Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸೌದಿ ಅರೇಬಿಯಾ ಮದ್ಯ ಮಾರಾಟಕ್ಕೆ ಅವಕಾಶ, 600 ಸ್ಥಳಗಳಲ್ಲಿ ಮದ್ಯ ಲಭ್ಯ
ಸೌದಿ ಅರೇಬಿಯಾದಲ್ಲಿ ಮದ್ಯದ ಮೇಲಿನ ನಿಷೇಧವನ್ನು ತೆಗೆದುಹಾಕುವ ಹೇಳಿಕೆ ಆಧಾರರಹಿತವಾಗಿದೆ, ಅಲ್ಲಿನ ಸರ್ಕಾರ ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ
ಸೌದಿ ಅರೇಬಿಯಾ ದೇಶದಲ್ಲಿ ಮದ್ಯ ಮಾರಾಟಕ್ಕಿರುವ ನಿಷೇಧವನ್ನು ರದ್ದುಮಾಡಲಾಗಿದೆ ಎಂಬಂತೆ ಹೇಳಿಕೆಯೊಂದು ಹರಿದಾಡುತ್ತಿದೆ.
ವಾಟ್ಸಾಪ್ ನಲ್ಲಿಹರಿದಾಡುತ್ತಿರುವ ಮೆಸೇಜ್ ನಲ್ಲಿ “ಸೌದಿ ಅರೇಬಿಯಾ, ಮೆಕ್ಕಾ-ಮದೀನಾ ದೇಶಗಳ 600 ಸ್ಥಳಗಳಲ್ಲಿ ಮದ್ಯ ಲಭ್ಯವಿರುತ್ತದೆ, ಆರ್ಥಿಕತೆಯನ್ನು ಬಲಪಡಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದಿದೆ.

ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಸೌದಿ ಅರೇಬಿಯಾದಲ್ಲಿ ಮದ್ಯ ಮಾರಾಟಕ್ಕಿರುವ ನಿಷೇಧವನ್ನು ರದ್ದುಮಾಡಲಾಗಿದೆ ಎನ್ನುವುದು ನಿಜವಲ್ಲ ಇದು ತಪ್ಪಾದ ಸಂದರ್ಭವಾಗಿದೆ ಎಂದು ಕಂಡುಕೊಂಡಿದೆ.
Also Read: ಆರ್ ಸಿಬಿ ಗೆಲುವಿಗೆ ಬೆಂಗಳೂರಲ್ಲಿ ಸಂಭ್ರಮಾಚರಣೆ ಎಂದು ವೈರಲ್ ಆಗುತ್ತಿರುವ ವೀಡಿಯೋ ಕೊಲ್ಹಾಪುರದ್ದು
ಸೌದಿ ಅರೇಬಿಯಾದಲ್ಲಿ ಮದ್ಯದ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ ಎಂಬ ಹೇಳಿಕೆಯ ಸತ್ಯವನ್ನು ಕಂಡುಹಿಡಿಯಲು ನಾವು ಮೊದಲು ಕೆಲವು ಕೀವರ್ಡ್ ಸರ್ಚ್ ಮಾಡಿದ್ದೇವೆ. ಈ ವೇಳೆ ನಾವು ರಾಯಿಟರ್ಸ್ ವರದಿಯನ್ನು ನೋಡಿದ್ದೇವೆ.. ಈ ವರದಿಯನ್ನು 2025 ಮೇ 26ರಂದು ಪ್ರಕಟಿಸಲಾಗಿದೆ ಮತ್ತು ಮದ್ಯ ಮಾರಾಟ ಮತ್ತು ಖರೀದಿಯ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ ಎಂಬ ಎಲ್ಲ ವರದಿಗಳನ್ನು ಸೌದಿ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ ಎಂದು ವರದಿಯಲ್ಲಿದೆ.. ಆದರೆ ಆ ಸೌದಿ ಅಧಿಕಾರಿಯ ಬಗ್ಗೆ ಯಾವುದೇ ಮಾಹಿತಿಯನ್ನು ಈ ವರದಿಯಲ್ಲಿ ನೀಡಲಾಗಿಲ್ಲ.

