Fact Check: ಉತ್ತರ ಪ್ರದೇಶ ಸರ್ಕಾರ ಅಕ್ರಮ ನಿರ್ಮಾಣದ ಮಸೀದಿಯನ್ನು ಮಾತ್ರ ಕೆಡವಿದೆ, ದೇಗುಲ ಕೆಡವಿಲ್ಲ ಎನ್ನುವುದು ನಿಜವೇ?

ಉತ್ತರಪ್ರದೇಶ ಸರ್ಕಾರ, ಮಸೀದಿ, ದೇಗುಲ ಕೆಡವಿದೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಮಂದಿರ-ಮಸೀದಿ ಪೈಕಿ ಮಸೀದಿಯನ್ನು ಮಾತ್ರ ಉತ್ತರ ಪ್ರದೇಶ ಸರ್ಕಾರ ಕೆಡವಿದೆ

Fact
ಅಕ್ಬರ್ ನಗರದಲ್ಲಿನ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಮಸೀದಿ ಮತ್ತು ದೇವಾಲಯ ಎರಡನ್ನೂ ಉತ್ತರ ಪ್ರದೇಶ ಸರ್ಕಾರ ಕೆಡವಿದೆ

ಸಾಮಾಜಿಕ ಜಾಲತಾಣಗಳಲ್ಲಿ ಮಸೀದಿ ಕೆಡವಿದ ವೀಡಿಯೋ ಒಂದರ ಜೊತೆಗೆ, ಉತ್ತರ ಪ್ರದೇಶದ ಯೋಗಿ ಸರ್ಕಾರ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿರುವ ಮಸೀದಿಗಳನ್ನು ಮಾತ್ರ ಕೆಡವಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. 

ಎಸ್ಪಿ ಮುಖಂಡ ಐ.ಪಿ. ಜೂನ್ 19, 2024 ರಂದು ಮಸೀದಿಯ ಕುಸಿತದ ಸುಮಾರು ಒಂದು ನಿಮಿಷದ ಸುದೀರ್ಘ ವೀಡಿಯೋದೊಂದಿಗೆ ತಮ್ಮ ಎಕ್ಸ್-ಪೋಸ್ಟ್‌ನಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಉತ್ತರ ಪ್ರದೇಶದ ಯೋಗಿ ಸರ್ಕಾರಕ್ಕೆ ನಿಜಕ್ಕೂ ಕಿರಿಕಿರಿಯಾಗಿರುವುದು ಮಸೀದಿ. ಅದಕ್ಕೆ ತಡರಾತ್ರಿ ಅದನ್ನು ಕೆಡವಲಾಗಿದೆ. ಸರ್ಕಾರಿ ಜಮೀನುಗಳಲ್ಲಿ,  ಪ್ರಮುಖ ರಸ್ತೆಗಳಲ್ಲಿ ನಿಂತಿರುವ ಮಠ, ದೇವಾಲಯಗಳ ಮೇಲೆ ಬುಲ್ಡೋಜರ್‌ಗಳು ಓಡಬೇಕೆಂದು ನಾನು ಬಯಸುತ್ತೇನೆ.” ಎಂದಿದೆ. ಈ  ಎಕ್ಸ್‌ ಪೋಸ್ಟ್ ಆರ್ಕೈವ್ ಅನ್ನು ಇಲ್ಲಿ ವೀಕ್ಷಿಸಿ.

Also Read: ಚುನಾವಣಾ ಭರವಸೆಗಳ ಬಗ್ಗೆ ರಾಹುಲ್‌ ಗಾಂಧಿ ಕ್ಷಮೆ ಕೇಳಿದ್ದಾರೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು

Fact Check: ಉತ್ತರ ಪ್ರದೇಶ ಸರ್ಕಾರ ಅಕ್ರಮ ನಿರ್ಮಾಣದ ಮಸೀದಿಯನ್ನು ಮಾತ್ರ ಕೆಡವಿದೆ, ದೇಗುಲ ಕೆಡವಿಲ್ಲ ಎನ್ನವುದು ನಿಜವೇ?
@IPSinghSp ಪೋಸ್ಟ್

Fact Check/Verification

ನ್ಯೂಸ್‌ ಚೆಕರ್ ಈ ಹೇಳಿಕೆ ಬಗ್ಗೆ ಸತ್ಯಶೋಧನೆ ನಡೆಸಿದ್ದು, ವೈರಲ್ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ, ಅನೇಕ ಎಕ್ಸ್ ಬಳಕೆದಾರರು ಈ ಹೇಳಿಕೆಯನ್ನು ಸುಳ್ಳು ಎಂದು ಬಣ್ಣಿಸಿದ್ದಾರೆ ಮತ್ತು “ಸಾರ್ವಜನಿಕರನ್ನು ಪ್ರಚೋದಿಸಬೇಡಿ, ಅಕ್ಬರ್‌ನಗರದ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ದೇವಾಲಯವನ್ನು ಸಹ ಕೆಡವಲಾಗಿದೆ” ಎಂದು ಬರೆದಿದ್ದಾರೆ.

