Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ನೇಪಾಳದಲ್ಲಿ ಹಿಂದೂಗಳು ಮುಸ್ಲಿಂ ಧ್ವಜ ಕೆಳಗಿಳಿಸಿ ಕೇಸರಿ ಧ್ವಜ, ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಪ್ರಧಾನಿ ಮೋದಿ, ಕರೆ ಐಟಿಆರ್ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂಬ ವೈರಲ್ ‘ಸುತ್ತೋಲೆ’ , ಆರ್ಬಿಐ ಪ್ರತಿ ಶನಿವಾರ ಬ್ಯಾಂಕ್ ರಜಾದಿನವೆಂದು ಘೋಷಿಸಿದೆ, ಶ್ರೀಲಂಕಾದಲ್ಲಿ ಮುಸ್ಲಿಂ ಬಾಲಕಿಯೊಬ್ಬಳ ಅಪಹರಣ ಯತ್ನದ ವೇಳೆ, ಜೀವ ಪಣಕ್ಕಿಟ್ಟು ರಕ್ಷಿಸಿದ ಹಿಂದೂ ಯುವಕ ಎಂಬ ಹೇಳಿಕೆಗಳು ಈ ವಾರ ಪ್ರಮುಖವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ, ಹೇಳಿಕೆಗಳು ಸುಳ್ಳು ಎಂದು ನಿರೂಪಿಸಿದೆ. ಈ ಸತ್ಯಶೋಧನೆಯ ವರದಿಗಳ ಕುರಿತ ವಾರದ ನೋಟ ಇಲ್ಲಿದೆ.

ನೇಪಾಳದಲ್ಲಿ ಇತ್ತೀಚೆಗೆ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗಳ ಮಧ್ಯೆ, ನೇಪಾಳದ ಹಿಂದೂಗಳು ಮುಸ್ಲಿಂ ಧ್ವಜಗಳನ್ನು ಕೆಳಗಿಳಿಸುವ ಮೂಲಕ ಕೇಸರಿ ಧ್ವಜವನ್ನು ಹಾರಿಸಲು ಆರಂಭಿಸಿದ್ದಾರೆ ಎಂಬ ಹೇಳಿಕೆಯಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಆದರೆ ತನಿಖೆಯಲ್ಲಿ ಕಂಡುಬಂದ ಪ್ರಕಾರ, ಇದು ಕರ್ನಾಟಕದ ಮದ್ದೂರಿನದ್ದು ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಐಟಿಆರ್ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಸುತ್ತೋಲೆಯೊಂದು ಹರಿದಾಡಿದೆ. ಈ ಬಗ್ಗೆ ನ್ಯೂಸ್ ಚೆಕರ್ ತನಿಖೆ ನಡೆಸಿದಾಗ, ಐಟಿಆರ್ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದ ಈ ಸುತ್ತೋಲೆ ನಕಲಿಯಾಗಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂಬಂತೆ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತನಿಖೆಯ ಪ್ರಕಾರ, ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎನ್ನುವುದು ನಿಜವಲ್ಲ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರಗಳಂದು ಬ್ಯಾಂಕುಗಳಿಗೆ ರಜೆ ನೀಡುವ ಪ್ರಸ್ತುತ ಪದ್ಧತಿಯ ಬದಲು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಲ್ಲಾ ಶನಿವಾರ ಮತ್ತು ಭಾನುವಾರಗಳನ್ನು ಬ್ಯಾಂಕ್ ರಜಾದಿನಗಳಾಗಿ ಘೋಷಿಸಿ ಹೊಸ ನಿಯಮವನ್ನು ರೂಪಿಸಿದೆ ಎಂದು ಹೇಳಿಕೆಯೊಂದು ವೈರಲ್ ಆಗಿದೆ. ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ಮಾಡಿದ್ದು, ಇದು ಸುಳ್ಳು ಹೇಳಿಕೆ, ಅಂತಹ ಆದೇಶವನ್ನು ಆರ್ ಬಿಐ ಹೊರಡಿಸಿಲ್ಲ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಶ್ರೀಲಂಕಾದಲ್ಲಿ ಮುಸ್ಲಿಂ ಬಾಲಕಿಯೊಬ್ಬಳ ಅಪಹರಣ ಯತ್ನದ ವೇಳೆ, ಜೀವ ಪಣಕ್ಕಿಟ್ಟು ಹಿಂದೂ ಯುವಕ ಆಕೆಯನ್ನು ರಕ್ಷಿಸಿದ್ದಾನೆ ಎಂದು ಹೇಳಿಕೆಯೊಂದು ವೀಡಿಯೋ ಜೊತೆಗೆ ವೈರಲ್ ಆಗಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಆ ಯುವಕ ಹಿಂದೂ ಅಲ್ಲ, ಆತನ ಹೆಸರು ಮೊಹಮ್ಮದ್ ಇಝಾದ್ದೀನ್ ಅರ್ಷದ್ ಅಹ್ಮದ್ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ
Ishwarachandra B G
November 18, 2025
Ishwarachandra B G
November 4, 2025
Ishwarachandra B G
November 1, 2025