Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪುಟಿನ್ ಭಾರತಕ್ಕೆ ಆಗಮನ ವೇಳೆ ಭಾರತೀಯ ವಾಯುಪಡೆ ವಿಮಾನಗಳಿಂದ ಬೆಂಗಾವಲು
ವೈರಲ್ ವೀಡಿಯೋ ಜೊತೆಗಿರುವ ಹೇಳಿಕೆ ನಿಜವಲ್ಲ. 2017ರಲ್ಲಿ ಪುಟಿನ್ ಅವರು ಸಿರಿಯಾಕ್ಕೆ ಭೇಟಿ ನೀಡುವ ವೇಳೆ ಯುದ್ಧ ವಿಮಾನಗಳು ಬೆಂಗಾವಲು ನೀಡಿದ್ದನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಆಗಮಿಸುತ್ತಿದ್ದ ವೇಳೆ ಭಾರತೀಯ ವಾಯು ಸರಹದ್ದು ಪ್ರವೇಶಿಸಿದ ಬಳಿಕ ವಾಯುಪಡೆ ಯುದ್ಧ ವಿಮಾನಗಳು ಬೆಂಗಾವಲಾಗಿದ್ದವು ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿಸೆಂಬರ್ 4 ರಂದು ನವದೆಹಲಿಗೆ ಆಗಮಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಪುಟಿನ್ ಅವರ ಮೊದಲ ಭಾರತ ಭೇಟಿ ಇದಾಗಿದೆ. ದೆಹಲಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಅಧ್ಯಕ್ಷ ಪುಟಿನ್ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆ ಬಳಿಕ ಭಾರತ-ರಷ್ಯಾ ದ್ವಿಪಕ್ಷೀಯ ಮಾತುಕತೆಗಳು, ಹಲವು ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮ ನಡೆದಿತ್ತು.
ವೈರಲ್ ಆಗಿರುವ 32 ಸೆಕೆಂಡುಗಳ ವೀಡಿಯೋದಲ್ಲಿ ಪುಟಿನ್ ತಮ್ಮ ವಿಮಾನದಲ್ಲಿ ಕುಳಿತು ತಮ್ಮ ಪಕ್ಕದಲ್ಲಿ ಹಾದುಹೋಗುವ ಯುದ್ಧ ವಿಮಾನಗಳನ್ನು ನೋಡುತ್ತಿದ್ದಾರೆ. ಅವರ ವಿಮಾನದ ಎರಡೂ ಬದಿಗಳಲ್ಲಿ ಯುದ್ಧ ವಿಮಾನಗಳು ಹಾರಾಡುತ್ತಿರುವುದನ್ನು ವೀಡಿಯೋದಲ್ಲಿ ತೋರಿಸಲಾಗಿದೆ. ಈ ವೈರಲ್ ವೀಡಿಯೋ ಇರುವ ಹೇಳಿಕೆಗಳನ್ನು ಇಲ್ಲಿ ಇಲ್ಲಿ ಇಲ್ಲಿ ನೋಡಬಹುದು.



ಆದಾಗ್ಯೂ ಸತ್ಯಶೋಧನೆಯಲ್ಲಿ ಕಂಡುಬಂದಂತೆ, ಈ ವೀಡಿಯೊದಲ್ಲಿನ ತುಣುಕುಗಳು 2017 ರಲ್ಲಿ ಪುಟಿನ್ ಸಿರಿಯಾಕ್ಕೆ ಭೇಟಿ ನೀಡಿದ ಸಮಯದ್ದು ಎಂದು ತಿಳಿದುಬಂದಿದೆ.
ಸತ್ಯಶೋಧನೆಯ ಭಾಗವಾಗಿ ನಾವು ವೀಡಿಯೋವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ಈ ವೇಳೆ ಅದರಲ್ಲಿ “ಕೃಷ್ಣನ್ ಕವಿರಾಜನ್” ಎಂಬ ವಾಟರ್ ಮಾರ್ಕ್ ಕಾಣಿಸಿಕೊಂಡಿದೆ. ಮೇಲೆ ಕಂಡುಬಂದ ಮಾಹಿತಿಯ ಆಧಾರದ ಮೇಲೆ ಕೀವರ್ಡ್ ಅನ್ನು ಹುಡುಕಿದಾಗ, ಕೃಷ್ಣನ್ ಕವಿರಾಜನ್ ಅವರ ಯೂಟ್ಯೂಬ್ ಖಾತೆಯಿಂದ 28 ಜನವರಿ 2022ರಂದು ಅಪ್ಲೋಡ್ ಮಾಡಲಾದ ಈ ವೀಡಿಯೋ ನೋಡಿದ್ದೇವೆ.