ಸೌದಿ ಅರೇಬಿಯಾದಲ್ಲಿ ಮದ್ಯದ ಮೇಲಿನ ನಿಷೇಧವನ್ನು ತೆಗೆದುಹಾಕುವ ಸುದ್ದಿಯನ್ನು ಅಂತರರಾಷ್ಟ್ರೀಯ ಮಾಧ್ಯಮಗಳು ವೈನ್ ಬ್ಲಾಗ್ ಪೋಸ್ಟ್ನಿಂದ ತೆಗೆದುಕೊಂಡಿವೆ ಮತ್ತು ಈ ಬ್ಲಾಗ್ನಲ್ಲಿ ಯಾವುದೇ ಮೂಲಗಳನ್ನು ಉಲ್ಲೇಖಿಸಲಾಗಿಲ್ಲ ಎಂದು ವರದಿ ಹೇಳಿದೆ.
ಇದನ್ನು ಇನ್ನಷ್ಟು ತನಿಖೆ ಮಾಡಲು ಅರಬ್ ಫ್ಯಾಕ್ಟ್ ಚೆಕಿಂಗ್ ನೆಟ್ವರ್ಕ್ (ಎಎಫ್ಸಿಎನ್) ಗೆ ಕಳುಹಿಸಿದ್ದೇವೆ. ಎಎಫ್ಸಿಎನ್ ನ ಅಬ್ದುಲ್ ರಹಮಾನ್ ರಾಬಿ ಈ ಸಂಶೋಧನೆಯಲ್ಲಿ ನಮಗೆ ಸಹಾಯ ಮಾಡಿದರು. ಅವರು ತಮ್ಮ ಹುಡುಕಾಟದಲ್ಲಿ ಕಂಡುಬಂದ ದಿ ಗಾರ್ಡಿಯನ್ ವರದಿಯನ್ನು ನಮಗೆ ಕಳುಹಿಸಿದ್ದಾರೆ. ಈ ವರದಿಯನ್ನು 2024ರ ಡಿಸೆಂಬರ್ 17 ರಂದು ಪ್ರಕಟಿಸಲಾಗಿದೆ.
ತಮ್ಮ ಕಾನೂನುಗಳನ್ನು ಬದಲಾಯಿಸುವಂತೆ ಫೆಡರೇಶನ್ ಸ್ಥಳೀಯ ಸರ್ಕಾರಗಳನ್ನು ಒತ್ತಾಯಿಸುವುದಿಲ್ಲ ಎಂದು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಅಸೋಸಿಯೇಷನ್ ಫುಟ್ಬಾಲ್ (ಫಿಫಾ) ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಆದಾಗ್ಯೂ, “ಅಭಿಮಾನಿ ವಲಯಗಳು ಮತ್ತು ಹೋಟೆಲ್ ಬಗೆಗಿನ ನಿಲುವು ಪ್ರಸ್ತುತ ಈ ಹಂತದಲ್ಲಿ “ಹೆಚ್ಚು ಸ್ಪಷ್ಟವಾಗಿಲ್ಲ” ಎಂದು ಪತ್ರಿಕೆ ವರದಿ ಮಾಡಿದೆ, ವಿಶೇಷವಾಗಿ ಪಂದ್ಯಾವಳಿ ಇನ್ನೂ ಸುಮಾರು ಒಂದು ದಶಕದಷ್ಟು ದೂರದಲ್ಲಿರುವಾಗ”.
