Fact Check: ಮೇ 18ರಂದು ಕರ್ನಾಟಕದ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಎಂಬ ಆಮಂತ್ರಣ ಸುಳ್ಳು!

ಸಿದ್ದರಾಮಯ್ಯ, ಪ್ರಮಾಣವಚನ, ಆಮಂತ್ರಣ

Authors

Claim
ಮೇ 18ರಂದು ಕರ್ನಾಟಕದ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ

Fact
ಮೇ 18ರಂದು ನೂತನ ಸಿಎಂ ಪ್ರಮಾಣ ವಚನಕ್ಕೆ ರಾಜಭವನ ಕರ್ನಾಟಕದಿಂದ ಯಾವುದೇ ಅಧಿಕೃತ ಘೋಷಣೆ ಆಗಲಿಲ್ಲ. ಪ್ರಮಾಣ ವಚನದ ಆಮಂತ್ರಣವೂ ನಕಲಿ

ಕರ್ನಾಟಕ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಮೇ 18ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರ ಪ್ರಮಾಣ ವಚನ ಎಂಬ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಈ ಆಮಂತ್ರಣ ರೀತಿಯ ಪತ್ರದಲ್ಲಿ ಹೇಳಲಾಗಿದೆ. ಈ ಆಮಂತ್ರಣ ವಾಟ್ಸಾಪ್‌ನಲ್ಲಿ ಹರಿದಾಡಿತ್ತು. ಇಂತಹ ಕ್ಲೇಮುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು

Also Read: ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿಗೆ ಬಿಜೆಪಿ ಧ್ವಜದ ಮೇಲೆ ಗೋಹತ್ಯೆಗೈದು ಸಂಭ್ರಮ, ಸತ್ಯ ಏನು?

ವಾಟ್ಸಾಪ್‌ನಲ್ಲಿ ಹರಿದಾಡಿದ ಆಮಂತ್ರಣ

ಈ ಹಿನ್ನೆಲೆಯಲ್ಲಿ ನ್ಯೂಸ್‌ಚೆಕರ್‌ ವಾಟ್ಸಪ್‌ ಟಿಪ್‌ಲೈನ್‌(+91-9999499044)ಗೆ ಮನವಿ ಬಂದಿದ್ದು ಸತ್ಯಶೋಧನೆ ನಡೆಸಲಾಗಿದೆ. ಈ ವೇಳೆ ವೈರಲ್‌ ಆಗಿರುವ ಆಮಂತ್ರಣ ಪತ್ರ ಸುಳ್ಳು ಎಂದು ಗೊತ್ತಾಗಿದೆ.

Fact Check: Verification

ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್‌ ಕೀವರ್ಡ್‌ ಸರ್ಚ್‌ ನಡೆಸಿದ್ದು ಈ ವೇಳೆ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನದ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ.

ಮೇ 18, 2023ರ ಮಿಂಟ್‌ ವರದಿಯ ಪ್ರಕಾರ, “ಕರ್ನಾಟಕದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೇರಲಿದ್ದು, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿಗಳು ಹೇಳಿವೆ. ಇವರ ಪ್ರಮಾಣ ವಚನ ಮೇ 20 ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ” ಎಂದು ಹೇಳಿದೆ.

ಮೇ 17, 2023ರ ದಿ ಹಿಂದೂ ವರದಿಯ ಪ್ರಕಾರ, “ಸಿಎಂ ಹುದ್ದೆಯನ್ನು ಯಾರು ಏರುತ್ತಾರೆ ಎಂಬುದಕ್ಕೆ ಅಧಿಕೃತ ಮಾಹಿತಿ ಬರಬೇಕಿದ್ದರೂ, ಅಧಿಕಾರಿ ವರ್ಗ ಪ್ರಮಾಣ ವಚನಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಿದ್ಧತೆ ಆರಂಭಿಸಿದೆ. ಈ ಸಿದ್ಧತೆ ನಡೆದ ಮಧ್ಯೆ ಮಧ್ಯಾಹ್ನ ಬಳಿಕ ಏಕಾಏಕಿ ಕೆಲಸಗಳು ಸ್ಥಗಿತಗೊಂಡವು” ಎಂದು ಹೇಳಿದೆ. ಇದೇ ವರದಿಯಲ್ಲಿ “ಸಿದ್ದರಾಮಯ್ಯ ಅವರು ಮೇ 18ರಂದು ಸಿಎಂ ಆಗಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವಾಟ್ಸಪ್‌ನಲ್ಲಿ ಸುದ್ದಿ ಹಬ್ಬಿತ್ತು. ಆದರೆ ಅಂತಹ ಯಾವುದೇ ಅಧಿಕೃತ ಪ್ರಕಟಣೆ ರಾಜಭವನದಿಂದ ಹೊರಬಿದ್ದಿಲ್ಲ” ಎಂದು ವರದಿ ತಿಳಿಸಿದೆ.

