Authors
Claim
ಮಿ17 ಹೆಲಿಕಾಪ್ಟರ್ ಕೇದಾರನಾಥದಲ್ಲಿ ಪತನ ಎಂಬಂತೆ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಈ ಹೇಳಿಕೆಗಳು ಇಲ್ಲಿ, ಇಲ್ಲಿ ಕಂಡುಬಂದಿದ್ದು, ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದೆ. ಆದರೆ ಇದು ತಪ್ಪಾದ ಸಂದರ್ಭವಾಗಿದ್ದು, ಮಿ17 ಹೆಲಿಕಾಪ್ಟರ್ ಪತನಗೊಂಡಿಲ್ಲ ಬದಲಾಗಿ ಅದು ಕೊಂಡೊಯ್ಯುತ್ತಿದ್ದ ಹಾಳಾದ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಗೊತ್ತಾಗಿದೆ.
Also Read: ತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲ ಎನ್ನುವುದು ನಿಜವೇ?
Fact
ಸತ್ಯಶೋಧನೆಗಾಗಿ ಹೇಳಿಕೆಯಲ್ಲಿ ಕಂಡುಬಂದ ವೀಡಿಯೋವನ್ನು ಗಮನಿಸಿದ್ದೇವೆ. ಇದರಲ್ಲಿ ಹೆಲಿಕಾಪ್ಟರ್ ಒಂದು ಇನ್ನೊಂದು ಹೆಲಿಕಾಪ್ಟರ್ ರೀತಿಯ ಸಂರಚನೆಯನ್ನು ಬೀಳಿಸಿದ ರೀತಿ ಕಂಡುಬರುತ್ತಿರುವುದನ್ನು ಗಮನಿಸಿದ್ದೇವೆ. ಇದರ ಆಧಾರದಲ್ಲಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಹಲವು ವರದಿಗಳು ಲಭ್ಯವಾಗಿದ್ದು, ಕೇದಾರನಾಥದಲ್ಲಿ ಮಿ17 ಹೆಲಿಕಾಪ್ಟರ್ ಪತನಗೊಂಡಿಲ್ಲ ಬದಲಾಗಿ ಅದು ಕೊಂಡೊಯ್ಯುತ್ತಿದ್ದ ಇನ್ನೊಂದು ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಗೊತ್ತಾಗಿದೆ.
ಆಗಸ್ಟ್ 31, 2024ರ ಇಂಡಿಯಾ ಟುಡೇ ವರದಿಯಲ್ಲಿ, ಭಾರತೀಯ ವಾಯುಪಡೆಯ ಮಿ17 ಹೆಲಿಕಾಪ್ಟರ್ ರಿಪೇರಿಗಾಗಿ ಹಾಳಾಗಿದ್ದ ಹೆಲಿಕಾಪ್ಟರ್ ಒಂದನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸಮತೋಲನ ಕಳೆದುಕೊಂಡಿದ್ದರಿಂದ ಅದನ್ನು ಕೇದಾರನಾಥ ಮಧ್ಯದಲ್ಲೇ ಬಿಡಬೇಕಾಯಿತು. ಹೀಗೆ ಬಿಟ್ಟ ಹೆಲಿಕಾಪ್ಟರ್ ಖಾಲಿಯಾಗಿತ್ತು ಎಂದು ರುದ್ರಪ್ರಯಾಗದ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್ ಚೌಬೆ ತಿಳಿಸಿದ್ದಾರೆ. ಇದೇ ವರದಿಯಲ್ಲಿ, ಶನಿವಾರ, ಹೆಲಿಕಾಪ್ಟರ್ ಅನ್ನು ದುರಸ್ತಿಗಾಗಿ ಗೌಚಾರ್ ಏರ್‌ಸ್ಟ್ರಿಪ್‌ಗೆ ಕೊಂಡೊಯ್ಯಲಾಗುತ್ತಿತ್ತು. ಆದಾಗ್ಯೂ, ಮಿ 17 ಹೆಲಿಕಾಪ್ಟರ್ ಲಿಂಚೋಲಿ ಮೇಲೆ ಹಾರುತ್ತಿದ್ದಂತೆ ಸಮತೋಲನವನ್ನು ಕಳೆದುಕೊಳ್ಳಲು ಪ್ರಾರಂಭಿಸಿತು. ಇದರಿಂದ ಮಿ-17 ಪೈಲಟ್, ತೊಂದರೆಯನ್ನು ಗ್ರಹಿಸಿ, ತೆಗೆದುಕೊಂಡು ಹೋಗುತ್ತಿದ್ದ ಹೆಲಿಕಾಪ್ಟರನ್ನು ಖಾಲಿ ಸ್ಥಳದಲ್ಲಿ ಬೀಳಿಸಿದರು ಎಂದಿದೆ.
ಆಗಸ್ಟ್ 31, 2024ರ ಎಎನ್ ಐ ವರದಿ ಪ್ರಕಾರ, ಮಿ17 ಮೂಲಕ ಗೌಚಾರ್ ಏರ್ ಸ್ಟ್ರಿಪ್ ಗೆ ರಿಪೇರಿಗಾಗಿ ತೆಗೆದುಕೊಂಡು ಹೋಗುತ್ತಿದ್ದ ಹೆಲಿಕಾಪ್ಟರ್ ಒಂದು ಕೇದಾರನಾಥ ಸನಿಹ ಶನಿವಾರ ಪತನಗೊಂಡಿದೆ. ರಿಪೇರಿ ಹೆಲಿಕಾಪ್ಟರ್ ಏರ್ ಲಿಫ್ಟ್ ಮಾಡಿದ ಬಳಿಕ ಮಿ17 ಹೆಲಿಕಾಪ್ಟರ್ ತನ್ನ ಸಮತೋಲನವನ್ನು ಕಳೆದುಕೊಳ್ಳುವತ್ತ ಸಾಗಿದ್ದು, ಅಪಾಯವನ್ನು ಅರಿತ ಪೈಲಟ್ ಕಣಿವೆಯ ಖಾಲಿ ಸ್ಥಳದಲ್ಲಿ ಅದನ್ನು ಬೀಳಿಸಿದರು ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಆದ್ದರಿಂದ ಈ ತನಿಖೆಯ ಪ್ರಕಾರ, ಕೇದಾರನಾಥದಲ್ಲಿ ಮಿ17 ಹೆಲಿಕಾಪ್ಟರ್ ಪತನಗೊಂಡಿಲ್ಲ. ಅದು ರಿಪೇರಿಗಾಗಿ ಇನ್ನೊಂದು ಹೆಲಿಕಾಪ್ಟರನ್ನು ಏರ್ ಲಿಫ್ಟ್ ಮಾಡುತ್ತಿದ್ದ ವೇಳೆ ಸಮತೋಲನ ಕಳೆದುಕೊಂಡಾಗ ಆ ಹೆಲಿಕಾಪ್ಟರನ್ನು ಪೈಲಟ್ ಬೀಳಿಸಿದರು ಎಂದು ಗೊತ್ತಾಗಿದೆ.
Result: Missing Context
Our Sources
Report By India Today, Dated: August 31, 2024
Report By ANI, Dated: August 31, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.