Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಶಿವಲಿಂಗ, ಸುದರ್ಶನ ಚಕ್ರ ಪತ್ತೆ
Fact
ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಸುದರ್ಶನ ಚಕ್ರ, ಶಿವಲಿಂಗ ಪತ್ತೆಯಾಗಿದೆ ಎಂಬಂತೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆಗಳು ಸುಳ್ಳು. ಕರ್ನಾಟಕದಲ್ಲಿ ರಾಯಚೂರಿನಲ್ಲಿ ದೊರಕಿದ ಪ್ರಾಚೀನ ಪ್ರತಿಮೆಗಳ ಫೊಟೋಗಳನ್ನು ಈಗ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ದೇಶಾದ್ಯಂತ ಸಂಭಾಲ್ ಮಸೀದಿ ಸರ್ವೆ ವಿವಾದ ತೀವ್ರ ಸ್ವರೂಪ ಪಡೆದಿರುವಂತೆ, ಅಲ್ಲ ಸರ್ವೆ ನಡೆದಾಗ ಹಿಂದೂ ದೇಗುಲಗಳಲ್ಲಿರುವ ಮೂರ್ತಿಗಳು ಪತ್ತೆಯಾಗಿವೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಸುದರ್ಶನ ಚಕ್ರ, ಶಿವಲಿಂಗ, ಹಿಂದೂ ಚಿಹ್ನೆಗಳು ಪತ್ತೆಯಾಗಿವೆ, ಕೆಲವು ಪೋಸ್ಟ್ ಗಳಲ್ಲಿ ವಿಷ್ಣು ಪ್ರತಿಮೆ, ಸುದರ್ಶನ ಚಕ್ರದೊಂದಿಗೆ ಶಿವಲಿಂಗದ ಫೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.




ಈ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಈ ಹೇಳಿಕೆಗಳ ಸತ್ಯಾಸತ್ಯತೆಯನ್ನು ನ್ಯೂಸ್‌ಚೆಕರ್ ಪರಿಶೀಲಿಸಿದ್ದು, ಇದು ಸುಳ್ಳು ಎಂದು ಕಂಡುಕೊಂಡಿದೆ.
Also Read: ಮುಸ್ಲಿಮರು ಕಾಫಿರರನ್ನು ಕೊಲ್ಲಲು ಆಯುಧಗಳನ್ನು ಕಳ್ಳ ಮಾರ್ಗದಲ್ಲಿ ತರುತ್ತಿದ್ದಾರೆ ಎಂಬುದು ನಿಜವೇ?
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಪ್ರಾಚೀನ ವಿಷ್ಣು ಮೂರ್ತಿ ಮತ್ತು ಶಿವಲಿಂಗವು ಕೃಷ್ಣಾ ನದಿ ತೀರದಲ್ಲಿ ನದಿ ದಂಡೆ ಕೆಲಸದ ವೇಳೆ ಪತ್ತೆಯಾಗಿರುವುದಾಗಿ ಮಾಧ್ಯಮ ವರದಿಗಳನ್ನು ಕಂಡಿದ್ದೇವೆ.
ಫೆಬ್ರವರಿ 7, 2024ರ ಸೋ ಸೌತ್ ಯೂಟ್ಯೂಬ್ ವೀಡಿಯೋದ ವಿವರಣೆಯಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯ ಕೃಷ್ಣಾ ನದಿಯಲ್ಲಿ ಪುರಾತನವಾದ ವಿಷ್ಣುವಿನ ವಿಗ್ರಹ ಮತ್ತು ಶಿವಲಿಂಗ ಪತ್ತೆಯಾಗಿದೆ. ವಿಷ್ಣುವಿನ ವಿಗ್ರಹವು ವಿಷ್ಣುವಿನ “ದಶಾವತಾರ” ಕೆತ್ತನೆಗಳನ್ನು ಹೊಂದಿದೆ ಎಂದಿದೆ.
