Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಕೇಸರಿ ಬಟ್ಟೆ ಹೊದ್ದುಕೊಂಡು ವ್ಯಕ್ತಿಯೊಬ್ಬ ಮಲಗಿದ್ದಕ್ಕೆ ಮುಸ್ಲಿಮರು ದೊಣ್ಣೆಯಿಂದ ಹೊಡೆದರು
Fact
ವ್ಯಕ್ತಿಯೊಬ್ಬ ಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಮಲಗಿದ್ದಕ್ಕೆ ಆತನಿಗೆ ದೊಣ್ಣೆಯಿಂದ ಹೊಡೆಯಲಾಗಿದೆ ಎಂಬಂತೆ ಹೇಳಿಕೆ ತಪ್ಪಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡದಂತೆ ಹೇಳಿದ್ದಕ್ಕೆ ವ್ಯಕ್ತಿಗೆ ಹೊಡೆಯಲಾಗಿದೆ
ವ್ಯಕ್ತಿಯೊಬ್ಬ ಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಮಲಗಿದ್ದಕ್ಕೆ ಆತನಿಗೆ ಮುಸ್ಲಿಮರು ದೊಣ್ಣೆಯಿಂದ ಹೊಡೆದಿದ್ದಾರೆ ಎಂಬಂತೆ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ವ್ಯಕ್ತಿಯೊಬ್ಬಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಆರಾಮವಾಗಿ ಮಲಗಿದ್ದಾನೆ… ಶಾಂತಿದೂತರು ಬೈಕ್‌ನಲ್ಲಿ ಬಂದು ವಿನಾಕಾರಣ ದೊಣ್ಣೆಯಿಂದ ಹೊಡೆಯಲಾರಂಭಿಸಿದ್ದಾರೆ” ಎಂದಿದೆ.
Also Read: ಗೋವಾದಲ್ಲಿ ಮುಳುಗುತ್ತಿರುವ ದೋಣಿ ಎಂದ ವೈರಲ್ ವೀಡಿಯೋ ಆಫ್ರಿಕಾದ ಕಾಂಗೋದ್ದು!
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಈ ವೀಡಿಯೋಕ್ಕೆ ಮತ್ತು ಹೇಳಿಕೆಗೆ ಸಂಬಂಧವಿಲ್ಲ, ಕೋಮು ಪ್ರೇರಿತ ಹೇಳಿಕೆಯೊಂದಿಗೆ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಕೊಂಡಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳ ಲಭ್ಯವಾಗಿದ್ದು, ಈ ಪ್ರಕರಣದಲ್ಲಿ ಸಾರ್ವಜನಿಕ ಪಾರ್ಕ್ ನಲ್ಲಿ ಮೂತ್ರ ಮಾಡದಂತೆ ವ್ಯಕ್ತಿಯೊಬ್ಬ ಹೇಳಿದ್ದು, ಇದಕ್ಕಾಗಿ ಮರುದಿನ ಆತನನ್ನು ಅಮಾನುಷವಾಗಿ ತಳಿಸಿದ ವಿದ್ಯಮಾನ ಇದಾಗಿದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 6, 2024ರಂದು ರಿಪಬ್ಲಿಕ್ ವರ್ಲ್ಡ್ ಪ್ರಕಟಿಸಿದ ವರದಿಯಲ್ಲಿ, ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಕೇಳಿದ ಮತ್ತೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಉತ್ತರ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಶುಕ್ರವಾರ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದಿದೆ.
ಅಕ್ಟೋಬರ್ 6, 2024ರಂದು ಇಂಡಿಯಾ ಟಿವಿ ಮಾಡಿದ ವರದಿಯಲ್ಲಿ, ಅಚ್ಚರಿಯ ಘಟನೆಯೊಂದರಲ್ಲಿ, ಪಾರ್ಕ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪಿಯನ್ನು ತಡೆದ ವ್ಯಕ್ತಿಯೊಬ್ಬನಿಗೆ ಮಾರನೇ ದಿನ ದೊಣ್ಣೆಯಿಂದ ಥಳಿಸಲಾಗಿದೆ. ಆರ್ಯನ್ ಎಂದು ಗುರುತಿಸಲಾದ ಆರೋಪಿ ಮರುದಿನ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ತನ್ನನ್ನು ಮೂತ್ರ ಮಾಡದಂತೆ ತಡೆದ ವ್ಯಕ್ತಿಯನ್ನು ಥಳಿಸಿದ್ದಾನೆ. ಇದಾದ ಬಳಿಕ ಅವರು ಬೈಕ್ ನಲ್ಲಿ ತೆರಳಿದ್ದರು. ಈ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ವಾಯವ್ಯ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ಫುಟ್‌ಪಾತ್‌ನಲ್ಲಿ ಕೇಸರಿ ಬಣ್ಣದ ಬೆಡ್ ಶೀಟ್ ಹಾಕಿ ಮಲಗಿದ್ದ ರಾಮ್‌ಪಾಲ್‌ಗೆ ಆರ್ಯನ್ ಥಳಿಸಲು ಆರಂಭಿಸಿದ್ದ. ಸಂತ್ರಸ್ತ ಎದ್ದು ಕುಳಿತ ನಂತರವೂ ದಾಳಿಕೋರರು ದೊಣ್ಣೆಗಳಿಂದ ಹಲ್ಲೆ ಮುಂದುವರಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಎಂದಿದೆ.
