Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತನಗೆ ಹಸ್ತಾಂತರಿಸುವಂತೆ ಭಾರತದ ವಿದೇಶಾಂಗ ಸಚಿವಾಲಯ ರಹಸ್ಯವಾದ ಪತ್ರವೊಂದರ ಮೂಲಕ ಕೇಳಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಪ್ರಸ್ತುತ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ರಾಜಕೀಯ ಕೈದಿಯಾಗಿರುವ ಅವರನ್ನು, “ವೈಯಕ್ತಿಕ ಭದ್ರತೆ”ಗಾಗಿ ಭಾರತಕ್ಕೆ ವರ್ಗಾಯಿಸುವಂತೆ ಭಾರತ ಸರ್ಕಾರ ಪಾಕಿಸ್ತಾನವನ್ನು ಔಪಚಾರಿಕವಾಗಿ ವಿನಂತಿಸಿದೆ ಎಂದು ಹೇಳಲಾಗಿದೆ.

ಈ ಪತ್ರ ನಕಲಿಯಾಗಿದೆ ಎಂದು ಬೊಟ್ಟು ಮಾಡಬಹುದಾದ ಹಲವು ದೋಷಗಳನ್ನು ನಾವು ಗುರುತಿಸಿದ್ದೇವೆ. ಸಾಮಾನ್ಯವಾಗಿ ಪತ್ರಗಳು ಔಪಚಾರಿಕವಾದ ನಮೂನೆಗಳು, ಪದಗಳು, ವಿರಾಮ ಚಿಹ್ನೆ, ಏಕರೂಪದ ಅಕ್ಷರ ಶೈಲಿ, ರಚನಾತ್ಮಕ ವಾಕ್ಯಗಳು, ಕಟ್ಟುನಿಟ್ಟಾದ ಮತ್ತು ಸ್ಥಿರವಾದ ರೂಪವನ್ನು ಹೊಂದಿರುತ್ತವೆ. ಆದರೆ ವೈರಲ್ ಪತ್ರ ಸಹಜವಾಗಿ ಕಾಣಿಸುತ್ತಿಲ್ಲ. ಇದರಲ್ಲಿ ಕೆಲವು ಪ್ಯಾರಾಗಳು ವಿಭಿನ್ನ ರೀತಿಯಲ್ಲಿದ್ದು, ಅಕ್ಷರಗಳು ಏಕರೂಪವಾಗಿಲ್ಲ. ಕೆಲವು ಪ್ಯಾರಾಗಳಲ್ಲಿ ಯಾವುದೇ ಸಾಲು ವಿರಾಮವಿಲ್ಲದೆ ಹೊಸ ಪ್ಯಾರಾಗ್ರಾಫ್ ಪ್ರಾರಂಭವಾಗುತ್ತದೆ, ಇದು ಅಧಿಕೃತವಲ್ಲದ ಮತ್ತು ಕಳಪೆ ಫಾರ್ಮ್ಯಾಟ್ ಮಾಡಲಾದ ದಾಖಲೆಯನ್ನು ಸೂಚಿಸುತ್ತದೆ.
ಇನ್ನು, ವೈರಲ್ ಪತ್ರದಲ್ಲಿರುವ “ಟಾಪ್ ಸೀಕ್ರೆಟ್” ಎಂಬ ಸ್ಟಾಂಪ್ ಬಲಭಾಗದಲ್ಲಿ ಮೇಲೆ ಇದೆ. ಇದು ಅಧಿಕೃತ ಸರ್ಕಾರಿ ಗುರುತುಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ತೋರುತ್ತದೆ. ಸರಳವಾದ ಗೂಗಲ್ ಹುಡುಕಾಟವು ಈ ನಿಖರವಾದ ಸ್ಟಾಂಪ್ ಆನ್ಲೈನ್ನಲ್ಲಿ ಸುಲಭವಾಗಿ ಲಭ್ಯವಿದೆ ಎಂದು ತೋರಿಸುತ್ತದೆ, ಇದು ಅಧಿಕೃತವಾಗಿ ನೀಡುವುದಕ್ಕಿಂತ ಹೆಚ್ಚಾಗಿ ನಕಲು ಮಾಡಲಾಗಿದೆ ಎಂದು ಸೂಚಿಸುತ್ತದೆ.

ವೈರಲ್ ಆಗಿರುವ ಈ ದಾಖಲೆಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿಯನ್ನು “ಇಮ್ರಾನ್ ಅಹ್ಮದ್ ಖಾನ್ ನಿಯಾಜಿ” ಎಂದು ಉಲ್ಲೇಖಿಸಲಾಗಿದೆ. ಭಾರತೀಯ ಅಧಿಕೃತ ಸಂವಹನದಲ್ಲಿ ಅವರನ್ನು “ಇಮ್ರಾನ್ ಖಾನ್” ಎಂದು ಮಾತ್ರ ಸಂಬೋಧಿಸಲಾಗಿದೆ. ಈ ಪತ್ರವು “ರಾಜಕೀಯ ಖೈದಿ” ಯಂತಹ ಪದಗುಚ್ಛಗಳನ್ನು ಬಳಸುತ್ತದೆ, ಆದರೆ ಈ ಪರಿಭಾಷೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ಔಪಚಾರಿಕ ರಾಜತಾಂತ್ರಿಕ ಪತ್ರವ್ಯವಹಾರದಲ್ಲಿ ಕಂಡುಬರುವ ಸಾಧ್ಯತೆಯಿಲ್ಲ.
