Fact Check: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?

ದಾವಣಗೆರೆ, ಸ್ಮೋಕ್‌ ಬಿಸ್ಕೆಟ್, ಬಾಲಕ ಅಸ್ವಸ್ಥ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ದಾವಣಗೆರೆಯಲ್ಲಿ ಬಾಲಕನೊಬ್ಬ ಸ್ಮೋಕ್‌ ಬಿಸ್ಕೆಟ್ ಗಳನ್ನು ತಿಂದು ಮೃತಪಟ್ಟಿದ್ದಾನೆ

Fact
ಸ್ಮೋಕ್‌ ಬಿಸ್ಕೆಟ್ ಗಳನ್ನು ತಿಂದ ಬಾಲಕ ಅಸ್ವಸ್ಥಗೊಂಡು, ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾನೆ. ಆತ ಮೃತಪಟ್ಟಿಲ್ಲ. ಘಟನೆ ಸಂಬಂಧ ದಾವಣಗೆರೆ ಆಹಾರ ನಿರೀಕ್ಷಕರು ಅಂಗಡಿ ಮುಚ್ಚಿಸಿದ್ದಾರೆ

ದಾವಣಗೆರೆಯಲ್ಲಿ ನಡೆದ ಘಟನೆಯೊಂದರಲ್ಲಿ, ಬಾಲಕನೊಬ್ಬ ತಿನಿಸೊಂದನ್ನು ತಿಂದು ಅಸ್ವಸ್ಥಗೊಂಡು ಬಳಿಕ ಮೃತಪಟ್ಟಿದೆ ಎಂಬಂತೆ, ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ನಿನ್ನೆ ದಾವಣಗೆರೆ ಅರುಣಾ ಟಾಕಿಸ್ ಮುಂಬಾಗ ಇರುವ ಎಕ್ಸಿಬಿಷನ್ ನಲ್ಲಿ ನಡೆದ ಘಟನೆ ನಿಮ್ಮ ಮಕ್ಕಳನ್ನು ಕರೆದು ಕೊಂಡು ಹೋದಾಗ ಯಾವುದೇ ತಿಂಡಿ ತಿನಿಸುಗಳನು ತಿನಿಸುವಾಗ ಎಚ್ಚರಿಕೆ ಇರಲಿ ಇವಾಗ ಮಗು ಜೀವಂತವಾಗಿಲ್ಲವಂತೆ. Boy is no more” ಎಂದು ವೀಡಿಯೋ ಹಂಚಿಕೊಳ್ಳಲಾಗುತ್ತಿದೆ.

Also Read: ತಮಿಳುನಾಡಿನ ತೆಂಕಾಸಿಯಲ್ಲಿ ಹಿಂದೂ ದೇಗುಲವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆಯೇ?

Fact Check: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?
ವಾಟ್ಸಾಪ್‌ ನಲ್ಲಿ ಕಂಡುಬಂದ ಹೇಳಿಕೆ

1 ನಿಮಿಷ 23 ಸೆಕೆಂಡ್ ಗಳ ಈ ವೀಡಿಯೋದಲ್ಲಿ ಬಾಲಕ ಹೊಗೆ ಬರುವ ತಿನಿಸೊಂದನ್ನು ತಿನ್ನುವುದು ಬಳಿಕ ಅಸ್ವಸ್ಥಗೊಳ್ಳುವುದು ಕಾಣಿಸುತ್ತದೆ. ಈ ವೀಡಿಯೋದ ಸತ್ಯಶೋಧಕ್ಕೆ ನ್ಯೂಸ್‌ಚೆಕರ್ ಮುಂದಾಗಿದ್ದು, ವೈರಲ್‌ ಆಗಿರುವ ಹೇಳಿಕೆಯು ಭಾಗಶಃ ತಪ್ಪು ಎಂದು ಗೊತ್ತಾಗಿದೆ.

Fact Check/ Verification

ಸತ್ಯಶೋಧನೆಗಾಗಿ ನಾವು ಗೂಗಲ್‌ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಲಭ್ಯವಾಗಿವೆ.

