Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಆರ್ ಜೆಡಿ ವಕ್ತಾರೆ ಕಾಂಚನಾ ಯಾದವ್ ಮೇಲೆ ಲಾಠಿ ಚಾರ್ಜ್
ಕರ್ನಾಟಕದ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಸಂದರ್ಭದ ಗಲಾಟೆಯಲ್ಲಿ ಜ್ಯೋತಿ ಎಂಬವರ ಮೇಲೆ ನಡೆದ ಲಾಠಿ ಚಾರ್ಜ್ ಇದಾಗಿದೆ
ಆರ್ ಜೆಡಿ ವಕ್ತಾರೆ ಕಾಂಚನಾ ಯಾದವ್ ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆದರೆ, ನಮ್ಮ ತನಿಖೆಯಲ್ಲಿ, ವಿಡಿಯೋದಲ್ಲಿರುವ ಮಹಿಳೆ ಕರ್ನಾಟಕ ಮೂಲದ ಹಿಂದೂ ಕಾರ್ಯಕರ್ತೆ ಜ್ಯೋತಿ ಎಂದು ತಿಳಿದುಬಂದಿದೆ, ಇತ್ತೀಚೆಗೆ ಮದ್ದೂರಿನ ಗಣೇಶ ವಿಸರ್ಜನೆಯಲ್ಲಿ ನಡೆದ ಹಿಂಸಾಚಾರದ ನಂತರ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಪೊಲೀಸರ ಲಾಠಿ ಚಾರ್ಜ್ ಗೆ ಈಡಾಗಿದ್ದರು.
ವೈರಲ್ ಆಗಿರುವ ಈ ವಿಡಿಯೋ 16 ಸೆಕೆಂಡುಗಳ ಉದ್ದವಾಗಿದ್ದು, ಇದರಲ್ಲಿ ಪೊಲೀಸರು ಮಹಿಳೆಯೊಬ್ಬಳನ್ನು ಲಾಠಿ ಚಾರ್ಜ್ ಮಾಡುತ್ತಿದ್ದಾರೆ. ನಂತರ ಮಹಿಳೆ ರಸ್ತೆಯಲ್ಲಿ ಕುಳಿತು ಅಳಲು ಪ್ರಾರಂಭಿಸುತ್ತಾಳೆ.
ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ಹೇಳಿಕೆಯೊಂದಿಗೆ ವೀಡಿಯೋ ಫೇಸ್ಬುಕ್ನಲ್ಲಿ ಕೂಡ ಹಂಚಿಕೊಳ್ಳಲಾಗಿದೆ.

ಆರ್ಜೆಡಿ ವಕ್ತಾರ ಕಾಂಚನಾ ಯಾದವ್ ಅವರ ಮೇಲೆ ಲಾಠಿಚಾರ್ಜ್ ಮಾಡಿದ ಆರೋಪದ ಕುರಿತಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಇದು ಮದ್ದೂರಿನಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆ, ಪೊಲೀಸರ ಕ್ರಮಕ್ಕೆ ಸಂಬಂಧ ಹೊಂದಿದೆ ಎಂದು ಗೊತ್ತಾಗಿದೆ.
ವೈರಲ್ ವೀಡಿಯೋ ಹೋಲು ವೀಡಿಯೋವನ್ನು ನಾವು 8 ಸೆಪ್ಟೆಂಬರ್ 2025 ರಂದು ಟಿವಿ 5 ಕನ್ನಡದ ಯೂಟ್ಯೂಬ್ ಖಾತೆಯಲ್ಲಿ ಪತ್ತೆ ಮಾಡಿದ್ದೇವೆ. ವೀಡಿಯೋದ ಜೊತೆಗಿನ ಶೀರ್ಷಿಕೆಯಲ್ಲಿ, ಇದು ಕರ್ನಾಟಕದ ಮದ್ದೂರಿನಲ್ಲಿ ಲಾಠಿಚಾರ್ಜ್ ಎಂದು ವಿವರಿಸಲಾಗಿದೆ.

ಆ ನಂತರ ಕೀವರ್ಡ್ ಸರ್ಚ್ ಮಾಡಿದಾಗ, 11 ಸೆಪ್ಟೆಂಬರ್ 2025 ರ ನ್ಯೂಸ್ 18 ಕನ್ನಡ ವೀಡಿಯೊ ವರದಿಯನ್ನು ನೋಡಿದ್ದೇವೆ. ಇದರಲ್ಲಿ ವೈರಲ್ ವೀಡಿಯೋಗೆ ಸಂಬಂಧಿಸಿದ ದೃಶ್ಯಗಳಿವೆ. ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಈ ಸಮಯದಲ್ಲಿ ಜ್ಯೋತಿ ಎಂಬ ಮಹಿಳೆಯ ವೀಡಿಯೋ ಕೂಡ ಇದರಲ್ಲಿದೆ. ಈ ಸಮಯದಲ್ಲಿ, ಮಹಿಳೆ ರಸ್ತೆಯಲ್ಲಿ ಕುಳಿತು ಅಳುತ್ತಿರುವುದು ಕಂಡುಬಂದಿದೆ.

ಆ ನಂತರ ಜ್ಯೋತಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಬಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ. ಇದಲ್ಲದೇ ಘಟನೆಗೂ ಮೊದಲು ಅವರು ಆಕ್ಷೇಪಾರ್ಹ ವೀಡಿಯೋ ಒಂದರಲ್ಲಿ ಅವರ ವಿರುದ್ಧ ವಿರುದ್ಧ ಭಾರತೀಯ ನ್ಯಾಯಾಂಗ ಸಂಹಿತೆಯ ಸೆಕ್ಷನ್ 196 (1) ಮತ್ತು 299 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪಬ್ಲಿಕ್ ಟಿವಿಯಲ್ಲಿ ಈ ಸಂಬಂಧ ಪ್ರಕಟವಾದ ವರದಿಯನ್ನೂ ನಾವು ನೋಡಿದ್ದೇವೆ. ಮುಸ್ಲಿಂ ಸಮುದಾಯ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಜ್ಯೋತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತನಿಖೆಯ ಸಮಯದಲ್ಲಿ ನಾವು ಆರ್ ಜೆಡಿ ವಕ್ತಾರ ಕಾಂಚನಾ ಯಾದವ್ ಅವರನ್ನು ಸಂಪರ್ಕಿಸಿದ್ದೇವೆ. “ವೈರಲ್ ವಿಡಿಯೋ ನನ್ನದಲ್ಲ, ನನ್ನನ್ನು ದೂಷಿಸುವ ಉದ್ದೇಶದಿಂದ ಇದನ್ನು ಕೆಲವರು ಹಂಚುತ್ತಿದ್ದಾರೆ ಮಾಡುತ್ತಿದ್ದಾರೆ” ಎಂದು ಅವರು ನಮಗೆ ಹೇಳಿದರು.
ಸೆ.7ರಂದು ಗಣೇಶ ಚತುರ್ಥಿ ಸಂದರ್ಭದಲ್ಲಿ ಮದ್ದೂರಿನ ತಮಿಳು ಕಾಲೋನಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಲಾಗಿತ್ತು. ಮದ್ದೂರಿನ ರಾಮ್ ರಹೀಮ್ ನಗರದ ಮಸೀದಿಯ ಬಳಿ ಹಾದುಹೋಗುವಾಗ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಮತ್ತು ಹಿಂಸಾಚಾರ ಭುಗಿಲೆದ್ದಿತು. ಆದರೆ, ನಂತರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಮರುದಿನ, ಹಿಂದೂ ಕಾರ್ಯಕರ್ತರು ಯಾತ್ರೆಯ ಮೇಲೆ ಕಲ್ಲು ತೂರಾಟವನ್ನು ವಿರೋಧಿಸಿ ಮದ್ದೂರಿನಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಆರ್ ಜೆಡಿ ವಕ್ತಾರೆ ಕಾಂಚನಾ ಯಾದವ್ ಅವರಲ್ಲ, ಕರ್ನಾಟಕದ ಹಿಂದೂ ಕಾರ್ಯಕರ್ತೆ ಜ್ಯೋತಿ ಎಂಬವರಾಗಿದ್ದಾರೆ ಎಂಬುದು ಸಾಕ್ಷ್ಯಗಳಿಂದ ಸ್ಪಷ್ಟವಾಗಿದೆ.
Our Sources
YouTube video by TV5 Kannada Dated: September 8, 2025
YouTube video by News 18 Kannada Dated September 11, 2025
Telephonic conversation with Kanchana Yadav
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Vasudha Beri
October 24, 2025
Ishwarachandra B G
September 26, 2025
Vasudha Beri
August 18, 2025