Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಹಿಂದೂ ಹುಡುಗಿಯರನ್ನು ತಮ್ಮೊಂದಿಗೆ ಕರೆತರುವ ಮುಸ್ಲಿಂ ಯುವಕರಿಗೆ ರಿಯಾಯಿತಿ ಘೋಷಿಸಿದ ಕರ್ನಾಟಕದ ಸಿಎಂಆರ್ ಶಾಪಿಂಗ್ ಮಾಲ್
Fact
ತೆಲಂಗಾಣದಲ್ಲಿ ಹಾಕಲಾಗಿದ್ದ 2019ರ ಸಿಎಂಆರ್ ಶಾಪಿಂಗ್ ಮಾಲ್ ನ ಹೋರ್ಡಿಂಗ್ ಫೋಟೋವನ್ನು ಕರ್ನಾಟಕದಲ್ಲಿ ‘ಲವ್ ಜಿಹಾದ್’ ಉತ್ತೇಜಿಸುವ ಹೋರ್ಡಿಂಗ್ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ಲವ್ ಜಿಹಾದ್ ಉತ್ತೇಜಿಸುವ ಪ್ರಯತ್ನವೊಂದರಲ್ಲಿ, ಹಿಂದೂ ಹುಡುಗಿಯರನ್ನು ತಮ್ಮೊಂದಿಗೆ ಕರೆತರುವ ಮುಸ್ಲಿಂ ಯುವಕರಿಗೆ 10% ರಿಂದ 50% ರಿಯಾಯಿತಿಯನ್ನು ಘೋಷಿಸಿದ್ದಾಗಿ ಕರ್ನಾಟಕದ ಸಿಎಂಆರ್ ಶಾಪಿಂಗ್ ಮಾಲ್ ಹೋರ್ಡಿಂಗ್ ತೋರಿಸುತ್ತದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಫೋಟೋವೊಂದನ್ನು ಹಂಚಿಕೊಳ್ಳುತ್ತಿದ್ದಾರೆ.
Also Read: ಮಗುವಿನ ಕೈಯಿಂದ ಮೊಬೈಲ್ ತೆಗೆದಿದ್ದಕ್ಕಾಗಿ ಕ್ರಿಕೆಟ್ ಬ್ಯಾಟ್‌ನಿಂದ ತಾಯಿಗೆ ಹೊಡೆದ ದೃಶ್ಯವಿರುವ ವೀಡಿಯೋ ನಿಜವೇ?

ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಪ್ಪು ಹೇಳಿಕೆ ಎಂಬುದನ್ನು ಕಂಡುಕೊಂಡಿದೆ.
ನಾವು ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಜೂನ್ 3, 2019 ರಂದು ಶೆಫಾಲಿ ವೈದ್ಯ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅದೇ ಛಾಯಾಚಿತ್ರವನ್ನು ನೋಡಿದ್ದೇವೆ. ಆದರೆ ಇದರಲ್ಲಿ ರಿಯಾಯಿತಿ ಕೊಡುಗೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಬದಲಾಗಿ ಹೋರ್ಡಿಂಗ್ನಲ್ಲಿ ಮುಸ್ಲಿಂ ಪುರುಷನೊಂದಿಗೆ ಹಿಂದೂ ಮಹಿಳೆಯ ಚಿತ್ರವಿರುವ ಅಗತ್ಯವೇನು ಎಂದು ಅವರು ಪ್ರಶ್ನಿಸಿದ್ದರು.

ಆ ಬಳಿಕ ನಾವು ಗೂಗಲ್ ಲೆನ್ಸ್ ಬಳಸಿ ಹೋರ್ಡಿಂಗ್ ನಲ್ಲಿ ಬರೆದಿರುವುದನ್ನು ಭಾಷಾಂತರಿಸಿದ್ದು, ಹೋರ್ಡಿಂಗ್ನಲ್ಲಿ ಹಿಂದೂ ಹುಡುಗಿಯೊಂದಿಗೆ ಬಂದರೆ ಮುಸ್ಲಿಂ ಯುವಕರಿಗೆ ರಿಯಾಯಿತಿ ನೀಡುವ ಭರವಸೆ ಇಲ್ಲ ಎಂಬುದನ್ನು ಕಂಡುಕೊಂಡಿದ್ದೇವೆ. ಇಲ್ಲಿ ರಂಜಾನ್ ಗೆ ಶೇ10 ರಿಂದ 50 ಪ್ರತಿಶತದಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಮೇ 20 ರಿಂದ ಜೂನ್ 5 ರವರೆಗೆ ಈ ರಿಯಾಯಿತಿ ಲಭ್ಯವಿರುತ್ತದೆ ಎಂದು ಹೋರ್ಡಿಂಗ್ ಹೇಳುತ್ತದೆ.

ಅನಂತರ ನಾವು ಕೀವರ್ಡ್ ಸರ್ಚ್ ಮಾಡಿದ್ದು, ಸಿಎಂಆರ್ ಶಾಪಿಂಗ್ ಮಾಲ್ ತಮ್ಮ ಫೇಸ್ಬುಕ್ ಪುಟದಲ್ಲಿ ಮೇ 31, 2019 ರಂದು ಹೋರ್ಡಿಂಗ್ ವಿಚಾರದ ಬಗ್ಗೆ ಕ್ಷಮೆಯಾಚಿಸುವ ಫೇಸ್ಬುಕ್ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ.
” ಸಿಎಂಆರ್ ತೆಲಂಗಾಣ ಗ್ರೂಪ್ ಮಾಡಿರುವ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇವೆ. ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವ ಅಥವಾ ಯಾವುದೇ ಭಿನ್ನತೆಗಳನ್ನು ಸೃಷ್ಟಿಸುವ ಉದ್ದೇಶ ನಮಗಿಲ್ಲ. ನಾವು ಎಲ್ಲ ಧರ್ಮಗಳನ್ನು ಬೆಂಬಲಿಸುತ್ತೇವೆ ಮತ್ತು ಆವುದೇ ಪಕ್ಷಪಾತವಿಲ್ಲದೆ ಪ್ರತಿ ಸಮುದಾಯವನ್ನೂ ಗೌರವಿಸುತ್ತೇವೆ. ಎಲ್ಲ ಹೋರ್ಡಿಂಗ್ ಗಳನ್ನು ತೆಗೆದುಹಾಕಲಾಗಿದ್ದು, ಭವಿಷಯದಲ್ಲಿ ಈ ರೀತಿಯ ಯಾವುದನ್ನೂ ಪುನರಾವರ್ತಿಸುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ಆಂಧ್ರಪ್ರದೇಶದ ಸಿಎಂಆರ್ ಶಾಪಿಂಗ್ ಮಾಲ್ ಇದಕ್ಕೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಸತ್ಯಶೋಧನೆಯ ಪ್ರಕಾರ ತೆಲಂಗಾಣದಲ್ಲಿ ಹಾಕಲಾಗಿದ್ದ 2019ರ ಸಿಎಂಆರ್ ಶಾಪಿಂಗ್ ಮಾಲ್ ನ ಹೋರ್ಡಿಂಗ್ ಫೋಟೋವನ್ನು ಕರ್ನಾಟಕದಲ್ಲಿ ‘ಲವ್ ಜಿಹಾದ್’ ಉತ್ತೇಜಿಸುವ ಹೋರ್ಡಿಂಗ್ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ.
Our Sources
X Post @ShefVaidya on June 3, 2019
Facebook post by CMR Shopping Mall on May 31, 2019
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Vasudha Beri
October 24, 2025
Ishwarachandra B G
September 26, 2025
Runjay Kumar
September 24, 2025