ಏಪ್ರಿಲ್‌ 18, 2024ರ ನ್ಯೂಸ್‌ ಫಸ್ಟ್‌ ವರದಿಯಲ್ಲಿ, “ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥಗೊಂಡ ಘಟನೆ ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ನಡೆದಿದೆ. ಬರ್ಡ್ಸ್ ಎಕ್ಸ್ಯೂಬ್ಯುಶನ್​ನಲ್ಲಿ ಬಾಲಕ ಸ್ಮೋಕ್​ ಬಿಸ್ಕೆಟ್​ ತಿಂದಿದ್ದಾನೆ. ತಿನ್ನುತ್ತಿದ್ದಂತೆಯೇ ಬಾಲಕ ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಬಾಲಕನನ್ನು ಪೋಷಕರು ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ನಂತರ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಳಿಕ ಸ್ಮೋಕ್ ಬಿಸ್ಕೆಟ್ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ದೂರಿನ ಬಳಿಕ ಅಧಿಕಾರಿಗಳು ಸ್ಮೋಕ್ ಬಿಸ್ಕೆಟ್ ಮಾರಾಟ ಬಂದ್ ಮಾಡಿ ಅವುಗಳನ್ನ ವಶಕ್ಕೆ ಪಡೆದಿದ್ದಾರೆ.” ಎಂದಿದೆ. ನ್ಯೂಸ್‌ ಫಸ್ಟ್ ನ ಈ ವರದಿಯಲ್ಲಿ ವೈರಲ್‌ ಆಗಿರುವ ವೀಡಿಯೋವನ್ನು ಹೋಲುವ ವೀಡಿಯೋವನ್ನು ಲಗತ್ತಿಸಿರುವುದು ಕಂಡುಬಂದಿದೆ.

Fact Check: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?
ನ್ಯೂಸ್ ಫಸ್ಟ್ ವರದಿ

ಏಪ್ರಿಲ್‌ 18, 2024ರ ಹೊಸದಿಗಂತ ವರದಿಯಲ್ಲಿ “ ದಾವಣಗೆರೆಯಲ್ಲಿ ಸ್ಮೋಕ್‌ ಬಿಸ್ಕೆಟ್ ತಿಂದು ಬಾಲಕನೊಬ್ಬ ಅಸ್ವಸ್ಥಗೊಂಡಿದ್ದಾನೆ. ಅರುಣ್‌ ಸರ್ಕಲ್‌ ಬಳಿಯ ವಸ್ತುಪ್ರದರ್ಶನದಲ್ಲಿ ಈ ಘಟನೆ ನಡೆದಿದೆ. ಮಾರಾಟಗಾರನು ಒಂದು ಕಪ್‌ ನಲ್ಲಿ ಐದು ಸಣ್ಣ ಕುಕೀಗಳನ್ನು ಹಾಕಿದನು. ಇದನ್ನು ಹೊಗೆ ಬರುವಾಗ ತಿನ್ನಲಾಗುತ್ತದೆ. ಅದನ್ನು ಒಂದೇ ಬಾರಿಗೆ ತನ್ನ ಬಾಯಿಗೆ ಹಾಕಿಕೊಂಡಿದ್ದಾನೆ ಮತ್ತು ಅವು ಅವನ ಗಂಟಲಿಗೆ ಹೋಗಿ ಸಿಲುಕಿಕೊಂಡವು. ಉಸಿರಾಟದ ತೊಂದರೆಯಿಂದಾಗಿ, ನುಂಗಲು ಅಥವಾ ಉಗುಳಲು ಸಾಧ್ಯವಿಲ್ಲದೆ ಉಸಿರಾಟದ ಸಮಸ್ಯೆಯಿಂದ ಒದ್ದಾಡಿದ್ದಾನೆ. ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೋಷಕರು ದಾವಣಗೆರೆ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ” ಎಂದಿದೆ.

Also Read: ನಾಮಪತ್ರ ಸಲ್ಲಿಸಿದ ಬಳಿಕ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಸತ್ಯ ಏನು?

