Fact Check: ಚಂದ್ರನ ಮೇಲೆ ಅಶೋಕ ಲಾಂಛನದ ವೈರಲ್‌ ಚಿತ್ರ ನಿಜವಲ್ಲ, ಅದು ಕಲಾಕೃತಿ!

ಚಂದ್ರ ಅಶೋಕ ಲಾಂಛನ, ರೋವರ್‌,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

“ಚಂದ್ರನ ಮೇಲೆ ರೋವರ್‌ ಟೈರ್ ಗಳಿಂದ ಚಂದ್ರನ ಮೇಲೆ ಅಶೋಕ ಲಾಂಛನದ ಚಿತ್ರವನ್ನು ಶಾಶ್ವತವಾಗಿ ಮುದ್ರಿಸಲಾಗಿದೆ. ಚಂದ್ರನ ಮೇಲೆ ಗಾಳಿ ಇಲ್ಲದ ಕಾರಣ ಈ ಗುರುತುಗಳು ಶಾಶ್ವತವಾಗಿ ಇರುತ್ತವೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. ಈ ಚಿತ್ರವು ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸಾಪ್ ನಂತಹ ಮೆಸೆಂಜರ್ ಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ.

Also Read: ಚಂದ್ರನ ಮೇಲೆ ಇಳಿಯುವ ಚಂದ್ರಯಾನ-3ರ ವೀಡಿಯೋವನ್ನು ನಾಸಾ ಸೆರೆಹಿಡಿದಿದೆಯೇ?

Fact Check: ಚಂದ್ರನ ಮೇಲೆ ಅಶೋಕ ಲಾಂಛನದ ವೈರಲ್‌ ಚಿತ್ರ ನಿಜವಲ್ಲ, ಅದು ಕಲಾಕೃತಿ!

Fact

ಚಂದ್ರನ ಮೇಲೆ ನಿಜಕ್ಕೂ ರಾಷ್ಟ್ರ ಲಾಂಛನ ಅಶೋಕ ಚಂದ್ರನ ಮೇಲೆ ರಾಷ್ಟ್ರ ಲಾಂಛನದ ಚಿತ್ರ ಮೂಡಿದ್ದು ಹೌದೇ ಎನ್ನುವುದನ್ನು ನ್ಯೂಸ್‌ಚೆಕರ್‌ ತನಿಖೆ ಮಾಡಿದೆ. ಈ ವೇಳೆ ವೈರಲ್‌ ಆಗುತ್ತಿರುವ ಚಿತ್ರವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಚಿತ್ರದ ಕೆಳ ಎಡ ಮೂಲೆಯಲ್ಲಿ “ಕೃಷ್ಣಾಂಶು ಗರ್ಗ್” ಎಂದು ಬರೆದಿರುವ ವಾಟರ್ ಮಾರ್ಕ್ ಅನ್ನು ಗಮನಿಸಿದ್ದೇವೆ.

ಇದರ ಸುಳಿವನ್ನು ತೆಗೆದುಕೊಂಡು ನಾವು ಟ್ವಿಟರ್ ನಲ್ಲಿ ಕೃಷ್ಣಾಂಶು ಗರ್ಗ್ ಅವರನ್ನು ಹುಡುಕಿದ್ದೇವೆ ಮತ್ತು ಹ್ಯಾಂಡಲ್ @KrishanshuGarg ಪ್ರೊಫೈಲ್‌ ಅನ್ನು ಪತ್ತೆ ಮಾಡಿದ್ದೇವೆ.

ಇನ್ನು ಇದೇ ರೀತಿಯ ಪೋಸ್ಟ್‌ ಗಳಿಗೆ ನೀಡಿದ ಉತ್ತರಗಳಲ್ಲಿ ಕೃಷ್ಣಾಂಶು ಚಿತ್ರವು ಒಂದು ಕಲಾಕೃತಿ ಎಂಬುದು ತಿಳಿದುಬಂದಿದೆ.