Fact Check: ಉತ್ತರ ಪ್ರದೇಶ ಸರ್ಕಾರ ಅಕ್ರಮ ನಿರ್ಮಾಣದ ಮಸೀದಿಯನ್ನು ಮಾತ್ರ ಕೆಡವಿದೆ, ದೇಗುಲ ಕೆಡವಿಲ್ಲ ಎನ್ನವುದು ನಿಜವೇ?
@iVivekSinghVns ಪೋಸ್ಟ್

ಈ ಮಾಹಿತಿಯಿಂದ ನಾವು ಸುಳಿವು ಪಡೆದಿದ್ದು, ಅಕ್ಬರ್‌ನಗರದಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಮಂದಿರ-ಮಸೀದಿಯನ್ನು ಕೆಡವಿದ ಬಗ್ಗೆ ಮಾಹಿತಿಗಾಗಿ ನಾವು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ನವಭಾರತ್ ಟೈಮ್ಸ್ ಜೂನ್ 19, 2024 ರಂದು ವೈರಲ್ ವೀಡಿಯೋದ ಚಿತ್ರದೊಂದಿಗೆ ಪ್ರಕಟಿಸಿದ ವರದಿಯಲ್ಲಿ, ಅಕ್ಬರ್‌ನಗರದ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಅಕ್ರಮ ನಿರ್ಮಾಣಗಳನ್ನು ತೆಗೆದುಹಾಕಲು ಲಕ್ನೋ ಅಭಿವೃದ್ಧಿ ಪ್ರಾಧಿಕಾರವು 9 ದಿನಗಳ ಅಭಿಯಾನದ ನಡೆಸಿದೆ. 24.5 ಎಕರೆಯಲ್ಲಿ ನಿರ್ಮಿಸಲಾಗಿದ್ದ 1800 ಕಟ್ಟಡಗಳು ಅಕ್ರಮ ಮನೆಗಳು, ಅಂಗಡಿಗಳು ಮತ್ತು ಸಂಕೀರ್ಣಗಳು ಮತ್ತು ದೇವಾಲಯಗಳು ಮತ್ತು ಮಸೀದಿಗಳನ್ನು ನೆಲಸಮಗೊಳಿಸಲಾಗಿದೆ ಎಂದಿದೆ.

Also Read: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?

Fact Check: ಉತ್ತರ ಪ್ರದೇಶ ಸರ್ಕಾರ ಅಕ್ರಮ ನಿರ್ಮಾಣದ ಮಸೀದಿಯನ್ನು ಮಾತ್ರ ಕೆಡವಿದೆ, ದೇಗುಲ ಕೆಡವಿಲ್ಲ ಎನ್ನವುದು ನಿಜವೇ?
ನವಭಾರತ್ ಟೈಮ್ಸ್ ವರದಿ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕುಕ್ರೈಲ್ ನದಿಯನ್ನು ಸುಂದರಗೊಳಿಸುವ ಆದೇಶದ ನಂತರ ಸಮೀಕ್ಷೆ ನಡೆಸಿದಾಗ, ಇಡೀ ಅಕ್ಬರ್‌ನಗರವು ನದಿ ಪಾತ್ರದಲ್ಲೇ ಇದೆ ಎಂದು ಕಂಡುಬಂದಿದೆ ಎಂದು ವರದಿಯಲ್ಲಿದೆ. ಇಲ್ಲಿ ಸಂಕೀರ್ಣಗಳು, ಶೋರೂಂಗಳು, ಅಂಗಡಿಗಳು, ದೇವಾಲಯಗಳು-ಮಸೀದಿಗಳು ಮತ್ತು ಹೆಚ್ಚಿನ ಸಂಖ್ಯೆಯ ಮನೆಗಳನ್ನು ನಿರ್ಮಿಸಲಾಗಿದೆ. ಇದರ ನಂತರ ಎಲ್ಡಿಎ ಕೆಡವಲು ನೋಟಿಸ್ ನೀಡಿತು. ನೋಟಿಸ್ ನಂತರ, ಯಾರೂ ಭೂಮಿಯ ಮಾಲೀಕತ್ವದ ದಾಖಲೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗದಿದ್ದಾಗ, ಎಲ್ಡಿಎ ಕಟ್ಟಡಗಳನ್ನು ತೆರವುಗೊಳಿಸುವ ಆದೇಶವನ್ನು ಜಾರಿಗೊಳಿಸಿತ್ತು.