ಅಕ್ಟೋಬರ್ 7, 2024 ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ, ವಾಯವ್ಯ ದೆಹಲಿಯ ಮಾಡೆಲ್ ಟೌನ್ನಲ್ಲಿ ಶುಕ್ರವಾರ ಇಬ್ಬರು ಪುರುಷರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಆಕ್ಷೇಪಿಸಿದ್ದಕ್ಕಾಗಿ 28 ವರ್ಷದ ವ್ಯಕ್ತಿಯನ್ನು ದೊಣ್ಣೆಯಿಂದ ಥಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತನನ್ನು ಮಾಡೆಲ್ ಟೌನ್ ನಿವಾಸಿ ರಾಮ್ ಪಾಲ್ ಎಂದು ಗುರುತಿಸಲಾಗಿದ್ದು, ಟೆಂಟ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಳಿಗ್ಗೆ ೭ ಗಂಟೆ ಸುಮಾರಿಗೆ ಅವರು ಅಂಗಡಿಯ ಮುಂದೆ ಮಲಗಿದ್ದಾಗ ಈ ಘಟನೆ ನಡೆದಿದೆ. ಹಲ್ಲೆಯನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಹಿಡಿಯಲಾಗಿದ್ದು, ಮೂವರು ವ್ಯಕ್ತಿಗಳು ಮೋಟಾರ್ ಸೈಕಲ್ ನಲ್ಲಿ ಬರುತ್ತಿರುವುದನ್ನು ತೋರಿಸುತ್ತದೆ. ಅವರಲ್ಲಿ ಒಬ್ಬನು ಕೋಲಿನಂತಹ ವಸ್ತುವನ್ನು ಹಿಡಿದುಕೊಂಡು ಕೆಳಗಿಳಿದು ಮಂಚದ ಮೇಲೆ ಮಲಗಿದ್ದ ವ್ಯಕ್ತಿಯ ಬಳಿಗೆ ಬಂದನು. ಅವನು ಮಲಗಿದ್ದ ವ್ಯಕ್ತಿಯ ಮುಖದಿಂದ ಹೊದಿಕೆ ಎಳೆದು ಅವನನ್ನು ಹೊಡೆಯಲು ಪ್ರಾರಂಭಿಸಿದನು. ಸಂತ್ರಸ್ತನಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿರಲಿಲ್ಲ ಮತ್ತು ಪದೇ ಪದೇ ಹೊಡೆಯಲಾಯಿತು ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಈ ವರದಿಗಳಲ್ಲಿ ಕೇಸರಿ ಹೊದಿಕೆ ಹೊದ್ದು ಮಲಗಿದ್ದಕ್ಕೆ ಹೊಡೆದಿರುವ ವಿಚಾರವನ್ನು ಪ್ರಸ್ತಾವಿಸಿರುವುದು ಯಾವುದೇ ವರದಿಗಳಲ್ಲಿ ಕಂಡುಬಂದಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ. ಇದರೊಂದಿಗೆ ಪ್ರಕರಣದಲ್ಲಿ ಆರೋಪಿ ವ್ಯಕ್ತಿಯನ್ನು ಆರ್ಯನ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತನನ್ನು ರಾಂಪಾಲ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಪ್ರಕರಣದ ಕುರಿತಾಗಿ ನಾವು ದಿಲ್ಲಿ ಪೊಲೀಸರನ್ನು ಸಂಪರ್ಕಿಸಲು ಯತ್ನಿಸಿದ್ದು, ಅವರ ಪ್ರತಿಕ್ರಿಯೆ ಲಭ್ಯವಾದ ಬಳಿಕ ಲೇಖನವನ್ನು ಪರಿಷ್ಕರಿಸಲಾಗುವುದು.
ಈ ಸತ್ಯಶೋಧನೆಯ ಪ್ರಕಾರ, ವ್ಯಕ್ತಿಯೊಬ್ಬ ಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಮಲಗಿದ್ದಕ್ಕೆ ಆತನಿಗೆ ದೊಣ್ಣೆಯಿಂದ ಹೊಡೆಯಲಾಗಿದೆ ಎಂಬಂತೆ ಹೇಳಿಕೆ ತಪ್ಪಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡದಂತೆ ಹೇಳಿದ್ದಕ್ಕೆ ವ್ಯಕ್ತಿಗೆ ಹೊಡೆಯಲಾಗಿದೆ ಎಂದು ತಿಳಿದುಬಂದಿದೆ.
Also Read: ಹಿಜಾಬ್ ಧರಿಸದ ಕಾರಣಕ್ಕೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಲಾಗುತ್ತಿದೆ ಎನ್ನುವ ಹೇಳಿಕೆ ನಿಜವೇ?
Our Sources
Report By Republic wiorld, Dated: October 6, 2024
Report By Indiatv, Dated: October 6, 2024
Report By Times Of India, Dated: October 7, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
March 7, 2025
Ishwarachandra B G
February 24, 2025
Ishwarachandra B G
February 22, 2025