Fact Check: ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ ಎಂದ ವೈರಲ್ ಫೋಟೋ ಹಿನ್ನೆಲೆ ಏನು?

ಅಸ್ಸಾಂ, ಯುವತಿ ಹತ್ಯೆ, ಶ್ರದ್ಧಾ ಪ್ರಕರಣ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಅಸ್ಸಾಂನಲ್ಲಿ ಇನ್ನೊಂದು ಶ್ರದ್ಧಾ ಪ್ರಕರಣ; ಡೀಪ್‌ ಫ್ರೀಝರ್ ನಲ್ಲಿಟ್ಟು ಹಿಂದೂ ಯುವತಿಯ ಹತ್ಯೆ

Fact
ವೈರಲ್‌ ಚಿತ್ರದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ ತಪ್ಪಾಗಿದೆ. ವೈರಲ್‌ ಫೋಟೋ ಬ್ರೆಜಿಲ್‌ ನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಿದ್ದಾಗಿದೆ

ಮಹಿಳೆಯ ಶವವನ್ನು ಫ್ರೀಜರ್ನಲ್ಲಿ ಇರಿಸಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಲವ್ ಜಿಹಾದ್ ಎಂಬ ಹೇಳಿಕೆಯೊಂದಿಗೆ ಚಿತ್ರವನ್ನು 2022ರ ಶ್ರದ್ಧಾ ವಾಕರ್ ಪ್ರಕರಣದ ರೀತಿ ಎಂದು ಹೇಳಲಾಗುತ್ತಿದೆ.

ವಾಟ್ಸಪ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಬ್ರೇಕಿಂಗ್ ನ್ಯೂಸ್ ಅಸ್ಸಾಂನಲ್ಲಿ ಡೀಪ್ ಫ್ರೀಜರ್ ನಲ್ಲಿ ಮತ್ತೊಂದು ಶ್ರದ್ಧಾ! *’ಲಿವ್ ಇನ್ ರಿಲೇಶನ್ ಶಿಪ್’ನಲ್ಲಿ ವಾಸಿಸುತ್ತಿದ್ದ ಶಮ್ಮಿ ಅಲಿಯಾಸ್ ಶಬೀರ್ ಮಿಯಾನ್, ಮೊದಲು ಕಾಜಲ್ ಮೇಲೆ 7 ಮುಸ್ಲಿಂ ಹುಡುಗರಿಂದ ಅತ್ಯಾಚಾರವೆಸಗಿದ್ದಾನೆ, ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಕೆಯನ್ನು ಜೀವಂತವಾಗಿ ಪ್ಯಾಕ್ ಮಾಡಿದ್ದಾನೆ, ಈ ಕಾರಣದಿಂದಾಗಿ ಅವಳು ಚಳಿಯಿಂದ ಸಾವನ್ನಪ್ಪಿದ್ದಾಳೆ ಗಫಾರ್ ಮಿಯಾನ್ ಮತ್ತು ಅವನ ಸಹಚರರು ಪ್ರತಿದಿನ 8 ದಿನಗಳವರೆಗೆ ಫ್ರೀಜರ್‌ನಿಂದ ಹುಡುಗಿಯ ದೇಹವನ್ನು ಹೊರತೆಗೆದು, ಸತ್ತ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ನಂತರ ಅದನ್ನು ಮತ್ತೆ ಫ್ರೀಜರ್‌ನಲ್ಲಿ ಪ್ಯಾಕ್…..” ಎಂದಿದೆ.

Also Read: ಲಂಡನ್ ನಲ್ಲಿ ಚುನಾವಣೆ ನಂತರ ಮುಸ್ಲಿಮರು ಬೀದಿಗಳಲ್ಲಿ ಶಕ್ತಿ ಪ್ರದರ್ಶಿಸುತ್ತಿದ್ದಾರೆ ಎಂಬ ವೀಡಿಯೋ ನಿಜವೇ?

Fact Check: ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ ಎಂದ ವೈರಲ್ ಫೋಟೋ ಹಿನ್ನೆಲೆ ಏನು?

