Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇಂಡಿಯಾ ಮೈತ್ರಿಕೂಟದ ರಾಲಿಯಲ್ಲಿ ಜನಸಾಗರವೇ ಸೇರಿದೆ ಎಂದು ಸಾಮಾಜಿಕ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (ಇಂಡಿಯಾ) ಉನ್ನತ ನಾಯಕರು ಭಾನುವಾರ (ಮಾರ್ಚ್ 3) ಪಾಟ್ನಾದ ಗಾಂಧಿ ಮೈದಾನದಲ್ಲಿ ಜಂಟಿ ರಾಲಿಯನ್ನುದ್ದೇಶಿಸಿ ಮಾತನಾಡಿದರು. ನಾಯಕ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಈ ಕಾರ್ಯಕ್ರಮದ ನೇತೃತ್ವ ವಹಿಸಿತ್ತು. ಕಾಂಗ್ರೆಸ್ ನ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ನಾಯಕರು ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜನ ಸಾಗರವೇ ಸೇರಿತ್ತು ಎಂದು ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.
Also Read: ಉತ್ತರ ಪ್ರದೇಶದ ಮದರಸಾ ಮೇಲೆ ನಡೆದ ಪೊಲೀಸ್ ದಾಳಿಯಲ್ಲಿ ಮೆಷಿನ್ ಗನ್ ಸಿಕ್ಕಿದೆಯೇ?
ಈ ಪೋಸ್ಟ್ ಗಳ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿ ಮತ್ತು ಇಲ್ಲಿದೆ.
ಚಿತ್ರ 1
ನ್ಯೂಸ್ ಚೆಕರ್ ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ. ಈ ವೇಳೆ ಆಗಸ್ಟ್ 27, 2017 ರಂದು ಎಎನ್ಐ ಮಾಡಿದ ಎಕ್ಸ್ ಪೋಸ್ಟ್ ಪತ್ತೆಯಾಗಿದೆ. ಇದರಲ್ಲಿ ಪಾಟ್ನಾದಲ್ಲಿ ನಡೆದ ಆರ್ ಜೆಡಿ ರಾಲಿ ಎಂದು ಹಲವಾರು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಎರಡನೇ ಚಿತ್ರವನ್ನು ವೈರಲ್ ಫೋಟೋ (ಬಲ ಭಾಗದ ಚಿತ್ರ) ದೊಂದಿಗೆ ಹೋಲಿಕೆ ಮಾಡಿದರೆ, ಜನಸಮೂಹವು ಇನ್ನಷ್ಟು ಹೆಚ್ಚಿರುವಂತೆ ಕಾಣಲು ಅದನ್ನು ಡಿಜಿಟಲ್ ಆಗಿ ಬದಲಾಯಿಸಲಾಗಿದೆ ಎಂದು ಕಂಡುಬರುತ್ತಿದೆ.
ಆ ಬಳಿಕ ನಾವು ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಆಗಸ್ಟ್ 27, 2017 ರ ಎನ್ಡಿಟಿವಿ ವರದಿ ಲಭ್ಯವಾಗಿದೆ. ಲಾಲು ಯಾದವ್ ಅವರು “ಬಿಜೆಪಿ ಭಾಗಾವೋ ದೇಶ್ ಬಚಾವೋ” ರಾಲಿಯ ತಿರುಚಿದ ಚಿತ್ರವನ್ನು ಹಂಚಿಕೊಂಡಿದ್ದಾರೆ ಎಂಬುದು ಇದರಲ್ಲಿದೆ. ಇದನ್ನು ಹಲವಾರು ಟ್ವಿಟರ್ ಬಳಕೆದಾರರು ಗಮನಸೆಳೆದಿದ್ದಾರೆ. ವರದಿಯಲ್ಲಿ ರಾಲಿಯ ನಿಜವಾದ ಚಿತ್ರವಿದ್ದು, ಅಲ್ಲಿ ಜನ ಸಂದಣಿ ಇಡೀ ಸ್ಥಳವನ್ನು ಆವರಿಸಿದಂತೆ ಇರಲಿಲ್ಲ ಎಂದು ಕಾಣಿಸುತ್ತದೆ.
“ಲಾಲೂ ಯಾದವ್ ಈ ಚಿತ್ರವನ್ನು ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಮೂರ್ಖತನವನ್ನು ಎತ್ತಿ ತೋರಿಸಿದ್ದಾರೆ. ಅಲ್ಲದೇ ಲಾಲೂ ಕುರಿತ ಹಗರಣಗಳ ಉಲ್ಲೇಖಗಳನ್ನೂ ಮಾಡಿದ್ದಾರೆ.” ಎಂದು ವರದಿಯಲ್ಲಿದೆ.. ಬಿಜೆಪಿ ವಿರೋಧಿ ರಾಲಿಯ ಫೋಟೋಶಾಪ್ ಮಾಡಿದ ಚಿತ್ರವನ್ನು ಕರೆಯುವ ಇದೇ ರೀತಿಯ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು, ವೈರಲ್ ಫೋಟೋ 2017 ರ ಡಿಜಿಟಲ್ ಆಗಿ ತಿರುಚಿದ ಚಿತ್ರ ಎಂದು ದೃಢಪಡಿಸುತ್ತದೆ.
ಚಿತ್ರ 2
ನ್ಯೂಸ್ ಚೆಕರ್ ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು, ಈ ವೇಳೆ ಇದು 2017 ರಲ್ಲಿ ಪಾಟ್ನಾದಲ್ಲಿ ನಡೆದ ಅದೇ ಆರ್ ಜೆಡಿ ರಾಲಿಯ ಕುರಿತಾದ್ದಾಗಿದೆ. ಈ ಆಗಸ್ಟ್ 27, 2017 ರ ಟೈಮ್ಸ್ ಆಫ್ ಇಂಡಿಯಾ ಟ್ವೀಟ್ ನಮಗೆ ಲಭ್ಯವಾಗಿದೆ.
ಆಗಸ್ಟ್ 27, 2017 ರ ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿ ಇದೇ ಫೋಟೋವನ್ನು ಹಂಚಿಕೊಂಡಿದ್ದು, ವೈರಲ್ ಚಿತ್ರವು ಇತ್ತೀಚಿನ ಐ.ಎನ್.ಡಿ.ಐ.ಎ. ಸಭೆಗೆ ಸಂಬಂಧಿಸಿದ್ದಲ್ಲ ಎಂದದು ದೃಢಪಡಿಸಿದೆ.
ಈ ಸತ್ಯಶೋಧನೆಯ ಪ್ರಕಾರ, ಐ.ಎನ್.ಡಿ.ಐ.ಎ. ಸಭೆಯದ್ದು ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೋಗಳು ಹಳೆಯದಾಗಿದೆ.
Also Read: ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆಯೇ?
Our Sources:
Tweet By ANI, Dated: August 27, 2017
Report By NDTV report, Dated: August 27, 2017
Tweet By TOI, Dated: August 27, 2017
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Prasad S Prabhu
May 15, 2024
Kushel Madhusoodan
May 13, 2024
Ishwarachandra B G
May 6, 2024