ಬಲೂಚಿಸ್ತಾನ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ಪ್ರಯಾಣಿಕ ರೈಲು ಹೈಜಾಕ್ ಮಾಡಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ (ಬಿಎಲ್‌ಎ) ಇದೀಗ ನೇರವಾಗಿ ಚೀನಾ ಮತ್ತು ಪಾಕಿಸ್ತಾನ ಸೇನೆಗೆ ಖಡಕ್ ಎಚ್ಚರಿಕೆ ನೀಡಿದೆ ಎಂದು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಮಂಗಳವಾರ (ಮಾರ್ಚ್ 11 ರಂದು) ಪಾಕಿಸ್ತಾನದ ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿದ್ದಾಗ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಸದಸ್ಯರು ಜಾಫರ್ ಎಕ್ಸ್‌ಪ್ರೆಸ್ ಅನ್ನು ಅಪಹರಿಸಿದರು. ಆ ರೈಲು ಅಪಹರಣದ ನಂತರ ಗುಂಪೊಂದು ನೀಡಿದ ಹೇಳಿಕೆಯನ್ನು ತೋರಿಸುವ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ಕನ್ನಡಪ್ರಭ.ಕಾಮ್ ಮಾರ್ಚ್ 12, 2025ರಂದು ಪ್ರಕಟಿಸಿದ ವರದಿಯಲ್ಲಿ, “ಬಲೂಚಿಸ್ತಾನ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ಪ್ರಯಾಣಿಕ ರೈಲು ಹೈಜಾಕ್ ಮಾಡಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ (ಬಿಎಲ್‌ಎ) ಇದೀಗ ನೇರವಾಗಿ ಚೀನಾ ಮತ್ತು ಪಾಕಿಸ್ತಾನ ಸೇನೆಗೆ ಖಡಕ್ ಎಚ್ಚರಿಕೆ ನೀಡಿದೆ.” ಎಂದಿದೆ. ಇದೇ ವರದಿಯಲ್ಲಿ, “ಪಾಕಿಸ್ತಾನ ಮತ್ತು ಚೀನಾ ಸೇನೆ ಕಾರ್ಯಾಚರಣೆ ಕುರಿತು ಮಾತನಾಡಿರುವ ಬಿಎಲ್ಎದ ಮಜೀದ್ ಬ್ರಿಗೇಡ್ (Majeed Brigade) ಮುಖ್ಯಸ್ಥ, ‘ಬದುಕುವ ಆಸೆ ಇದ್ದರೆ ಬಲೂಚಿಸ್ತಾನದಿಂದ ಹಿಂದೆ ಸರಿಯಿರಿ’ ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಬಿಎಲ್ಎ ಸೈನಿಕರ ಮೇಲೆ ದಾಳಿ ಮಾಡಿದರೆ ಇಡೀ ರೈಲನ್ನು ಸ್ಫೋಟಿಸುತ್ತೇವೆ. ಅಲ್ಲದೆ ರೈಲಿನಲ್ಲಿರುವವರನ್ನು ಗುಂಡಿಕ್ಕಿ ಕೊಂದು ಹಾಕುತ್ತೇವೆ ಪಾಕಿಸ್ತಾನಿ ವಾಯುಪಡೆಗೆ ಎಚ್ಚರಿಕೆ ನೀಡಿದ್ದಾರೆ” ಎಂದಿದೆ.

ವರದಿಯ ಆರ್ಕೈವ್ ಆವೃತ್ತಿ ಇಲ್ಲಿದೆ
ಇದೇ ರೀತಿಯ ಪೋಸ್ಟ್ ಇಲ್ಲಿ ನೋಡಿದ್ದೇವೆ.