ಫೆಬ್ರವರಿ 7, 2024ರ ಇಂಡಿಯಾ ಟುಡೇ ವರದಿಯಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯ ಕೃಷ್ಣಾ ನದಿಯಿಂದ ಪುರಾತನವಾದ ವಿಷ್ಣುವಿನ ವಿಗ್ರಹ ಮತ್ತು ಶಿವಲಿಂಗ ಪತ್ತೆಯಾಗಿವೆ. ಜಿಲ್ಲೆಯ ದೇವಸೂಗೂರು ಗ್ರಾಮದ ಬಳಿ ನದಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಶತಮಾನಗಳಷ್ಟು ಹಳೆಯದಾದ ಹಿಂದೂ ದೇವರ ವಿಗ್ರಹಗಳು ಪತ್ತೆಯಾಗಿವೆ ಎಂದಿದೆ. ಇದೇ ವರದಿಯಲ್ಲಿ, ಪ್ರತ್ಯಕ್ಷದರ್ಶಿಗಳ ಪ್ರಕಾರ, ಪತ್ತೆಯಾದ ವಿಗ್ರಹಗಳಲ್ಲಿ ಶ್ರೀಕೃಷ್ಣನ ದಶಾವತಾರ ಮತ್ತು ಶಿವಲಿಂಗ ಸೇರಿವೆ. ಅಯೋಧ್ಯೆಯ ರಾಮಮಂದಿರದಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಲಾದ ರಾಮಲಲ್ಲಾ ವಿಗ್ರಹದ ಕೆತ್ತನೆ ಕೆಲಸದ ಮಾದರಿಯಲ್ಲಿ ಪತ್ತೆಯಾದ ವಿಗ್ರಹವೂ ಹೋಲಿಕೆಯನ್ನು ಹೊಂದಿದೆ ಎಂದು ಕೆಲವರು ಬಣ್ಣಿಸಿದ್ದಾರೆ. “ಈ ವಿಗ್ರಹವು ಹಲವಾರು ವಿಶಿಷ್ಟ ಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಅದರ ಸುತ್ತಲೂ ವಿಕಿರಣದ ಸೆಳವು ಹೊಂದಿರುವ ಪೀಠದ ಮೇಲೆ ರಚಿಸಲಾಗಿದೆ, ಈ ಶಿಲ್ಪವು ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ ಸೇರಿದಂತೆ ವಿಷ್ಣುವಿನ ದಶ ಅವತಾರಗಳನ್ನು ಪ್ರತಿನಿಧಿಸುತ್ತದೆ. ,” ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಉಪನ್ಯಾಸಕಿ ಡಾ ಪದ್ಮಜಾ ದೇಸಾಯಿ ಹೇಳಿದ್ದಾರೆ ಎಂದಿದೆ.

ಫೆಬ್ರವರಿ 6, 2024ರ ವಿಸ್ತಾರ ನ್ಯೂಸ್ ವರದಿಯಲ್ಲಿ ರಾಯಚೂರಿನ ಕೃಷ್ಣಾ ನದಿಯಲ್ಲಿ ಅಯೋಧ್ಯೆಯ ಬಾಲಕ ರಾಮನ ಮೂರ್ತಿಯನ್ನು ಹೋಲುವ ವಿಷ್ಣುವಿನ ವಿಗ್ರಹ ಸೇರಿದಂತೆ ಹಲವು ಪುರಾತನ ವಿಗ್ರಹಗಳು ಪತ್ತೆಯಾಗಿವೆ. ದಶಾವತಾರಗಳಿಂದ ಕೂಡಿದ ವಿಷ್ಣುವಿನ ವಿಗ್ರಹ ಮತ್ತು ಪುರಾತನ ಶಿವಲಿಂಗ ಪತ್ತೆಯಾಗಿವೆ. ಸೇತುವೆ ಕಾಮಗಾರಿ ವೇಳೆ ಪುರಾತನವಾದ ಈ ವಿಗ್ರಹಗಳು ಪತ್ತೆಯಾಗಿದ್ದು, 12-16ನೇ ಶತಮಾನದ ವಿಗ್ರಹಗಳಾಗಿರಬಹುದು ಎನ್ನಲಾಗಿದೆ. ವಿಷ್ಣುವಿನ ವಿಗ್ರಹ 11ನೇ ಶತಮಾನಕ್ಕೆ ಸೇರಿರುವ ಸಾಧ್ಯತೆ ಇದೆ. ನೀರಿಲ್ಲದೆ ನದಿ ಬತ್ತಿರುವುದರಿಂದ ನದಿಯ ಆಳದಲ್ಲಿ ಈ ವಿಗ್ರಹಗಳು ಕಂಡುಬಂದಿವೆ ಎಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಇದರೊಂದಿಗೆ ಮಾಧ್ಯಮಗಳಲ್ಲಿ ವಿಗ್ರಹ ಪತ್ತೆಯಾದ ಸುದ್ದಿಗಳೊಂದಿಗೆ ನೀಡಲಾದ ಫೊಟೋಗಳು, ಈಗ ಸಂಭಾಲ್ ಮಸೀದಿ ಸರ್ವೆ ವೇಳೆ ಪತ್ತೆಯಾಗಿದೆ ಎಂಬ ವೈರಲ್ ಹೇಳಿಕೆಗಳೊಂದಿಗೆ ಇರುವ ಫೊಟೋಗಳೊಂದಿಗೆ ಸಾಮ್ಯತೆ ಇರುವುದನ್ನು ನಾವು ಗುರುತಿಸಿದ್ದೇವೆ.


ಇದರೊಂದಿಗೆ ವೈರಲ್ ಆಗಿರುವ ಸುದರ್ಶನ ಚಕ್ರದ ಕುರಿತು ನಾವು ರಿವರ್ಸ್ ಇಮೇಜ್ ಸರ್ಚ್ ಮಾಡಿ ಪರಿಶೀಲನೆ ಮಾಡಿದ್ದೇವೆ. ಈ ವೇಳೆ ಇಂಡಿಯಾಮಾರ್ಟ್ ಆನ್ಲೈನ್ ತಾಣದಲ್ಲಿ ಈ ಸುದರ್ಶನ ಚಕ್ರ ಮಾರಾಟಕ್ಕಿದೆ ಎಂಬ ಪೋಸ್ಟ್ ಇರುವುದನ್ನು ಕಂಡಿದ್ದೇವೆ. ಈ ಸುದರ್ಶನ ಚಕ್ರದ ಫೊಟೋಕ್ಕೂ ವೈರಲ್ ಫೊಟೋಕ್ಕೂ ಅನೇಕ ಸಾಮ್ಯತೆ ಇರುವುದನ್ನು ಕಂಡುಕೊಂಡಿದ್ದೇವೆ.

