Authors
Claim
ವೇದಮಂತ್ರ ಘೋಷದೊಂದಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದ್ದಾರೆ
Fact
ವೈರಲ್ ವೀಡಿಯೋ, ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕಾರದ್ದಲ್ಲ. ಅವರು ಮೊದದಲ ಬಾರಿಗೆ ಸಿಎಂ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿದ ವೇಳೆ ಪುರೋಹಿತರು ಮಂತ್ರ ಹೇಳಿದ ಕ್ಷಣವಾಗಿದೆ
ತೆಲಂಗಾಣದ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರಮಾಣ ಸ್ವೀಕಾರದ ಕಾರ್ಯಕ್ರಮ ಎಂದು ಪುರೋಹಿತರು ಮಂತ್ರ ಹೇಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಕ್ಲೇಮಿನಲ್ಲಿ, ಆರೆಸ್ಸೆಸ್ ಮತ್ತು ಎಬಿವಿಪಿ ಹಿನ್ನೆಲೆ ಹೊಂದಿರುವ ತೆಲಂಗಾಣದ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರಮಾಣ ಸ್ವೀಕಾರದ ಕಾರ್ಯಕ್ರಮ” ಎಂದು ಬರೆಯಲಾಗಿದೆ.
Also Read: ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್ ಬೋಧನೆ ಕಡ್ಡಾಯಗೊಳಿಸಿದೆಯೇ, ಸತ್ಯ ಏನು?
ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವಲ್ಲ ಬದಲಾಗಿ ನೂತನ ಸಿಎಂ ಅವರು ಕಚೇರಿಗೆ ಬಂದಾಗಿನ ವೀಡಿಯೋ ಎಂದು ತಿಳಿದುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ನಮಗೆ ಫಲಿತಾಂಶಗಳು ಲಭ್ಯವಾಗಿವೆ.
ಡಿಸೆಂಬರ್ 8, 2023ರ ಡೆಕ್ಕನ್ ಕ್ರಾನಿಕಲ್ ವರದಿಯಲ್ಲಿ “ಸೆಕ್ರಟರಿಯೇಟ್ ನಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಮೊದಲ ದಿನ” ಎಂದಿದೆ. ಈ ವರದಿಯಲ್ಲಿ ನೀಡಲಾದ ಫೋಟೋದಲ್ಲಿ ರೇವಂತ್ ರೆಡ್ಡಿ ಅವರ ಅಧಿಕಾರ ಶುರುವಾಗುವ ವೇಳೆಯಲ್ಲಿ ಪುರೋಹಿತರು ವೇದ ಮಂತ್ರ ಘೋಷ ನಡೆಸಿದರು, ಬಳಿಕ ಅವರು ಆರು ಗ್ಯಾರೆಂಟಿ ಸ್ಕೀಂಗಳ ಕಡತಗಳಿಗೆ ಸಹಿ ಹಾಕಿದರು” ಎಂದಿದೆ.
Also Read: ಚೆನ್ನೈ ಪ್ರವಾಹದ ವೇಳೆ ಕುಸಿದು ಬಿದ್ದ ಮನೆ ಎಂದು ಕೇರಳದ ಹಳೆ ವೀಡಿಯೋ ವೈರಲ್
ಡಿಸೆಂಬರ್ 8, 2023ರ ಎನ್‌ಡಿಟಿವಿ ಯೂ ಟ್ಯೂಬ್ ವೀಡಿಯೋದಲ್ಲಿ “ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೈದ್ರಾಬಾದ್ ಸೆಕ್ರೆಟರಿಯೇಟ್ ಗೆ ಆಗಮಿಸಿದರು” ಎಂಬ ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೋದಲ್ಲಿ ಪುರೋಹಿತರು ವೇದ ಮಂತ್ರಗಳನ್ನು ಹೇಳುವುದನ್ನು ಕಾಣಬಹುದು.
ಇನ್ನು ನಾವು ಎಕ್ಸ್ ನಲ್ಲೂ ಶೋಧ ನಡೆಸಿದ್ದು, ರೇವಂತ್ ರೆಡ್ಡಿಯವರು ಸ್ವತಃ ತಮ್ಮ ಖಾತೆಯಲ್ಲಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವ ವೀಡಿಯೋವನ್ನು ಶೇರ್ ಮಾಡಿದ್ದಾರೆ. “ಆಶೀರ್ವಾದಗಳು ಮತ್ತು ಅಭಿನಂದನೆಗಳೊಂದಿಗೆ ಮೊದಲ ದಿನದ ಆಡಳಿತ ಶುರುವಾಯಿತು” ಎಂದು ಬರೆದುಕೊಂಡಿದ್ದಾರೆ. ಈ ಕುರಿತ ಪೋಸ್ಟ್ ಇಲ್ಲಿದೆ.
ಈ ಕುರಿತಂತೆ ಇನ್ನೂ ಹೆಚ್ಚಿನ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ರೇವಂತ್ ರೆಡ್ಡಿಯವರ ಪ್ರಮಾಣ ವಚನ ಕಾರ್ಯಕ್ರಮ ಹೈದ್ರಾಬಾದ್‌ನ ಲಾಲ್ ಬಹಾದ್ದೂರ್ ಸ್ಟೇಡಿಯಂನಲ್ಲಿ ಡಿಸೆಂಬರ್ 7, 2023ರಂದು ನಡೆದಿದ್ದು, ರಾಜ್ಯಪಾಲರಾದ ತಮಿಳಿಸೈ ಸುಂದರರಾಜನ್ ಪ್ರಮಾಣವಚನ ಬೋಧಿಸಿದ್ದರು. ಈ ಕುರಿತ ವರದಿಗಳು ಇಲ್ಲಿ, ಇಲ್ಲಿ ಇವೆ.
Also Read: 8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್ ಎಂಬ ಹೇಳಿಕೆ ಸುಳ್ಳು!
Conclusion
ಈ ಸತ್ಯಶೋಧನೆಯ ಪ್ರಕಾರ, ಇದು ಪ್ರಮಾಣವಚನ ಸ್ವೀಕಾರದ ಕುರಿತ ವೀಡಿಯೋವಲ್ಲ,ಬದಲಾಗಿ ಸಿಎಂ ರೇವಂತ್ ಅವರು ಮೊದಲ ಬಾರಿಗೆ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಪುರೋಹಿತರು ವೇದಮಂತ್ರಗಳೊಂದಿಗೆ ಆಶೀರ್ವದಿಸಿದ ಕ್ಷಣವಾಗಿದೆ.
Result: False
Our Sources
Report By Deccan Cornicle, Dated: December 8, 2023
YouTube Video By NDTV, Dated: December 8, 2023
X post By Revanth Reddy, Dated: December 8, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.