ವೀಡಿಯೋದಲ್ಲಿ, ಬಿಎಲ್‌ಎ ನಾಯಕನೊಬ್ಬ ಈ ದಾಳಿ “ಚೀನಾ ಮತ್ತು ಪಾಕಿಸ್ತಾನಕ್ಕೆ ಬಲೂಚಿಸ್ತಾನದಿಂದ ತಕ್ಷಣವೇ ಹಿಂದೆ ಸರಿಯುವಂತೆ ಸ್ಪಷ್ಟ ಸಂದೇಶ” ಎಂದು ಹೇಳಿದ್ದಾನೆ. “ಸಿಪಿಇಸಿ (ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್) ಬಲೂಚಿಸ್ತಾನದ ನೆಲದಲ್ಲಿ ಶೋಚನೀಯವಾಗಿ ವಿಫಲಗೊಳ್ಳಲಿದೆ” ಎಂದೂ ಹೇಳಿದ್ದಾನೆ. ಚೀನಾದ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು “ಬಲೂಚಿಸ್ತಾನವನ್ನು ತೊರೆಯುವಂತೆ ಅಥವಾ ಪ್ರತೀಕಾರಕ್ಕೆ ಎದೆಯೊಡ್ಡುವಂತೆ” ಹೇಳುತ್ತಿದ್ದಾನೆ.
Also Read: ಚಾಂಪಿಯನ್ಸ್ ಟ್ರೋಫಿ ವೇಳೆ ರಂಜಾನ್ ಉಪವಾಸ ಮುರಿದಿದ್ದಕ್ಕಾಗಿ ವೇಗಿ ಮೊಹಮ್ಮದ್ ಶಮಿ ಕ್ಷಮೆ ಕೇಳಿದ್ರಾ?
Fact Check/Verification
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ಲೆನ್ಸ ಮೂಲಕ ಹುಡುಕಾಟ ನಡೆಸಿದ್ದೇವೆ. ಈ ವೇಳೆ ಮೇ 20, 2019 ರಂದು @SHussainShokat ಅವರು ಮಾಡಿದ ಎಕ್ಸ್ ಪೋಸ್ಟ್ ಲಭ್ಯವಾಗಿದೆ. ಇದು ವೈರಲ್ ಕ್ಲಿಪ್ ರೀತಿಯದ್ದೇ ಆದ ಬಿಎಲ್ ಎ ಸದಸ್ಯರ ವೀಡಿಯೋ ಒಳಗೊಂಡಿತ್ತು.

ನಾವು ವೀಡಿಯೋ ಸ್ಕ್ಯಾನ್ ಮಾಡಿದಾಗ, ಅದು ಇತ್ತೀಚಿನ ಪಾಕಿಸ್ತಾನ ರೈಲು ಅಪಹರಣದ ನಂತರ ಬಿಎಲ್‌ಎ ಸಂದೇಶವನ್ನು ತೋರಿಸುವುದಾಗಿ ಹೇಳುವ ವೈರಲ್ ದೃಶ್ಯಗಳ ದೀರ್ಘ ಆವೃತ್ತಿಯಾಗಿದೆ ಎಂದು ಕಂಡುಬಂದಿದೆ. ಕ್ಲಿಪ್‌ನ ದೀರ್ಘ ಆವೃತ್ತಿಯ ಆರಂಭಿಕ ಕೆಲವು ಫ್ರೇಮ್‌ಗಳಲ್ಲಿ, ಬಿಎಲ್‌ಎ ನಾಯಕ, “ನಮ್ಮ ಆತ್ಮಹತ್ಯಾ ತಂಡ ಮಜೀದ್ ಬ್ರಿಗೇಡ್ ಗ್ವಾದರ್‌ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್ ಮೇಲೆ ದಾಳಿ ಮಾಡಿ ಪಾಕಿಸ್ತಾನ ಮತ್ತು ಚೀನಾ ಎರಡಕ್ಕೂ ಭಾರೀ ನಷ್ಟವನ್ನುಂಟುಮಾಡಿತು…” ಎಂದು ಹೇಳುತ್ತಾನೆ.
