Fact Check: ಚಂದ್ರನ ಮೇಲೆ ಇಳಿಯುವ ಚಂದ್ರಯಾನ-3ರ ವೀಡಿಯೋವನ್ನು ನಾಸಾ ಸೆರೆಹಿಡಿದಿದೆಯೇ?

ಚಂದ್ರಯಾನ3 ನಾಸಾ ವೀಡಿಯೋ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ಚಂದ್ರಯಾನ-3 ಇಳಿಯುವ ವೀಡಿಯೋವನ್ನು ನಾಸಾ ಚಿತ್ರೀಕರಿಸಿದೆ.

Fact Check: ಚಂದ್ರನ ಮೇಲೆ ಇಳಿಯುವ ಚಂದ್ರಯಾನ-3ರ ವೀಡಿಯೋವನ್ನು ನಾಸಾ ಸೆರೆಹಿಡಿದಿದೆಯೇ?

ಇದರ ಆರ್ಕೈವ್‌ ಮಾಡಲಾದ ಆವೃತ್ತಿ ಇಲ್ಲಿದೆ.

Fact

ಸತ್ಯಶೋಧನೆ ವೇಳೆ ವೀಡಿಯೊದ ಬಲಭಾಗದ ಮೂಲೆಯಲ್ಲಿ ಯೂಟ್ಯೂಬ್  ಸಬ್‌ಸ್ಕ್ರಿಪ್ಷನ್‌ ಲೋಗೋವನ್ನು ನಾವು ಗಮನಿಸಿದ್ದೇವೆ. ಆ ನಂತರ ನಾವು ಯೂಟ್ಯೂಬ್ನಲ್ಲಿ ‘Moon landing video’ ಎಂಬ ಪದಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಇದು ಒಂದು ತಿಂಗಳ ಹಿಂದೆ ಹ್ಯಾಜೆಗ್ರಯಾರ್ಟ್ ಅಪ್ಲೋಡ್ ಮಾಡಿದ ಅಪೊಲೊ 11 ಚಂದ್ರನ ಲ್ಯಾಂಡಿಂಗ್ ಅನ್ನು ತೋರಿಸುವ ಯೂಟ್ಯೂಬ್‌ ಶಾರ್ಟ್ಸ್ ವೀಡಿಯೋಗೆ ನಮ್ಮನ್ನು ಕರೆದೊಯ್ದಿದೆ.  

ಇದರಲ್ಲಿನ ವಿವರಣೆಯು ಜೂನ್ 8, 2021 ರಂದು ಅಪ್ಲೋಡ್ ಮಾಡಿದ ಅದೇ ವೀಡಿಯೋದ ಪೂರ್ಣ ಆವೃತ್ತಿಗೆ ಕರೆದೊಯ್ದಿದೆ. ಅದನ್ನು ಪರಿಶೀಲಿಸಿದಾಗ, ವೀಡಿಯೊ ನಿಜವಾಗಿಯೂ ಅಪೊಲೊ 11ರ ಚಂದ್ರನ ಲ್ಯಾಂಡಿಂಗ್ ಬಗ್ಗೆ ಆಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.  

ನಂತರ ನಾವು ಪುಟವನ್ನು ಪರಿಶೀಲಿಸಿದ್ದೇವೆ ಮತ್ತು ಪುಟದಲ್ಲಿ ಹಂಚಿಕೊಳ್ಳಲಾದ ಅಂತಹ ಹಲವಾರು ವೀಡಿಯೊಗಳನ್ನು ಕಂಡುಕೊಂಡಿದ್ದೇವೆ, ಪುಟವು ಅನಿಮೇಟೆಡ್ ವಿಷಯವನ್ನು ಹಂಚಿಕೊಂಡಿದೆ ಎಂಬುದನ್ನು ಹೇಳುತ್ತದೆ ಮತ್ತು ವೀಡಿಯೋ ಅನಿಮೇಷನ್‌ ಆಗಿದೆ ಎಂದು ಸೂಚಿಸುವ ಕಾಮೆಂಟ್‌ ಗಳನ್ನೂ ನಾವು ನೋಡಿದ್ದೇವೆ.  

ವೀಡಿಯೋಗಳನ್ನು ಹಂಚಿಕೊಂಡ ಅದೇ ಹ್ಯಾಂಡಲ್‌ ನಿಂದ ಟ್ವಿಟರ್‌ ಪೇಜ್‌ ಅನ್ನು ಕಂಡುಕೊಂಡಿದ್ದೇವೆ. ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ನ್ಯೂಸ್ಚೆಕರ್ 2018 ರ ಸಂದರ್ಭದ  ಲೇಖಕರ ಟ್ವೀಟ್ ಅನ್ನು ಸಹ ಕಂಡುಕೊಂಡಿದೆ, ಅದರಲ್ಲಿ, ಪೇಜ್‌ ನಿಂದ ಅನಿಮೇಟೆಡ್‌ ವೀಡಿಯೋಗಳನ್ನು ಹಂಚಿಕೊಳ್ಳಲಾಗಿದೆಯೇ ಹೊರತು ನಿಜವಾದ್ದಲ್ಲ ಎಂಬುದನ್ನು ದೃಢಪಡಿಸಿದೆ.

Fact Check: ಚಂದ್ರನ ಮೇಲೆ ಇಳಿಯುವ ಚಂದ್ರಯಾನ-3ರ ವೀಡಿಯೋವನ್ನು ನಾಸಾ ಸೆರೆಹಿಡಿದಿದೆಯೇ?

ಹೀಗಾಗಿ, ಚಂದ್ರಯಾನ 3ರ ಚಂದ್ರನ ಮೇಲ್ಮೈಯಲ್ಲಿ ಇಳಿಯುವುದನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳುವ ವೀಡಿಯೋ ಇದಲ್ಲ, ಬದಲಾಗಿ ಚಂದ್ರನ ಮೇಲೆ ಮೊದಲು ಮಾನವರನ್ನು ಕರೆದೊಯ್ದ ಅಪೊಲೋ 11 ಚಂದ್ರನಲ್ಲಿ ಇಳಿಯವ ಕುರಿತ ಅನಿಮೇಟೆಡ್‌ ವೀಡಿಯೋ ಎಂದು ನಾವು ತೀರ್ಮಾನಿಸಬಹುದು.

Result: False

Our Sources

Video posted on YouTube by Hazegrayart, Dated: June 8, 2021

Tweet by Hazegrayart, Dated: November 20, 2018

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.