ಇಂಡಿಯಾ ಟಿವಿ ಪ್ರಕಟಿಸಿದ ವರದಿಯು ಅಕ್ಬರ್‌ನಗರದಿಂದ ದೇವಾಲಯ ಮತ್ತು ಮಸೀದಿ ಎರಡನ್ನೂ ಕೆಡವಲಾದ ಚಿತ್ರವನ್ನು ತೋರಿಸುತ್ತದೆ . ಇಂಡಿಯಾ ಟಿವಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದ ವೀಡಿಯೋದಲ್ಲಿ ದೇವಾಲಯ ಮತ್ತು ಮಸೀದಿ ಎರಡನ್ನೂ ಕೆಡವಿರುವುದನ್ನು ತೋರಿಸುತ್ತದೆ ಮತ್ತು ನಾಲ್ಕು ದೇವಾಲಯಗಳು ಮತ್ತು ನಾಲ್ಕು ಮಸೀದಿಗಳನ್ನು ಇಲ್ಲಿಂದ ಕೆಡವಲಾಗಿದೆ ಎಂದು ಹೇಳುತ್ತದೆ.

ಇಂಡಿಯಾ ಟಿವಿ ವರದಿ

ಅಕ್ಬರ್‌ನಗರದಲ್ಲಿ ಅಕ್ರಮ ಕಟ್ಟಡ ಕೆಡವುವ ಸಂದರ್ಭ ದೇವಸ್ಥಾನ ಮತ್ತು ಮಸೀದಿ ಎರಡನ್ನೂ ತೆಗೆದುಹಾಕಿರುವುದನ್ನು ಖಚಿತಪಡಿಸುವ ಇತರ ಮಾಧ್ಯಮ ವರದಿಗಳನ್ನು ನಾವು  ಇಲ್ಲಿ ಮತ್ತು ಇಲ್ಲಿ ಕಂಡುಕೊಂಡಿದ್ದೇವೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ಲಕ್ನೋದಿಂದ ವರದಿಗಾರರಾದ ಸತ್ಯಂ ಮಿಶ್ರಾ ಅವರೊಂದಿಗೆ ಮಾತನಾಡಿದ್ದೇವೆ. ಅಕ್ಬರ್‌ನಗರದ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಕಟ್ಟಡಗಳನ್ನು ತೆಗೆಯುವ ಸಂದರ್ಭ ಮಂದಿರ ಮತ್ತು ಮಸೀದಿ ಎರಡನ್ನೂ ಕೆಡವಲಾಗಿದೆ ಎಂದು ದೃಢಪಡಿಸಿದ್ದಾರೆ.

Conclusion

ಅಕ್ಬರ್‌ನಗರದ ಸರ್ಕಾರಿ ಭೂಮಿ ತೆರವುಗೊಳಿಸುವ ವೇಳೆ ಮಸೀದಿಯನ್ನು ಮಾತ್ರ ಕೆಡವಲಾಗಿದೆ ಎಂಬ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ. ತೆರವು ಕಾರ್‍ಯಾಚರಣೆ ವೇಳೆ ಮಸೀದಿ ಮತ್ತು ದೇವಾಲಯ ಎರಡನ್ನೂ ತೆಗೆದುಹಾಕಲಾಗಿದೆ ಎಂದು ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ.

Also Read: ಈ ಬಾರಿ ಲೋಕಸಭೆಗೆ 110 ಮಂದಿ ಮುಸ್ಲಿಂ ಸಂಸದರು ಚುನಾಯಿತರಾಗಿದ್ದಾರೆ ಎಂಬ ಹೇಳಿಕೆ ವೈರಲ್

Result: Partly False

Our Sources

Report published by Aaj Tak, Dated: 19th June 2024.

Report published by Navbharat Times, Dated: 19th June 2024.

YouTube Video by India TV Dated: 19th June 2024.

Conversation with Reporter Satyam Mishra

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‍‌ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.