Authors
Claim
ಕಾಡ್ಗಿಚ್ಚಿಗೆ ಅಮೆರಿಕದ ಲಾಸ್ ಏಂಜಲೀಸ್ ನಗರ ಸಂಪೂರ್ಣ ಸುಟ್ಟು ಕರಕಲಾಗಿದೆ
Fact
ಲಾಸ್ ಏಂಜಲೀಸ್ ನಗರ ಸಂಪೂರ್ಣ ಸುಟ್ಟು ಕರಕಲಾಗಿದೆ ಎನ್ನುವುದು ನಿಜವಲ್ಲ. ಲಾಸ್ ಏಂಜಲೀಸ್ ಹೊರವಲಯದಲ್ಲಿ ಕಾಡ್ಗಿಚ್ಚು ಹರಡಿರುವುದು ಕಂಡುಬಂದಿದೆ
ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚಿನ ಪರಿಣಾಮ ಅಪಾರ ಹಾನಿಯಾಗಿರುವಂತೆಯೇ, ಲಾಸ್ ಏಂಜಲೀಸ್ ನಗರ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂಬಂತೆ ಹೇಳಿಕೆಯೊಂದು ಹರಿದಾಡುತ್ತಿದೆ.
ಫೇಸ್‌ಬುಕ್ ನಲ್ಲಿ ಈ ಹೇಳಿಕೆ ಕಂಡುಬಂದಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇದು ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಆರಂಭದಲ್ಲಿ ವೈರಲ್ ಪೋಸ್ಟ್ ನೊಂದಿಗೆ ನೀಡಲಾದ ಫೊಟೋದ ಬಗ್ಗೆ ಪರಿಶೀಲಿಸಿದ್ದೇವೆ. ಕಾಡ್ಗಿಚ್ಚಿನ ಮೊದಲು, ನಂತರ ಎಂದು ಹೇಳುವುದಕ್ಕೆ ಬಳಸಲಾದ ಈ ಫೋಟೋಗಳನ್ನು ವಿವಿಧ ಮಾಧ್ಯಮಗಳು ಪ್ರಕಟಿಸಿರುವುದನ್ನು ನೋಡಿದ್ದೇವೆ.
ಆ ಬಳಿಕ ಕಾಡ್ಗಿಚ್ಚಿನಿಂದಾಗಿ ಇಡೀ ಲಾಸ್ ಏಂಜಲೀಸ್ ನಗರ ನಿರ್ನಾಮವಾಗಿದೆಯೇ ಎಂದು ಹುಡುಕಲು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಲಭ್ಯವಾಗಿದೆ. ಈ ವರದಿಗಳು ಲಾಸ್ ಏಂಜಲೀಸ್‌ನ ಹೊರವಲಯದಲ್ಲಿ ಕಾಡ್ಗಿಚ್ಚಿನಿಂದಾಗಿ ಹಾನಿಯಾಗಿರುವುದನ್ನು ಹೇಳಿವೆ.
Also Read: 3000 ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?
ಜನವರಿ 13, 2025ರ ರಾಯ್ಟರ್ಸ್ ವರದಿಯ ಪ್ರಕಾರ, “ಪಟ್ಟಣದ ಪಶ್ಚಿಮ ಭಾಗದಲ್ಲಿ ಸಂಭವಿಸಿದ ಬೆಂಕಿ 23,713 ಎಕರೆ (96 ಚದರ ಕಿ.ಮೀ) ಅಥವಾ 37 ಚದರ ಮೈಲುಗಳಷ್ಟು ಪ್ರದೇಶವನ್ನು ಸುಟ್ಟುಹಾಕಿದೆ ಮತ್ತು 11% ರಷ್ಟು ಮಾತ್ರ ಆವರಿಸಿದೆ, ಇದು ಅಗ್ನಿಶಾಮಕ ದಳದವರು ನಿಯಂತ್ರಣದಲ್ಲಿರುವ ಬೆಂಕಿಯ ಪರಿಧಿಯ ಶೇಕಡಾವಾರು ಪ್ರಮಾಣವನ್ನು ಪ್ರತಿನಿಧಿಸುತ್ತದೆ. ಇನ್ನು, ಲಾಸ್ ಏಂಜಲೀಸ್‌ನ ಪೂರ್ವದ ತಪ್ಪಲಿನಲ್ಲಿರುವ ಈಟನ್ ಪ್ರದೇಶದ ಬೆಂಕಿ ಮತ್ತೊಂದು 14,117 ಎಕರೆ (57 ಚದರ ಕಿ.ಮೀ) ಅಥವಾ 22 ಚದರ ಮೈಲುಗಳಷ್ಟನ್ನು ಸುಟ್ಟಿದೆ. ಇದು ಮ್ಯಾನ್‌ಹ್ಯಾಟನ್‌ನ ಗಾತ್ರಕ್ಕೆ ಹತ್ತಿರದಲ್ಲಿದೆ ಮತ್ತು ಅಗ್ನಿಶಾಮಕ ದಳದವರ ನಿಯಂತ್ರಣ 27% ಕ್ಕೆ ಹೆಚ್ಚಿದೆ, ಒಂದು ದಿನದ ಹಿಂದೆ ನಿಯಂತ್ರಣ ಪ್ರಮಾಣ 15% ಕ್ಕಿಂತ ಇದು ಹೆಚ್ಚಾಗಿದೆ.” ಎಂದಿದೆ.
ಜನವರಿ 13, 2025ರ ಬಿಬಿಸಿ ವರದಿ, ಲಾಸ್ ಏಂಜಲೀಸ್ ಕಾಡ್ಗಿಚ್ಚಿನ ವಿನಾಶದ ಪ್ರಮಾಣವನ್ನು ನಕ್ಷೆಗಳು ಮತ್ತು ಚಿತ್ರಗಳ ಮೂಲಕ ಬಹಿರಂಗಪಡಿಸಿದೆ. ಈ ವರದಿಯಲ್ಲಿ “ಲಾಸ್ ಏಂಜಲೀಸ್‌ನಲ್ಲಿ ಕನಿಷ್ಠ 16 ಜನರನ್ನು ಬಲಿತೆಗೆದುಕೊಂಡ, ಸಾವಿರಾರು ಕಟ್ಟಡಗಳನ್ನು ನುಂಗಿಹಾಕಿದ ಮತ್ತು ಹತ್ತಾರು ಸಾವಿರ ಜನರನ್ನು ತಮ್ಮ ಮನೆಗಳಿಂದ ಪಲಾಯನ ಮಾಡುವಂತೆ ಮಾಡಿದ ಬೃಹತ್ ಕಾಡ್ಗಿಚ್ಚುಗಳನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಹೋರಾಡುತ್ತಿದ್ದಾರೆ. ಇದು ವೇಗವಾಗಿ ಬದಲಾಗುತ್ತಿರುವ ಪರಿಸ್ಥಿತಿ – ಈ ನಕ್ಷೆಗಳು ಮತ್ತು ಚಿತ್ರಗಳು ಸವಾಲಿನ ಪ್ರಮಾಣ, ಬೆಂಕಿ ಎಲ್ಲಿದೆ ಮತ್ತು ಅವು ಉಂಟುಮಾಡಿದ ಹಾನಿಯನ್ನು ತೋರಿಸುತ್ತವೆ. ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದಲ್ಲಿ ಸಂಭವಿಸಿದ ಅತಿದೊಡ್ಡ ಬೆಂಕಿಯು ಲಾಸ್ ಏಂಜಲೀಸ್ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಬೆಂಕಿಯಾಗಿದೆ. ಇದರಿಂದ 23,000 ಎಕರೆಗಳಿಗೂ ಹೆಚ್ಚು ಈಗ ಸುಟ್ಟುಹೋಗಿದೆ. ನ್ಯೂಯಾರ್ಕ್ ಮತ್ತು ಲಂಡನ್‌ನ ನಕ್ಷೆಗಳಲ್ಲಿ ಕಾಡ್ಗಿಚ್ಚು ಪೀಡಿತ ಪ್ರದೇಶವನ್ನು ಇರಿಸುವುದರಿಂದ ಅದು ಎಷ್ಟು ದೊಡ್ಡದಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಯುಕೆ ರಾಜಧಾನಿಯ ಕ್ಲಾಫಮ್‌ನಿಂದ ಗ್ರೀನ್‌ವಿಚ್‌ವರೆಗೆ ಅಥವಾ ಕೆಳ ಮ್ಯಾನ್‌ಹ್ಯಾಟನ್ ಮತ್ತು ಕ್ವೀನ್ಸ್‌ನ ದೊಡ್ಡ ಪ್ರದೇಶಗಳಲ್ಲಿ ವ್ಯಾಪಿಸಿದೆ. ಆದರೆ ಇತರ ಆರು ಬೆಂಕಿಯನ್ನು ನಿಯಂತ್ರಿಸಲಾಗಿದೆ.
