Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸುನೀತಾ ವಿಲಿಯಮ್ಸ್ ತಂಡ ಭೂಮಿಗೆ ಬಂದ ಕ್ಷಣ
ಸುನೀತಾ ವಿಲಿಯಮ್ಸ್ ತಂಡ ಭೂಮಿಗೆ ಬಂದ ಕ್ಷಣ ಎಂದು ಹೇಳಲಾದ ವೀಡಿಯೋ ತಪ್ಪಾಗಿದ್ದು, ಅದುಸ್ಪೇಸ್ಎಕ್ಸ್ ಸ್ಟಾರ್ ಶಿಪ್ ಇಳಿಯುವ ವೀಡಿಯೋ ಆಗಿದೆ
ನಾಸಾ ಗಗನ ಯಾತ್ರಿ ಸುನೀತಾ ವಿಲಿಯಮ್ಸ್ ಅವರು 9 ತಿಂಗಳ ಬಾಹ್ಯಾಕಾಶ ವಾಸ ಮುಗಿಸಿ ಭೂಮಿಗೆ ಬಂದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಬಂದಿಳಿದ ವೀಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಲಾದ ವೀಡಿಯೋ ಜೊತೆಗಿನ ಹೇಳಿಕೆಯೊಂದರಲ್ಲಿ “ಸುನೀತಾ ವಿಲಿಯಮ್ಸ್ ತಂಡ ಭೂಮಿಗೆ ಬಂದ ಕ್ಷಣ,” ಎಂದಿದೆ.
ಇದೇ ರೀತಿಯ ಹೇಳಿಕೆಯಿರುವ ವೀಡಿಯೋ ಯೂಟ್ಯೂಬ್ ನಲ್ಲೂ ನೋಡಿದ್ದೇವೆ.
ಈ ವೈರಲ್ ವೀಡಿಯೋ ಬಗ್ಗೆ ನ್ಯೂಸ್‌ಚೆಕರ್ ತನಿಖೆ ಮಾಡಿದ್ದು, ಇದು ಸುನಿತಾ ವಿಲಿಯಮ್ಸ್ ಅವರು ಆಗಮಿಸಿದ ಕುರಿತ ವೀಡಿಯೋವಲ್ಲ, ಇದು ಸ್ಪೇಸ್ ಎಕ್ಸ್ ರಾಕೆಟ್ ಇಳಿದ ದೃಶ್ಯ ಎಂದು ಕಂಡುಬಂದಿದೆ.
Also Read: ಪಾಕ್-ಚೀನಾಕ್ಕೆ ಬಲೂಚಿ ಆರ್ಮಿಯ ನೇರ ಎಚ್ಚರಿಕೆ ಎಂದು ಹಂಚಿಕೊಂಡ ವೀಡಿಯೋ ಹಳೆಯದು!
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಈ ವೇಳೆ ಕಂಡುಬಂದ ಫಲಿತಾಂಶಗಳು ಇದೊಂದು ಮರುಬಳಕೆ ರಾಕೆಟ್ ಆಗಿದ್ದು ಇದನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 13, 2024ರಂದು ಒಲಿ ಲಂಡನ್ ಎಂಬವರು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇದರಲ್ಲಿ ಸ್ಪೇಸ್ ಎಕ್ಸ್ ರಾಕೆಟ್ ಇಳಿಯುವುದನ್ನು ಹಂಚಿಕೊಳ್ಳಲಾಗಿದೆ. ಇದು ವೈರಲ್ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿದೆ.
ಅಕ್ಟೋಬರ್ 13, 2024ರಂದು ವಿವಿಧ ಎಕ್ಸ್ ಬಳಕೆದಾರರೂ ಇದೇ ವೀಡಿಯೋವನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ. ಅವುಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಈ ಪೋಸ್ಟ್ ಗಳ ಆಧಾರದಲ್ಲಿ ನಾವು ಗೂಗಲ್ ನಲ್ಲಿ ಇನ್ನಷ್ಟು ಶೋಧ ನಡೆಸಿದ್ದು, ಮಾಧ್ಯಮ ವರದಿಗಳು ಲಭ್ಯವಾಗಿವೆ. ಅಕ್ಟೋಬರ್ 13, 2024ರ ಅಲ್ ಜಝೀರಾ ವರದಿಯಲ್ಲಿ ಸ್ಪೇಸ್‌ಎಕ್ಸ್ ತನ್ನ ಐದನೇ ಸ್ಟಾರ್‌ಶಿಪ್ ಪರೀಕ್ಷಾ ಹಾರಾಟವನ್ನು ಟೆಕ್ಸಾಸ್ ನಲ್ಲಿ ನಡೆಸಿದ್ದು, ರಾಕೆಟ್‌ನ ಮೊದಲ ಹಂತದ ಬೂಸ್ಟರ್ ಅನ್ನು ಮೊದಲ ಬಾರಿಗೆ ಭೂಮಿಗೆ ಹಿಂತಿರುಗಿಸಿದೆ.