ಇದರ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್‍‌ ವಾಟ್ಸಾಪ್‌ ಟಿಪ್ ಲೈನ್ ಗೆ (+91-9999499044)  ಮನವಿ ಬಂದಿದ್ದು, ಅದನ್ನು ಅಂಗೀಕರಿಸಲಾಗಿದೆ. ಅದರಂತೆ ತನಿಖೆ ನಡೆಸಿದಾಗ ಇದು ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.

Fact Check/Verification

ತನಿಖೆಗಾಗಿ ನ್ಯೂಸ್ ಚೆಕರ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ. ಈ ಸಮಯದಲ್ಲಿ, 2010 ರಲ್ಲಿ ಡಾಕ್ಯುಮೆಂಟಿಂಗ್  ರಿಯಾಲಿಟಿ ಎಂಬ ವೆಬ್ಸೈಟ್ನಲ್ಲಿ ಪ್ರಕಟವಾದ ಲೇಖನದಲ್ಲಿ ವೈರಲ್ ಫೋಟೋವನ್ನು ಹೋಲುವ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ. ಇದರೊಂದಿಗೆ  ವೈರಲ್ ಫೋಟೋಕ್ಕೆ ಸಂಬಂಧಿಸಿದ ಇತರ ಅನೇಕ ಫೋಟೋಗಳು ಸಹ ಈ ಲೇಖನದಲ್ಲಿವೆ.

Fact Check: ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ ಎಂದ ವೈರಲ್ ಫೋಟೋ ಹಿನ್ನೆಲೆ ಏನು?
ಡಾಕ್ಯುಮೆಂಟರಿ ರಿಯಾಲಿಟಿ ವರದಿ

ಲೇಖನದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಬ್ರೆಜಿಲ್‌ ನ  ಗ್ರೇಟರ್ ಸಾವೊ ಪಾಲೊ ಪ್ರದೇಶದ 45 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ. ಪತ್ನಿಯನ್ನು ಕೊಂದ ನಂತರ ಆಕೆಯ ದೇಹವನ್ನು ಫ್ರೀಜರ್ನಲ್ಲಿಟ್ಟು ಆತ ಬಚ್ಚಿಟ್ಟಿದ್ದಾನೆ. ಪತ್ನಿ ವಿಷ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಿಂದ ಆ ವ್ಯಕ್ತಿ ಆತ್ಮರಕ್ಷಣೆಗಾಗಿ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದಾಗ್ಯೂ, ಸಂತ್ರಸ್ತೆ ಅಥವಾ ಆರೋಪಿಯ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ.

ಏತನ್ಮಧ್ಯೆ, ಪೋರ್ಚುಗೀಸ್ ವೆಬ್‌ ಸೈಟ್ ನಲ್ಲಿ 2010 ರಲ್ಲಿ ಪ್ರಕಟವಾದ ಲೇಖನವನ್ನು ಸಹ ನಾವು ಕಂಡುಕೊಂಡಿದ್ದೇವೆ. ವೈರಲ್ ಫೋಟೋ ಈ ಲೇಖನದಲ್ಲೂ ಇತ್ತು. ಈ ಲೇಖನದಲ್ಲಿ, ವೈರಲ್ ಫೋಟೋ ಬ್ರೆಜಿಲ್ನ ಗ್ರೇಟರ್ ಸಾವೊ ಪಾಲೊ ಪ್ರದೇಶದಿಂದ ಬಂದಿದೆ ಎಂದು ವಿವರಿಸಲಾಗಿದೆ.

Fact Check: ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ ಎಂದ ವೈರಲ್ ಫೋಟೋ ಹಿನ್ನೆಲೆ ಏನು?
ಪೋರ್ಚುಗೀಸ್‌ ವೆಬ್‌ ಸೈಟ್ ವರದಿ

ಆದಾಗ್ಯೂ, ಸೂಕ್ತ ಪುರಾವೆಗಳ ಕೊರತೆಯಿಂದಾಗಿ, ಸಂತ್ರಸ್ತೆ ಮತ್ತು ಆರೋಪಿಯ ಫೊಟೋಗಳ ಬಗ್ಗೆ ನಮಗೆ ದೃಢವಾದ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಆದರೆ ವೈರಲ್ ಆದ ಫೋಟೋ 2010ರಿಂದಲೂ ಇಂಟರ್ನೆಟ್ ನಲ್ಲಿ ಲಭ್ಯವಿದೆ ಎಂದು ತಿಳಿದುಬಂದಿದೆ. 

