Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಉತ್ತರಾಖಂಡದಲ್ಲಿ ಮಸೀದಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ
ವೈರಲ್ ವೀಡಿಯೋ ಉತ್ತರಾಖಂಡದ್ದಲ್ಲ. ಅದು ಇಂಡೋನೇಷ್ಯಾದ್ದಾಗಿದೆ. ಪ್ರವಾಹಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಫ್ಯಾಂಟಸಿ ಪಾರ್ಕ್ ಒಂದನ್ನು ತೆರವು ಮಾಡಲಾಗಿದೆ
ಉತ್ತರಾಖಂಡದಲ್ಲಿ ಮಸೀದಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಉತ್ತರಖಂಡ್ ದೇವಭೂಮಿಯಲ್ಲಿ ಮುಂದುವರೆದ ಬುಲ್ಡೋಜರ್ ಕಾರ್ಯಾಚರಣೆ” ಎಂದಿದೆ.
ವೈರಲ್ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಇಂಡೋನೇಷ್ಯಾದ ವೀಡಿಯೋ ಆಗಿದ್ದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
Also Read: ಪಾಕ್-ಚೀನಾಕ್ಕೆ ಬಲೂಚಿ ಆರ್ಮಿಯ ನೇರ ಎಚ್ಚರಿಕೆ ಎಂದು ಹಂಚಿಕೊಂಡ ವೀಡಿಯೋ ಹಳೆಯದು!
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಯೂಟ್ಯೂಬ್ ವೀಡಿಯೋದ ಶೀರ್ಷಿಕೆ ಒಂದರಲ್ಲಿ ಇದು ಮಸೀದಿಯಲ್ಲ, ಫ್ಯಾಂಟಸಿ ಪಾರ್ಕ್ ನಲ್ಲಿ ಭಾರತೀಯ ಶೈಲಿಯ ಕಟ್ಟಡ ಎಂದು ಬರೆಯಲಾಗಿದೆ. MasudVlogs2020 ಮಾರ್ಚ್ 16, 2025ರಂದು ಪೋಸ್ಟ್ ಮಾಡಿದ ವೀಡಿಯೋದಲ್ಲಿ, ಇಂಡೋನೇಷ್ಯಾದಿಂದ ಎಂದು ಬರೆಯಲಾಗಿದೆ.
ಶೋಧನೆಯ ಭಾಗವಾಗಿ ನಾವು ಇನ್ನಷ್ಟು ಹುಡುಕಾಟ ನಡೆಸಿದ್ದೇವೆ. ಈ ವೇಳೆ ನ್ಯೂ ಫಾರ್ಸಿ ಅಫಿಶಿಯಲ್ ಹೆಸರಿನ ಯೂಟ್ಯೂಬ್ ಚಾನೆಲ್ ನೋಡಿದ್ದು, ಇದರಲ್ಲಿ ವೀಡಿಯೋ ಇಂಡೋನೇಷ್ಯಾದ ಹೈಬಿಸ್ಕ್ ಫ್ಯಾಂಟಸಿ ಪುನ್ ಕಾಕ್ ನದ್ದು ಎಂದಿದೆ. ಮಾರ್ಚ್ 10, 2025ರಂದು ವೀಡಿಯೋ ಅಪ್ಲೋಡ್ ಮಾಡಲಾಗಿದ್ದು, ಇದು ಹೆಚ್ಚು ಸುದೀರ್ಘವಾಗಿದೆ ಮತ್ತು ವೈರಲ್ ಕ್ಲಿಪ್ ಹೋಲುವ ಅನೇಕ ದೃಶ್ಯಗಳನ್ನು ಹೊಂದಿದೆ ಎನ್ನುವುದನ್ನು ಖಚಿತಪಡಿಸಿದ್ದೇವೆ.