Also Read: ಕುಳಿತುಕೊಳ್ಳಲೂ ಸೋನಿಯಾ ಗಾಂಧಿ ಅನುಮತಿಗೆ ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದರೆ?

ದಿ ಹಿಂದೂ ವರದಿ

ಮೇ 18, 2023ರಂದು ಸುದ್ದಿಸಂಸ್ಥೆ ಎಎನ್‌ಐ ಮಾಡಿದ ಟ್ವೀಟ್‌ನಲ್ಲೂ ಪ್ರಮಾಣವಚನ ಕಾರ್ಯಕ್ರಮ ಮೇ 20ರಂದು ನಡೆಯುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಟ್ವೀಟ್ ಅನ್ನು ಇಲ್ಲಿ ನೋಡಬಹುದು.

ಇನ್ನು ಈ ಆಮಂತ್ರಣದ ಬಗ್ಗೆ ಸುಳ್ಳು ಎಂದು ನ್ಯೂಸ್‌ 18 ಇದರ ಹಿರಿಯ ಸಂಪಾದಕರಾದ ಡಿಪಿ ಸತೀಶ್ ಅವರು ಟ್ವೀಟ್ ಮಾಡಿರುವುದನ್ನು ಟ್ವಿಟರ್‌ ಸರ್ಚ್‌ ವೇಳೆ ಲಭ್ಯವಾಗಿದೆ.

ಪ್ರಮಾಣವಚನ ಕುರಿತ ಹೆಚ್ಚಿನ ಮಾಹಿತಿಗಾಗಿ ನ್ಯೂಸ್‌ಚೆಕರ್‌ ರಾಜಭವನ ಕರ್ನಾಟಕ ವನ್ನು ಸಂಪರ್ಕಿಸಿದ್ದು, “ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಆಮಂತ್ರಣ ಇನ್ನೂ ಸಿದ್ಧಗೊಂಡಿಲ್ಲ. ಮೇ 20ರಂದು ಕಾರ್ಯಕ್ರಮ ನಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ನಿರ್ಧಾರದ ಬಳಿಕ ಅವರ ಮನವಿ ಮೇರೆಗೆ ಕಾರ್ಯಕ್ರಮ ನಡೆಯಲಿದೆ” ಎಂದು ಹೇಳಿದೆ.

ಈ ವಿಚಾರ ಕುರಿತಂತೆ ಟಿವಿ9 ಕನ್ನಡ ಸುದ್ದಿವಾಹಿನಿಯ ಹಿರಿಯ ರಾಜಕೀಯ ಪತ್ರಕರ್ತ ಕಿರಣ್‌ ಹನಿಯಡ್ಕ ಅವರನ್ನು ಸಂಪರ್ಕಿಸಲಾಗಿದ್ದು, ಅವರು ನ್ಯೂಸ್‌ಚೆಕರ್‌ನೊಂದಿಗೆ ಮಾತನಾಡಿ, “ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಂಡು, ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಬಳಿಕ ಅವರು ರಾಜ್ಯಪಾಲರಿಗೆ ಸರ್ಕಾರ ಸ್ಥಾಪನೆಯ ಹಕ್ಕಿನ ಬಗ್ಗೆ ಮನವಿ ಮಾಡಲಿದ್ದು, ಬಳಿಕ ಪ್ರಮಾಣ ವಚನ ನಡೆಯಲಿದೆ. ಸದ್ಯದ ಪ್ರಕಾರ ಮೇ 20ರಂದು ನಡೆಯಲಿದೆ ಎಂದು ಹೇಳಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

Also Read: ಭಟ್ಕಳ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಲಾಗಿದೆಯೇ? ಇಲ್ಲ, ಈ ಕ್ಲೇಮ್‌ ಸುಳ್ಳು

Conclusion

ಈ ಸತ್ಯಶೋಧನೆಯ ಪ್ರಕಾರ, ಮೇ 18ರಂದು ಸಿಎಂ ಆಗಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವ ಕ್ಲೇಮ್‌ ಸುಳ್ಳಾಗಿದೆ.

Result: False

Our Sources
Report By Mint, Dated: May 18, 2023

Report By The Hindu, Dated: May 17, 2023

Tweet By ANI, Dated: May 18, 2023

Conversation with Rajbhavan Karnataka Authority Bengaluru

Conversation with Kiran Haniyadka, Senior Political Reporter, TV9 Kannada News Channel


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors