ಬೆಲಾರಸ್ ನಿಂದ ಅಕ್ರಮವಾಗಿ ಪೋಲೆಂಡ್ ಪ್ರವೇಶ ಮಾಡುತ್ತಿದ್ದವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂಬಂತೆ ವೀಡಿಯೋ ಜೊತೆಗೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ನಲ್ಲಿ “ಬೆಲಾರಸ್ ನಿಂದ ಅಕ್ರಮವಾಗಿ ಪೋಲೆಂಡ್ ಪ್ರವೇಶ ಮಾಡುತ್ತಿದ್ದ ಜಿಹಾದಿಗಳನ್ನ ಅಲ್ಲೇ ಸ್ವರ್ಗಕ್ಕೆ ಕಳಿಸಿದ ಪೊಲೀಸ್,” ಎಂದಿದೆ.

ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಭಾಗಶಃ ತಪ್ಪು ಎಂದು ಕಂಡುಬಂದಿದೆ.
Also Read: ಬುರ್ಖಾ ಮತ್ತು ಹಿಜಾಬ್ ನಲ್ಲಿ ಇಂದಿರಾ ಗಾಂಧಿ ಎಂದು ಕ್ರಾಪ್ ಮಾಡಲಾದ ಫೋಟೋ ಹಂಚಿಕೆ
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಿದ್ದೇವೆ.
ಈ ವೇಳೆ ವರದಿಗಳು ಲಭ್ಯವಾಗಿದ್ದು, ಅಕ್ರಮವಾಗಿ ಪ್ರವೇಶಿಸಿದವರಿಗೆ ಪೋಲಂಡ್ ಪಡೆಗಳು ಗುಂಡಿಕ್ಕಿಲ್ಲ ಮತ್ತು ಅವರು ಯಾವುದೇ ಕೋಮಿಗೆ ನಿರ್ದಿಷ್ಟವಾಗಿ ಸೇರಿದವರು ಎಂಬ ಬಗ್ಗೆ ಹೇಳಿಲ್ಲ ಎಂಬುದು ಗೊತ್ತಾಗಿದೆ.
ಮಾರ್ಚ್ 24, 2025ರ bielsk.eu ವರದಿಯಲ್ಲಿ, ಕಳೆದ ಮೂರು ದಿನಗಳಲ್ಲಿ, ಪೊಡ್ಲಾಸ್ಕಿ ಗಡಿ ಕಾವಲು ವಿಭಾಗದ ಅಧಿಕಾರಿಗಳು ಪೋಲಿಷ್-ಬೆಲರೂಸಿಯನ್ ಗಡಿಯನ್ನು ಅಕ್ರಮವಾಗಿ ದಾಟಲು ಸುಮಾರು 280 ಪ್ರಯತ್ನಗಳು ನಡೆದಿವೆ. ವಲಸಿಗರು ಪೊಲೀಸ್ ಪಡೆಗಳ ಮೇಲೆ ಹಲವು ಬಾರಿ ದಾಳಿ ಮಾಡಿದರು. ಪ್ರಕರಣ ಸಂಬಂಧ ಇಬ್ಬರು ಕೊರಿಯರ್‌ಗಳನ್ನು ಸಹ ಬಂಧಿಸಲಾಗಿದೆ ಎಂದಿದೆ. ಇದೇ ವರದಿಯಲ್ಲಿ ಶುಕ್ರವಾರ ಮಿಚಾಲೋವ್‌ನಲ್ಲಿರುವ ಗಡಿ ಕಾವಲು ಪಡೆಯ ಅಧಿಕಾರಿಗಳು ಇಬ್ಬರು ಕೊರಿಯರ್‌ಗಳನ್ನು ಬಂಧಿಸಿದರು . ಪೋಲಿಷ್ ನೋಂದಣಿ ಫಲಕಗಳನ್ನು ಹೊಂದಿರುವ BMW ಕಾರನ್ನು ಚಾಲನೆ ಮಾಡುತ್ತಿದ್ದ ಬೆಲರೂಸಿಯನ್ ಪ್ರಜೆಯೊಬ್ಬರು ಅಕ್ರಮ ವಲಸಿಗರನ್ನು ಕರೆದೊಯ್ಯಲು ಚಾಲನೆ ಮಾಡುತ್ತಿದ್ದರು. ಪೋಲಿಷ್ ನೋಂದಣಿ ಫಲಕಗಳನ್ನು ಹೊಂದಿರುವ ಟೊಯೋಟಾ ವಾಹನವನ್ನು ಚಲಾಯಿಸುತ್ತಿದ್ದ ಜಾರ್ಜಿಯನ್ ಪ್ರಜೆಯೊಬ್ಬರು ಅಕ್ರಮ ವಲಸಿಗರನ್ನು ಕರೆದೊಯ್ಯಲು ಚಾಲನೆ ಮಾಡುತ್ತಿದ್ದರು ಎಂದಿದೆ. (ಪೋಲಿಷ್ ಭಾಷೆಯಿಂದ ಅನುವಾದಿಸಲಾಗಿದೆ)
ವರದಿಯಲ್ಲಿ ವೈರಲ್ ಆಗಿರುವ ವೀಡಿಯೋದ ಕೀಫ್ರೇಮ್ ಹೋಲುವ ಚಿತ್ರವನ್ನು ನೋಡಿದ್ದೇವೆ.

