Authors
Claim
ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ನನ್ನ ಮಕ್ಕಳು ಹೊರ ದೇಶದಲ್ಲಿ ಓದುತ್ತಾರೆ ಎಂದು ರಾಹುಲ್ ಗಾಂಧಿ ಭಾಷಣವೊಂದರಲ್ಲಿ ಹೇಳಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
0.11 ಸೆಕೆಂಡ್ ಗಳ ವೈರಲ್ ವೀಡಿಯೋದಲ್ಲಿ “ಏನೂ ಆಗುವುದಿಲ್ಲ ನಾನು ಲಂಡನ್ ಗೆ ಹೋಗುತ್ತೇನೆ, ನನ್ನಮಕ್ಕಳು ಅಮೆರಿಕದಲ್ಲಿ ಓದುತ್ತಾರೆ, ನನಗೆ ಭಾರತದ ಬಗ್ಗೆ ಏನೂ ಆಗಬೇಕಾದ್ದಿಲ್ಲ. ನನ್ನ ಬಳಿ ಕೋಟಿ ರೂಪಾಯಿ ಇದೆ ಯಾವಾಗ ಬೇಕಾದರೂ ಹೋಗುತ್ತೇನೆ” ಎಂದು ರಾಹುಲ್ ಗಾಂಧಿಯವರು ಹೇಳುವುದು ಕೇಳಿಸುತ್ತದೆ.
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಮೂಲ ವೀಡಿಯೋವನ್ನು ಎಡಿಟ್ ಮಾಡಿ ರಾಹುಲ್ ಅವರ ಮಾತುಗಳನ್ನು ತಪ್ಪು ಅರ್ಥ ಬರುವಂತೆ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.
Also Read: ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆಯೇ?
Fact
ಸತ್ಯಶೋಧನೆಗಾಗಿ ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಅಕ್ಟೋಬರ್ 13, 2019ರಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಯೂಟ್ಯೂಬ್ ನಲ್ಲಿ ಪ್ರಕಟಿಸಿದ ವೀಡಿಯೋದಲ್ಲಿ “ಮಹಾರಾಷ್ಟ್ರ ಚುನಾವಣೆ 2019 | ಶ್ರೀ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ಲಾತೂರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು” ಎಂದಿದೆ.
ಈ ವೀಡಿಯೋವನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದ್ದು, ಇದರಲ್ಲಿ ರಾಹುಲ್ ಗಾಂಧಿಯವರು 14.41ನೇ ನಿಮಿಷದಲ್ಲಿ ಹೇಳಿರುವುದು ಹೀಗಿದೆ. “ದುಃಖದ ಸಂಗತಿ ಏನೆಂದರೆ, ನಿಮಗೆ ಇಷ್ಟು ಕಷ್ಟವಿದೆ, ಹಿಂದೂಸ್ತಾನದ ಯುವಕರಿಗೆ ನಾಳೆ ಏನಾಗುತ್ತದೆ ಎಂದು ಗೊತ್ತಾಗುತ್ತಿಲ್ಲ, ರೈತರಿಗೆ ಹೆದರಿಕೆಯಾಗುತ್ತಿದೆ. ರಾತ್ರಿ ಇಡೀ ನಿದ್ದೆ ಬರುತ್ತಿಲ್ಲ, ಸಾಲ ಹೇಗೆ ಮರುಪಾವತಿ ಮಾಡುವುದು ಎನ್ನುವ ಚಿಂತೆಯಾಗುತ್ತಿದೆ, ಆದರೆ ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರು ಚೆನ್ನಾಗಿ ನಿದ್ದೆ ಮಾಡುತ್ತಾರೆ, ಯಾವುದೇ ಹೆದರಿಕೆ ಇಲ್ಲ, ಏನೂ ಆಗುವುದಿಲ್ಲ ಎಂದುಕೊಳ್ಳುತ್ತಾರೆ , ನಾನು ಲಂಡನ್ ಗೆ ಹೋಗುತ್ತೇನೆ, ನನ್ನಮಕ್ಕಳು ಅಮೆರಿಕದಲ್ಲಿ ಓದುತ್ತಾರೆ, ನನಗೆ ಭಾರತದ ಬಗ್ಗೆ ಏನೂ ಆಗಬೇಕಾದ್ದಿಲ್ಲ, ನನಗೆ ನರೇಂದ್ರ ಮೋದಿ ಜಿ, ಅವರಂತಹ ಮಿತ್ರರಿದ್ದಾರೆ, ನನ್ನ ಬಳಿಕ ಸಾವಿರ ಕೋಟಿ ರೂಪಾಯಿ ಇದೆ. ಯಾವಾಗ ಬೇಕಾದರೂ ಹೋಗುತ್ತೇನೆ” ಎಂದು ಹೇಳುತ್ತಾರೆ.
ಅಂದರೆ ರಾಹುಲ್ ಗಾಂಧಿಯವರು ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರನ್ನು ಉದ್ದೇಶಿಸಿ, ಹೀಗೆ ಹೇಳಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಇದೇ ವೀಡಿಯೋವನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಕ್ಟೋಬರ್ 13, 2019ರಂದು ಫೇಸ್‌ಬುಕ್ ನಲ್ಲಿ ಕೂಡ ಪೋಸ್ಟ್ ಮಾಡಿದೆ.
ಈ ಸಾಕ್ಷ್ಯಗಳ ಪ್ರಕಾರ, ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ಎಂದು ರಾಹುಲ್ ಅವರು ಹೇಳಿಲ್ಲ. ಲಾತೂರ್ ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರನ್ನು ಉದ್ದೇಶಿಸಿ ಹೇಳಿದ ಮಾತಾಗಿದ್ದು, ಅವರ ಹೇಳಿಕೆಯನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ.
Result: Altered Photo/Video
Our Source
YouTube Video By Indian National Congress, Dated: October 13, 2019
Facebook Post By Indian National Congress, Dated: October 13, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.