Fact Check: ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆಯೇ?

ರಂಜಾನ್‌, ಶಾಲೆ ಅವಧಿ, ಬದಲಾವಣೆ

Claim
ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆ

Fact
ರಾಜ್ಯದ ಎಲ್ಲ ಶಾಲೆಗಳಿಗೆ ಅನ್ವಯವಾಗುವಂತೆ ರಂಜಾನ್‌ ತಿಂಗಳಲ್ಲಿ ಸಮಯ ಬದಲಾವಣೆ ಮಾಡಿ ಆದೇಶ ನೀಡಲಾಗಿಲ್ಲ. ಬದಲಾಗಿ ಉರ್ದು ಶಾಲೆಗಳಿಗೆ ಮಾತ್ರ ಸಮಯದ ಬದಲಾವಣೆ ಮಾಡಲಾಗಿದೆ. ಈ ಕುರಿತ ಸುದ್ದಿಗಳಲ್ಲಿ ತಪ್ಪು ಅರ್ಥ ಬರುವಂತೆ ಹೆಡ್ ಲೈನ್‌ ಮಾತ್ರ ಬದಲಾಯಿಸಲಾಗಿದೆ

ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯ ಬದಲಿಸಿದ ರಾಜ್ಯ ಸರ್ಕಾರ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ಹೇಳಿಕೆ ಪ್ರಕಾರ, ರಂಜಾನ್‌ಗಾಗಿ ರಾಜ್ಯ ಸರ್ಕಾರ ಎಲ್ಲ ಶಾಲೆಗಳ ಸಮಯವನ್ನು ಬದಲಾಯಿಸಿದೆ ಎಂದು ಹೇಳಲಾಗಿದೆ. ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ಮಾಡಿದ್ದು, ಇದು ಭಾಗಶಃ ತಪ್ಪು ಎಂದು ಕಂಡುಕೊಂಡಿದ್ದೇವೆ.

Also Read: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್‌ ವರ್ಷ ಹಳೆಯ ಡ್ರೋನ್‌ ಸಿಕ್ಕಿದೆಯೇ?

Fact Check: ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆಯೇ?
ವಾಟ್ಸಾಪ್‌ ನಲ್ಲಿ ಹರಿದಾಡುತ್ತಿರುವ ಕ್ಲೇಮ್

Fact Check/ Verification

ಸತ್ಯಶೋಧನೆಗಾಗಿ ನಾವು ವಾಟ್ಸಪ್‌ ನಲ್ಲಿ ಹರಿದಾಡುತ್ತಿರುವ ವೆಬ್‌ಸೈಟ್ ಲಿಂಕ್‌ ಅನ್ನು ನೋಡಿದ್ದೇವೆ. ನ್ಯೂಸಿಕ್ಸ್ ವೆಬ್‌ ನ ಪುಟದಲ್ಲಿ ವರದಿಯ ಶೀರ್ಷಿಕೆಯಲ್ಲಿ “ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯ ಬದಲಿಸಿದ ರಾಜ್ಯ ಸರ್ಕಾರ” ಎಂದಿದೆ. ಆದರೆ ಇದರ ವರದಿಯಲ್ಲಿ “ಶಾಲಾ ಶಿಕ್ಷಣ ಇಲಾಖೆಯಿಂದ ಉರ್ದು ಶಾಲೆಗಳ ಸಮಯ ಬದಲಾಯಿಸಿ ಆದೇಶ ಹೊರಡಿಸಿಸಲಾಗಿದೆ” ಎಂದಿದೆ. ಅಂದರೆ ವರದಿಯಲ್ಲಿ ಶೀರ್ಷಿಕೆಯಲ್ಲಿ ನಿರ್ದಿಷ್ಟವಾಗಿ ಉರ್ದು ಶಾಲೆಗಳ ಬಗ್ಗೆ ಬರೆಯದೇ “ಶಾಲೆಗಳ ಸಮಯ ಬದಲಿಸಿದ ರಾಜ್ಯ ಸರ್ಕಾರ” ಎಂದಿದ್ದು ತಪ್ಪು ಅರ್ಥ ಬರುವಂತೆ ಇದೆ.

Fact Check: ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆಯೇ?
ವೈರಲ್ ಕ್ಲೇಮಿನಲ್ಲಿರುವ ಸುದ್ದಿ

ಸರ್ಕಾರದ ಆದೇಶವನ್ನು ಖಚಿತಪಡಿಸಿಕೊಳ್ಳಲು ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಪೂರಕ ಮಾಹಿತಿಗಳು ಲಭ್ಯವಾಗಿವೆ.