ಬಳಿಕ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನೀಡಿದ್ದು, ಯುನೈಟೆಡ್ ಕಿಂಗ್ ಡಮ್ ರಷ್ಯಾ ಎಂಬ ಫೇಸ್ಬುಕ್ ಖಾತೆಯಿಂದ ಡಿಸೆಂಬರ್ 13, 2017 ರಂದು ಅಪ್ಲೋಡ್ ಮಾಡಲಾದ ವೀಡಿಯೋ ಲಭ್ಯವಾಗಿದೆ. ಇದರಲ್ಲಿ ವೈರಲ್ ದೃಶ್ಯವನ್ನು ಹೋಲುವ 24 ಸೆಕೆಂಡುಗಳ ದೃಶ್ಯಗಳು ಕಂಡುಬಂದಿವೆ. ಈ ವೀಡಿಯೋ ರಷ್ಯಾದ ಮಾಧ್ಯಮ ಸಂಸ್ಥೆ ರಷ್ಯಾ ಟುಡೇಯ ಲೋಗೋವನ್ನು ಹೊಂದಿತ್ತು.
“ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಶ್ಚಿಮ ಸಿರಿಯಾದ ಖಮೀಮಿಮ್ ವಾಯುನೆಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಳಿಯಲು ತಯಾರಿ ನಡೆಸುತ್ತಿದ್ದಂತೆ, ಅವರನ್ನು ಯುದ್ಧ ವಿಮಾನಗಳು ಸ್ವಾಗತಿಸಿದವು” ಎಂದು ವೀಡಿಯೋ ಜೊತೆಗಿನ ಶೀರ್ಷಿಕೆಯಲ್ಲಿದೆ.

ಇದಲ್ಲದೆ, 11 ಡಿಸೆಂಬರ್ 2017 ರಂದು ರಷ್ಯಾ ಟುಡೇ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯಲ್ಲಿ ನಾವು ಈ ವೀಡಿಯೋವನ್ನು ನೋಡಿದ್ದೇವೆ. ವ್ಲಾಡಿಮಿರ್ ಪುಟಿನ್ ಪಶ್ಚಿಮ ಸಿರಿಯಾದ ಖೀಮಿಮ್ ವಾಯುನೆಲೆಯಲ್ಲಿ ಇಳಿಯಲು ತಯಾರಿ ನಡೆಸುತ್ತಿದ್ದಾಗ, ಸುಖೋಯ್ -30 ಯುದ್ಧ ವಿಮಾನಗಳ ಬೆಂಗಾವಲು ಅವರನ್ನು ಸ್ವಾಗತಿಸಿತು ಎಂದು ಈ ವರದಿಯಲ್ಲಿದೆ.

ತನಿಖೆಯ ಸಮಯದಲ್ಲಿ, ಡಿಸೆಂಬರ್ 11, 2017 ರಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ ಇದಕ್ಕೆ ಸಂಬಂಧಿಸಿದ ಹಲವಾರು ಫೋಟೋಗಳನ್ನು ನಾವು ಕಂಡುಕೊಂಡಿದ್ದೇವೆ.

ಭಾರತೀಯ ವಾಯು ಸರಹದ್ದು ಪ್ರವೇಶದ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ವಾಯುಪಡೆ ವಿಮಾನಗಳು ಬೆಂಗಾವಲಾಗಿದ್ದವು ಎಂದು ಹೇಳುವ ಈ ವೈರಲ್ ವೀಡಿಯೋದ ದೃಶ್ಯಗಳು 2017ರದ್ದು ಮತ್ತು ಇದು ಭಾರತದ್ದಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
Our Sources
YouTube Video by Krishnankavirajan, Dated: January 28, 2023
Facebook post by United Kingdom Russia, Dated: December 13, 2017
Report by Russia Today, Dated: December 11, 20217
Photo by Sputnik, Dated: December 11, 2017
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)