Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಮಹಾ ಕುಂಭಮೇಳಕ್ಕೆ ಸಂಬಂಧಿಸಿದಂತೆ ಈ ವಾರ ಹೇಳಿಕೆಗಳು ಹರಿದಾಡಿವೆ. ಮಹಾ ಕುಂಭಮೇಳದಲ್ಲಿ ಸಾಧುವೊಬ್ಬರಿಂದ ಬೆಂಕಿಯಲ್ಲಿ ಸ್ನಾನ, ಕುಂಭಮೇಳದಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ ಎಂಬಂತೆ ಹೇಳಿಕೆಗಳಿದ್ದವು. ಇದರೊಂದಿಗೆ ಕಾಡ್ಗಿಚ್ಚಿಗೆ ಇಡೀ ಲಾಸ್ ಏಂಜಲೀಸ್ ನಗರ ಸುಟ್ಟು ಕರಕಲಾಗಿದೆ, ನೆನೆಸಿದ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ಮಕ್ಕಳಲ್ಲಿ ಜ್ಞಾಪಕಶಕ್ತಿ ಹೆಚ್ಚುತ್ತದೆ ಎಂಬ ಹೇಳಿಕೆಗಳಿದ್ದವು. ಇವುಗಳ ಬಗ್ಗೆ ಸತ್ಯಶೋಧನೆ ನಡೆಸಿದಾಗ ಇವುಗಳು ಸತ್ಯವಲ್ಲ ಎಂದು ತಿಳಿದುಬಂದಿದೆ.
ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ಬೆಂಕಿಯಲ್ಲಿ ಸ್ನಾನ ಮಾಡುತ್ತಿರುವ ಸಾಧು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ-ವೀಡಿಯೋ ಒಂದು ಹರಿದಾಡಿದೆ. ಸತ್ಯಶೋಧನೆ ನಡೆಸಿದಾಗ ಈ ವೀಡಿಯೋ 2009ರ ಸಮಯದ್ದಾಗಿದ್ದು ತಮಿಳುನಾಡಿನ ತಂಜಾವೂರಿನ ರಾಮಭಾವು ಸ್ವಾಮೀಜಿ ಅವರಾಗಿದ್ದಾರೆ. ಇದು ಮಹಾ ಕುಂಭಮೇಳದ್ದಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ
ಮಹಾ ಕುಂಭಮೇಳದಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಸಾಕ್ಷ್ಯಾಧಾರಗಳ ಪ್ರಕಾರ, ಮಹಾಕುಂಭಮೇಳದಲ್ಲಿ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಎಂಬ ಹೇಳಿಕೆ ತಪ್ಪಾಗಿದೆ ಎಂದು ಕಂಡುಕೊಂಡಿದ್ದೇವೆ. 2019ರಲ್ಲಿ ಋಷಿಕೇಶಷ ಪರಮಾರ್ಥ ನಿಕೇತನದಲ್ಲಿ ನಡೆದ ಗಂಗಾರತಿ ಸಮಯದಲ್ಲಿ ತೇಜಸ್ವಿ ಅವರು ಮಾತನಾಡಿದ ವೀಡಿಯೋವನ್ನು ಈಗ ನಡೆಯುತ್ತಿರುವ ಪ್ರಯಾಗ್ ರಾಜ್ ಮಹಾಕುಂಭ ಮೇಳದ್ದೆಂದು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ
ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚಿನ ಪರಿಣಾಮ ಅಪಾರ ಹಾನಿಯಾಗಿರುವಂತೆಯೇ, ಲಾಸ್ ಏಂಜಲೀಸ್ ನಗರ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂಬಂತೆ ಹೇಳಿಕೆಯೊಂದು ಹರಿದಾಡುತ್ತಿದೆ. ಸತ್ಯಶೋಧನೆ ನಡೆಸಿದಾಗ ಅಮೆರಿಕದ ಲಾಸ್ ಏಂಜಲೀಸ್ ಹೊರವಲಯದ ಎರಡು ಭಾಗದಲ್ಲಿ ವ್ಯಾಪಕವಾಗಿ ಬೆಂಕಿಯಿಂದ ಹಾನಿಯಾಗಿರುವುದು ತಿಳಿದುಬಂದಿದೆ. ಇಡೀ ನಗರ ಸುಟ್ಟು ಹೋಗಿದೆ ಎನ್ನವುದು ನಿಜವಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ನೆನೆಸಿದ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಆದರೆ ನೆನೆಸಿದ ಒಣ ದ್ರಾಕ್ಷಿ ಆರೋಗ್ಯಕರವೇ ಹೊರತು ಜ್ಞಾಪಕ ಶಕ್ತಿ ವೃದ್ಧಿಗೆ ಮಾಂತ್ರಿಕ ಪರಿಹಾರವಲ್ಲ. ಇದು ಉತ್ತಮ ಆಹಾರ ವಿಧಾನದಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Vasudha Beri
January 25, 2025
Ishwarachandra B G
January 13, 2025
Ishwarachandra B G
January 22, 2025