ಮಾರ್ಚ್ 9, 2024ರ ನ್ಯೂಸ್‌ 18 ಕನ್ನಡ ವರದಿಯಲ್ಲಿ “ರಂಜಾನ್‌ಗಾಗಿ ಉರ್ದು ಶಾಲೆ ಟೈಂ ಚೇಂಜ್‌ ಮಾಡಿ ಶಿಕ್ಷಣ ಇಲಾಖೆಯಿಂದ ಆದೇಶ” ಎಂದಿದೆ. ಇದರಲ್ಲಿ ರಂಜಾನ್ ಆಚರಣೆ  ಹಿನ್ನೆಲೆ ಅಲ್ಪಸಂಖ್ಯಾತ ಶಾಲಾ ವೇಳಾ ಪಟ್ಟಿ ಬದಲಾಯಿಸಿ ಶಿಕ್ಷಣ ಇಲಾಖೆ  ಆದೇಶ ಹೊರಡಿಸಿದೆ. ಏಪ್ರಿಲ್ 10, 2024ರ ತನಕ ಉರ್ದು ಶಾಲೆ ಸಮಯ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 12:45ರ ತನಕ ಶಾಲಾ ಅವಧಿ ನಿಗದಿಪಡಿಸಲಾಗಿದೆ. ಮುಸ್ಲಿಂ ವಿದ್ಯಾರ್ಥಿ, ಸಿಬ್ಬಂದಿ ಅರ್ಧ ಗಂಟೆ ಮುಂಚಿತವಾಗಿ ತೆರಳಲು ಅನುಮತಿ ನೀಡಲಾಗಿದೆ ಎಂದಿದೆ.

Fact Check: ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆಯೇ?
ನ್ಯೂಸ್‌ 18 ಕನ್ನಡ ವರದಿ

ಮಾರ್ಚ್ 8, 2024ರ ಪ್ರಜಾವಾಣಿ “ರಂಜಾನ್‌ ಉಪವಾಸ: ಉರ್ದು ಶಾಲಾ ಸಮಯ ಬದಲಾವಣೆ” ಎಂಬ ಶೀರ್ಷಿಯ ವರದಿಯಲ್ಲಿ ರಂಜಾನ್‌ ಉಪವಾಸ ಮಾರ್ಚ್ 11ರಿಂದ ಆರಂಭವಾಗುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಉರ್ದು ಶಾಲೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ರಂಜಾನ್‌ ನ ಒಂದು ತಿಂಗಳು ಪ್ರತಿ ದಿನ ಉರ್ದು ಶಾಲೆಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 12.45ರವರೆಗೆ ನಡೆಯಲಿವೆ ಎಂದಿದೆ.

Also Read: ಹಿಂದೂ ಹುಡುಗಿಗೆ ಬ್ರೈನ್ ವಾಶ್ ಮಾಡಿ ಬುರ್ಖಾ ತೊಡುವಂತೆ ಮುಸ್ಲಿಂ ಹುಡುಗಿಯಿಂದ ಬಲವಂತ, ಸತ್ಯ ಏನು?

ಇದೇ ರೀತಿಯ ವರದಿಗಳನ್ನು ನಾವು ಇಲ್ಲಿ, ಇಲ್ಲಿ, ಇಲ್ಲಿ ಗಮನಿಸಿದ್ದೇವೆ.

ಇನ್ನು, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಆಯುಕ್ತರ ಕಚೇರಿಯ ಸುತ್ತೋಲೆಯನ್ನು ನಾವು  ಇಲಾಖೆಯಿಂದ ಪಡೆದುಕೊಂಡಿದ್ದು, ಅದು ಇಲ್ಲಿದೆ.

