Fact Check: ಓಂ ನಮಃ ಶಿವಾಯ ಎಂದು ಹೇಳುವುದು ತಮಿಳಿನಾಡಿನಲ್ಲಿ ಅಪರಾಧವೇ, ವೀಡಿಯೋ ಹಿಂದಿನ ಸತ್ಯ ಏನು?

ಓಂ ನಮಃ ಶಿವಾಯ ಚೆನ್ನೈ,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಓಂ ನಮಃ ಶಿವಾಯ ಎಂದು ಹೇಳುವುದು ತಮಿಳಿನಾಡಿನಲ್ಲಿ ಅಪರಾಧ

Fact
ಓಂ ನಮಃ ಶಿವಾಯ ಎಂದು ಪಠಿಸುವುದನ್ನು ಪೊಲೀಸರು ನಿಲ್ಲಿಸಿದರು ಎನ್ನುವುದು ಭಾಗಶಃ ತಪ್ಪಾಗಿದ್ದು, ಈ ಪ್ರಕರಣ ಪೆರಿಯಾರ್ ವಿರುದ್ಧದ ಪ್ರತಿಭಟನೆಯೊಂದಕ್ಕೆ ಸಂಬಂಧಿಸಿದ್ದು, ಮತ್ತು ಪೊಲೀಸರೊಂದಿಗೆ ನಡೆದ ವಾಗ್ವಾದದ ಹಿನ್ನೆಲೆ ಹೊಂದಿದೆ

ಓಂ ನಮಃ ಶಿವಾಯ ಎಂದು ಹೇಳುವುದು ತಮಿಳಿನಾಡಿನಲ್ಲಿ ಅಪರಾಧ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಓಂ ನಮಃ ಶಿವಾಯ” ಎಂದು ಹೇಳುವುದು ತಮಿಳುನಾಡಿನಲ್ಲಿ ಅಪರಾಧ! ತಮಿಳುನಾಡು ಪೊಲೀಸರು ಶಿವ ದೇವಾಲಯದ ಒಳಗೆ “ಓಂ ನಮಃ ಶಿವಾಯ ಎಂದು ಪಠಿಸುವುದನ್ನು ನಿಲ್ಲಿಸಿದರು” ಎಂದಿದೆ.

Also Read: ಕಾಂಗ್ರೆಸ್ ಸಂಸದರ ಬಳಿ ಸಿಕ್ಕಿದ ಹಣ ಎಂದು ಕೋಲ್ಕತಾ ಇಡಿ ದಾಳಿ ಪ್ರಕರಣದ ವೀಡಿಯೋ ವೈರಲ್

Fact Check: ಓಂ ನಮಃ ಶಿವಾಯ ಎಂದು ಹೇಳುವುದು ತಮಿಳಿನಾಡಿನಲ್ಲಿ ಅಪರಾಧವೇ, ವೀಡಿಯೋ ಹಿಂದಿನ ಸತ್ಯ ಏನು?
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್

Fact Check/Verification

ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಪ್ಪು ಎಂದು ಕಂಡುಕೊಂಡಿದೆ.

ಕ್ಲೇಮ್ ನ ಸತ್ಯಪರಿಶೀಲನೆಗಾಗಿ ನಾವು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹೆಚ್ಚಿನ ಶೋಧ ನಡೆಸಿದ್ದೇವೆ. ಈ ವೇಳೆ ಎಕ್ಸ್ ಖಾತೆಯೊಂದರ ಪೋಸ್ಟ್ ಅನ್ನು ಗಮನಿಸಿದ್ದೇವೆ. ಬಳಕೆದಾರರಾದ ಉಷಾ ಎಂಬವರ ಖಾತೆಯಿಂದ “ತಮಿಳುನಾಡಿನಲ್ಲಿ ಸನಾತನ ನಿರ್ಮೂಲನೆ ತರಗತಿ ಎಂದು ಬರೆಯಲಾಗಿದೆ. ಹಿಂದೂಗಳು ಓಂ ನಮಃ ಶಿವಾಯ ಎಂದು ಹೇಳದಂತೆ ಚೆನ್ನೈ ಕಪಿಲೇಶ್ವರಾರ್‌ ಮಂದಿರದ ಒಳಗಡೆ ತಡೆಯಲಾಯಿತು” ಎಂದಿದೆ.