ಅನಂತರ ನಾವು ಲಕ್ನೋದ ಬಾಹ್ಯಾಕಾಶ ಉತ್ಸಾಹಿ ಕೃಷ್ಣಾಂಶು ಅವರನ್ನು ಸಂಪರ್ಕಿಸಿದೆವು, ಅವರು ಈ ಚಿತ್ರವು ಕಲಾಕೃತಿಯಾಗಿದೆ ಮತ್ತು ಚಂದ್ರನ ಮೇಲ್ಮೈಯಲ್ಲಿ ಪ್ರಜ್ಞಾನ್ ರೋವರ್ ನ ಚಕ್ರಗಳ ನಿಜವಾದ ಮುದ್ರೆಯಲ್ಲ ಎಂದು ಪುನರುಚ್ಚರಿಸಿದ್ದಾರೆ “ಈ ಬಾರಿ ಚಂದ್ರಯಾನ -3 ಬಗ್ಗೆ ಎಲ್ಲರೂ ಉತ್ಸುಕರಾಗಿದ್ದಾರೆ. ಇಸ್ರೋಗೆ ಶುಭ ಹಾರೈಸಲು ಜನರು ಈಗಾಗಲೇ ಚಂದ್ರನ ಮೇಲೆ ಇಳಿದ ವಿಎಲ್ ನ ಕಲಾಕೃತಿಗಳನ್ನು ಮಾಡಿದ್ದರು. ನಾನು ಹೊಸ ಆಲೋಚನೆಯೊಂದನ್ನು ಮಾಡಿದ್ದು ಪ್ರಜ್ಞಾನ್‌ ಬಗ್ಗೆ ಇಸ್ರೋ ದೃಢಪಡಿಸಿದಂತೆ ರೋವರ್ ನ ಮುದ್ರ ಕುರಿತು ಚಿತ್ರವನ್ನು ರಚಿಸಿದೆ. ಲ್ಯಾಂಡಿಂಗ್‌ ಗೆ ಕೆಲವೇ ಕ್ಷಣಗಳಿರುವಾಗ “ಇದಕ್ಕಾಗಿ ಕಾಯಲು ಸಾಧ್ಯವಿಲ್ಲ” ಎಂದು ಟ್ವೀಟ್ ಅನ್ನು ಮಾಡಿದ್ದೇನೆ. ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವುದು ನನ್ನ ಉದ್ದೇಶವಾಗಿರಲಿಲ್ಲ, ನಾನು ಲ್ಯಾಂಡಿಂಗ್ಗೆ 10 ಗಂಟೆಗಳ ಮೊದಲು ಕ್ಷಣಗಣನೆಯ ಕುರಿತಾಗಿ ಪೋಸ್ಟ್‌ ಮಾಡಿದ್ದೇನೆ. ಆದರೆ ಜನರು ಅದನ್ನು ನಿಜವಾದ ಚಿತ್ರ ಎಂದು ತಿಳಿದು ಈ ರೀತಿ ಹರಡುತ್ತಾರೆ ಎಂದು ತಿಳಿದಿರಲಿಲ್ಲ. ನನಗೆ ಅಚ್ಚರಿ, ಆಘಾತವಾಗಿದ್ದು, ಚಿತ್ರವನ್ನು ಫೋಟೋಶಾಪ್‌ ಬಳಸಿ ಮಾಡಿದ್ದಾಗಿ ನ್ಯೂಸ್‌ಚೆಕರ್‌ ಗೆ ತಿಳಿಸಿದ್ದಾರೆ. ಇದೇ ವೇಳೆ ಕೃಷ್ಣಾಂಶು ಅವರ ಇನ್ಸ್ಟಾಗ್ರಾಮ್ ಪುಟದ ಹೈಲೈಟ್ ವಿಭಾಗದಲ್ಲಿ ನಾವು ಅದೇ ಚಿತ್ರವನ್ನು ಕಂಡುಕೊಂಡಿದ್ದೇವೆ.
ಹೆಚ್ಚಿನ ತನಿಖೆಯ ನಂತರ, ಗುಜರಾತ್ ಸಚಿವ ಹರ್ಷ್ ಸಾಂಘವಿ ಅವರು ಪ್ರಜ್ಞಾನ್ ರೋವರ್ ಚಕ್ರದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಇಸ್ರೋ ಲೋಗೋ ಮತ್ತು ರಾಷ್ಟ್ರೀಯ ಲಾಂಛನವಿದೆ. ಆದರೆ ಇದು ವೈರಲ್ ಚಿತ್ರಕ್ಕಿಂತ ಭಿನ್ನವಾಗಿದೆ. ವೈರಲ್ ಆಗುತ್ತಿರುವ ಚಿತ್ರವು ಚಂದ್ರನ ಮೇಲೆ ಉಳಿಯುವ ನಿಜವಾದ ಮುದ್ರೆಯಲ್ಲ, ಆದರೆ ಅದರ ಕಲಾತ್ಮಕ ಚಿತ್ರಣ ವಾಗಿದೆ.    

Result: Missing Context

Our Sources
Responses by Krishanshu Garg on his Twitter page @KrishanshuGarg

Tweet by Gujarat Minister Harsh Sanghavi, dated July 14, 2023

Responses by Krishanshu Garg to Newschecker

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಇಂಗ್ಲಿಷ್‌ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.