ಇದಲ್ಲದೆ, 2022 ರಲ್ಲಿ ದೆಹಲಿಯಲ್ಲಿ 27 ವರ್ಷದ ಯುವತಿ ಶ್ರದ್ಧಾ ವಾಲ್ಕರ್ ಅವರ ಹತ್ಯೆಯ ನಂತರವೂ, ಈ ಚಿತ್ರವನ್ನು ಅಸ್ಸಾಂನಿಂದ ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

Also Read: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್

Fact Check: ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ ಎಂದ ವೈರಲ್ ಫೋಟೋ ಹಿನ್ನೆಲೆ ಏನು?

ಮೇ 2022 ರಲ್ಲಿ, ಮಹಾರಾಷ್ಟ್ರದ ಪಾಲ್ಘರ್ ನಿವಾಸಿ 27 ವರ್ಷದ ಶ್ರದ್ಧಾ ವಾಲ್ಕರ್ ಅವರನ್ನು ದೆಹಲಿಯಲ್ಲಿ ಅವರ ಲಿವ್-ಇನ್ ರಿಲೇಶನ್ಶಿಪ್ ಪಾರ್ಟ್ನರ್ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿದ್ದ. ಕೊಲೆಯ ನಂತರ, ಅಫ್ತಾಬ್ ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿ ಕಾಡಿನ ವಿವಿಧ ಪ್ರದೇಶಗಳಲ್ಲಿ ಎಸೆದನು. ಅಫ್ತಾಬ್ ಪೂನಾವಾಲಾ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಶ್ರದ್ಧಾ ಅವರನ್ನು ಕೊಂದು ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದ ಮೇಲೆ ವಿಚಾರಣಾ ನ್ಯಾಯಾಲಯವು ಪೂನಾವಾಲಾ ವಿರುದ್ಧ ಆರೋಪಗಳನ್ನು ಹೊರಿಸಿದೆ.

ಈ ಫೋಟೋ ಅಸ್ಸಾಂನದ್ದು ಎಂದು  2022 ರಲ್ಲಿಯೇ ವೈರಲ್ ಆದ ನಂತರ, ಅಸ್ಸಾಂ ಪೊಲೀಸರು 8 ಡಿಸೆಂಬರ್ 2022 ರಂದು ಟ್ವೀಟ್ ಮಾಡಿ ಇದನ್ನು ನಕಲಿ ಎಂದು ಹೇಳಿದ್ದರು ಮತ್ತು “ಪೋರ್ಚುಗೀಸ್ ಬ್ಲಾಗ್ನಲ್ಲಿ 2010 ರ ಚಿತ್ರವನ್ನು ನಕಲಿ ಹಕ್ಕುಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು. ಈ ಕುರಿತ ಟ್ವೀಟ್ ಇಲ್ಲಿದೆ.

Conclusion

ವೈರಲ್ ಫೋಟೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ ನಕಲಿ ಎಂದು ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳಿಂದ ಸ್ಪಷ್ಟವಾಗಿದೆ. ಈ ಫೋಟೋ 2010ರಿಂದ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

Also Read: ಅನಂತ್ ಅಂಬಾನಿ ಮದುವೆಗೆ ಹೋಗದ ಬಗ್ಗೆ ನಟ ಸುದೀಪ್‌ ಸ್ಪಷ್ಟನೆಯ ವೀಡಿಯೋ ಹಳೇದು

Result: False

Our Sources
Article by Documenting Reality website Dated: 8th Februry 2010

Article by Portuguese website Dated: 4th March 2010

Tweet by Assam police Dated: 8th Dec 2022

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.