Fact Check: ಡಿವೈಎಫ್‌ಐ ಸಮಾವೇಶದ ಪೋಸ್ಟರ್ ನಲ್ಲಿ ಕೋಟಿ ಚೆನ್ನಯರ ಫೋಟೋ ರಾಮ ಲಕ್ಷ್ಮಣರು ಎಂದು ವೈರಲ್!

ಡಿವೈಎಫ್‌ಐ ಪೋಸ್ಟರ್

Authors

Sabloo Thomas has worked as a special correspondent with the Deccan Chronicle from 2011 to December 2019. Post-Deccan Chronicle, he freelanced for various websites and worked in the capacity of a translator as well (English to Malayalam and Malayalam to English). He’s also worked with the New Indian Express as a reporter, senior reporter, and principal correspondent. He joined Express in 2001.

Claim

ಡಿವೈಎಫ್ಐ ಸಮಾವೇಶದ ಪೋಸ್ಟರ್ ನಲ್ಲಿ ರಾಮ ಮತ್ತು ಲಕ್ಷ್ಮಣರ ಚಿತ್ರ ಹಾಕಲಾಗಿದೆ ಎಂದು ಹೇಳಿಕೆಯೊಂದು ವೈರಲ್‌ ಆಗಿದೆ. ಗಾಂಧೀಜಿ, ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್ ಮತ್ತು ಶ್ರೀ ನಾರಾಯಣ ಗುರು ಅವರೊಂದಿಗೆ ಈ ಚಿತ್ರವಿದೆ.

ಈ ವೈರಲ್‌ ಹೇಳಿಕೆಯನ್ನು ಪರಿಶೀಲಿಸುವಂತೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್ ಲೈನ್ (+91-9999499044) ಗೆ ವಿನಂತಿಸಿಕೊಂಡಿದ್ದು, ಅದನ್ನು ಅಂಗೀಕರಿಸಲಾಗಿದೆ.

Also Read: ತುಮಕೂರು ಗುಬ್ಬಿ ತಾಲೂಕಿನಲ್ಲಿ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ ಎನ್ನುವುದು ನಿಜವೇ?

Fact

ಬಿಲ್ಲು ಬಾಣವನ್ನು ಹಿಡಿದಿರುವ ಇಬ್ಬರು ಯುವಕರಂತಿರುವ ಈ ಚಿತ್ರವನ್ನು ನಾವು ಗಮನಿಸಿದ್ದೇವೆ. ಇದರೊಂದಿಗೆ ಇಂತಹ ಪೋಸ್ಟರ್ ಅನ್ನು ಡಿವೈಎಫ್‌ಐ ಬಿಡುಗಡೆ ಮಾಡಿದೆಯೇ ಎಂದು ಪರಿಶೀಲಿಸಿದ್ದೇವೆ. ಆ ಪ್ರಕಾರ 2024 ರ ಫೆಬ್ರವರಿ 25 ರಿಂದ 27 ರವರೆಗೆ ಮಂಗಳೂರಿನ ತೊಕ್ಕೊಟ್ಟು ಯೂನಿಟಿ ಮೈದಾನದಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನದ ಪೋಸ್ಟರ್ ಇದಾಗಿದ್ದು, ಇದನ್ನು 2024 ರ ಜನವರಿ 29 ರಂದು ಡಿವೈಎಫ್ಐನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಫೋಟೋದ ಬಗ್ಗೆ ಗಮನಿಸಿದಾಗ, ಇದು ತುಳುನಾಡಿನ ಅವಳಿ ಸೋದರರು ಮತ್ತು ಜನಪದದ ಪ್ರಮುಖರಾದ ಕೋಟಿ ಚೆನ್ನಯರು ಎಂದು ಗುರುತಿಸಿದ್ದೇವೆ.

ಈ ಫೋಟದಲ್ಲಿ ನೀಡಲಾಗಿರುವ ರೀತಿಯ ಫೋಟೋಗಳನ್ನು ಕೋಟಿ ಚೆನ್ನಯರ ಕುರಿತಾಗಿರುವ  ಯೋಧರ ಮಹಾಕಾವ್ಯ: (ಕೋಟಿ ಚೆನ್ನಯ ಪಾಡ್ದನ): ಕನ್ನಡ ಮೂಲ: ಕೋಡಿ ಚೆನ್ನಯ ಪರ್ಧಾನ ಸಂಪುತ ಪೇಪರ್ ಬ್ಯಾಕ್ – 1 ಜನವರಿ 2007 ಅಮೆಜಾನ್ ನಲ್ಲಿ ಮಾರಾಟಕ್ಕೆ ಇಟ್ಟಿರುವ ಪುಸ್ತಕದ ಮುಖಪುಟದಲ್ಲೂ ಗುರುತಿಸಿದ್ದೇವೆ.

ಇದೇ ರೀತಿಯ ಫೋಟೋವನ್ನು ಕೋಟಿ ಮತ್ತು ಚೆನ್ನಯರ ಜನ್ಮಸ್ಥಳವಾದ ಪಡುಮಲೆಯ ಅಭಿವೃದ್ಧಿಯ ಬಗ್ಗೆ ಮಂಗಳೂರು ಟುಡೇ ಅಕ್ಟೋಬರ್ 15, 2016 ರಂದು ಪ್ರಕಟಿಸಿದ ವರದಿಯಲ್ಲೂ ಹಾಕಲಾಗಿದೆ.

ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷ ಎ.ಎ.ರಹೀಂ ಅವರು ಸ್ಥಳೀಯ ಸಂಸದರಿಗೆ ಕರೆ ಮಾಡಿ ಹೆಚ್ಚಿನ ವಿವರಣೆ ಕೇಳಿದ್ದಾಗಿಯೂ ಹೇಳಿದ್ದಾರೆ. ಈ ವೇಳೆ ಪೋಸ್ಟರ್ ನಲ್ಲಿ ತುಳುನಾಡಿನ ಸಮಾಜ ಸುಧಾರಕರು, ಅವರು ಕೋಟಿ ಮತ್ತು ಚೆನ್ನಯ ಎಂಬ ಅವಳಿ ಸಹೋದರರು ಎಂದು ಕರ್ನಾಟಕದ ಡಿವೈಎಫ್ಐ ನಾಯಕರು ವಿವರಿಸಿದ್ದಾರೆ ಎಂದು ಅವರು ನ್ಯೂಸ್‌ಚೆಕರ್ ಗೆ ತಿಳಿಸಿದ್ದಾರೆ.

Also Read: ಬಾಂಗ್ಲಾ ವಲಸಿಗ ಮುಸ್ಲಿಮರಿಗೆ ತಲಾ 5 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವುದು ನಿಜವೇ?

Result: False

Sources
Book of Koti Chennaya By Panje Mangesh Rao

Report in Mangalore Today on October 16, 2016

Telephone Conversation with DYFI National President A A Rahim MP

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Sabloo Thomas has worked as a special correspondent with the Deccan Chronicle from 2011 to December 2019. Post-Deccan Chronicle, he freelanced for various websites and worked in the capacity of a translator as well (English to Malayalam and Malayalam to English). He’s also worked with the New Indian Express as a reporter, senior reporter, and principal correspondent. He joined Express in 2001.