ಆ ಬಳಿಕ ನಾವು ಕೀವರ್ಡ್ ಸರ್ಚ್ ನಡೆಸಿದ್ದು, ಘಟನೆಯ ವಿವರಗಳನ್ನು ನೋಡಿದ್ದೇವೆ. ಮಾರ್ಚ್ 11, 2025 ರ ಸಿಎನ್ಎನ್ ಇಂಡೋನೇಷ್ಯಾ ವರದಿಯ ಪ್ರಕಾರ, ಹೈಬಿಸ್ಕ್ ಫ್ಯಾಂಟಸಿ ಪನ್ಕಾಕ್ ನಿರ್ಮಾಣವು ಪ್ರವಾಹಕ್ಕೆ ಕಾರಣವಾಗುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಪೂರ್ವ ಜಾವಾ ಗವರ್ನರ್ ಡೆಡಿ ಮುಲ್ಯಾಡಿ ಇಂಡೋನೇಷ್ಯಾದ ಅಮ್ಯೂಸ್ಮೆಂಟ್ ಪಾರ್ಕ್ ಹೈಬಿಸ್ಕಸ್ ಫ್ಯಾಂಟಸಿ ಪುಂಕಾಕ್ ಅನ್ನು ಕೆಡವಲು ಆದೇಶಿಸಿದ್ದರು ಎಂದು ಗೊತ್ತಾಗಿದೆ. (ಇಂಡೋನೇಷ್ಯನ್ ಭಾಷೆಯಿಂದ ಭಾಷಾಂತರಿಸಲಾಗಿದೆ)
ಮಾರ್ಚ್ 6, 2025ರಂದು ಟ್ರಿಬ್ಯೂನ್ ನ್ಯೂಸ್ ಪ್ರಕಟಿಸಿದ ಯೂಟ್ಯೂಬ್ ವೀಡಿಯೋದಲ್ಲಿ “ಈ ವಾರ ಸಂಭವಿಸಿದ ಪ್ರವಾಹಕ್ಕೆ ಪ್ರಚೋದಕ ಎಂದು ಭಾವಿಸಲಾದ ಪಶ್ಚಿಮ ಜಾವಾದ ಬೋಗೋರ್ನ ಪನ್ಕಾಕ್ ಪ್ರದೇಶದ ಹೈಬಿಸ್ಕ್ ಫ್ಯಾಂಟಸಿ ಪ್ರವಾಸಿ ಸ್ಥಳವನ್ನು ಕೆಡವಲಾಯಿತು. ಗುರುವಾರ ಪಶ್ಚಿಮ ಜಾವಾ ಗವರ್ನರ್ ದೇದಿ ಮೂಲ್ಯಡಿ ನೇರವಾಗಿ ಉರುಳಿಸುವಿಕೆಯ ನೇತೃತ್ವ ವಹಿಸಿದ್ದರು. ಈ ಪ್ರವಾಸಿ ಆಕರ್ಷಣೆಯು ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗುತ್ತದೆ ಏಕೆಂದರೆ ಇದು ಸಿಲಿವುಂಗ್ ನದಿ ಜಲಾನಯನ ವಿಭಾಗದ ಭಾಗವಾಗಿರುವ ಜಲಾನಯನ ಪ್ರದೇಶದಲ್ಲಿದೆ. ಕಾಲ್ಪನಿಕ ಕಥೆಯ ವಾಸ್ತುಶಿಲ್ಪದ ಶೈಲಿಯೊಂದಿಗೆ ಹಲವಾರು ಕಟ್ಟಡಗಳನ್ನು ಕೆಡವಲು ಹಲವಾರು ಭಾರೀ ಉಪಕರಣಗಳು ಮತ್ತು ಟ್ರಕ್ಗಳನ್ನು ಸ್ಥಳಕ್ಕೆ ನಿಯೋಜಿಸಲಾಯಿತು.” ಎಂದು ವೀಡಿಯೋ ವಿವರಣೆಯಲ್ಲಿದೆ (ಇಂಡೋನೇಷ್ಯನ್ ಭಾಷೆಯಿಂದ ಭಾಷಾಂತರಿಸಲಾಗಿದೆ) ಈ ವೀಡಿಯೋ ಕೂಡ ವೈರಲ್ ವೀಡಿಯೋ ದೊಂದಿಗೆ ಸಾಮ್ಯತೆ ಇರುವುದನ್ನು ಗಮನಿಸಿದ್ದೇವೆ.
ಇದೇ ರೀತಿಯ ಮಾಧ್ಯಮ ವರದಿಗಳನ್ನು ನಾವು ಇಲ್ಲಿ, ಇಲ್ಲಿ, ನೋಡಿದ್ದೇವೆ.
ಈ ಸತ್ಯಶೋಧನೆಯ ಪ್ರಕಾರ, ವೈರಲ್ ವೀಡಿಯೋ ಉತ್ತರಾಖಂಡದ್ದಲ್ಲ. ಅದು ಇಂಡೋನೇಷ್ಯಾದ್ದಾಗಿದೆ. ಪ್ರವಾಹಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಫ್ಯಾಂಟಸಿ ಪಾರ್ಕ್ ಒಂದನ್ನು ತೆರವು ಮಾಡಿದ ವೀಡಿಯೋ ಆಗಿದೆ.
Also Read: ಚಾಂಪಿಯನ್ಸ್ ಟ್ರೋಫಿ ವೇಳೆ ರಂಜಾನ್ ಉಪವಾಸ ಮುರಿದಿದ್ದಕ್ಕಾಗಿ ವೇಗಿ ಮೊಹಮ್ಮದ್ ಶಮಿ ಕ್ಷಮೆ ಕೇಳಿದ್ರಾ?
Our Sources
YouTube Video By New farsi official , Dated: March 10, 2025
Report By CNN Indonesia, March 11, 2025
YouTube Video By Tribunenews, Dated: March 6, 2025
Ramkumar Kaliamurthy
May 13, 2025
Ishwarachandra B G
May 12, 2025
Ishwarachandra B G
May 7, 2025