Authors
Claim
ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ
Fact
ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ ಎಂದು ಹಂಚಿಕೊಂಡಿರುವ ವೀಡಿಯೋ ಟರ್ಕಿಯದ್ದಾಗಿದ್ದು, ಇದಕ್ಕೂ ರೈತರ ಪ್ರತಿಭಟನೆಗೂ ಸಂಬಂಧವಿಲ್ಲ
ಸುಮಾರು ಎರಡು ವರ್ಷಗಳ ಹಿಂದೆ, 378 ದಿನಗಳ ರೈತರ ಪ್ರತಿಭಟನೆಯ ನಂತರ, ಈಗ ರೈತರು ತಮ್ಮ ಬೇಡಿಕೆಗಳೊಂದಿಗೆ ಮತ್ತೆ ಬೀದಿಗಿಳಿದಿದ್ದಾರೆ. ಫೆಬ್ರವರಿ 12, 2024 ರಂದು, ಕನಿಷ್ಠ ಬೆಂಬಲ ಬೆಲೆ ಮತ್ತು ಇತರ 12 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ರೈತರು ಆಗ್ರಹಿಸಿದ್ದು, ಮತ್ತು ಕೇಂದ್ರ ಸಚಿವರ ನಡುವಿನ ಸಭೆ ಅಪೂರ್ಣವಾಗಿ ಉಳಿದಿದೆ. ನಂತರ ರೈತರು ಫೆಬ್ರವರಿ 13 ರಂದು ಪಂಜಾಬ್ ನಿಂದ ದೆಹಲಿಗೆ ಮೆರವಣಿಗೆ ನಡೆಸಿದ್ದಾರೆ.
ರೈತರ ಪ್ರತಿಭಟನೆ ತೀವ್ರವಾಗತೊಡಗಿದಂತೆ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಿದ ಟ್ರಾಕ್ಟರ್ ಒಂದರ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೊಲೀಸ್ ಕೋಟೆಯನ್ನು ಬೇಧಿಸಲು ಇದನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕುರಿತ ಎಕ್ಸ್ ಪೋಸ್ಟ್ ನಲ್ಲಿ “ಇವರು ರೈತರಲ್ಲ,,ಸೋ ಕಾಲ್ಡ್ ರೈತರು ಎಂದು ಹೇಳಲು ಇದೊಂದೇ ಸಾಕು.!” ಎಂದಿದೆ.
Also Read: ಬಿಗು ಬಂದೋಬಸ್ತ್ ಗೆ ಹಾಕಲಾದ ಈ ಬ್ಯಾರಿಕೇಡ್ ಚಿತ್ರ ಹಳೆಯದು!
Fact Check/ Verification
ವೈರಲ್ ಹೇಳಿಕೆಯನ್ನು ಪರಿಶೀಲಿಸಲು, ನಾವು ಮಾರ್ಪಡಿಸಿದ ಟ್ರಾಕ್ಟರ್ ನ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ರೈತರ ಪ್ರತಿಭಟನೆಗೆ ಸಂಬಂಧಿಸಿದ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ನಾವು ಕಂಡುಕೊಂಡಿದ್ದೇವೆ. ಆದರೆ ಇದರೊಂದಿಗೆ ಸುಮಾರು 2 ವಾರಗಳ ಹಿಂದೆ, @cengizler_tarim_55 ಎಂಬ ಟರ್ಕಿಶ್ ಟಿಕ್ಟಾಕ್ ಬಳಕೆದಾರರು ಹಂಚಿಕೊಂಡ ಮಾರ್ಪಡಿಸಿದ ಟ್ರಾಕ್ಟರ್ ನ ವೀಡಿಯೋವನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ.
ಹೆಚ್ಚುವರಿಯಾಗಿ, ಟರ್ಕಿಶ್ ಬಳಕೆದಾರ cengizler_tarim_55 ಜನವರಿ 31, 2024 ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದಲೂ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
Also Read: ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದ ವೀಡಿಯೋ ನಿಜವೇ?
