Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಐಟಿಆರ್ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ
ಐಟಿಆರ್ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದ ಈ ಸುತ್ತೋಲೆ ನಕಲಿಯಾಗಿದೆ
2024–25ರ ವರ್ಷದ ಐಟಿಆರ್ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30, 2025 ಕ್ಕೆ ವಿಸ್ತರಿಸಲಾಗಿದೆ ಎಂದು ಹೇಳುವ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೆಸರಿನ ಸುತ್ತೋಲೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ವೈರಲ್ ಆಗಿರುವ ಈ “ಸುತ್ತೋಲೆ” ನಕಲಿ ಎಂದು ನ್ಯೂಸ್ಚೆಕರ್ ಕಂಡುಕೊಂಡಿದೆ.

“ಐಟಿಆರ್ ಗಡುವು ಸೆಪ್ಟೆಂಬರ್ 30” ಎಂದು ಹುಡುಕಿದಾಗ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಅಧಿಕೃತ ಪ್ರಕಟಣೆಗಳು ಕಂಡು ಬಂದಿಲ್ಲ. ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಅಥವಾ ಅದರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲೂ ಅಂತಹ ಸುತ್ತೋಲೆ ಕಂಡುಬಂದಿಲ್ಲ.
Also Read: ನೇಪಾಳದಲ್ಲಿ ಹಿಂದೂಗಳು ಮುಸ್ಲಿಂ ಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದರೇ?
ಆದಾಯ ತೆರಿಗೆ ಇಲಾಖೆಯು ತನ್ನ ಅಧಿಕೃತ ‘ಎಕ್ಸ್’ ಹ್ಯಾಂಡಲ್ನಲ್ಲಿ ವೈರಲ್ ಆಗಿರುವ ಸುತ್ತೋಲೆಯನ್ನು ನಕಲಿ ಎಂದು ಹೇಳಿದ್ದು, ತೆರಿಗೆದಾರರು ಸುಳ್ಳು ಮಾಹಿತಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದೆ.

ದಾಖಲೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸ್ಪಷ್ಟ ದೋಷಗಳು ಕಂಡುಬಂದವು:
ವಿಷಯದ ಸಾಲು “15th” ಬದಲಿಗೆ “15st ನೇ” ಎಂದಿದೆ. “ಸೆಪ್ಟೆಂಬರ್ 14” ಅನ್ನು ಪ್ರಸ್ತುತ ಗಡುವು ಎಂದು ಉಲ್ಲೇಖಿಸುತ್ತದೆ, ಇದು ವ್ಯಾಕರಣ ದೋಷ ಮತ್ತು ವಾಸ್ತವಿಕವಾಗಿ ತಪ್ಪಾಗಿದೆ.

ರಿವರ್ಸ್ ಇಮೇಜ್ ಸರ್ಚ್ ಮೂಲಕ ವೈರಲ್ ಆಗಿರುವ ಈ ಸುತ್ತೋಲೆಯನ್ನುನ್ನು ಪರಿಶೀಲಿಸಿದಾಗ, ಮೇ 27, 2025 ರ CBDT ಪತ್ರಿಕಾ ಪ್ರಕಟಣೆಯ ನ್ನು ತಿರುಚಿ ಹೀಗೆ ಮಾಡಲಾಗಿದೆ ಎಂದು ಕಂಡುಬಂದಿದೆ. ಆ ಪತ್ರಿಕಾ ಪ್ರಕಟಣೆಯಲ್ಲಿ ಅರ್ಜಿ ಸಲ್ಲಿಕೆಯ ಗಡುವನ್ನು ಜುಲೈ 31 ರಿಂದ ಸೆಪ್ಟೆಂಬರ್ 15, 2025 ರವರೆಗೆ ವಿಸ್ತರಿಸಲಾಗಿತ್ತು. ಬದಲಾದ ದಿನಾಂಕಗಳನ್ನು ಹೊರತುಪಡಿಸಿದರೆ, ಅದರಲ್ಲಿರುವ ಪಠ್ಯ ಒಂದೇ ರೀತಿ ಇದೆ.
ಸೆಪ್ಟೆಂಬರ್ 15, 2025 ರಂದು, CBDT ಐಟಿಆರ್ ಸಲ್ಲಿಕೆಯ ಗಡುವನ್ನು ಒಂದು ದಿನದ ಮಟ್ಟಿಗೆ ಅಂದರೆ ಸೆಪ್ಟೆಂಬರ್ 16, 2025 ರವರೆಗೆ ಮಾತ್ರ ವಿಸ್ತರಿಸಿದೆ. ಈ ಲೇಖನವನ್ನು ಪ್ರಕಟಿಸುವ ಹೊತ್ತಿಗೆ ಯಾವುದೇ ವಿಸ್ತರಣೆ ದಿನಾಂಕವನ್ನು ಘೋಷಿಸಲಾಗಿಲ್ಲ.
ಐಟಿಆರ್ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30, 2025 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳುವ ವೈರಲ್ ಸುತ್ತೋಲೆ ನಕಲಿಯಾಗಿದೆ. ಅಧಿಕೃತ ವಿಸ್ತರಣೆಯು ಸೆಪ್ಟೆಂಬರ್ 16, 2025 ರವರೆಗೆ ಮಾತ್ರ ಇದೆ.
Also Read: ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ ಎಂದ ವೀಡಿಯೋ ನಿಜವಲ್ಲ!
FAQಗಳು
Q1. ITR ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30, 2025 ರವರೆಗೆ ವಿಸ್ತರಿಸಲಾಗಿದೆಯೇ?
ಇಲ್ಲ. ಈ ಹೇಳಿಕೆಯನ್ನು ನೀಡುವ ವೈರಲ್ ಸುತ್ತೋಲೆ ನಕಲಿ.
Q2. 2024–25 ನೇ ವರ್ಷದ ನಿಜವಾದ ITR ಸಲ್ಲಿಕೆಯ ಗಡುವು ಯಾವುದು?
CBDT ಈ ಗಡುವನ್ನು ಸೆಪ್ಟೆಂಬರ್ 16, 2025 ರವರೆಗೆ ವಿಸ್ತರಿಸಿದೆ, ಸೆಪ್ಟೆಂಬರ್ 30 ರವರೆಗೆ ಅಲ್ಲ,
Q3. ತೆರಿಗೆ ಸುತ್ತೋಲೆ ನಿಜವೇ ಎಂದು ಪರಿಶೀಲಿಸುವುದು ಹೇಗೆ?
ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್
ಅಥವಾ ಅದರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಅಪ್ಡೇಟ್ ಗಳನ್ನು ಪರಿಶೀಲಿಸಬಹುದು.
Q4. ITR ಗಡುವಿನ ಕುರಿತು ನಕಲಿ ಸುತ್ತೋಲೆಗಳು ಸಾಮಾನ್ಯವೇ? ಏಕೆ?
ಗಡುವು ಮೀರುವ ಬಗ್ಗೆ ತೆರಿಗೆದಾರರಿಗಿರುವ ಭಯವನ್ನು ಅವರು ಬಳಸಿಕೊಳ್ಳುತ್ತಾರೆ ಮತ್ತ ಸುಳ್ಳು ಸುದ್ದಿಗಳನ್ನು ಆಗಾಗ್ಗೆ WhatsApp ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ತ್ವರಿತವಾಗಿ ಹರಡುತ್ತಾರೆ.
Our Sources
X Post By Income Tax Department, Dated: September 14, 2025
X Post By Income Tax Department, Dated: September 15, 2025
Press Release By Income Tax Department, Dated: May 27, 2025
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)