ಸಂಭಾಲ್ ಮಸೀದಿ ಸರ್ವೆ ಮಂಡನೆಯಾಗಿದೆಯೇ?
ಕಳೆದ ಸೋಮವಾರ ಸಂಭಾಲ್ ಮಸೀದಿ ಕುರಿತ ಸರ್ವೆಯನ್ನು ಮಂಡಿಸಲಾಗುವುದು ಎಂದು ಸುದ್ದಿಯಾಗಿತ್ತು. ಆದರೆ ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷಾ ವರದಿಯ ಮಂಡನೆಗೆ ಕೋರ್ಟ್ ಮುಂಂದೆ 15 ದಿನಗಳ ಕಾಲಾವಕಾಶವನ್ನು ಕೇಳಲಾಗಿದೆ. ಅದರ ಸರ್ವೆ ನಡೆಸಿದ ಕಮಿಷನರ್ ಅವರ ಅನಾರೋಗ್ಯದ ಕಾರಣ ಕಾಲಾವಕಾಶವನ್ನು ಅದರ ವಕೀಲರು ಕೇಳಿದ್ದರು. ಈ ವಿಚಾರದಲ್ಲಿ ಸಿವಿಲ್ ಕೋರ್ಟ್ (ಹಿರಿಯ ವಿಭಾಗ) ಸಂಜೆ 4 ಗಂಟೆ ಸುಮಾರಿಗೆ ಕಾಲಾವಧಿ ವಿಸ್ತರಣೆ ಮನವಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ವಕೀಲ ಕಮಿಷನರ್ ರಮೇಶ್ ಸಿಂಗ್ ರಾಘವ್ ಸುದ್ದಿಗಾರರಿಗೆ ತಿಳಿಸಿದರು.
“ಇಂದು ನಾನು ನ್ಯಾಯಾಲಯದಲ್ಲಿ ತೀರ್ಪಿನ ಅರ್ಜಿಯನ್ನು ಸಲ್ಲಿಸಿದ್ದೇನೆ. ಸಮೀಕ್ಷೆಯ ಅಂತಿಮ ವರದಿ ಸಿದ್ಧವಾಗಿದೆ ಮತ್ತು ಅಂತಿಮ ಹಂತದಲ್ಲಿದೆ. ಈ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪ್ರಸ್ತುತಪಡಿಸಲಾಗುವುದು ಆದರೆ ಕಮಿಷನರ್ ಅವರ ಆರೋಗ್ಯ ಸಮಸ್ಯೆಗಳ ಕಾರಣದಿಂದ ನಾನು 15 ದಿನಗಳ ಕಾಲಾವಕಾಶ ಕೇಳಿದ್ದೇನೆ.” ಎಂದು ರಾಘವ್ ಸುದ್ದಿಗಾರರಿಗೆ ತಿಳಿಸಿದರು ಎಂದು ಮಾಧ್ಯಮ ವರದಿಯಲ್ಲಿದೆ.
ಈ ಸತ್ಯಶೋಧನೆಯ ಪ್ರಕಾರ, ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಸುದರ್ಶನ ಚಕ್ರ, ಶಿವಲಿಂಗ ಪತ್ತೆಯಾಗಿದೆ ಎಂಬಂತೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆಗಳು ಸುಳ್ಳು. ಕರ್ನಾಟಕದಲ್ಲಿ ರಾಯಚೂರಿನಲ್ಲಿ ದೊರಕಿದ ಪ್ರಾಚೀನ ಪ್ರತಿಮೆಗಳ ಫೊಟೋಗಳನ್ನು ಈಗ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಕೊಳ್ಳಲಾಗಿದೆ.
ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಸುದರ್ಶನ ಚಕ್ರ, ಶಿವಲಿಂಗ ಪತ್ತೆಯಾಗಿದೆ ಎಂಬಂತೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆಗಳು ಸುಳ್ಳು. ಕರ್ನಾಟಕದಲ್ಲಿ ರಾಯಚೂರಿನ ಕೃಷ್ಣಾ ನದಿಯಲ್ಲಿ ದೊರಕಿದ ಪ್ರಾಚೀನ ಪ್ರತಿಮೆಗಳ ಫೊಟೋಗಳನ್ನು ಈಗ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
Our Sources
Report By So South, Dated: February 7, 2024
Report By India Today, Dated: February 7, 2024
Report By Vistara News, Dated: February 6, 2024
Photo Published By Indiamart
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 29, 2025
Ishwarachandra B G
November 24, 2025
Salman
October 6, 2025