Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಶಿರಡಿ ಸಾಯಿ ಟ್ರಸ್ಟ್ ಹಜ್ ಸಮಿತಿಗೆ ₹ 35 ಕೋಟಿ ದೇಣಿಗೆ ನೀಡಿದೆ ಎಂದು ಗೂಗಲ್ ಸರ್ಚ್ ನ ಚಿತ್ರವೊಂದನ್ನು ಎಪ್ರಿಲ್ 20, 2023 ರಂದು ಟ್ವೀಟ್ ಮಾಡಲಾಗಿದ್ದು, ವೈರಲ್ ಆಗಿದೆ.
ಈ ಚಿತ್ರದ ಸತ್ಯಶೋಧನೆಗೆ ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ಗೆ (+91-9999499044) ಹಲವು ಮನವಿಗಳು ಬಂದಿದ್ದು, ಸತ್ಯಶೋಧನೆಗೆ ಸ್ವೀಕರಿಸಲಾಗಿದೆ.
Also Read: ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಗುಣವಾಗುತ್ತಾ?
ಸತ್ಯಶೋಧನೆಗಾಗಿ ನಾವು, ಗೂಗಲ್ ನಲ್ಲಿ “ಶಿರಡಿ ಸಾಯಿ ಟ್ರಸ್ಟ್”, “ಹಜ್” ಮತ್ತು “35 Crore” ಎಂದು ಕೀವರ್ಡ್ ಸರ್ಚ್ ನಡೆಸಿದ್ದು, ಶಿರಡಿ ಸಾಯಿ ಟ್ರಸ್ಟ್ ಅಂತಹ ಯಾವುದೇ ದೇಣಿಗೆಯನ್ನು ನೀಡಿದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.
ಆದಾಗ್ಯೂ, ಎಪ್ರಿಲ್ 24 2023 ರಂದು ಈಟಿವಿ ಭಾರತ್ ಮರಾಠಿಯ ವರದಿಯೊಂದು ಲಭ್ಯವಾಗಿದ್ದು, ಅದರಲ್ಲಿ ಶಿರಡಿ ಟ್ರಸ್ಟ್ ಹೇಳಿಕೆಯನ್ನು ದಾಖಲಿಸಲಾಗಿದೆ. ಟ್ರಸ್ಟ್ ಹಜ್ ಸಮಿತಿಗೆ ಕೋಟಿಗಟ್ಟಲೆ ದೇಣಿಗೆ ನೀಡಿದೆ ಎಂಬ ಹೇಳಿಕೆಗಳನ್ನು ಅದು ತಳ್ಳಿಹಾಕಿದೆ. ಸಾಯಿ ಸಂಸ್ಥೆಯ ಸಿಇಒ ರಾಹುಲ್ ಜಾಧವ್ ಅವರು ಸಾಯಿ ಸಂಸ್ಥೆಯ ಸಂವಿಧಾನದಲ್ಲಿ ಅಂತಹ ಯಾವುದೇ ದೇಣಿಗೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಯಾರೂ ಯಾವುದೇ ದೇಣಿಗೆಯನ್ನು ಅವರ ಬಳಿ ಕೇಳಿಲ್ಲ, ಆದ್ದರಿಂದ ಯಾರಿಗೂ ಹಣವನ್ನು ನೀಡುವುದರಲ್ಲಾಗಲಿ ಅಥವಾ ನಿರಾಕರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಲ್ಲಿದೆ.
Also Read: ಫೋಟೋ ತೆಗೆಸಿಕೊಳ್ಳುತ್ತಿರುವ ಯುವತಿಯನ್ನು ಮೊಸಳೆ ನುಂಗಿದ್ದು ನಿಜವೇ, ಸತ್ಯ ಏನು?
ಈ ಬಗ್ಗೆ ನ್ಯೂಸ್ ಚೆಕರ್ ಶಿರಡಿ ಸಾಯಿ ಟ್ರಸ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಅವರನ್ನು ಸಂಪರ್ಕಿಸಿದ್ದು, ದೇಣಿಗೆ ನೀಡಿದ ಹೇಳಿಕೆಗಳನ್ನು ನಿರಾಕರಿಸಿದ್ದಾರೆ. ಹಜ್ ಸಮಿತಿಗೆ ಯಾವುದೇ ಹಣವನ್ನು ದೇಣಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ, ಶಿರಡಿ ಸಾಯಿ ಟ್ರಸ್ಟ್ ಹಜ್ ಸಮಿತಿಗೆ ₹35 ಕೋಟಿಗಳನ್ನು ದೇಣಿಗೆ ನೀಡಿದೆ ಎಂಬ ವೈರಲ್ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ.
Our Sources
Report By ETV Bharat, Dated April 24, 2023
Conversation With RPO Of Shirdi Sai Temple Trust
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.