Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಾಹುಲ್ ಗಾಂಧಿ ರಾಜೀವ್ ಗಾಂಧಿಯವರ ಮಗನಲ್ಲ ಎಂದು ಅಮೆರಿಕದ ಡಿಎನ್ಎ ತಜ್ಞ ಡಾ.ಮಾರ್ಟಿನ್ ಸಿಜೊ ಅವರು ಹೇಳಿದ್ದಾರೆ ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
“ರಾಹುಲ್ ಮತ್ತು ರಾಜೀವ್ ಅವರ ಡಿಎನ್ಎ ಹೊಂದಿಕೆಯಾಗುವುದಿಲ್ಲ, ಭಾರತಕ್ಕೆ ಬಂದು ಈ ಕುರಿತು ಪುರಾವೆ ಒದಗಿಸಲು ಸಿದ್ಧ ಎಂದು ಡಾ.ಮಾರ್ಟಿನ್ ಹೇಳಿದ್ದಾರೆ…” ಎಂದೂ ಇದರಲ್ಲಿದೆ.

ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಹೇಳಿಕೆ ಎಂದು ಕಂಡುಬಂದಿದೆ.
ರಾಹುಲ್ ಗಾಂಧಿಯವರ ಬಗ್ಗೆ ವೈರಲ್ ಆಗಿರುವ ಈ ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿಯಲು, ನಾವು ಕೀವರ್ಡ್ಗಳ ಸಹಾಯದಿಂದ ಗೂಗಲ್ನಲ್ಲಿ ಹುಡುಕಿದಾಗ ವೈರಲ್ ಆಗಿರುವ ಹಕ್ಕಿನಂತೆಯೇ ಅನೇಕ ಹೇಳಿಕೆಗಳು ಕಂಡುಬಂದಿವೆ. ಆದರೆ ಈ ಕುರಿತು ಯಾವುದೇ ವಿಶ್ವಾಸಾರ್ಹ ವರದಿಗಳು, ಮಾಧ್ಯಮ ವರದಿಗಳು ಕಂಡುಬಂದಿಲ್ಲ.
ಆ ಬಳಿಕ ನಾವು ಗೂಗಲ್ ನಲ್ಲಿ ಡಿಎನ್ಎ ತಜ್ಞ ಡಾ.ಮಾರ್ಟಿನ್ ಸಿಜೊ ಎಂಬ ಹೆಸರಿನ ಬಗ್ಗೆ ಹುಡುಕಿದಾಗಲೂ, ಅಂತಹ ಯಾವುದೇ ಮಾಹಿತಿ ಕಂಡುಬಂದಿಲ್ಲ. ಡಾ.ಮಾರ್ಟಿನ್ ಅವರು ಮಾಧ್ಯಮಗೋಷ್ಠಿಯಲ್ಲಿ ಹೀಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಿಕೆಯಲ್ಲಿದೆ. ಆದರೆ ಆ ಕುರಿತೂ ಯಾವುದೇ ವೀಡಿಯೋಗಳು ಕಂಡುಬಂದಿಲ್ಲ.
ಈ ಹಿನ್ನೆಲೆಯಲ್ಲಿ ಈ ಹೇಳಿಕೆ ಸಂಶಯಾಸ್ಪದವಾಗಿದ್ದು, ರಾಹುಲ್ ಮತ್ತು ರಾಜೀವ್ ಅವರ ಡಿಎನ್ಎ ಪರೀಕ್ಷೆ ಯಾವಾಗ ಮಾಡಲಾಯಿತು, ಏಕೆ ಮಾಡಲಾಯಿತು ಎಂಬುದರ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಈ ಸುದ್ದಿಯಲ್ಲಿ ಸತ್ಯಾಂಶವಿದ್ದಿದ್ದೇ ಆದಲ್ಲಿ ಪತ್ರಿಕೆಗಳಲ್ಲಿ, ಚಾನೆಲ್ ಗಳಲ್ಲಿ ಸುದ್ದಿಯನ್ನು ಪ್ರಕಟಿಸಲಾಗುತ್ತಿತ್ತು. ಆದರೆ ಅಂತಹ ವರದಿಗಳು ಕಂಡುಬಂದಿಲ್ಲ.
Our Sources
Self analysis
Google search
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 21, 2025
Ishwarachandra B G
August 23, 2025
Ishwarachandra B G
August 21, 2025