Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಉಕ್ರೇನ್ನ ಡ್ರೋನ್ ದಾಳಿಯ ನಂತರ ರಷ್ಯಾದ ವಾಯುನೆಲೆ ನಾಶವಾಗಿದೆ ಎಂದು ಫೋಟೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಅಂತಹ ಪೋಸ್ಟ್ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Also Read: ಉಕ್ರೇನ್ ಮೇಲೆ ರಷ್ಯಾ ದಾಳಿ ಎಂದು ಯುಎಇ ಅಗ್ನಿ ಅನಾಹುತದ ವೀಡಿಯೋ ವೈರಲ್
ವೈರಲ್ ಆಗಿರುವ ಈ ಚಿತ್ರದ ಕುರಿತು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದಾಗ ರಷ್ಯಾದ ವಾಯುನೆಲೆ ನಾಶದ ಫೋಟೋ ಇರುವ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡು ಬಂದಿಲ್ಲ. ಇದಲ್ಲದೆ, ಚಿತ್ರ ನಯವಾದಂತೆ ಇರುವುದು ಅದು ಎಐ ನಿಂದ ರಚಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ.
ಅನಂತರ ನಾವು ಎಐ ಪತ್ತೆ ಸಾಧನಗಳ ಮೂಲಕ ವೈರಲ್ ಫೋಟೋವನ್ನು ಪರಿಶೀಲಿಸಿದ್ದೇವೆ. ಅವುಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಫೋಟೋವನ್ನು ರಚಿಸಿರುವ ಬಗ್ಗೆ ಹೆಚ್ಚಿನ ಸಂಭವನೀಯತೆಯನ್ನು ಹೇಳಿದೆ. ಉದಾಹರಣೆಗೆ, ಹೈವ್ ಮಾಡರೇಶನ್ ವೆಬ್ಸೈಟ್, ವೈರಲ್ ಫೋಟೋ ಎಐ- ರಚಿತ ಅಥವಾ ಡೀಪ್ಫೇಕ್ ವಿಷಯವನ್ನು ಹೊಂದಿರುವ ಸಾಧ್ಯತೆ 99.5% ಎಂದು ಕಂಡುಹಿಡಿದಿದೆ.


ಇತರ AI ಪತ್ತೆ ವೆಬ್ಸೈಟ್ಗಳು Is It AI? ಮತ್ತು Sightengine ಇತ್ತೀಚಿಗೆ ಉಕ್ರೇನಿಯನ್ ದಾಳಿಯಲ್ಲಿ ರಷ್ಯಾದ ವಿಮಾನಗಳು ನಾಶವಾಗಿರುವುದನ್ನು ತೋರಿಸುವ ಫೋಟೋ 99% ಎಐ ನಿರ್ಮಿತ ಎಂದು ತೀರ್ಮಾನಿಸಿದೆ. WasitAI ಉಪಕರಣವು, “ಈ ಫೋಟೋ ಅಥವಾ ಅದರ ಮಹತ್ವದ ಭಾಗವನ್ನು ಎಐ ನಿಂದ ರಚಿಸಲಾಗಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ” ಎಂದು ಹೇಳಿದೆ.
ಉಕ್ರೇನ್, ಭಾನುವಾರ (ಜೂನ್ 1, 2025) ರಷ್ಯಾದೊಳಗಿನ ವಾಯುನೆಲೆಗಳ ಮೇಲೆ ಬೃಹತ್ ಡ್ರೋನ್ ದಾಳಿ ನಡೆಸಿ, 41 ಯುದ್ಧವಿಮಾನಗಳನ್ನು ನಾಶ ಪಡಿಸಿದೆ. ರಷ್ಯಾದ ರಕ್ಷಣಾ ಸಚಿವಾಲಯವು ಮುರ್ಮನ್ಸ್ಕ್, ಇರ್ಕುಟ್ಸ್ಕ್, ಇವನೊವೊ, ರಿಯಾಜಾನ್ ಮತ್ತು ಅಮುರ್ ಪ್ರದೇಶಗಳಲ್ಲಿನ ವಾಯುನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿರುವುದನ್ನು ದೃಢಪಡಿಸಿದೆ.
“ಇವನೊವೊ, ರಿಯಾಜಾನ್ ಮತ್ತು ಅಮುರ್ ಪ್ರದೇಶಗಳಲ್ಲಿನ ಮಿಲಿಟರಿ ವಾಯುನೆಲೆಗಳ ಮೇಲಿನ ಎಲ್ಲಾ ಭಯೋತ್ಪಾದಕ ದಾಳಿಗಳನ್ನು ಹಿಮ್ಮೆಟ್ಟಿಸಲಾಯಿತು. ಮರ್ಮನ್ಸ್ಕ್ ಮತ್ತು ಇರ್ಕುಟ್ಸ್ಕ್ ಪ್ರದೇಶಗಳಲ್ಲಿನ ಮಿಲಿಟರಿ ವಾಯುನೆಲೆಗಳ ಸಮೀಪದಲ್ಲಿರುವ ಪ್ರದೇಶಗಳಿಂದ ಎಫ್ಪಿವಿ ಡ್ರೋನ್ಗಳನ್ನು ಉಡಾಯಿಸಿದ ಪರಿಣಾಮವಾಗಿ, ಹಲವಾರು ವಿಮಾನಗಳು ಬೆಂಕಿಗೆ ಆಹುತಿಯಾದವು. ಬೆಂಕಿಯನ್ನು ನಂದಿಸಲಾಯಿತು,” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಆದ್ದರಿಂದ, ಉಕ್ರೇನ್ನ ದಾಳಿಯಲ್ಲಿ ರಷ್ಯಾದ ವಾಯುನೆಲೆ ನಾಶವಾಗಿದೆ ಎಂದು ಹೇಳಿದ ವೈರಲ್ ಫೋಟೋ ಎಐನಿಂದ ರಚಿತವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
Also Read: ರೈಲಿನಲ್ಲಿ ಶ್ರೀರಾಮನ ಫೋಟೋ ನಿಜವಾದದ್ದೇ?
Our Sources
Hive Moderation Website
Is It AI? Website
Sightengine Website
WasitAI Website
(ಈ ಲೇಖನನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Vasudha Beri
July 29, 2025
Ishwarachandra B G
June 3, 2025
Ramkumar Kaliamurthy
May 13, 2025