ಈ ಪತ್ರದ ಕುರಿತಾಗಿ, ನಾವು ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್ಸೈಟ್, ಪತ್ರಿಕಾ ಪ್ರಕಟಣೆಗಳು ಮತ್ತು ಸಾರ್ವಜನಿಕ ಹೇಳಿಕೆಗಳನ್ನು ಪರಿಶೀಲಿಸಿದ್ದೇವೆ ಮತ್ತು ಅಂತಹ ಸಂವಹನದ ಯಾವುದೇ ಉಲ್ಲೇಖಗಳು ಕಂಡುಬಂದಿಲ್ಲ. ವಿದೇಶಾಂಗ ಇಲಾಖೆಯ PAI (ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್) ವಿಭಾಗದ ಬಗ್ಗೆ ಪರಿಶೀಲನೆ ನಡೆಸಿದಾಗಲೂ ಅಂತಹ ಪತ್ರದ ಯಾವುದೇ ದಾಖಲೆಗಳು ಕಂಡುಬಂದಿಲ್ಲ.
ಅಧಿಕೃತ ಪ್ರತಿಕ್ರಿಯೆಗಾಗಿ ನಾವು ವಿದೇಶಾಂಗ ಇಲಾಖೆಯ ಈ ವಿಭಾಗವನ್ನು ಸಂಪರ್ಕಿಸಿದ್ದೇವೆ ಮತ್ತು ಪ್ರತಿಕ್ರಿಯೆ ಬಂದ ನಂತರ ವರದಿಯನ್ನು ನವೀಕರಿಸುತ್ತೇವೆ.
ಡಿಸೆಂಬರ್ 1, 2025 ರಂದು, ಪಿಐಬಿ ಫ್ಯಾಕ್ಟ್ ಚೆಕ್ ಎಕ್ಸ್ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ಅದರಲ್ಲಿ ವೈರಲ್ ಆಗುತ್ತಿರುವ ಪತ್ರ ನಕಲಿ ಎಂದು ಹೇಳಿದೆ. ಹಲವಾರು ಪಾಕಿಸ್ತಾನಿ ಖಾತೆಗಳು “ಈಗ ನಡೆಯುತ್ತಿರುವ ತಪ್ಪು ಮಾಹಿತಿ ಅಭಿಯಾನ”ದ ಭಾಗವಾಗಿ ನಕಲಿಯಾದ ಈ ದಾಖಲೆಯನ್ನು ಹಂಚಿಕೊಳ್ಳುತ್ತಿವೆ ಎಂದು ಪಿಐಬಿ ಹೇಳಿದೆ.
“ಈ ಪತ್ರ ನಕಲಿ. ಈ ಪತ್ರದಲ್ಲಿ ನೀಡಿರುವ ಹೇಳಿಕೆಗಳು ಸುಳ್ಳು, ಆಧಾರರಹಿತ ಮತ್ತು ಪಾಕಿಸ್ತಾನವು ಭಾರತದ ವಿರುದ್ಧ ನಡೆಸುತ್ತಿರುವ ಸುಳ್ಳು ಮಾಹಿತಿ ಅಭಿಯಾನದ ಭಾಗವಾಗಿದೆ” ಎಂದು ಪಿಐಬಿ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದೆ.
ವಿದೇಶಾಂಗ ಇಲಾಖೆಯದ್ದು ಎಂದು ಹೇಳಲಾದ ಈ ನಕಲಿ ಪತ್ರವು ಹೊಸ ವಿಚಾರವೇನೂ ಅಲ್ಲ. ಇತ್ತೀಚೆಗೆ, ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಅವರ ಹೆಸರಿನಲ್ಲಿ ರಚಿಸಲಾದ ಪತ್ರವನ್ನು ಪಾಕಿಸ್ತಾನದ ಮಿಲಿಟರಿ ಸಾಮರ್ಥ್ಯಗಳನ್ನು ಹೊಗಳಿದ್ದಾರೆಂದು ಸೂಚಿಸಲು ಪ್ರಸಾರ ಮಾಡಲಾಯಿತು. ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಸಿಒಎಎಸ್ ಜನರಲ್ ಉಪೇಂದ್ರ ದ್ವಿವೇದಿ ಅವರ ನಕಲಿ ವೀಡಿಯೋಗಳನ್ನು ಇದೇ ರೀತಿಯ ತಪ್ಪು ಮಾಹಿತಿ ಪ್ರಯತ್ನಗಳ ಭಾಗವಾಗಿ ಹಂಚಿಕೊಳ್ಳಲಾಗಿದೆ ಎಂದು ನ್ಯೂಸ್ಚೆಕರ್ ಬಹಿರಂಗಪಡಿಸಿದೆ.
ಆದ್ದರಿಂದ, ವೈರಲ್ ಆಗಿರುವ “ಅತಿ ರಹಸ್ಯ” ಎಂಇಎ ಪತ್ರವು ನಕಲಿ ಎಂದು ನ್ಯೂಸ್ ಚೆಕರ್ ಕಂಡುಕೊಂಡಿದೆ. ಪಿಐಬಿಯ ಅಧಿಕೃತ ಪರಿಶೀಲನೆ, ವಿದೇಶಾಂಗ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿದಾಗ, ಭಾರತವು ಪಾಕಿಸ್ತಾನಕ್ಕೆ ಅಂತಹ ಯಾವುದೇ ವಿನಂತಿಯನ್ನು ಮಾಡಿಲ್ಲ ಎಂದು ತೋರಿಸುತ್ತದೆ.
Our Sources
X Post by PIB Fact Check, Dated: December 1, 2025
Report by India Today, Dated: March 24, 2021
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Vasudha Beri
November 20, 2025
Ishwarachandra B G
October 18, 2025
Vasudha Beri
October 15, 2025