ಹೆಚ್ಚಿನ ಮಾಹಿತಿಗೆ ನಾವು ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಸಂಘದ ಸಂಚಾಲಕರಾದ ಡಾ.ನಸೀಮ್‌ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್ ಚೆಕರ್ ನೊಂದಿಗೆ ಮಾತನಾಡಿ, “ರಂಜಾನ್‌ ಅವಧಿಯಲ್ಲಿ ಶಾಲೆಯ ಸಮಯ ಬದಲಾವಣೆ ಮಾಡುವ ಪರಿಪಾಠ ಬಹು ಹಿಂದಿನಿಂದಲೇ ಚಾಲ್ತಿಯಲ್ಲಿದೆ. 1979ರಿಂದ ಮುಸ್ಲಿಂ ನೌಕರ ವರ್ಗಕ್ಕೂ ಕೆಲಸದ ಅವಧಿಯಲ್ಲಿ ವ್ಯತ್ಯಾಸ ಮಾಡಿ ಆದೇಶ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಹೊಸತೇನೂ ಇಲ್ಲ. ಉರ್ದು ಶಾಲೆಗಳ ಅವಧಿಯನ್ನು ಬೆಳಗ್ಗೆ 8ರಿಂದ ಆರಂಭಿಸಿ, ಮಧ್ಯಾಹ್ನ 12.45ರ ವರೆಗೆ ಇರುವಂತೆ ಆದೇಶಿಸಲಾಗಿದೆ. ಆದೇಶದ ಪ್ರಕಾರ, ಈ ವೇಳಾಪಟ್ಟಿ ಬದಲಾವಣೆ  ಉರ್ದು ಶಾಲೆಗಳಿಗೆ ಮಾತ್ರ ಅನ್ವಯವಾಗಲಿದೆ. ಆದರೆ, ಇತರ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿ ಮತ್ತು ಸಿಬ್ಬಂದಿಗೆ ಸಾಯಂಕಾಲ ಬೇಗನೇ ತೆರಳಲು ಅವಕಾಶ ನೀಡಬಹುದು ಎಂದು ಹೇಳಲಾಗಿದೆ” ರಾಜಕೀಯ ಉದ್ದೇಶಗಳಿಗಾಗಿ ಈ ಆದೇಶವನ್ನು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ” ಎಂದು  ಅವರು ಸ್ಪಷ್ಟಪಡಿಸಿದ್ದಾರೆ.

“ಕರ್ನಾಟಕದಲ್ಲಿ ಕಳೆದ‌ ಹಲವು ದಶಕಗಳಿಂದ ರಂಜಾನ್ ತಿಂಗಳಲ್ಲಿ ಉರ್ದು ಮಾಧ್ಯಮ ಶಾಲೆಗಳ ಅವಧಿಯನ್ನು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಬದಲಾವಣೆ ಮಾಡುತ್ತ ಬರಲಾಗಿದೆ, ಇದರಿಂದ ಆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ರಂಜಾನ್ ಉಪವಾಸ ಇರುವುದರಿಂದ ಮಕ್ಕಳು ದೈಹಿಕವಾಗಿ ಬಳಲುವ ಸಾಧ್ಯತೆಯ ಕಾರಣಕ್ಕೆ ಮಾನವೀಯ ಹಿನ್ನಲೆಯಲ್ಲಿ ಆದೇಶಿಸಲಾಗುತ್ತದೆ, ಇದನ್ನು ಧಾರ್ಮಿಕ ಹಿನ್ನಲೆಯಲ್ಲಿ ನೋಡುವುದು ಸರಿಯಲ್ಲ” ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ವಕ್ತಾರರಾದ ಡಾ.ರಜಾಕ್‌ ಉಸ್ತಾದ್‌ ನ್ಯೂಸ್‌ಚೆಕರ್ ಗೆ ತಿಳಿಸಿದ್ದಾರೆ.

Conclusion

ಈ ಸತ್ಯಶೋಧನೆಯ ಪ್ರಕಾರ, ರಾಜ್ಯದ ಎಲ್ಲ ಶಾಲೆಗಳಿಗೆ ಅನ್ವಯವಾಗುವಂತೆ ರಂಜಾನ್‌ ತಿಂಗಳಲ್ಲಿ ಸಮಯ ಬದಲಾವಣೆ ಮಾಡಿ ಆದೇಶ ನೀಡಲಾಗಿಲ್ಲ. ಬದಲಾಗಿ ಉರ್ದು ಶಾಲೆಗಳಿಗೆ ಮಾತ್ರ ಸಮಯದ ಬದಲಾವಣೆ ಮಾಡಲಾಗಿದೆ. ಈ ಕುರಿತ ಸುದ್ದಿಗಳಲ್ಲಿ ತಪ್ಪು ಅರ್ಥ ಬರುವಂತೆ ಹೆಡ್ ಲೈನ್‌ ಮಾತ್ರ ಬದಲಾಯಿಸಲಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.

Also Read: ಸೋನಿಯಾ ಗಾಂಧಿಯವರಿಗೆ ಒಂದು ಮನೆಯೂ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಸತ್ಯವೇ?

Result: Partly False

Our Sources
Report By News 18 Kannada, Dated: March 9, 2024

Report By Prajavani, Dated: March 8, 2024

Conversation with Dr. Naseem State convener, Karnataka State Welfare Association for Minorities

Conversation with Dr. Razak Ustad, State spokesperson KPCC Media Department


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.