Fact Check: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?
ಹೊಸದಿಗಂತ ವರದಿ

ಏಪ್ರಿಲ್‌ 26, 2024ರ ಕನ್ನಡ ಟೈಮ್ಸ್ ನೌ ವರದಿಯಲ್ಲಿ “ದಾವಣಗೆರೆಯಲ್ಲಿ ನಡೆದ ಎಕ್ಸಿಬಿಷನ್‌ನಲ್ಲಿ ಬಾಲಕ ಲಿಕ್ವಿಡ್ ನೈಟ್ರೋಜನ್ ಸೇವಿಸಿ ಮೃತಪಟ್ಟಿದ್ದಾನೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ತೀವ್ರ ಚರ್ಚೆಗೂ ಒಳಪಟ್ಟಿತ್ತು. ಅಲ್ಲದೆ, ಆ ಬಾಲಕನ ಆರೋಗ್ಯದ ಬಗ್ಗೆಯೂ ಹಲವು ಸುಳ್ಳು ಸುದ್ದಿಗಳು ಬಿತ್ತರವಾಗುತ್ತಿದೆ. ಮಕ್ಕಳ ಮನರಂಜನೆಗಾಗಿ ನಡೆಯುತ್ತಿರುವ ಎಕ್ಸಿಬಿಷನ್‌ನ ಸ್ಮಾಲ್ ನಲ್ಲಿ ಸ್ಕೋಕ್ ಬಿಸ್ಕೆಟ್ ಕೊಡಲಾಗುತ್ತಿತ್ತು. ಸ್ಟೋಕ್ ಬಿಸ್ಕೆಟ್ ಸ್ಟಾಲ್ ದೊಡ್ಡವರಿಂದ ಚಿಕ್ಕ ಮಕ್ಕಳವರೆಗೂ ಗಮನ ಸೆಳೆದಿತ್ತು. ಈ ವೇಳೆ ಬಾಲಕನೊಬ್ಬ ಅಸ್ವಸ್ಥನಾಗಿದ್ದು, ಈ ಘಟನೆ ವೈರಲ್ ಆಗಿದೆ.” ಎಂದಿದೆ. ಈ ವರದಿಯಲ್ಲೂ ವೈರಲ್‌ ವೀಡಿಯೋದ ಸ್ಕ್ರೀನ್ ಶಾಟ್ ಗಳನ್ನು ಹೋಲುವ ಫೊಟೋಗಳನ್ನು ಬಳಸಿರುವುದನ್ನು ನಾವು ನೋಡಿದದೇವೆ.

Fact Check: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?
ಕನ್ನಡ ಟೈಮ್ಸ್ ನೌ ವರದಿ

ಘಟನೆ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಾವು ದಾವಣಗೆರೆ ಕಿರಿಯ ಆರೋಗ್ಯ ನಿರೀಕ್ಷಕರಾದ, ಷಣ್ಮುಖ ಎನ್ ಮದನ್ ಕುಮಾರ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ಮಾತನಾಡಿ, ಈ ಪ್ರಕರಣದಲ್ಲಿ ಮಗು ಸತ್ತಿಲ್ಲ. ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾನೆ. ಇನ್ನು ಘಟನೆಗೆ ಸಂಬಂಧಿಸಿ, ಆಹಾರ ನಿರೀಕ್ಷಕರು ಅಂಗಡಿಯ ವಿರುದ್ಧ ಕ್ರಮಗೊಂಡಿದ್ದು ಅಂಗಡಿಯನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.

Conclusion

ಈ ಸಾಕ್ಷ್ಯಗಳ ಪ್ರಕಾರ, ದಾವಣಗೆರೆಯಲ್ಲಿ ಸ್ಮೋಕ್‌ ಬಿಸ್ಕೆಟ್ ತಿಂದ ಪ್ರಕರಣದಲ್ಲಿ ಬಾಲಕ ಅಸ್ವಸ್ಥಗೊಂಡಿರುವುದು ನಿಜವಾಗಿದೆ. ಆದರೆ ಆತ ಮೃತಪಟ್ಟಿಲ್ಲ, ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾನೆ ಎಂದು ಗೊತ್ತಾಗಿದೆ.

Also Read: ಮಕ್ಕಳನ್ನು ಲ್ಯಾಬ್‌ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆಯೇ, ವೈರಲ್ ವೀಡಿಯೋ ಹಿಂದಿನ ಅಸಲಿಯತ್ತೇನು?

Result: Partly False

Our Sources

Report By News first, Dated: April 18, 2024

Report By Hosadigantha, Dated: April 18, 2024

Report By Kannada Times Now, Dated: April 26, 2024

Conversation with Shanmukha N Madan Kumar, Junior Health Inspector, Davanagere


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.