Fact Check: ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರೇ?

ಆಸ್ಟ್ರೇಲಿಯಾ, ಕ್ರಿಕೆಟ್ ವಿಶ್ವಕಪ್‌, ಪ್ರಧಾನಿ ನರೇಂದ್ರ ಮೋದಿ, ಅಭಿನಂದನೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರು

Fact
ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರು ಎಂದು ಹೇಳಲಾದ ವೀಡಿಯೋ ಎಡಿಟ್ ಮಾಡಲಾಗಿದ್ದು ಕೊನೆಯ ಭಾಗ ಮಾತ್ರ ಹಾಕಲಾಗಿದೆ

ವಿಶ್ವಕಪ್‌ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿಜಯಿಯಾಗುವುದರೊಂದಿಗೆ ಕಪ್‌ ಅನ್ನು ಮುಡಿಗೇರಿಸಿಕೊಂಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಜೇತ ಆಸ್ಟ್ರೇಲಿಯನ್‌ ತಂಡದ ಕಪ್ತಾನ ಅವರನ್ನು ಅಭಿನಂದಿಸದೆ ತೆರಳಿದ್ದಾರೆ ಎಂದು ಸುದ್ದಿ ಹರಿದಾಡಿದೆ.

ಎಕ್ಸ್ ನಲ್ಲಿ ಕಂಡುಬಂದ ಕ್ಲೇಮಿನ ಪ್ರಕಾರ,  “ವಿಶ್ವಕಪ್ ನಂತಹ ಒಂದು ಜಾಗತಿಕ‌ ಕ್ರೀಡೆಯಲ್ಲಿ ಭಾರತ ಸೋತರೂ, ಗೆದ್ದ ಇತರೆ ದೇಶದ ತಂಡವನ್ನು ಅಭಿನಂದಿಸುವ ಗಟ್ಟಿತನ ಬೇಕು. ಅದೂ ಕೂಡಾ ಒಂದು ದೇಶದ ಪ್ರಧಾನಿ ಹೀಗೆ ಮಾಡಬಾರದಿತ್ತು” ಎಂದಿದೆ.

Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?

Fact Check: ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರೇ?
ಟ್ವಿಟರಿನಲ್ಲಿ ಕಂಡುಬಂದ ಕ್ಲೇಮ್

ಇದೇ ರೀತಿಯ ಕ್ಲೇಮ್‌ ಅನ್ನು ನಾವು ಫೇಸ್‌ಬುಕ್‌ನಲ್ಲೂ ಕಂಡಿದ್ದೇವೆ.

Fact Check: ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರೇ?
ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮ್

ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಕೊಂಡಿದೆ.

Fact Check/Verification

ಕ್ಲೇಮಿನೊಂದಿಗೆ ಹರಿದಾಡಿದ ವೀಡಿಯೋದ ಸತ್ಯಶೋಧನೆಗೆ ನಾವು ವಿಶ್ವಕಪ್‌ ವಿಜೇತ ತಂಡಕ್ಕೆ ಟ್ರೋಫಿ ಪ್ರದಾನ ಮಾಡುವ ವೀಡಿಯೋ ದೃಶ್ಯದ ಶೋಧ ನಡೆಸಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.

ನವೆಂಬರ್‌ 19, 2023ರ ಇಂಡಿಯಾ ಟುಡೇ “ಅಮೋಘ ಗೆಲುವಿನ ನಂತರ ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಹಸ್ತಾಂತರಿಸಿದ ಪ್ರಧಾನಿ ಮೋದಿ” ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ಪ್ರಧಾನಿ ಮೋದಿ ಅವರು ಟ್ರೋಫಿಯನ್ನು ಹಸ್ತಾಂತರಿಸಿ ಬಳಿಕ ಆಸ್ಟ್ರೇಲಿಯಾ ಕಪ್ತಾನ ಪ್ಯಾಟ್ ಕಮ್ಮಿನ್ಸ್‌ ಅವರನ್ನು ಅಭಿನಂದಿಸುವ ಫೊಟೋವನ್ನು ಪ್ರಕಟಿಸಲಾಗಿದೆ.

Fact Check: ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರೇ?
ಇಂಡಿಯಾ ಟುಡೇ ವರದಿ

ಈ ಕುರಿತು ನಾವು ಹೆಚ್ಚಿನ ಹುಡುಕಾಟ ನಡೆಸಿದ್ದು ಟ್ರೋಫಿ ಹಸ್ತಾಂತರಿಸುವ ವೀಡಿಯೋವನ್ನು ಶೋಧಿಸಿದ್ದೇವೆ.