ಮಾರ್ಚ್ 24, 2025ರ wpolityce.pl ವರದಿಯಲ್ಲಿ, ಕ್ಜೆರೆಮ್ಚಾದಲ್ಲಿನ ಗಡಿ ಕಾವಲು ಠಾಣೆಯ ಜವಾಬ್ದಾರಿಯುತ ಪ್ರದೇಶದಲ್ಲಿ ಮಾರ್ಚ್ 21ರಂದು ಅಕ್ರಮವಾಗಿ ಗಡಿ ದಾಟುವ ಪ್ರಯತ್ನವನ್ನು ತೋರಿಸುವ ವೀಡಿಯೊವನ್ನು ಗಡಿ ಕಾವಲು ಪಡೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಕ್ಯಾಮೆರಾದ ಜಾಗರೂಕ ನೋಟ ಮತ್ತು ಗಡಿ ಕಾವಲು ಅಧಿಕಾರಿಗಳ ಮತ್ತು ಪೋಲಿಷ್ ಸೇನಾ ಸೈನಿಕರ ತ್ವರಿತ ಪ್ರತಿಕ್ರಿಯೆ ನಮ್ಮ ದೇಶದ ಗಡಿಯನ್ನು ಅಕ್ರಮವಾಗಿ ದಾಟಲು ಅವಕಾಶ ನೀಡಲಿಲ್ಲ ಎಂದು ಗಡಿ ಕಾವಲು ಪಡೆ ವರದಿ ಮಾಡಿದೆ.” ಎಂದಿದೆ. (ಪೋಲಿಷ್ ಭಾಷೆಯಿಂದ ಅನುವಾದಿಸಲಾಗಿದೆ)

ಮಾರ್ಚ್ 25, 2025ರಂದು visegrad24 ಮಾಡಿದ ಎಕ್ಸ್ ಪೋಸ್ಟ್ ಅನ್ನೂ ನಾವು ನೋಡಿದ್ದು,
ಪೋಲಿಷ್ ಗಡಿ ಕಾವಲುಗಾರರು ಬೆಲಾರಸ್-ಪೋಲೆಂಡ್ ಗಡಿಯನ್ನು ಉಲ್ಲಂಘಿಸಿದಾಗ ಅಕ್ರಮ ವಲಸಿಗರನ್ನು ತಡೆದಿದ್ದಾರೆ ಎಂದಿದೆ.
ಇದೇ ರೀತಿ ವಿವಿಧ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ವರದಿಗಳ ಪ್ರಕಾರ, ಅಕ್ರಮ ವಲಸಿಗರನ್ನು ಹತ್ಯೆ ಮಾಡಿರುವ ಬಗ್ಗೆ ಯಾವುದೇ ವರದಿಯಲ್ಲಿ ಉಲ್ಲೇಖವಾಗಿಲ್ಲ.
Conclusion
ಈ ಸತ್ಯಶೋಧನೆಯ ಪ್ರಕಾರ ಪೋಲಂಡ್ ಪ್ರವೇಶಿಸುತ್ತಿದ್ದ ಜಿಹಾದಿಗಳಿಗೆ ಗುಂಡಿಕ್ಕಿ ಕೊಲ್ಲಲಾಗಿದೆ ಎನ್ನುವುದು ಭಾಗಶಃ ತಪ್ಪಾಗಿದೆ. ವಲಸಿಗರು ಗಡಿ ದಾಟುವ ವೇಳೆ ಅವರನ್ನು ಮತ್ತು ಸಹಾಯಕ್ಕೆ ಬಂದಿದ್ದ ಇಬ್ಬರನ್ನು ಕಾನೂನಿನಡಿ ಬಂಧಿಸಲಾಗಿದೆ.
Also Read: ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಬಂದ ವೀಡಿಯೋ ಎಂದ ಪೋಸ್ಟ್ ಹಿಂದಿನ ಸತ್ಯವೇನು?
Our Sources
Report By bielsk.eu, Dated: March 24, 2025
Report By wpolityce.pl, Dated: March 24, 2025
X post By visegrad24, Dated: March 25, 2025