ಈ ವೀಡಿಯೋವನ್ನು 30 ಜನವರಿ 2024 ರ @aminkhang4718 ಚಾನೆಲ್‌ನ ಯೂಟ್ಯೂಬ್ ಕಿರುಚಿತ್ರದಲ್ಲಿಯೂ ಹಂಚಿಕೊಳ್ಳಲಾಗಿದೆ. ಫೆಬ್ರವರಿ 1, 2024 ರಂದು ortakoy_haberim ಎಂಬ ಟರ್ಕಿಶ್ ಇನ್ಸ್ಟಾಗ್ರಾಮ್ ಪುಟದಿಂದಲೂ ಈ ವೀಡಿಯೋ ಹಂಚಿಕೊಳ್ಳಲಾಗಿದೆ.
ತನಿಖೆಯ ಬಳಿಕ, ವೈರಲ್ ವೀಡಿಯೋದಲ್ಲಿ ಕಂಡುಬರುವ ಟ್ರಾಕ್ಟರ್ ಮೇಲೆ ಅದರ ಕಂಪನಿಯ ಹೆಸರು ಹಟ್ಟಾಟ್ 260 ಜಿ ಎಂಬುದನ್ನು ಬರೆಯಲಾಗಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಹಟ್ಟಾಟ್ ಟ್ರಾಕ್ಟರ್ ನ ಅಧಿಕೃತ ವೆಬ್ಸೈಟ್, ವೀಕ್ಷಿಸಿದ್ದು, ಇದರಲ್ಲಿ ಮಾರ್ಪಡಿಸದೇ ಇರುವ ಟ್ರಾಕ್ಟರ್‌ನ ಫೋಟೋವನ್ನು ನೋಡಿದ್ದೇವೆ.
ಹೆಚ್ಚಿನ ತನಿಖೆಯ ವೇಳೆ ಲಿಂಕ್ಡ್ ಇನ್ ನಲ್ಲಿ ಹಟ್ಟಾಟ್ ಟ್ರ್ಯಾಕ್ಟರ್ ಎಂಬುದು ಟರ್ಕಿಶ್ ಟ್ರಾಕ್ಟರ್ ಕಂಪನಿ ಯಾಗಿದ್ದು ÇERKEZKÖY, TEKİRDAĞ ಎಂಬಲ್ಲಿದೆ ಎಂದು ತೋರಿಸುತ್ತದೆ.
ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಟ್ರಾಕ್ಟರ್ ಹಿಂದೆ ಸೆಲಿಕ್ ಅಕು ಎಂದು ಬರೆಯಲಾದ ಬೋರ್ಡ್ ಕಂಡುಬರುತ್ತದೆ. ಹುಡುಕಿದಾಗ, ಇದು ಟರ್ಕಿಶ್ ಬ್ಯಾಟರಿ ಕಂಪನಿ ಎಂದು ತಿಳಿದುಬಂದಿದೆ.
Conclusion
ನಮ್ಮ ತನಿಖೆ ಪ್ರಕಾರ, ಟ್ರಾಕ್ಟರ್ ನ ಈ ವೀಡಿಯೋ ಟರ್ಕಿಯಿಂದ ಬಂದಿದೆ ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ.. ಈ ವೀಡಿಯೋಕ್ಕೂ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೂ ಸಂಬಂಧವಿಲ್ಲ ಎಂದು ಖಚಿತಪಡಿಸಲಾಗಿದೆ.
Also Read: ತುಮಕೂರು ಗುಬ್ಬಿ ತಾಲೂಕಿನಲ್ಲಿ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ ಎನ್ನುವುದು ನಿಜವೇ?
Result: False
Our Sources:
Instagram post By cengizler_tarim_55 31, Dated: January 31, 2024
YouTube Shorts By aminkhang4718, Dated: 30 January 2024
Instagram post By ortakoy_haberim, Dated: February 1, 2024
Official website of Hattat Tractor
Official website of CeliKaku Battery
LinkedIn profile of Hattat Tractor
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.