ಕೆನ್ನೆತ್ ಬೆಂಕಿ: ಪಾಲಿಸೇಡ್ಸ್‌ನ ಉತ್ತರಕ್ಕೆ, ವೆಸ್ಟ್ ಹಿಲ್ಸ್ ಪ್ರದೇಶದಲ್ಲಿ. ಗುರುವಾರದಿಂದ 1,052 ಎಕರೆಗಳಷ್ಟು ಸುಟ್ಟುಹೋದ ನಂತರ ಭಾನುವಾರ ಮಧ್ಯಾಹ್ನ ಅದನ್ನು ನಿಯಂತ್ರಿಸಲಾಗಿದೆ.
ಲಿಡಿಯಾ ಬೆಂಕಿ: ಲಾಸ್ ಏಂಜಲೀಸ್‌ನ ಉತ್ತರದ ಬೆಟ್ಟಗಳಲ್ಲಿ ವರದಿಯಾಗಿದೆ. ಸುಟ್ಟ ಪ್ರದೇಶ: 395 ಎಕರೆ.
ಆರ್ಚರ್ ಬೆಂಕಿ: ಶುಕ್ರವಾರ ಪ್ರಾರಂಭವಾದ ಸಣ್ಣ ಬೆಂಕಿ ಮತ್ತು 19 ಎಕರೆಗಳಷ್ಟು ಸುಟ್ಟುಹೋಗಿದೆ.
ವುಡ್ಲಿ ಬೆಂಕಿ: ಸ್ಥಳೀಯ ಉದ್ಯಾನವನದಲ್ಲಿ ಸಣ್ಣ ಬೆಂಕಿ ವರದಿಯಾಗಿದೆ. ಸುಟ್ಟ ಪ್ರದೇಶ: 30 ಎಕರೆ.
ಒಲಿವಾಸ್ ಬೆಂಕಿ: ಲಾಸ್ ಏಂಜಲೀಸ್‌ನ ಪೂರ್ವಕ್ಕೆ ಸುಮಾರು 50 ಮೈಲುಗಳು (80 ಕಿಮೀ) ದೂರದಲ್ಲಿರುವ ವೆಂಚುರಾ ಕೌಂಟಿಯಲ್ಲಿ ಮೊದಲು ಸಣ್ಣ ಬೆಂಕಿ ವರದಿಯಾಗಿದೆ. ಸುಟ್ಟ ಪ್ರದೇಶ: 11 ಎಕರೆ” ಎಂದಿದೆ.
ಹೆಚ್ಚಿನ ಮಾಹಿತಿಗಾಗಿ ನಾವು ಇನ್ನಷ್ಟು ಹುಡುಕಾಟವನ್ನು ನಡೆಸಿದ್ದೇವೆ.
ಜನವರಿ 11, 2025ರ ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, “ಲಾಸ್ ಏಂಜಲೀಸ್‌ನ ಶ್ರೀಮಂತ ಪೆಸಿಫಿಕ್ ಪಾಲಿಸೇಡ್ಸ್ ನೆರೆಹೊರೆಯಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ಭುಗಿಲೆದ್ದಾಗಿನಿಂದ 22,000 ಎಕರೆಗಳಿಗೂ ಹೆಚ್ಚು ಪ್ರದೇಶವನ್ನು ಸುಟ್ಟುಹಾಕಿದ್ದು, ಪಾಲಿಸೇಡ್ಸ್ ಬೆಂಕಿ, ಪ್ರಸ್ತುತ ಈ ಪ್ರದೇಶದ ಅತಿದೊಡ್ಡ ಕಾಡ್ಗಿಚ್ಚಾಗಿದೆ. ಅಗ್ನಿಶಾಮಕ ದಳದವರು ಈಟನ್ ಬೆಂಕಿಯನ್ನು ನಿಯಂತ್ರಿಸಲು ಸಹ ಹೋರಾಡುತ್ತಿದ್ದಾರೆ, ಇದು ಪಾಲಿಸೇಡ್ಸ್ ಬೆಂಕಿಯ ಗಾತ್ರವನ್ನು ಅನುಸರಿಸುತ್ತದ್ದು ಮತ್ತು ಉತ್ತರ ಲಾಸ್ ಏಂಜಲೀಸ್ ಕೌಂಟಿಯಲ್ಲಿ 14,100 ಎಕರೆಗಳಿಗಿಂತ ಹೆಚ್ಚು ಪ್ರದೇಶವನ್ನು ಆವರಿಸಿದೆ.” ಎಂದಿದೆ.