2025 ಫೆಬ್ರವರಿ 12ರಂದು ಎಲ್ ಬಿಸಿಯಲ್ಲಿ ಪ್ರಸಾರವಾದ ಯುಕೆಯ ಸೌದಿ ರಾಯಭಾರಿ ಪ್ರಿನ್ಸ್ ಖಾಲಿದ್ ಬಿನ್ ಬಂದರ್ ಅಲ್ ಸೌದ್ ಅವರ ಸಂದರ್ಶನದ ಲಿಂಕ್ ಅನ್ನು ಎಎಫ್ಸಿಎನ್ ಅವರಿಗೆ ಲಿಂಕ್ ಅನ್ನು ಕಳುಹಿಸಿದೆ. ಈ ಸಂದರ್ಶನದ 8 ನಿಮಿಷ 28 ಸೆಕೆಂಡುಗಳಲ್ಲಿ, ಸೌದಿ ರಾಯಭಾರಿ ಅವರು “ಮದ್ಯಪಾನವನ್ನು ಅನುಮತಿಸಲಾಗುವುದಿಲ್ಲ” ಎಂದು ಹೇಳುವುದನ್ನು ಕೇಳಬಹುದು. “ಆದರೆ ನಿಮಗೆ ತಿಳಿದಿರುವಂತೆ, ಅದು ಇಲ್ಲದೆಯೂ ತುಂಬಾ ಖುಷಿ ಅನುಭವಿಸಬಹುದು” ಎಂದು ಅವರು ಹೇಳುತ್ತಿರುವುದು ಸಹ ಕೇಳಿಸುತ್ತದೆ. ಅದರ ಅಗತ್ಯವೇ ಇಲ್ಲ. ಮತ್ತು ನೀವು ನಿರ್ಗಮನದ ಸಮಯದಲ್ಲಿ ಅಥವಾ ನಂತರ ಕುಡಿಯಲು ಬಯಸಿದರೆ, ಅದು ಒಳ್ಳೆಯದು. ಆದರೆ ಇದೀಗ, ನಾವು ಮದ್ಯವನ್ನು ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ “ಸೌದಿ ವಿಶ್ವಕಪ್ 2034” ವೆಬ್ಸೈಟ್ ಅನ್ನು ಇಮೇಲ್ ಮೂಲಕ ಮತ್ತು ಸೌದಿ ಕ್ರೀಡಾ ಸಚಿವಾಲಯದ ಗ್ರಾಹಕ ಸೇವೆಯನ್ನು , ಎಎಫ್ಸಿಎನ್ ಸಂಪರ್ಕಿಸಿದೆ. ಈ ಲೇಖನವನ್ನು ಬರೆಯುವ ಸಮಯದವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿಲ್ಲ, ಉತ್ತರವನ್ನು ಸ್ವೀಕರಿಸಿದ ಕೂಡಲೇ ಈ ಲೇಖನವನ್ನು ಪರಿಷ್ಕರಿಸಲಾಗುವುದು.
ಈ ಸಾಕ್ಷ್ಯಾಧಾರಗಳ ಪ್ರಕಾರ, ಸೌದಿ ಅರೇಬಿಯಾದಲ್ಲಿ ಮದ್ಯದ ಮೇಲಿನ ನಿಷೇಧವನ್ನು ತೆಗೆದುಹಾಕುವ ಹೇಳಿಕೆ ಆಧಾರರಹಿತವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಮಯದಲ್ಲಿ ಸೌದಿ ಸರ್ಕಾರವು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.
Also Read: ಉಕ್ರೇನ್ನ ಡ್ರೋನ್ ದಾಳಿಯ ನಂತರ ರಷ್ಯಾದ ವಾಯುನೆಲೆ ನಾಶ ಎಂದ ವೈರಲ್ ಫೋಟೋ, ಎಐ ಸೃಷ್ಟಿ
Our Sources
Report published by The Guardian on 17 Dec 2024
Video Published by YouTube Channel LBC on 12 Feb 2025
Conversation with AFCN journalist Abdurrahman Rabie
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಉರ್ದುವಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
June 28, 2025
Ishwarachandra B G
November 9, 2024
Ishwarachandra B G
February 29, 2024