Also Read: ಕಾಂಗ್ರೆಸ್ ಚಿಹ್ನೆ ಇಸ್ಲಾಮಿನ ಮೂಲದ್ದೇ, ಇಲ್ಲ ವೈರಲ್‌ ಕ್ಲೇಮ್‌ ಸುಳ್ಳು

ಈ ವೇಳೆ ವೀಡಿಯೋಗಳು ಲಭ್ಯವಾಗಿವೆ. ವಾಂಡೆರಿಂಗ್‌ ಆಲ್ಬಟ್ರಾಸ್ ಎಂಬ ಯೂಟ್ಯೂಬ್‌ ಚಾನೆಲ್ ನಲ್ಲಿ ಪ್ರಕಟಿಸಿದ ವೀಡಿಯೋದಲ್ಲಿ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾ ಕಪ್ತಾನ ಅವರಿಗೆ ಕಪ್ ಹಸ್ತಾಂತರಿಸುವುದು ಮತ್ತು ಆ ಬಳಿಕ ಅಲ್ಲಿಂದ ತೆರಳುತ್ತಿರುವುದು ಕಾಣಿಸುತ್ತಿದೆ.

ನವೆಂಬರ್ 20, 2023ರಂದು Brothers Gang SBAJ ಎಂಬ ಯೂಟ್ಯೂಬ್‌ ಚಾನೆಲ್ “Mr.Narendra Modi presenting world cup trophy 2023 ind vs aus final” ಶೀರ್ಷಿಕೆಯಡಿ ಪ್ರಕಟಿಸಿದ ವೀಡಿಯೋದಲ್ಲಿ ಮೋದಿ ಅವರು ಆಸ್ಟ್ರೇಲಿಯಾ ಕಪ್ತಾನಗೆ ಟ್ರೋಫಿಯನ್ನು ನೀಡಿ ಆ ಬಳಿಕ ತೆರಳುತ್ತಿರುವುದು ಕಾಣಿಸುತ್ತದೆ.

ನವೆಂಬರ್ 20, 2023ರಂದು Republic of Games ಎಂಬ ಯೂಟ್ಯೂಬ್‌ ಚಾನೆಲ್‌ “Emotional Indian Team suprised when Narendra Modi visit to lift Trophy for Australia at Home Ground” ಶೀರ್ಷಿಕೆಯಡಿ ಪ್ರಕಟಿಸಿದ ವೀಡಿಯೋದಲ್ಲಿ ಪ್ರಧಾನಿ ಮೋದಿ ಟ್ರೋಫಿ ಹಸ್ತಾಂತರಿಸಿ ಹೋಗುತ್ತಿರುವುದು ಕಾಣಿಸುತ್ತದೆ.

ಈ ಯಾವುದೇ ವೀಡಿಯೋಗಳಲ್ಲಿ ಅವರು ಆಸ್ಟ್ರೇಲಿಯಾ ಕಪ್ತಾನ ಅವರನ್ನು ಅಭಿನಂದಿಸದೆ ತೆರಳುವುದು ಕಂಡುಬಂದಿರುವುದಿಲ್ಲ. ಜೊತೆಗೆ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾ ಕಪ್ತಾನ ಅವರಿಗೆ ಟ್ರೋಫಿ ನೀಡಿ ಅಭಿನಂದಿಸಿ ಬಳಿಕ ವೇದಿಕೆಯಿಂದ ಕೆಳಗಿಳಿದು ಆಸ್ಟ್ರೇಲಿಯನ್‌ ಕ್ರಿಕೆಟ್ ತಂಡದ ಇತರ ಆಟಗಾರರನ್ನು ಅಭಿನಂದಿಸುತ್ತಿರುವುದನ್ನು ಕಂಡುಕೊಂಡಿದ್ದೇವೆ. ಸತ್ಯಶೋಧನೆ ವೇಳೆ ನಾವು ಗಮನಿಸಿದ ಪ್ರಕಾರ, ವೈರಲ್‌ ಕ್ಲೇಮಿನಲ್ಲಿ ಸಂಪೂರ್ಣ ವೀಡಿಯೋವನ್ನು ಹಾಕದೇ, ತುಂಡರಿಸಿದ ವೀಡಿಯೋವನ್ನು ಮಾತ್ರ ಹಾಕಲಾಗಿದೆ ಎಂದು ಕಂಡುಕೊಂಡಿದ್ದೇವೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಕಪ್ತಾನನ್ನು ಅಭಿನಂದಿಸದೆ ತೆರಳಿದ್ದಾರೆ ಎನ್ನುವುದು ತಪ್ಪಾಗಿದೆ.

Also Read: ಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ  ಸಂದರ್ಭ ಕಲ್ಮಾ ಓದಲಾಗಿದೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು

Result: False

Our Sources
Report By India Today, November 19, 2023

YouTube Shorts By Wandering Albatross

YouTube Video By Brothers Gang SBAJ, Dated: November 20, 2023

YouTube Video By Republic Games, Dated: November 20, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.