Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ತಿರುಪತಿ ದೇಗುಲದ ಹುಂಡಿಯಿಂದ ಹಣ ಕಳವು ಮಾಡಲಾಗಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ತಮಿಳು ಭಾಷೆಯ ಹೇಳಿಕೆಯೊಂದಿಗೆ ಎಕ್ಸ್ ನಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ಅದನ್ನು ನ್ಯೂಸ್ಚೆಕರ್ ಪರಿಶೀಲನೆ ನಡೆಸಿದೆ. ಈ ವೇಳೆ ವೀಡಿಯೋ ಬೆಂಗಳೂರಿನ ಗಾಳಿ ಆಂಜನೇಯ ದೇಗುಲದಲ್ಲಿ ನಡೆದ ಹುಂಡಿ ಹಣ ಕಳವು ಪ್ರಕರಣದ ಕುರಿತಾದದ್ದು ಎಂದು ಕಂಡುಬಂದಿದೆ.

ಸತ್ಯಶೋಧನೆಗಾಗಿ ನಾವು ಹೇಳಿಕೆಯೊದಿಗೆ ಹಂಚಿಕೊಳ್ಳಲಾದ ವೈರಲ್ ವೀಡಿಯೋವನ್ನು ಗಮನಿಸಿದ್ದೇವೆ. ಇದು ಟಿವಿ9 ಡಿಜಿಟಲ್ ನ ವೀಡಿಯೋ ಕ್ಲಿಪ್ ಆಗಿದ್ದು, ಇದರಲ್ಲಿ “ಗಾಳಿ ಆಂಜನೇಯ ದೇಗುಲದಲ್ಲಿ ದುಡ್ಡು ಕದಿಯೋ ದೃಶ್ಯ” ಎಂದಿರುವುದನ್ನು ನೋಡಿದ್ದೇವೆ.
Also Read: ಸೌದಿ ಅರೇಬಿಯಾದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ, ಈ ಹೇಳಿಕೆ ನಿಜವೇ?
ಅದರಂತೆ ನಾವು ಗೂಗಲ್ ನಲ್ಲಿ ಘಟನೆಯ ಬಗ್ಗೆ ಶೋಧ ನಡೆಸಿದಾಗ, ಬೆಂಗಳೂರಿನ ಪ್ರಸಿದ್ಧ ಗಾಳಿ ಆಂಜನೇಯ ದೇಗುದಲ್ಲಿ ಹುಂಡಿ ಹಣ ಎಣಿಕೆ ವೇಳೆ ಹಣ ಕದ್ದ ಪ್ರಕರಣ ಇದಾಗಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 27, 2024ರಂದು ಟಿವಿ9 ಕನ್ನಡ ಯೂಟ್ಯೂಬ್ ನಲ್ಲಿ ಈ ಕುರಿತ ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ, ಗಾಳಿ ಆಂಜನೇಯ ದೇವಸ್ಥಾನದಲ್ಲಿ ಹಣ ಕಳ್ಳತನ ನಡೆದಿದೆ. ಹುಂಡಿ ಹಣ ಎಣಿಕೆ ವೇಳೆಯೇ ಕೃತ್ಯ ನಡೆದಿದ್ದು, ಹಣ ಕದಿಯುವ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. 2 ತಿಂಗಳ ಹಿಂದೆಯೇ ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಹಣ ಕದಿಯುತ್ತಿದ್ದ ದೃಶ್ಯಗಳು ವೈರಲ್ ಆಗಿವೆ. ಎಂದಿದೆ.
“ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ವೈರಲ್ ಆದ ಬೆನ್ನಲ್ಲೇ ದೇವಾಲಯದ ಟ್ರಸ್ಟಿ ಹಾಗೂ ಅರ್ಚಕರ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಾಲಯ ಭಕ್ತ ಮೋಹನ್ ಎಂಬವರು ನೀಡಿದ ದೂರು ಆಧರಿಸಿ ಹನುಮಂತಪ್ಪ, ನಾಗರಾಜ್, ಶ್ರೀನಿವಾಸ್ ರಾಮಾನುಜ, ಗೋಪಿನಾಥ್, ರಾಮಾನುಜ ಭಟ್ಟಾಚಾರ್ಯ ಮತ್ತು ಸುರೇಶ್ ಸೇರಿದಂತೆ ಇನ್ನಿತರರ ಮೇಲೆ ಎಫ್ಐಆರ್ ದಾಖಲಾಗಿದೆ.
ದೇವಾಲಯದ ಹುಂಡಿ ಹಣ ಎಣಿಸುವಾಗ ಹಣದ ಬಂಡಲ್ಗಳನ್ನು ಅರ್ಚಕರು ಹಾಗೂ ಟ್ರಸ್ಟಿಗಳೇ ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು” ಎಂಬ ಈ ವರದಿಯನ್ನು ಅಕ್ಟೋಬರ್ 1, 2024ರಂದು ಇಟಿವಿ ಭಾರತ್ ಕೂಡ ಪ್ರಕಟಿಸಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಆದ್ದರಿಂದ ಈ ತನಿಖೆಯ ಪ್ರಕಾರ, ಹುಂಡಿ ಹಣ ಎಣಿಕೆ ವೇಳೆಯೇ ಕಳವು ಮಾಡುತ್ತಿರುವ ವೀಡಿಯೋ ಬೆಂಗಳೂರಿನ ಗಾಳಿ ಆಂಜನೇಯ ದೇಗುಲದ್ದಾಗಿದ್ದು, ಇದು ತಿರುಪತಿ ದೇಗುಲದ್ದಲ್ಲ ಎಂದು ತಿಳಿದುಬಂದಿದೆ.
Also Read: ಉಕ್ರೇನ್ನ ಡ್ರೋನ್ ದಾಳಿಯ ನಂತರ ರಷ್ಯಾದ ವಾಯುನೆಲೆ ನಾಶ ಎಂದ ವೈರಲ್ ಫೋಟೋ, ಎಐ ಸೃಷ್ಟಿ
Our Sources
YouTube Video By TV9 Kannada, Dated: September 27, 2024
Report By ETV Bharath, Dated: October 1, 2024