ಈ ಪೋಸ್ಟ್ ಗೆ ಉತ್ತರ ನೀಡಿರು ಎನ್‌ಆರ್ ಸಂಘಿ ಎಂಬ ಬಳಕೆದಾರರೊಬ್ಬರು, “ಇದರ ಹಿಂದೆ ದೊಡ್ಡ ಕಥೆಯೊಂದಿದೆ. ಇವಿಆರ್ (ಪೆರಿಯಾರ್) ಹೇಳಿಕೆಗಳ ವಿರುದ್ಧವಾಗಿ ಬೋರ್ಡ್‌ ಒಂದನ್ನು ಹಾಕಲಾಗಿದ್ದು ಅದನ್ನು ಈಗಿನ ಸರ್ಕಾರ ತೆಗೆಸಿತ್ತು. ಇದಕ್ಕಾಗಿ ಶಾಂತಿಯುತ ಪ್ರತಿಭಟನೆ ಭಾಗವಾಗಿ ಶಿವ ದೇವನಿಗೆ ದೂರು ಸಲ್ಲಿಸಲು ಹೋಗಿದ್ದರು. ಪೆರಿಯಾರ್ ವಿರುದ್ಧ ಬ್ಯಾನರ್ ಹಾಕಿದ್ದನ್ನು ಪೊಲೀಸರು ಮಧ್ಯರಾತ್ರಿ ತೆಗೆಸಿದ್ದು ಈಗ ಅದರ ವಿರುದ್ಧ ಪ್ರತಿಭಟನೆಯನ್ನೂ ಮಾಡಲು ಬಿಡುತ್ತಿಲ್ಲ. ದ್ರಾವಿಡ ಮಾದರಿ ಎಂದರೆ, ನಮ್ಮ ಬಾಯಿಯನ್ನೂ ತೆರೆಯುವಂತಿಲ್ಲ, ಶಾಂತಿಯುತ ಪ್ರತಿಭಟನೆಯನ್ನೂ ಮಾಡುವಂತಿಲ್ಲ” ಎನ್ನಲಾಗಿದೆ.

Also read: ವೇದಮಂತ್ರ ಘೋಷದೊಂದಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದ್ದಾರೆಯೇ?

ಈ ಟ್ವೀಟ್ ಆಧರಿಸಿ ನಾವು ಕೀವರ್ಡ್ ಸರ್ಚ್ ನಡೆಸಿದ್ದು, ಕೆಲವು ಫಲಿತಾಂಶಗಳು ಲಭ್ಯವಾಗಿವೆ.

ನವೆಂಬರ್ 20, 2023ರಂದು ಒನ್‌ ಇಂಡಿಯಾ ತಮಿಳು ವೆಬ್‌ಸೈಟ್ “ದೇವರಿಲ್ಲ ಎಂದವನು ಮೂರ್ಖ ಬೋರ್ಡ್ ತೆಗೆದ ಪೊಲೀಸರು, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ” ಶೀರ್ಷಿಕೆಯಲ್ಲಿ ವರದಿ ಮಾಡಿದೆ. ಇದರ ಪ್ರಕಾರ, ಯಾದವ ಮಹಸಭಾದ ಸ್ಥಾಪಕರಾದ ದೇವನಾಥನ್‌ ತಮಗೆ ಸೇರಿದ ಕಟ್ಟಡದಲ್ಲಿ ಪೆರಿಯಾರ್ ಹೇಳಿಕೆಯ ವಿರುದ್ಧವಾಗಿ “ದೇವರನ್ನು ನಂಬದವನು ಮೂರ್ಖ, ದೇವರಿಲ್ಲ ಎಂದವನು ಅನಾಗರಿಕ” ಎಂದು ಬೋರ್ಡ್ ಹಾಕಿಸಿದ್ದರು. ಇದನ್ನು ಪೊಲೀಸರು ತೆಗೆಸಿದ್ದು, ಇದರ ವಿರುದ್ಧ ಮೈಲಾಪೊರೆ ಕಪಿಲೇಶ್ವರಾರ್ ದೇಗುಲದಲ್ಲಿ ಯಾದವ ಮಹಾಸಭಾ ಮತ್ತು ಹಿಂದೂ ಮುನ್ನಾನಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು ಎಂದಿದೆ.