ವೀಡಿಯೋದ ದೀರ್ಘ ಆವೃತ್ತಿಯಲ್ಲಿ ಆತ ಪರ್ಲ್ ಕಾಂಟಿನೆಂಟಲ್ ಹೋಟೆಲ್ ಮೇಲಿನ ದಾಳಿಯನ್ನು ಸುಮಾರು 45 ಸೆಕೆಂಡುಗಳ ಕಾಲ ಉಲ್ಲೇಖಿಸಿದ್ದಾನೆ. ಆದರೆ, ವೈರಲ್ ಕ್ಲಿಪ್‌ಗಾಗಿ ಅದನ್ನು ಎಡಿಟ್ ಮಾಡಲಾಗಿದೆ ಎಂದು ಗೊತ್ತಾಗಿದೆ.
ಅದೇ ವೀಡಿಯೋವನ್ನು ಹೊಂದಿರುವ ಮೇ 19, 2019 ರ ಫೇಸ್‌ಬುಕ್ ಪೋಸ್ಟ್ ನ್ನು ಕೂಡ ನಾವು ನೋಡಿದ್ದೇವೆ.
ವೈರಲ್ ಕ್ಲಿಪ್‌ನ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಂತೆ, ಮೇ 19, 2019 ರ ದಿ ಬಲೂಚಿಸ್ತಾನ್ ಪೋಸ್ಟ್‌ನ ವರದಿಯಲ್ಲಿ, “… ಬಲೂಚ್ ಲಿಬರೇಶನ್ ಆರ್ಮಿಯ ಮಜೀದ್ ಬ್ರಿಗೇಡ್‌ನ ನಾಲ್ವರು ಸದಸ್ಯರು ಗ್ವಾದರ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ನುಗ್ಗಿ 26 ಗಂಟೆಗಳ ಕಾಲ ಪಾಕಿಸ್ತಾನಿ ಕಮಾಂಡೋಗಳೊಂದಿಗೆ ಹೋರಾಡಿದ ಕೆಲವೇ ದಿನಗಳಲ್ಲಿ ಈ ವೀಡಿಯೊ ಬಿಡುಗಡೆಯಾಗಿದೆ. ಮೇ 11 ರಂದು ಗ್ವಾದರ್‌ನಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಮಾರಕ ದಾಳಿಯು ಬೀಜಿಂಗ್‌ನ ಆಯಕಟ್ಟಿನ ಆಳ ಸಮುದ್ರ ಬಂದರು ಸೇರಿದಂತೆ ಪಾಕಿಸ್ತಾನದಲ್ಲಿ ಪ್ರಮುಖ ಅಭಿವೃದ್ಧಿ ಅಭಿಯಾನದ ಮೇಲೆ ಭದ್ರತೆಯ ಕುರಿತು ತೀವ್ರ ಕಳವಳ ಕಾರಿಯಾಗಿದೆ.” ಎಂದಿದೆ.

Conclusion
ಆದ್ದರಿಂದ, ಸತ್ಯಶೋಧನೆಯ ಪ್ರಕಾರ, ಇತ್ತೀಚಿನ ಜಾಫರ್ ಎಕ್ಸ್‌ಪ್ರೆಸ್ ಅಪಹರಣದ ನಂತರ ಬಿಎಲ್‌ಎ ಸಂದೇಶವನ್ನು ತೋರಿಸುವುದಾಗಿ ಹೇಳಿಕೊಳ್ಳುವ ವೈರಲ್ ವೀಡಿಯೋ ಹಳೆಯದು ಎಂದು ಕಂಡುಬಂದಿದೆ.
Also Read: ಭಜನೆಯಿಂದ ಅಪೌಷ್ಠಿಕತೆ ಕಡಿಮೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆಯೇ?
Our Sources
X Post By @SHussainShokat, Dated May 20, 2019
Report By The Balochistan Post , Dated May 19, 2019
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)