ಜನವರಿ 12, 2025ರ ದಿ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಕ್ಯಾಲಿಫೋರ್ನಿಯಾದ ಮೂರು ಪ್ರಮುಖ ಬೆಂಕಿ ಅವಘಡದ ಬಗ್ಗೆ ಹೇಳಿದ್ದು ಪಾಲಿಸೇಡ್ಸ್ ನಲ್ಲಿ 23,193 ಎಕರೆ, ಈಟನ್ ನಲ್ಲಿ 23,279 ಎಕರೆ, ಹರ್ಟ್ಸ್ ನಲ್ಲಿ 165 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎಂದಿದೆ.
ಜನವರಿ 12, 2025ರಂದು ಲಾಸ್ ಏಂಜಲೀಸ್ ಅಗ್ನಿಶಾಮಕ ದಳ ಪ್ರಕಟಿಸಿದ ಸುದ್ದಿಯಲ್ಲಿ, ಪಾಲಿಸೇಡ್ಸ್ ಭಾಗದಲ್ಲಿ 23,654 ಎಕರೆ ಪ್ರದೇಶದಲ್ಲಿ ಬೆಂಕಿ ಆವರಿಸಿದ್ದಾಗಿ ಹೇಳಿದೆ.
ಇದರೊಂದಿಗೆ ನಾಸಾ ನೀಡುತ್ತಿರುವ ಬೆಂಕಿ ಕುರಿತ ಅಪ್ಡೇಟ್ ಗಳನ್ನು ನಾವು ವೀಕ್ಷಿಸಿದ್ದೇವೆ. ಇದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಲಾಸ್ ಏಂಜಲೀಸ್ ನಗರಕ್ಕೆ ತಾಗಿದ ಪ್ರದೇಶಗಳಲ್ಲಿ ಹಬ್ಬಿದ ಬೆಂಕಿ ಬಗ್ಗೆ ತೋರಿಸಿದೆ.
ಗೂಗಲ್ ಮ್ಯಾಪ್ ನಲ್ಲಿಯೂ ಈ ಬಗ್ಗೆ ನಾವು ಪರಿಶೀಲಿಸಿದ್ದು, ಅಗ್ನಿ ಅನಾಹುತದ ಭಾಗಗಳನ್ನು ಇಲ್ಲಿ ನೋಡಬಹುದು.
Conclusion
ಈ ಸಾಕ್ಷ್ಯಾಧಾರಗಳ ಮೇಲೆ ಲಾಸ್ ಏಂಜಲೀಸ್ ನಗರ ಸಂಪೂರ್ಣ ಸುಟ್ಟು ಕರಕಲಾಗಿದೆ ಎನ್ನುವುದು ಸುಳ್ಳಾಗಿದೆ. ಲಾಸ್ ಏಂಜಲೀಸ್ ಹೊರವಲಯದಲ್ಲಿ ಕಾಡ್ಗಿಚ್ಚು ಹರಡಿರುವುದು ಕಂಡುಬಂದಿದೆ.
Also Read: ತಿರುಪತಿ ಕಾಲ್ತುಳಿತದ ಸಂದರ್ಭ ಮಗುವಿನ ಶವವನ್ನು ಬೈಕಿನಲ್ಲಿ ಸಾಗಿಸಲಾಯಿತು ಎನ್ನುವುದು ಸುಳ್ಳು!
Result: False
Our Sources
Report By Reuters, Dated: January 13, 2025
Report By BBC, Dated: January 13, 2025
Report By CBS News, Dated: January 11, 2025
Report By The New York Times, Dated: January 12, 2025
Report By Los Angeles Fire Department, Dated: January 12, 2025
Google Map
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.