Fact Check
ನೇಪಾಳದವರೂ ಪ್ರಧಾನಿ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ ಎಂದು ಹಂಚಿಕೊಂಡ ವೀಡಿಯೋ ಸಿಕ್ಕಿಂನದ್ದು!
Claim
ನೇಪಾಳದವರೂ ಪ್ರಧಾನಿ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ
Fact
ನೇಪಾಳದವರೂ ಪ್ರಧಾನಿ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡ ವೀಡಿಯೋ ಸಿಕ್ಕಿಂನದ್ದಾಗಿದೆ. ಪ್ರಧಾನಿ ಆಗಮನದ ವೇಳೆ ಸ್ವಾಗತಿಸಿದ ವೀಡಿಯೋ ಇದು
ನೇಪಾಳದಲ್ಲಿ ನಾಗರಿಕ ದಂಗೆ ಭುಗಿಲೆದ್ದ ಬಳಿಕ ಅಲ್ಲಿನ ಜನ ಬದಲಾವಣೆ ಬಯಸುತ್ತಿದ್ದು, ಅಲ್ಲಿನವರೂ ಪ್ರಧಾನಿ ನರೇಂದ್ರ ಮೋದಿಯನ್ನು ನಾಯಕನ್ನಾಗಿ ಬಯಸುತ್ತಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
1.08 ನಿಮಿಷದ ಈ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ಮಾಡಿದೆ. ಈ ವೇಳೆ ಈ ವೀಡಿಯೋ ನೇಪಾಳದ್ದಲ್ಲ, ಬದಲಾಗಿ ಮೋದಿ ಅವರು ಸಿಕ್ಕಿಂಗೆ ಭೇಟಿ ನೀಡಿದ ವೇಳೆ ಸ್ವಾಗತಿಸಿದ ವಿದ್ಯಮಾನದ್ದಾಗಿದೆ ಎಂದು ಕಂಡುಬಂದಿದೆ.

Also Read: ಹೆರಿಗೆಯ ಸಮಯದಲ್ಲಿ ತಾಯಿ ಸಾವನ್ನಪ್ಪಿದಾಗ ವೈದ್ಯರು ದುಃಖಿತರಾದರು ಎಂಬ ವೈರಲ್ ಪೋಸ್ಟ್ ಕಟ್ಟುಕಥೆ!
Facebook/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀ ಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು, Sukhim Yakthung Sapsok Songchumbho ಎಂಬ ಫೇಸ್ಬುಕ್ ಪುಟದಲ್ಲಿ ಮೇ 30ರಂದು ಪೋಸ್ಟ್ ಮಾಡಿರುವ ವೀಡಿಯೋವನ್ನು ನೋಡಿದ್ದೇವೆ. ಇದು ವೈರಲ್ ವೀಡಿಯೋಕ್ಕೆ ಸಾಮ್ಯತೆ ಹೊಂದಿದೆ. ಈ ಪೋಸ್ಟ್ ನಲ್ಲಿ ನೀಡಲಾದ ವಿವರಣೆಯಲ್ಲಿ, “ಸಿಕ್ಕಿಂನ ಲಿಂಬೂ ಬುಡಕಟ್ಟು ಜನಾಂಗದವರಾದ ನಾವು, ಸುಖಿಮ್ ಯಕ್ತುಂಗ್ ಸಪ್ಸೋಕ್ ಸಾಂಗ್ಚುಂಬೋ ಅವರ ಬ್ಯಾನರ್ ಅಡಿಯಲ್ಲಿ, ಸಿಕ್ಕಿಂ ರಾಜ್ಯತ್ವದ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ ಮೇ 29, 2025 ರಂದು ಸಿಕ್ಕಿಂಗೆ ಭೇಟಿ ನೀಡಲಿರುವ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಲು ಉತ್ಸುಕರಾಗಿ ಸಿದ್ಧರಾಗಿದ್ದೆವು…” ಎಂದಿದೆ.
ಈ ವೀಡಿಯೋದಲ್ಲಿ ಮತ್ತು ವೈರಲ್ ವೀಡಿಯೋದಲ್ಲಿ ಬ್ಯಾನರ್ ಒಂದು ಕಂಡುಬಂದಿದ್ದು, ಇದರಲ್ಲಿ “SIKKIMESE LIMBOO TRIBES WARMLY WELCOME TO HONOURABLE PRIME MINISTER OF INDIA SHRI. NARENDRA MODI JI TO THE STATE OF SIKKIM SUKHIM YAKTHUNG SAPTOK SONGCHUMSHO” ಎಂದು ಬರೆದಿರುವುದನ್ನು ಗಮನಿಸಿದ್ದೇವೆ.


ಇದರೊಂದಿಗೆ ವೈರಲ್ ವೀಡಿಯೋದಲ್ಲಿ ಮೆರವಣಿಗೆ ಸಾಗುತ್ತಿರುವ ದೃಶ್ಯದಲ್ಲಿ ಹೆವೆಲ್ಸ್, ಗ್ಯಾಂಗ್ಟಕ್, ಎಂದು ಬರೆದಿರುವ ದೃಶ್ಯವನ್ನು ಗಮನಿಸಿದ್ದೇವೆ.

ಇದು ವೀಡಿಯೋ ನೇಪಾಳದ್ದಲ್ಲ, ಸಿಕ್ಕಿಂನ ಗ್ಯಾಂಗ್ಟಕ ನದ್ದು ಎಂದು ಖಚಿತಪಡಿಸಲು ಕಾರಣವಾಯಿತು. ಇದನ್ನು ದೃಢಪಡಿಸುವಂತೆ ಗೂಗಲ್ ಜಿಯೋಲೊಕೇಶನ್ ನಲ್ಲೂ ಈ ಸ್ಥಳವನ್ನು ಪತ್ತೆ ಮಾಡಿದ್ದೇವೆ.

Conclusion
ಈ ಸಾಕ್ಷ್ಯಾಧಾರಗಳ ಪ್ರಕಾರ, ನೇಪಾಳದ ಜನರೂ ನರೇಂದ್ರ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡ ವೀಡಿಯೋ ಸಿಕ್ಕಿಂನದ್ದಾಗಿದೆ. ಕಳೆದ ಮೇ ತಿಂಗಳಲ್ಲಿ ಮೋದಿಯವರು ಸಿಕ್ಕಿಂಗೆ ಭೇಟಿ ನೀಡಿದ ಸಂದರ್ಭ ಅವರನ್ನು ಸ್ವಾಗತಿಸಿದ ವೀಡಿಯೋ ಇದಾಗಿದೆ ಎಂದು ಕಂಡುಬಂದಿದೆ.
Also Read: ಕಥುವಾದಲ್ಲಿ ಮುಸ್ಲಿಮರು ಸಿಹಿತಿಂಡಿಗೆ ಉಚ್ಚೆ ಸಿಂಪಡಿಸಿ ಗ್ರಾಹಕರಿಗೆ ಕೊಡುತ್ತಿದ್ದರೇ?
Our Sources
Facebook post by Sukhim Yakthung Sapsok Songchumbho, Dated: May 30, 2025
Google Maps