನ ಕಚೇರಿಯ ಹೊರಗೆ ನಾಟಕೀಯ ಘರ್ಷಣೆಗಳ ಮಧ್ಯೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವಾರು ಜನರನ್ನು ಪೊಲೀಸರು ವಶಕ್ಕೆ ಪಡೆದರು. ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಹೆಚ್ಚಳದ ವಿರುದ್ಧ ಪಕ್ಷದ ರಾಷ್ಟ್ರವ್ಯಾಪಿ ಆಂದೋಲನದ ಭಾಗವಾಗಿ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದರು ಮತ್ತು ನಂತರ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಿದರು” ಎಂದು ವರದಿ ತಿಳಿಸಿದೆ.

Also Read: ಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ  ಸಂದರ್ಭ ಕಲ್ಮಾ ಓದಲಾಗಿದೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು

Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?
ಟೆಲಿಗ್ರಾಫ್‌ ವರದಿ

ಫೋಟೋ ಫೀಚರ್ “ದಿ ಡೇ ಇನ್ ಪಿಕ್ಚರ್ಸ್: ಆಗಸ್ಟ್ 05, 2022” ನಲ್ಲಿ, ಔಟ್ ಲುಕ್ ಈ ಚಿತ್ರವನ್ನು ಪ್ರಕಟಿಸಿರುವುದನ್ನು ನಾವು ನೋಡಿದ್ದೇವೆ. ಈ ಫೋಟೋದ ಕ್ರೆಡಿಟ್ ಅನ್ನು ಪಿಟಿಐನ ಅರುಣ್ ಶರ್ಮಾ ಅವರಿಗೆ ನೀಡಲಾಗಿದೆ. “ಬೆಲೆ ಏರಿಕೆ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳದ ವಿರುದ್ಧ ಪಕ್ಷದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಭಾಗವಾಗಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಪ್ಪು ಬಟ್ಟೆ ಧರಿಸಿ ಪಕ್ಷದ ಸಂಸದರೊಂದಿಗೆ ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದರು” ಎಂದು ಫೋಟೋ ಅಡಿಬರಹದಲ್ಲಿ ತಿಳಿಸಲಾಗಿದೆ.

Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?
ಔಟ್ ಲುಕ್‌ ವರದಿ

ಗಮನಿಸಬೇಕಾದ ಸಂಗತಿಯೆಂದರೆ, ಈ ಘಟನೆಗೂ ಎರಡು ವರ್ಷಗಳ ಮೊದಲು ಅಂದರೆ ಆಗಸ್ಟ್ 5, 2020ರಂದು ಅಯೋಧ್ಯೆಯಲ್ಲಿ ರಾಮ್ ದೇವಾಲಯದ ಭೂಮಿ ಪೂಜೆ ನಡೆಯಿತು. ಆದ್ದರಿಂದ, ಈ ಪ್ರತಿಭಟನೆಗೂ ರಾಮ ಮಂದಿರ ಭೂಮಿ ಪೂಜೆಗೂ ಯಾವುದೇ ಸಂಬಂಧವಿಲ್ಲ.

Also Read: ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್‌ ಎನ್ನುವ ಈ ವೈರಲ್‌ ಮೆಸೇಜ್ ಸತ್ಯವೇ?

Conclusion

ವೈರಲ್ ಚಿತ್ರವು 2022 ರಲ್ಲಿ ಬೆಲೆ ಏರಿಕೆಯ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಯದ್ದಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

Result: False

Our Sources
Photo By Vartha Bharati Dated: August 5,2022

Photo By Telegraph India Dated: August 5,2022

Photo By Outlook Dated: August 5,2022

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

20,598

Fact checks done

FOLLOW US
imageimageimageimageimageimageimage