ನವೆಂಬರ್ 20, 2023ರಂದು ನ್ಯೂಸ್‌ ತಮಿಳ್‌ 24X7 ಯೂಟ್ಯೂಬ್‌ ಚಾನೆಲ್‌ “ದೇವರಿಲ್ಲ, ಕಪಿಲೇಶ್ವರಾರ್ ದೇವಾಲಯದಲ್ಲಿ ಪ್ರತಿಭಟನೆ” ಶೀರ್ಷಿಕೆಯಡಿ ವೀಡಿಯೋವನ್ನು ಪ್ರಕಟಿಸಿದ್ದು, ಪೆರಿಯಾರ್ ಹೇಳಿಕೆ ವಿರುದ್ಧ ‘ ದೇವರನ್ನು ನಂಬದವನು ಮೂರ್ಖ, ದೇವರಿಲ್ಲ ಎಂದವನು ಅನಾಗರಿಕ ‘ ಎಂದು ಬೋರ್ಡ್ ಹಾಕಿದ್ದನ್ನು ತೆಗೆಸಿದ್ದಕ್ಕಾಗಿ ಪ್ರತಿಭಟನೆ ನಡೆದಿದೆ, ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಪೊಲೀಸರು ಬೋರ್ಡ್ ತೆಗೆದಿದ್ದನ್ನು ಪ್ರತಿಭಟನಕಾರರು ಪ್ರಶ್ನಿಸಿದ್ದಾರೆ. ಜೊತೆಗೆ ಪ್ರತಿಭಟನೆ ಕೂಗು ಹಾಕಿದ್ದಾರೆ. ಪೊಲೀಸರು ಪ್ರತಿಭಟನಕಾರರಿಗೆ ಪ್ರತಿಭಟನೆ ನಡೆಸದಂತೆ ಹೇಳಿದಾಗ, ಪ್ರತಿಭಟನಕಾರರು ಓಂ ನಮಃ ಶಿವಾಯ ಎಂದು ಕೂಗಿದ್ದಾರೆ” ಎಂದು ವರದಿ ಹೇಳಿದೆ.

ನವೆಂಬರ್ 25, 2023ರಂದು ವಿನ್‌ ನ್ಯೂಸ್ ಪ್ರೈಮ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ “ದೇವರನ್ನು ಅರಿಯದವನು ಮೂರ್ಖ, ದೇವರನ್ನು ಅರಿಯದವನು ಅನಾಗರಿಕ” ಎಂಬ ಬ್ಯಾನರ್ ಹಾಕಿದ್ದನ್ನು ಪೊಲೀಸರು ತೆಗೆಸಿದ್ದು, ಈ ವಿರುದ್ಧ ವಿವಿಧೆಡೆ ಭಿತ್ತಿ ಅಂಟಿಸಿ ಪ್ರತಿಭಟನೆ ನಡೆದಿದೆ ಎಂದು ವರದಿಮಾಡಿದೆ.

ಈ ಘಟನೆ ಕುರಿತು ನಾವು ಹೆಚ್ಚಿನ ಮಾಹಿತಿಗೆ ಯಾದವ ಮಹಾ ಸಭಾದ ನಾಯಕರನ್ನು ಸಂಪರ್ಕಿಸಲು ಯತ್ನಿಸಿದ್ದೇವೆ.

Conclusion

ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ತಮಿಳುನಾಡು ದೇಗುಲಗಳಲ್ಲಿ ಓಂ ನಮಃ ಶಿವಾಯ ಎಂದು ಹೇಳುವುದು ಅಪರಾಧ, ತಮಿಳುನಾಡು ಪೊಲೀಸರು ಶಿವ ದೇವಾಲಯದ ಒಳಗೆ “ಓಂ ನಮಃ ಶಿವಾಯ ಎಂದು ಪಠಿಸುವುದನ್ನು ನಿಲ್ಲಿಸಿದರು ಎನ್ನುವ ಹೇಳಿಕೆ ಭಾಗಶಃ ತಪ್ಪಾಗಿದ್ದು, ಈ ಪ್ರಕರಣ ಪೆರಿಯಾರ್ ವಿರುದ್ಧದ ಪ್ರತಿಭಟನೆಯೊಂದಕ್ಕೆ ಸಂಬಂಧಿಸಿದ್ದಾಗಿದೆ. ಪೊಲೀಸರೊಂದಿಗೆ ಪ್ರತಿಭಟನಕಾರರು ವಾಗ್ವಾದ ನಡೆಸಿದ ವೇಳೆ ಓಂ ನಮಃ ಶಿವಾಯ ಎಂದು ಹೇಳಿದ್ದು ಪೊಲೀಸರು ಪ್ರತಿಭಟನಕಾರರನ್ನು ತಡೆದಿದ್ದಾರೆ ಎಂದು ತಿಳಿದುಬಂದಿದೆ.

Also Read: ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿದೆಯೇ, ಸತ್ಯ ಏನು?

Result: Partly False

Our Sources

Report By OneIndia, Dated: November 20, 2023

YouTube Video by News Tamil 24X7, Dated: November 20, 2023

YouTube Video by Win News Prime, Dated: November 25, 2023

(Inputs from Ramkumar K, Tamil Factchecker, Newschecker)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.