ಸೂಪರ್ ಹೆವಿ ಬೂಸ್ಟರ್, ಸ್ಟಾರ್‌ಶಿಪ್ ಬೂಸ್ಟರ್‌ನಿಂದ ಸುಮಾರು 74 ಕಿಮೀ (46 ಮೈಲುಗಳು) ಎತ್ತರದಲ್ಲಿ ಬೇರ್ಪಟ್ಟ ನಂತರ, ಉಡಾವಣಾ ಗೋಪುರಕ್ಕೆ ಜೋಡಿಸಲಾದ ಎರಡು ರೋಬೋಟಿಕ್ ತೋಳುಗಳ ಸಹಾಯದಿಂದ, ತನ್ನ ಲ್ಯಾಂಡಿಂಗ್ ಪ್ರಯತ್ನವನ್ನು ಮಾಡಲು ಅದನ್ನು ಉಡಾವಣೆ ಮಾಡಿದ ಅದೇ ಪ್ರದೇಶಕ್ಕೆ ಮರಳಿತು ಎಂದಿದೆ.
ಅಕ್ಟೋಬರ್ 13, 2024ರ ದಿ ಗಾರ್ಡಿಯನ್ ವರದಿಯಲ್ಲೂ, ಇಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸ್ಟಾರ್ ಶಿಪ್ ರಾಕೆಟ್ ಬೂಸ್ಟರ್ ಅನ್ನು ದಕ್ಷಿಣ ಟೆಕ್ಸಾಸ್ ನ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ಇಳಿಸಿದ್ದು, ಪ್ರಮುಖ ಮೈಲುಗಲ್ಲು ನೆಟ್ಟಿದೆ ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಸ್ಪೇಸ್ ಎಕ್ಸ್ ಕಂಪೆನಿಯ ಸ್ಟಾರ್ ಶಿಪ್ ರಾಕೆಟ್ ಒಂದು ಮರುಬಳಕೆಯ ರಾಕೆಟ್. ಇದರಲ್ಲಿ ಎರಡು ಹಂತಗಳು ಇರುತ್ತವೆ “ಸೂಪರ್ ಹೆವಿ” ಎಂದು ಕರೆಯಲ್ಪಡುವ ಮೊದಲ ಹಂತವು ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ತಳ್ಳಲು ಮತ್ತು ನಂತರ ಮರುಬಳಕೆಗಾಗಿ ಭೂಮಿಗೆ ಮರಳಲು ವಿನ್ಯಾಸಗೊಳಿಸಲಾದ ಬೃಹತ್ ಆದ ಮರುಬಳಕೆ ಮಾಡಬಹುದಾದ ರಾಕೆಟ್ ಹಂತವಾಗಿದೆ. ಸ್ಟಾರ್ ಶಿಪ್ ರಾಕೆಟ್ ಅನ್ನು ಮೊದಲ ಬಾರಿಗೆ ಏಪ್ರಿಲ್ 20, 2023 ರಂದು ಪರೀಕ್ಷಿಸಲಾಯಿತು. ಬಳಿಕ ವಿವಿಧ ಬಾರಿ ಇದರ ಉಡಾವಣೆ ಮತ್ತು ಭೂಮಿಗೆ ಇಳಿಸುವ ಪರೀಕ್ಷೆಗಳು ನಡೆಯುತ್ತಲೇ ಇವೆ.
ಈ ಸಾಕ್ಷ್ಯಗಳ ಪ್ರಕಾರ, ಸುನೀತಾ ವಿಲಿಯಮ್ಸ್ ತಂಡ ಭೂಮಿಗೆ ಬಂದ ಕ್ಷಣ ಎಂದು ಹೇಳಲಾದ ವೀಡಿಯೋ ತಪ್ಪಾಗಿದ್ದು, ಅದುಸ್ಪೇಸ್ಎಕ್ಸ್ ಸ್ಟಾರ್ ಶಿಪ್ ಇಳಿಯುವ ವೀಡಿಯೋ ಆಗಿದೆ ಎಂದು ಗೊತ್ತಾಗಿದೆ.
Also Read: ಚಾಂಪಿಯನ್ಸ್ ಟ್ರೋಫಿ ವೇಳೆ ರಂಜಾನ್ ಉಪವಾಸ ಮುರಿದಿದ್ದಕ್ಕಾಗಿ ವೇಗಿ ಮೊಹಮ್ಮದ್ ಶಮಿ ಕ್ಷಮೆ ಕೇಳಿದ್ರಾ?
Our Sources
X post By Oli London, Dated: October 13, 2024
Report By Aljazeera, Dated: October 13, 2024
Report By The Guardian, Dated: October 13, 2024
Pankaj Menon
August 29, 2023
Ishwarachandra B G
August 31, 2023
Vasudha Beri
July 19, 2023