Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪ್ರವಾಹ ಪೀಡಿತ ಬಾಂಗ್ಲಾದೇಶದಲ್ಲಿ ಪರಿಹಾರ ಪಡೆಯಲು ಹಿಂದೂ ಬಾಲಕನ ತಾಯತ ತೆಗೆಸಿದ ಮೌಲ್ವಿ, ಹಿಂದೂಗಳು ಬಾಂಗ್ಲಾದಲ್ಲಿ ಬದುಕಬೇಕಾದರೆ ಧರ್ಮ ಬದಲಿಸುವಂತೆ ಒತ್ತಾಯ, ರಾಜಸ್ಥಾನದಲ್ಲಿ ಹಸುವಿನ ಬಾಲ ಕತ್ತರಿಸಿ ದೇಗುಲಕ್ಕೆ ಎಸೆದ ಮುಸ್ಲಿಮರಿಗೆ ಪೊಲೀಸ್ ಏಟು ಎಂಬ ಕೋಮು ಹಿನ್ನೆಲೆಯ ಹೇಳಿಕೆಗಳು ಈ ವಾರ ವೈರಲ್ ಆಗಿವೆ. ಇವುಗಳ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇವುಗಳು ತಪ್ಪಾದ ಹೇಳಿಕೆ ಎಂದು ಗೊತ್ತಾಗಿದೆ. ಇದರೊಂದಿಗೆ ಮೃತ ಉಗ್ರನ ದೇಹದಲ್ಲಿ ಟೈಂಬಾಂಬ್ ಇಟ್ಟು ಇಸ್ರೇಲ್ ನವರು ಪ್ಯಾಲಸ್ತೀನ್ ನಲ್ಲಿ ಸ್ಫೋಟ ನಡೆಸಿದ್ದಾರೆ. 30 ಕೋಟಿ ಸಂಬಳ ಕೊಡುವುದಾದರೂ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲ, ನೇರಳೆ ಹಣ್ಣಿನ ಪ್ರಯೋಜನದ ಬಗ್ಗೆ, ಮಿ17 ಹೆಲಿಕಾಪ್ಟರ್ ಕೇದಾರನಾಥದಲ್ಲಿ ಪತನಗೊಂಡಿದೆ ಎಂಬ ಹೇಳಿಕೆಗಳು ವೈರಲ್ ಆಗಿದ್ದವು. ಇವುಗಳ ಬಗ್ಗೆ ಸತ್ಯಶೋಧನೆ ಮಾಡಿ ನ್ಯೂಸ್‌ಚೆಕರ್ ನಿಜಾಂಶವನ್ನು ತೆರೆದಿಟ್ಟಿದೆ.
ಮೃತ ಉಗ್ರನ ದೇಹದಲ್ಲಿ ಬಾಂಬ್ ಇಟ್ಟು ಪ್ಯಾಲೆಸ್ತೀನ್ ನಲ್ಲಿ ಇಸ್ರೇಲ್ ಸ್ಫೋಟ ನಡೆಸಿದೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಮೃತ ಉಗ್ರನ ದೇಹದಲ್ಲಿ ಟೈಂ ಬಾಂಬ್ ಇಟ್ಟು ಇಸ್ರೇಲ್ ಪ್ಯಾಲಸ್ತೀನ್ ನಲ್ಲಿ ಸ್ಫೋಟ ನಡೆಸಿತು ಎನ್ನುವುದು ತಪ್ಪಾಗಿದೆ. ವೈರಲ್ ವೀಡಿಯೋ 2012ರ ಸಿರಿಯಾ ದಂಗೆಯ ಸಮಯದ್ದಾಗಿದ್ದು ಸಿರಿಯಾದ ಡಮಾಸ್ಕಸ್ ನಲ್ಲಿ ಸರ್ಕಾರಿ ವಿರೋಧಿ ಹೋರಾಟಗಾರನೊಬ್ಬನ ಅಂತಿಮಯಾತ್ರೆ ವೇಳೆ ನಡೆದ ಕಾರ್ ಬಾಂಬ್ ಸ್ಫೋಟದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವವರ ಇಲ್ಲಿ ಓದಿ
ಪರಿಹಾರ ಸಾಮಗ್ರಿ ಕೊಡುವ ನೆವದಲ್ಲಿ ಬಾಂಗ್ಲಾ ಹಿಂದೂ ಬಾಲಕನ ಕೊರಳಿಂದ ಮೌಲ್ವಿಯೊಬ್ಬ ದೇವರ ತಾಯತ ತೆಗೆಸಿದ ಎಂದು ಹೇಳಿಕೆಯೊಂದಿಗೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಪರಿಹಾರ ಸಾಮಗ್ರಿ ಕೊಡುವ ನೆವದಲ್ಲಿ ಬಾಂಗ್ಲಾ ಹಿಂದೂ ಬಾಲಕನ ಕೊರಳಿಂದ ತಾಯತ ತೆಗೆಸಿದ ಮೌಲ್ವಿ ಎಂಬ ಹೇಳಿಕೆ ತಪ್ಪಾಗಿದೆ. ಆ ಬಾಲಕ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ತಾಯತ ಇಸ್ಲಾಂಗೆ ವಿರುದ್ಧ ಎಂಬ ಕಾರಣಕ್ಕೆ ಅದನ್ನು ತೆಗೆಸಿದ್ದಾಗಿ, ಸ್ವತಃ ತಾಯತ ತೆಗೆಸಿದ ಮೌಲ್ವಿ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿ ಓದಿ
ಬಂಗಾಳದಲ್ಲಿ ಬದುಕಲು ಧರ್ಮ ಬದಲಿಸಲು ಒತ್ತಾಯಿಸುತ್ತಿದ್ದಾರೆ ಎನ್ನುವ ಹೇಳಿಕೆಯೊಂದಿಗೆ ವೀಡಿಯೋ ಒಂದು ವೈರಲ್ ಆಗಿದೆ. ವೀಡಿಯೋ ಬಗ್ಗೆ ಸತ್ಯಶೋಧನೆ ನಡೆಸಿದಾಗ, ವೀಡಿಯೋ ಬಾಂಗ್ಲಾದೇಶದ್ದಾಗಿದ್ದು, ನೆರೆ ಪರಿಹಾರ ವಿತರಣೆ ವೇಳೆ ಮುಸ್ಲಿಮರು ಶಿರ್ಕ್ (ತಾಯತ) ಧರಿಸುವುದು ಒಳ್ಳೆಯದಲ್ಲ ಎಂದು ಅದನ್ನು ತೆಗೆಸಿದ್ದಾಗಿ ಸ್ವತಃ ತಾಯತವನ್ನು ತೆಗೆಸಿದ ವೀಡಿಯೋ ಮಾಡಿರುವ ಅಬ್ದುಲ್ಲಾಹ್ ಬಿನ್ ಅರ್ಶದ್ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿ ಓದಿ
ರಾಜಸ್ಥಾನದ ಭಿಲ್ವಾರಾದಲ್ಲಿ ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಂ ಯುವಕರಿಗೆ ಪೊಲೀಸರು ಪಾಠ ಕಲಿಸಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದತೆ ಉತ್ತರ ಪ್ರದೇಶದ ಹಳೆಯ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಈ ಕುರಿತ ವಿವರ ಇಲ್ಲಿ ಓದಿ
ತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಫ್ರಾನ್ಸ್ ನ ಜ್ಯೂಮೆಂಟ್ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲ ಎಂದು ಹೇಳಿಕೆ ಹರಿದಾಡಿದೆ. ಆದರೆ ಇದು ಸುಳ್ಳು ಹೇಳಿಕೆಯಾಗಿದ್ದು 1991ರಿಂದಲೇ ಲೈಟ್ ಹೌಸ್ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತಿದೆ, ಅಂತಯ ಯಾವುದೇ ಉದ್ಯೋಗಾವಕಾಶಗಳು ಇಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿ ಓದಿ
ಕೇದಾರನಾಥದಲ್ಲಿ ಮಿ17 ಹೆಲಿಕಾಪ್ಟರ್ ಪತನವಾಗಿದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯಲ್ಲಿ ತಿಳಿದುಬಂದ ಪ್ರಕಾರ, ಕೇದಾರನಾಥದಲ್ಲಿ ಮಿ17 ಹೆಲಿಕಾಪ್ಟರ್ ಪತನಗೊಂಡಿಲ್ಲ. ಅದು ರಿಪೇರಿಗಾಗಿ ಇನ್ನೊಂದು ಹೆಲಿಕಾಪ್ಟರನ್ನು ಏರ್ ಲಿಫ್ಟ್ ಮಾಡುತ್ತಿದ್ದ ವೇಳೆ ಸಮತೋಲನ ಕಳೆದುಕೊಂಡಾಗ ಆ ಹೆಲಿಕಾಪ್ಟರನ್ನು ಪೈಲಟ್ ಬೀಳಿಸಿದರು ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿ ಓದಿ
ನೇರಳೆ ಹಣ್ಣಿನ ಬೀಜ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲಿಗೆ ಪ್ರಯೋಜನಕಾರಿ ಎಂದು ಹೇಳಿಕೆಯೊಂದು ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ನೇರಳೆ ಹಣ್ಣಿನ ಬೀಜ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ, ಕ್ಯಾನ್ಸರ್ ವಿಚಾರದಲ್ಲಿ ಒಂದಷ್ಟು ಪ್ರಯೋಜನಕಾರಿಯಾಗಬಹುದು. ಆದರೆ ಇದನ್ನೇ ಪರ್ಯಾಯ ಚಿಕಿತ್ಸೆಯಾಗಿ ಬಳಸುವುದು ಸಾಧ್ಯವಿಲ್ಲ, ಜೊತೆಗೆ ಮೂತ್ರಪಿಂಡದ ಕಲ್ಲಿಗೆ ಪ್ರಯೋಜನಕಾರಿ ಎನ್ನುವ ವಿಚಾರದಲ್ಲಿ ಸಂಶೋಧನೆಗಳು ಇನ್ನೂ ನಡೆಯಬೇಕಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
June 14, 2025
Ishwarachandra B G
June 11, 2025
Ishwarachandra B G
May 5, 2025